ಗದಗ: ಹೊಸ ನಿಯಮದಿಂದ ಎಂಆರ್​ಐ, ಸಿಟಿ ಸ್ಕ್ಯಾನ್​ ಮಾಡಿಸಿಕೊಳ್ಳಲು ಪರದಾಡುತ್ತಿರುವ ಜಿಮ್ಸ್ ​​ರೋಗಿಗಳು

ಗದಗದ ಜಿಮ್ಸ್ ಆಸ್ಪತ್ರೆಯಲ್ಲಿ MRI ಮತ್ತು CT ಸ್ಕ್ಯಾನ್‌ಗಳು ಈಗ ಆಯುಷ್ಮಾನ್ ಭಾರತ್ ಯೋಜನೆಯ ಅನುಮತಿಯೊಂದಿಗೆ ಮಾತ್ರ ಉಚಿತವಾಗಿ ಲಭ್ಯವಿದೆ. ಹಿಂದೆ ಉಚಿತವಾಗಿದ್ದ ಈ ಸೇವೆಗೆ ಈಗ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗಿದೆ. ಇದರಿಂದ ಬಡ ರೋಗಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ಈ ಹೊಸ ನಿಯಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ಆನ್‌ಲೈನ್ ಅನುಮತಿ ಪ್ರಕ್ರಿಯೆಯಲ್ಲಿನ ವಿಳಂಬದಿಂದಲೂ ತೊಂದರೆ ಅನುಭವಿಸುತ್ತಿದ್ದಾರೆ.

ಗದಗ: ಹೊಸ ನಿಯಮದಿಂದ ಎಂಆರ್​ಐ, ಸಿಟಿ ಸ್ಕ್ಯಾನ್​ ಮಾಡಿಸಿಕೊಳ್ಳಲು ಪರದಾಡುತ್ತಿರುವ ಜಿಮ್ಸ್ ​​ರೋಗಿಗಳು
ಜಿಮ್ಸ್​ ಆಸ್ಪತ್ರೆ ಸಿಟಿ ಸ್ಕ್ಯಾನಿಂಗ್​ ಗದಗ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ವಿವೇಕ ಬಿರಾದಾರ

Updated on: Dec 18, 2024 | 1:52 PM

ಗದಗ, ಡಿಸೆಂಬರ್​ 18: ಬಳ್ಳಾರಿ ಬಾಣಂತಿಯರ ಸರಣಿ ಸಾವುಗಳು ಇಡೀ ರಾಜ್ಯವೇ ಬೆಚ್ಚಿ ಬಿಳಿಸಿದೆ. ಸರ್ಕಾರಿ ಆಸ್ಪತ್ರೆಗಳ ಸಹವಾಸವೇ ಬೇಡ ಅನ್ನೋ ಸ್ಥಿತಿಗೆ ಜನರು ಬಂದಿದ್ದಾರೆ. ಈ ನಡುವೆ ಸರ್ಕಾರ ಬಡ ರೋಗಿಗಳಿಗೆ ಮತ್ತೊಂದು ಶಾಕ್ ನೀಡಿದೆ. ಐದಾರು ವರ್ಷಗಳಿಂದ MRI ಮತ್ತು ಸಿಟಿ ಸ್ಕ್ಯಾನ್​ ಸೇವೆ ಸಂಪೂರ್ಣ ಉಚಿತವಾಗಿತ್ತು. ಇನ್ಮುಂದೆ ಆಯುಷ್ಮಾನ್ ಭಾರತ್ (Ayushman Bharat) ಯೋಜನೆಯ ಅನುಮತಿ ಸಿಕ್ಕರೇ ಮಾತ್ರ ಉಚಿತ ಸ್ಕ್ಯಾನ್. ಇಲ್ಲವಾದರೆ, ಬಡ ಜನರು ಸಾವಿರ ಸಾವಿರ ಹಣ ಸುರಿಯಬೇಕು. ಹೊಸ ನಿಯಮಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಣಭಯದಿಂದ ಸಾವಿರ ಹಣ ಖರ್ಚು ಮಾಡಿ ಸ್ಕ್ಯಾನ್ ಮಾಡಿಡುತ್ತಿದ್ದಾರೆ.

ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿ ತಂಗೊಡ ಗ್ರಾಮದ ಸುನಾಂದವರು ಎಂಬುವರು ಗಂಭೀರ ಗರ್ಭಕೋಶ ಕಾಯಿಲೆಯಿಂದ ಬಳಲುತ್ತಿದ್ದಾರೆ. ವೈದ್ಯರು ಸ್ಕ್ಯಾನ್ ಮಾಡಿಕೊಂಡು ಬನ್ನಿ ರಿಪೋರ್ಟ್ ನೋಡಿ ಅಡ್ಮಿಟ್ ಮಾಡಿಕೊಳ್ಳುತ್ತೇವೆ ಅಂತ ಹೇಳಿದ್ದಾರೆ. ಆದರೆ, ಗದಗ ಜಿಮ್ಸ್ ಆಸ್ಪತ್ರೆಯಲ್ಲಿ MRI ಮತ್ತು ಸಿಟಿ ಸ್ಕ್ಯಾನ್​ವಿಭಾಗಕ್ಕೆ ಬಂದ ಸುನಂದಾ ಕಂಗಾಲಾಗಿದ್ದಾರೆ. ಸ್ಕ್ಯಾನ್​ಗೆ 6 ಸಾವಿರ ರೂ. ಆಗುತ್ತೆ ಎಂದು ಕೇಳುತ್ತಿದ್ದಾರೆ, ಹಣ ಎಲ್ಲಿಂದ ತರುವುದು. ಪ್ರಾಣ ಭಯ ಇದೆ ನಮಗೆ. ಮಕ್ಕಳು ಇದ್ದಾರೆ ಅಂತ ಟಿವಿ9 ಎದುರು ಗೋಳು ತೋಡಿಕೊಂಡಿದ್ದಾರೆ. ಬದುಕಬೇಕಲ್ಲ ಅನ್ನೋ ಬಡ ರೋಗಿಯ ಈ ಮಾತು ಮನಕಲಕುವಂತಿದೆ.

ಉಚಿತದ ಸ್ಕ್ಯಾನ್​ಗೆ ಹಣ ಏಕೆ?

ಇಷ್ಟು ವರ್ಷಗಳಿಂದ ಆಧಾರ್ ಕಾರ್ಡ್, ಬಿಪಿಎಲ್, ಎಪಿಎಲ್, ಅಂತ್ಯೋದಯ ರೇಷನ್ ಕಾರ್ಡ್ ಇದರೇ ಉಚಿತವಾಗಿ ತಕ್ಷಣ ಸ್ಕ್ಯಾನ್ ಮಾಡಲಾಗುತ್ತಿತ್ತು. ಆದರೆ, ಈಗ ABRK (ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ)ದ ಅನುಮತಿ ಕಡ್ಡಾಯ. ಅನುಮತಿ ಕೊಟ್ಟರೇ ಮಾತ್ರ ಸ್ಕ್ಯಾನ್ ಇಲ್ಲವಾದರೆ ಎಂಥ ಬಡವರು ಇದ್ದರೂ ಸಾವಿರಾರು ರೂಪಾಯಿ ಹಣ ಭರಿಸಲೇಬೇಕುಅನ್ನೋ ನಿಯಮ ಜಾರಿ ಮಾಡಲಾಗಿದೆ. ವೈದ್ಯರು MRI ಮತ್ತು ಸಿಟಿ ಸ್ಕ್ಯಾನ್​ ತಪಾಸಣೆ ಸೂಚಿಸಿದರೂ ಸಕಾಲಕ್ಕೆ ಸ್ಕ್ಯಾನಿಂಗ್ ಆಗದೇ ರೋಗಿಗಳ ನರಳಾಡುತ್ತಿದ್ದಾರೆ. ಗಂಭೀರ ಸಮಸ್ಯೆ ಇದ್ದ ರೋಗಿಗಳ ಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದೆ. ABRK ಅನುಮತಿ ವ್ಯವಸ್ಥೆಯೂ ಜಿಮ್ಸ್​ನಲ್ಲಿ ಇಲ್ಲ. ಹೀಗಾಗಿ ಬಡರೋಗಿಗಳು ಜಿಮ್ಸ್ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಇದನ್ನೂ ಓದಿ: ಗದಗ ಜಿಮ್ಸ್ ಆಸ್ಪತ್ರೆಯ ಮಕ್ಕಳ ಐಸಿಯು ವಾರ್ಡ್​ನಲ್ಲಿ ಜಿರಳೆಗಳ ಕಾಟ

ಎಂಥ ಗಂಭೀರ ಸಮಸ್ಯೆ ಇದ್ದ ರೋಗಿಗಳು ಬಂದರೂ ಮೊದಲು ABRK ಅನುಮತಿ ಕಡ್ಡಾಯ ಮಾಡಲಾಗಿದೆ. ಆನ್​ಲೈನ್​ನಲ್ಲಿ ABRK ಅನುಮತಿಗೆ ಕನಿಷ್ಠ 2 ರಿಂದ 4 ಗಂಟೆ ಕಾಯಲೇಬೇಕು ಅಂತ ಜಿಮ್ಸ್ ಅಧಿಕಾರಿಗಳೇ ಹೇಳಿದ್ದಾರೆ. ಇಂಥ ಸಂದರ್ಭದಲ್ಲಿ ಗಂಭೀರ ಹೊಟ್ಟೆ ನೋವು, ಅಪಘಾತವಾದ ರೋಗಿಗಳ ಕಾಲು, ಕೈ, ತಲೆಗೆ ಇಂಜುರಿ ಸಮಸ್ಯೆಯಂಥಾ ರೋಗಿಗಳ ಗತಿ ಏನೂ ಅನ್ನೋ ಪ್ರಶ್ನೆ ಕಾಡುತ್ತಿದೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.

ಇನ್ನೂ, ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ABRK ಅನುಮತಿಗೆ ಸೂಕ್ತ ವ್ಯವಸ್ಥೆ ಮಾಡಿಲ್ಲ. ಹಾಗಾಗಿ ಬಡ ರೋಗಿಗಳು ಸಾಲ ಮಾಡಿ ಹಣ ಕೊಟ್ಟು ಖಾಸಗಿಯಲ್ಲಿ ಸ್ಕ್ಯಾನಿಂಗ್ ಮಾಡಿಸುತ್ತಿದ್ದಾರೆ. ಬಿಪಿಎಲ್​, ಅಂತ್ಯೋದಯ ಕಾರ್ಡ್ ಇದ್ದರೂ ಸಾವಿರಾರು ಹಣ ಕಟ್ಟುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮೊದಲಿನ ವ್ಯವಸ್ಥೆಯೇ ಮುಂದುವರಿಸುವಂತೆ ಜನರು ಒತ್ತಾಯಿಸಿದ್ದಾರೆ.

ಈ ನಿಯಮ ಜಾರಿಗೆ ಮೊದಲು ಉಚಿತ ಸ್ಕ್ಯಾನಿಂಗ್ ಸೇವೆ ಇದ್ದಾಗ 30 ರಿಂದ 40 ಸ್ಕ್ಯಾನ್ ಆಗುತ್ತಿದ್ದವು. ಸಾಕಷ್ಟು ರೋಗಿಳು ಸಮಸ್ಯೆಯಿಂದ ಬಳಲುತ್ತಿದ್ದರು. ಈಗ ಒಂದು ವಾರದಿಂದ ಕೇವಲ ನಿತ್ಯ ಒಂದು ಎರಡು ಸ್ಕ್ಯಾನ್ ಮಾತ್ರ ಆಗುತ್ತೀವೆ ಎಂದು ತಿಳಿಸಿದರು.

ಈ ಬಗ್ಗೆ ಜಿಮ್ಸ್ ನಿರ್ದೇಶಕ ಡಾ. ಬಸವರಾಜ್ ಬೊಮ್ಮನಹಳ್ಳಿ ಮಾತನಾಡಿ, ಸರ್ಕಾರದ ಹೊಸ ನಿಯಮದಂತೆ ಜಾರಿ ಮಾಡಲಾಗಿದೆ. ABRK ಅನುಮತಿ ಪಡೆದು ಸ್ಕ್ಯಾನ್ ಮಾಡಬೇಕು ಅಂತ ನಿಯಮ ಬಂದಿದೆ. ಅನುಮತಿಗಾಗಿ 2 ರಿಂದ 4 ಗಂಟೆ ಬೇಕಾಗುತ್ತೆ ಎಂದು ಹೇಳಿದರು.

ಸರ್ಕಾರಿ ಆಸ್ಪತ್ರೆಗೆ ಬರುವ ಬಹುತೇಕರು ಬಡ ಜನ್ರು. ಗ್ರಾಮೀಣ ಭಾಗದ ಜನ್ರಿಗೆ ABRK ಅನುಮತಿ ಅಂದ್ರೆ ಗೋತ್ತಿಲ್ಲ. ಸ್ಕ್ಯಾನ್ ವಿಭಾಗದಲ್ಲೇ ಈ ವ್ಯವಸ್ಥೆ ಮಾಡಿದರೆ ಅನಕೂಲ ಆಗಬಹುದು. ಆದರೆ, ಈ ಮೊದಲಿನ ವ್ಯವಸ್ಥೆ ಇದ್ದರೇ, ಮಾತ್ರ ಬಡ ರೋಗಿಗಳಿಗೆ ಅನಕೂಲವಾಗಲಿದೆ ಎಂದು ರೋಗಿಗಳು ಒತ್ತಾಯಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ನಿವೃತ್ತಿ ಘೋಷಣೆಗೂ ಮುನ್ನ ವಿರಾಟ್ ಕೊಹ್ಲಿ ಮುಂದೆ ಕಣ್ಣೀರಿಟ್ಟ ಅಶ್ವಿನ್
ನಿವೃತ್ತಿ ಘೋಷಣೆಗೂ ಮುನ್ನ ವಿರಾಟ್ ಕೊಹ್ಲಿ ಮುಂದೆ ಕಣ್ಣೀರಿಟ್ಟ ಅಶ್ವಿನ್
ಸರ್ಕಾರೀ ಆಸ್ಪತ್ರೆಗಳ ವಿಷಯದಲ್ಲಿ ನೆಗೆಟಿವ್ ಮಾತು ಸರಿಯಲ್ಲ: ಕೋನರೆಡ್ಡಿ
ಸರ್ಕಾರೀ ಆಸ್ಪತ್ರೆಗಳ ವಿಷಯದಲ್ಲಿ ನೆಗೆಟಿವ್ ಮಾತು ಸರಿಯಲ್ಲ: ಕೋನರೆಡ್ಡಿ
ಕಣ್ಣೀರು ಅದುಮಿಟ್ಟು ನಿವೃತ್ತಿ ಘೋಷಿಸಿದ ಅಶ್ವಿನ್
ಕಣ್ಣೀರು ಅದುಮಿಟ್ಟು ನಿವೃತ್ತಿ ಘೋಷಿಸಿದ ಅಶ್ವಿನ್
ದರ್ಶನ್​ಗೆ ನಡೆದಾಡಲು ಮಗನ ಆಸರೆ; ಕುಂಟುತ್ತಲೇ ಕಾರು ಏರಿದ ನಟ
ದರ್ಶನ್​ಗೆ ನಡೆದಾಡಲು ಮಗನ ಆಸರೆ; ಕುಂಟುತ್ತಲೇ ಕಾರು ಏರಿದ ನಟ
ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್​; ಶಸ್ತ್ರಚಿಕಿತ್ಸೆ ಇಲ್ಲದೆ ಹೊರ ಬಂದ ನಟ
ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್​; ಶಸ್ತ್ರಚಿಕಿತ್ಸೆ ಇಲ್ಲದೆ ಹೊರ ಬಂದ ನಟ
ಹೆಡ್ ಔಟ್ ಮಾಡಿದ ಸಿರಾಜ್: ತೊಲಗು ಎಂದು ಸಂಭ್ರಮಿಸಿದ ಪುಟ್ಟ ಅಭಿಮಾನಿ
ಹೆಡ್ ಔಟ್ ಮಾಡಿದ ಸಿರಾಜ್: ತೊಲಗು ಎಂದು ಸಂಭ್ರಮಿಸಿದ ಪುಟ್ಟ ಅಭಿಮಾನಿ
ಮಾಧ್ಯಮ ವರದಿಗಳ ನಂತರವೇ ಮೇಲಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೇ?
ಮಾಧ್ಯಮ ವರದಿಗಳ ನಂತರವೇ ಮೇಲಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೇ?
ಉತ್ತರ ಪ್ರದೇಶ: ಬಿಜೆಪಿ ಕಚೇರಿಯನ್ನೇ ನೆಲಸಮ ಮಾಡಿದ ಯೋಗಿ ಸರ್ಕಾರ
ಉತ್ತರ ಪ್ರದೇಶ: ಬಿಜೆಪಿ ಕಚೇರಿಯನ್ನೇ ನೆಲಸಮ ಮಾಡಿದ ಯೋಗಿ ಸರ್ಕಾರ
Karnataka Winter Session Live: ಬೆಳಗಾವಿ ಚಳಿಗಾಲದ ಅಧಿವೇಶನ ಲೈವ್​
Karnataka Winter Session Live: ಬೆಳಗಾವಿ ಚಳಿಗಾಲದ ಅಧಿವೇಶನ ಲೈವ್​
ಕಿತ್ತಾಟದಿಂದ ರದ್ದಾಯ್ತು ಟಾಸ್ಕ್; ದೊಡ್ಡ ಪರಿಣಾಮ ಎದುರಿಸಿದ ಮನೆ ಮಂದಿ
ಕಿತ್ತಾಟದಿಂದ ರದ್ದಾಯ್ತು ಟಾಸ್ಕ್; ದೊಡ್ಡ ಪರಿಣಾಮ ಎದುರಿಸಿದ ಮನೆ ಮಂದಿ