ಗದಗ ಜಿಮ್ಸ್ ಆಸ್ಪತ್ರೆಯ ಮಕ್ಕಳ ಐಸಿಯು ವಾರ್ಡ್​ನಲ್ಲಿ ಜಿರಳೆಗಳ ಕಾಟ, ಅವ್ಯವಸ್ಥೆ ವಿರುದ್ಧ ಪೋಷಕರ ಆಕ್ರೋಶ

ಅದು ಸರ್ಕಾರಿ ಹೈಟೆಕ್ ಆಸ್ಪತ್ರೆ. ಸರ್ಕಾರ ಕೋಟ್ಯಾಂತರ ರೂ ಅನುದಾನ ನೀಡಿ ಎಲ್ಲ ಸೌಲಭ್ಯ ನೀಡಿದೆ. ಆದ್ರೆ, ಈ ಆಸ್ಪತ್ರೆ ಒಳಗೆ ಹೋಗಿ ನೋಡಿದ್ರೆ ಹೈಟೆಕ್ ಆಸ್ಪತ್ರೆ ಅಸಲಿ ಮುಖವಾಡ ಗೊತ್ತಾಗುತ್ತೆ. ಈ ಆಸ್ಪತ್ರೆಯಲ್ಲಿ ಓಡಾಡೋ ಜಿರಳೆಗಳ ಕಾಟಕ್ಕೆ ರೋಗಿಗಳು ವಿಲವಿಲ ಅಂತಿದ್ದಾರೆ. ಅದ್ರಲ್ಲೂ ಮಕ್ಕಳ ವಿಭಾಗದಲ್ಲಿ ಜಿರಳೆಗಳ ಸಾಮ್ರಾಜ್ಯವೇ ಇದೆ. ಜಿರಳೆಗಳ ಕಾಟಕ್ಕೆ ಮಕ್ಕಳು ರಾತ್ರಿಯಿಡೀ ನಿದ್ದೆ ಇಲ್ಲದೇ ಒದ್ದಾಡುವಂತಾಗಿದೆ. ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಮಕ್ಕಳ ಪೊಷಕರು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ ಜಿಮ್ಸ್ ಆಸ್ಪತ್ರೆಯ ಮಕ್ಕಳ ಐಸಿಯು ವಾರ್ಡ್​ನಲ್ಲಿ ಜಿರಳೆಗಳ ಕಾಟ, ಅವ್ಯವಸ್ಥೆ ವಿರುದ್ಧ ಪೋಷಕರ ಆಕ್ರೋಶ
ಗದಗ ಜಿಮ್ಸ್ ಆಸ್ಪತ್ರೆಯ ಮಕ್ಕಳ ಐಸಿಯು ವಾರ್ಡ್​ನಲ್ಲಿ ಜಿರಳೆಗಳ ಕಾಟ
Follow us
| Updated By: ಆಯೇಷಾ ಬಾನು

Updated on: Oct 13, 2024 | 1:40 PM

ಗದಗ, ಅ.13: ಗದಗ ಜಿಮ್ಸ್ ಆಸ್ಪತ್ರೆಯಲ್ಲಿ (Gadag Gims) ಜಿರಳೆಗಳ ಕಾಟಕ್ಕೆ ರೋಗಿಗಳು ಒದ್ದಾಡುತ್ತಿದ್ದಾರೆ. ಮಕ್ಕಳ ಐಸಿಯು ವಾರ್ಡ್ ನಲ್ಲೇ ಜಿರಳೆಗಳ ಸಾಮ್ರಾಜ್ಯ ನಿರ್ಮಾಣವಾಗಿದೆ. ಎಲ್ಲಿ ನೋಡಿದರೂ ಜಿರಳೆಗಳ (Cockroach) ಹಾವಳಿ‌. ರಾತ್ರಿಯಿಡೀ ನಿದ್ದೆ ಇಲ್ದೇ ಮಕ್ಕಳ ಒದ್ದಾಡುತ್ತಿದ್ದಾರೆ. ಜಿಮ್ಸ್ ಆಡಳಿತ ಯಡವಟ್ಟುಗಳ ವಿರುದ್ಧ ಗದಗ ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯಲ್ಲಿ ಸ್ವಚ್ಛತೆ ಅನ್ನೋದು ಹದಗೆಟ್ಟು ಹೋಗಿದೆ. ಈ ಆಸ್ಪತ್ರೆಗೆ ಬಂದ್ರೆ ರೋಗಳು ವಾಸಿಯಾಗೋದಕ್ಕಿಂತ ಮತ್ತಷ್ಟು ರೋಗಗಳು ಹಚ್ಚಿಕೊಂಡು ಹೋಗುವಂತ ಚಿತ್ರಣಗಳೇ ಹೆಚ್ಚಿವೆ. ಈಗ ಜಿಮ್ಸ್ ಆಸ್ಪತ್ರೆಯಲ್ಲಿ ಜಿರಳೆಗಳ ಕಾಟ ಹೆಚ್ಚಾಗಿದೆ. ಅದ್ರಲ್ಲೂ ಮಕ್ಕಳ ವಿಭಾಗದ ಐಸಿಯುನಲ್ಲಿ ಜಿರಳೆಗಳ ಸಮ್ರಾಜ್ಯವೇ ನಿರ್ಮಾಣವಾಗಿದೆ. ಹೀಗಾಗಿ ರಾತ್ರಿಯಿಡೀ ಜಿರಳೆಗಳ ಕಾಟಕ್ಕೆ ಮಕ್ಕಳು ವಿಲವಿಲ ಅಂತ ಒದ್ದಾಡುತ್ತಿದ್ದಾರೆ. ರಾತ್ರಿಯಿಡೀ ನಿದ್ದೆ ಇಲ್ಕದೇ ರೋಗಿಗಳು ಪರದಾಡುತ್ತಿದ್ದಾರೆ. ರಾತ್ರಿಯಾದ್ರೆ ಸಾಕು ಬೆಡ್ ಗಳ ಮೇಲೆ ಹರಿದಾಡುವ ಜಿರಳೆಗಳು ಮಕ್ಕಳ ಜೀವ ಹಿಂಡುತ್ತಿವೆ.

ಮಕ್ಕಳ ಆಹಾರದಲ್ಲೂ ಓಡಾಡುವ ಜಿರಳೆಗಳು

ಈ ಜಿರಳೆಗಳು ಮಕ್ಕಳ ಮೇಲೆ ಮಾತ್ರ ಹರದಾಡುವುದಿಲ್ಲ. ಮಕ್ಕಳು ತಿನ್ನುವ ಆಹಾರದ ಮೇಲೂ ಹರಿದಾಡುತ್ತಿವೆ. ಅದೇ ಆಹಾರ ಮಕ್ಕಳು ತಿನ್ನುವಂತಾಗಿದೆ. ಹೀಗಾಗಿ ಮಕ್ಕಳ ಜೀವಕ್ಕೆ ಇಲ್ಲಿ ಭಾರಿ ಅಪಾಯ ಅನ್ನೋ ವಾತಾವರಣ ಇದೆ. ಇಷ್ಟೇಲ್ಲಾ ಕಣ್ಣಾರೆ ಕಂಡ್ರು ವೈದ್ಯರು, ಸಿಬ್ಬಂದಿಗಳು ಮಾತ್ರ ಯಾರಿಗೇನಾದ್ರೂ ಆದ್ರೆ ನಮಗೇನು ಅನ್ನೋ ಬೇಜವಾಬ್ದಾರಿ ತೋರುತ್ತಿದ್ದಾರೆ. ಇನ್ನೂ ಜಿಮ್ಸ್ ನಿರ್ದೇಶಕರು ಎಸಿ ರೂಂ ಬಿಟ್ಟು ಆಸ್ಪತ್ರೆ ಕಡೆ ಸುಳಿಯುವುದೇ ಇಲ್ವಂತೆ. ಹೀಗಾಗಿ ಮಕ್ಕಳ ವಿಭಾಗದ ಮುಖ್ಯಸ್ಥರು ಸಮಸ್ಯೆ ಬಗ್ಗೆ ನಿರ್ದೇಶಕರು, ಎಂಎಸ್ ಗಮನಕ್ಕೆ ತಂದ್ರೂ ಪ್ರಯೋಜನವಾಗಿಲ್ಲ ಅಂತ ಸಿಬ್ಬಂದಿಗಳೇ ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಆಸ್ಪತ್ರೆ ವ್ಯವಸ್ಥೆ ಬಗ್ಗೆ ಮಕ್ಕಳ ಪೊಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಮಕ್ಕಳ ಆರೋಗ್ಯದಲ್ಲಿ ಏನಾದ್ರೂ ಹೆಚ್ಚುಕಮ್ಮಿಯಾದ್ರೆ ಹೊಣೆ ಯಾರು? ಅಂತ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಹೆಂಡತಿ ಮಕ್ಕಳನ್ನು ಬೆನ್ನ ಮೇಲೆ ಹೊತ್ತು ಸಾಗುವ ಏಕೈಕ ಪ್ರಾಣಿಯಿದು

ಸರ್ಕಾರಿ ಆಸ್ಪತ್ರೆ ಅಂದ್ರೆ ಬಡವರ ಪಾಲಿನ ಸಂಜೀವಿನಿ ಅಂತಾರೆ. ಹೀಗಾಗಿ ಸರ್ಕಾರಿ ಆಸ್ಪತ್ರೆಗೆ ಬರೋರು ಬಡವರೇ ಹೆಚ್ಚು. ಈ ಜಿಮ್ಸ್ ಆಸ್ಪತ್ರೆಗೆ ಬಂದ್ರೆ ಮಕ್ಕಳ ರೋಗಗಳು ವಾಸಿಯಾಗೋದಕಿಂತ ಇನ್ನೂ ನಾಲ್ಕು ರೋಗಗಳು ಹಚ್ಚಿಕೊಂಡು ಹೋಗುವಂತ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳಿಗೆ ತಂದ ಊಟ, ಉಪಹಾರ ಇಡುವ ಬಾಕ್ಸ್​ಗಳಲ್ಲೂ ಜಿರಳೆಗಳು ಓಡಾಡುತ್ತಿವೆ. ಡೆಂಗ್ಯೂ, ಜ್ವರ ಸೇರಿದಂತೆ ವಿವಿಧ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಈ ವಾರ್ಡ್ ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿವೆ. ಮಕ್ಕಳ ಜೀವದ ಜೊತೆ ಜಿಮ್ಸ್ ಆಡಳಿತ ಆಟವಾಡ್ತಾಯಿದೆ ಅಂತ ಮಕ್ಕಳ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆತಂಕ, ಭಯದಲ್ಲೇ ಮಕ್ಕಳಿಗೆ ಚಿಕಿತ್ಸೆ ಕೊಡಿಸುತ್ತಿದ್ದೇವೆ ಅಂತ ಪೋಷಕರು ಅಳಲು ತೋಡಿಕೊಂಡಿದ್ದಾರೆ. ಸಾಕಷ್ಟು ಅವ್ಯವಸ್ಥೆ ಇದ್ರೂ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಮೌನ ತಾಳಿದ್ದು ಗದಗ ಜಿಲ್ಲೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜಿಮ್ಸ್ ನಿರ್ದೇಶಕ ಡಾ. ಬಸವರಾಜ್ ಬೊಮ್ಮನಹಳ್ಳಿ ಅವರನ್ನು ಕೇಳಿದ್ರೆ, ಆಸ್ಪತ್ರೆ ನನ್ನ ವ್ಯಾಪ್ತಿಗೆ ಬರಲ್ಲ. ಎಂಎಸ್ ವ್ಯಾಪ್ತಿಗೆ ಬರುತ್ತೆ. ಸರಿ ಮಾಡಲು ಎಂಎಸ್ ಅವ್ರಿಗೆ ತಿಳಿಸಲಾಗಿದೆ ಅಂತ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ.

ಪದೇ ಪದೇ ಯಡವಟ್ಟು ನಡೆದ್ರೂ ವೈದ್ಯಕೀಯ ಇಲಾಖೆ ಮಾತ್ರ ಕುಂಭಕರ್ಣ ನಿದ್ದೆ ಮಾಡ್ತಾಯಿದೆ. ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗ್ತಾಯಿದೆ. ತಿಂಗಳ ಹಿಂದೆ ಉಪ ಲೋಕಾಯುಕ್ತರು ಜಿಮ್ಸ್ ಗೆ ಭೇಟಿ ನೀಡಿದಾಗ ಸಾಕಷ್ಟು ಅವ್ಯವಸ್ಥೆ ಕಂಡು ಬಂದ ಹಿನ್ನಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ರು. ಸ್ವಚ್ಛತೆ ಬಗ್ಗೆ ಉಪಲೋಕಾಯುಕ್ತರು ಖಡಕ್ ತಾಕೀತ್ತು ಮಾಡಿದ್ರು. ಆದ್ರೆ, ಉಪಲೋಕಾಯುಕ್ತರ ಆದೇಶಕ್ಕೂ ಗದಗ ಜಿಮ್ಸ್ ಆಡಳಿತ ಕ್ಯಾರೇ ಎಂದಿಲ್ಲ. ಮಕ್ಕಳ ಆರೋಗ್ಯದಲ್ಲಿ ಹೆಚ್ಚು ಕಮ್ಮಿಯಾದ್ರೆ ಹೊಣೆ ಯಾರು ಅಂತ ಪ್ರಶ್ನೆ ಕಾಡ್ತಾಯಿದೆ. ಇನ್ನಾದ್ರೂ ವೈದ್ಯಕೀಯ ಇಲಾಖೆ ಕುಂಭಕರ್ಣ ನಿದ್ದೆಯಿಂದೆ ಎಚ್ಚೆತ್ತುಕೊಂಡು ಗದಗ ಜಿಮ್ಸ್ ಆಡಳಿತ ಸರ್ಜರಿ ಮಾಡುವ ಮೂಲಕ ಬಡಜೀವಗಳಿಗೆ ರಕ್ಷಣೆ ನೀಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬಳ್ಳಾರಿ: ಉತ್ಸವ ಮೂರ್ತಿಗಾಗಿ ಪರಸ್ಪರ ಬಡಿದಾಟ, ಹರಿದ ನೆತ್ತರು
ಬಳ್ಳಾರಿ: ಉತ್ಸವ ಮೂರ್ತಿಗಾಗಿ ಪರಸ್ಪರ ಬಡಿದಾಟ, ಹರಿದ ನೆತ್ತರು
ಕೊಪ್ಪಳ: ಬೀಡಿ ಸೇದುತ್ತ ಕೆಎಸ್​ಆರ್​ಟಿಸಿ ಬಸ್ ಓಡಿಸಿದ ಚಾಲಕ, ವಿಡಿಯೋ ವೈರಲ್
ಕೊಪ್ಪಳ: ಬೀಡಿ ಸೇದುತ್ತ ಕೆಎಸ್​ಆರ್​ಟಿಸಿ ಬಸ್ ಓಡಿಸಿದ ಚಾಲಕ, ವಿಡಿಯೋ ವೈರಲ್
ದಾವಣಗೆರೆ: ಎಳೆಹೊಳೆ ಗ್ರಾಮದಲ್ಲಿ ಕ್ರಿಶ 1271ರ ಶಾಸನ ಪತ್ತೆ
ದಾವಣಗೆರೆ: ಎಳೆಹೊಳೆ ಗ್ರಾಮದಲ್ಲಿ ಕ್ರಿಶ 1271ರ ಶಾಸನ ಪತ್ತೆ
ದಾವಣಗೆರೆ: ಗೌಳಿ ಸಮುದಾಯದಿಂದ ವಿಭಿನ್ನವಾಗಿ ದಸರಾ ಆಚರಣೆ
ದಾವಣಗೆರೆ: ಗೌಳಿ ಸಮುದಾಯದಿಂದ ವಿಭಿನ್ನವಾಗಿ ದಸರಾ ಆಚರಣೆ
"ಇಟ್ಟ ರಾಮನ ಬಾಣ ಹುಸಿಯಿಲ್ಲ" ಆತಂಕ ಮೂಡಿಸಿದ ಮೈಲಾರಲಿಂಗೇಶ್ವರ ಕಾರ್ಣಿಕ
ತುಮಕೂರು ದಸರಾದಲ್ಲಿ ಪುನೀತ್ ಅವರ ಹಾಡು ಹಾಡಿದ ಸಚಿವ ಪರಮೇಶ್ವರ್
ತುಮಕೂರು ದಸರಾದಲ್ಲಿ ಪುನೀತ್ ಅವರ ಹಾಡು ಹಾಡಿದ ಸಚಿವ ಪರಮೇಶ್ವರ್
ಬಾಂಗ್ಲಾ ಬೌಲರ್​ಗಳನ್ನ ಚೆಂಡಾಡಿದ ಭಾರತೀಯ ಬ್ಯಾಟರ್​ಗಳು: ಇಲ್ಲಿದೆ ಹೈಲೈಟ್ಸ್
ಬಾಂಗ್ಲಾ ಬೌಲರ್​ಗಳನ್ನ ಚೆಂಡಾಡಿದ ಭಾರತೀಯ ಬ್ಯಾಟರ್​ಗಳು: ಇಲ್ಲಿದೆ ಹೈಲೈಟ್ಸ್
Daily Devotional: ಸನಾತನ ಹಿಂದೂ ಧರ್ಮದಲ್ಲಿ ದರ್ಭೆಯ ಮಹತ್ವ ತಿಳಿಯಿರಿ
Daily Devotional: ಸನಾತನ ಹಿಂದೂ ಧರ್ಮದಲ್ಲಿ ದರ್ಭೆಯ ಮಹತ್ವ ತಿಳಿಯಿರಿ
ವಾರ ಭವಿಷ್ಯ: ಅಕ್ಟೋಬರ್ 14 ರಿಂದ 20 ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ಅಕ್ಟೋಬರ್ 14 ರಿಂದ 20 ರವರೆಗೆ ವಾರ ಭವಿಷ್ಯ ಹೀಗಿದೆ
ಈ ರಾಶಿಯವರ ಸಣ್ಣ ನಿರ್ಲಕ್ಷ್ಯವು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು
ಈ ರಾಶಿಯವರ ಸಣ್ಣ ನಿರ್ಲಕ್ಷ್ಯವು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು