AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gadag Crime: ಶಾಲೆಯಲ್ಲಿ ನಡೆದ ಮಾರಣಾಂತಿಕ ಹಲ್ಲೆ, ಕೊಲೆ ಪ್ರಕರಣದ ಸುತ್ತ ಅನೈತಿಕ ಸಂಬಂಧದ ಶಂಕೆ

ಅತಿಥಿ ಶಿಕ್ಷಕನಿಂದ ವಿದ್ಯಾರ್ಥಿ ಕೊಲೆ, ಶಿಕ್ಷಕಿ ಮೇಲೆ ಮಾರಣಾಂತಿಕ ಹಲ್ಲೆ ವಿಚಾರ ಇದೀಗ ತಿರುವು ಪಡೆದುಕೊಂಡಿದೆ. ಪ್ರಕರಣದ ಸುತ್ತ ಅನೈತಿಕ ಸಂಬಂಧದ ಶಂಕೆ ವ್ಯಕ್ತವಾಗಿದೆ.

Gadag Crime: ಶಾಲೆಯಲ್ಲಿ ನಡೆದ ಮಾರಣಾಂತಿಕ ಹಲ್ಲೆ, ಕೊಲೆ ಪ್ರಕರಣದ ಸುತ್ತ ಅನೈತಿಕ ಸಂಬಂಧದ ಶಂಕೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Dec 20, 2022 | 10:57 AM

Share

ಗದಗ: ಅತಿಥಿ ಶಿಕ್ಷಕಿ ಗೀತಾ ಮೇಲಿನ ಹಲ್ಲೆ (Assault) ಮತ್ತು ಗೀತಾ ಅವರ ಮಗನ ಕೊಲೆ (Student Murder) ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು, ಆರೋಪಿ ಮುತ್ತಪ್ಪನ ಬಂಧನಕ್ಕೆ ರಾತ್ರಿ ಇಡೀ ಶೋಧ ಕಾರ್ಯ ನಡೆಸಿದ್ದಾರೆ. ಇನ್ನೊಂದೆಡೆ ಗಂಭೀರವಾಗಿ ಗಾಯಗೊಂಡ ಗೀತಾ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ನಡುವೆ ಪ್ರಕರಣವು ತಿರುವು ಪಡೆದುಕೊಂಡಿದೆ. ಹಲ್ಲೆ ನಡೆಸಿದ ಅತಿಥಿ ಶಿಕ್ಷಕ ಮುತ್ತಪ್ಪ ಮತ್ತು ಗೀತಾ ಅವರ ನಡುವೆ ಅನೈತಿಕ ಸಂಬಂಧ (Immoral relationship) ಹೊಂದಿದ್ದ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಸದ್ಯ ಘಟನೆಗೆ ಹಿಂದೆ ಅನೈತಿಕ ಸಂಬಂಧ ವಾಸನೆ ಹುಟ್ಟುಕೊಂಡಿದೆ. ಹಂತಕ ಅತಿಥಿ ಶಿಕ್ಷಕ ಮುತ್ತಪ್ಪ ಮತ್ತು ಅತಿಥಿ ಶಿಕ್ಷಕಿ ಗೀತಾ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗುತ್ತಿದ್ದು, ಶೈಕ್ಷಣಿಕ ಪ್ರವಾಸಕ್ಕೆ ಹೋದಾಗ ಶಿಕ್ಷಕ, ಶಿಕ್ಷಕಿ ನಡುವೆ ಜಗಳ ನಡೆದಿದೆ. ಹೀಗಾಗಿ ಮುತ್ತಪ್ಪನಿಂದ ಗೀತಾ ಅಂತರ ಕಾಯ್ದುಕೊಂಡಿದ್ದಳು. ಇದೇ ಕಾರಣಕ್ಕೆ ರೊಚ್ಚಿಗೆದ್ದ ಮುತ್ತಪ್ಪ ಶಾಲೆಯಲ್ಲಿ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಟಿವಿ9ಗೆ ಪೊಲೀಸ್ ಇಲಾಖೆ ಉನ್ನತ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ಇದನ್ನೂ ಓದಿ: ಮೈಸೂರು: ವಿದ್ಯುತ್ ತಂತಿ ತಗುಲಿ 20 ಎಕರೆ ಕಬ್ಬು ಬೆಳೆ ಸಂಪೂರ್ಣ ನಾಶ

ಶಿಕ್ಷಕನ ಕ್ರೂರತನಕ್ಕೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಯಾವ ಕಾರಣಕ್ಕೆ ಕೊಲೆ ಮಾಡಿದ್ದಾನೆ ನಮಗೆ ಗೊತ್ತಿಲ್ಲ. ಯಾವ ವಿಚಾರಕ್ಕೆ ಜಗಳ ಗೊತ್ತಿಲ್ಲ. ಮದುವೆಯಾಗಿ 15 ವರ್ಷವಾಗಿತ್ತು. ನನ್ನ ಮೊಮ್ಮಗನ್ನು ಕೊಂದಿದ್ದಾನೆ ಅಂತ ಶಿಕ್ಷಕಿ ಗೀತಾ ತಾಯಿ ರತ್ನವ್ವ ಕಣ್ಣೀರು ಸುರಿಸುತ್ತಿದ್ದಾರೆ.

ತರಗತಿಯಲ್ಲಿ ಟೀಚರ್ ಭಾಗಾಕಾರ ಲೆಕ್ಕ ಮಾಡಲು ಹೇಳಿ ವಿಶ್ರಾಂತಿ ಪಡೆಯಲು ಹೋಗಿದ್ದಾರೆ. ಆಗ ಮುತ್ತಪ್ಪ ಅವರು ಬಂದು ನೀನು ಕಾಮಿಡಿ ಚೆನ್ನಾಗಿ ಮಾಡುತ್ತೀಯಾ ಬಾ ಅಂತ ಕರೆದುಕೊಂಡು ಹೋಗಿದರು. ಈ ವೇಳೆ ನಮ್ಮ ತರಗತಿಯ ಬಾಗಿಲು ಹಾಕಿದರು. ನಂತರ ಏನಾಯ್ತು ಅಂತ ಗೊತ್ತಿಲ್ಲ, ಬಳಿಕ ಯಾರೋ ಬಂದು ನಮ್ಮ ತರಗತಿಯ ಬಾಗಿಲು ತೆರೆದರು. ಹೊರಗಡೆ ಬಂದು ನೋಡಿದಾಗ ಎಲ್ಲಾ ಕಡೆ ರಕ್ತ ಚೆಲ್ಲಿತ್ತು. ಇದು ನೋಡಿ ಎಲ್ಲರೂ ಭಯಗೊಂಡು ಓಡಿದೆವು ಎಂದು ಶಿಕ್ಷಕನ ಕ್ರೂರ ಘಟನೆ ಬಗ್ಗೆ ಪ್ರತ್ಯಕ್ಷದರ್ಶಿ ವಿದ್ಯಾರ್ಥಿ ಹೇಳಿಕೆ ನೀಡಿದ್ದಾನೆ.

ಇದನ್ನೂ ಓದಿ: ಕುಣಿಗಲ್​ನ ಗೊಟ್ಟಿಕೆರೆಯ ಮನೆಯೊಂದರ ಅಡುಗೆ ಮನೆಯ ಪಾತ್ರೆಯಲ್ಲಿ ಕೆರೆ ಹಾವು ಪ್ರತ್ಯಕ್ಷ

ಏನಿದು ಪ್ರಕರಣ?

ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ (ಡಿ19)  ಅತಿಥಿ ಶಿಕ್ಷಕಿ ಗೀತಾ ಮತ್ತು ಇದೇ ಶಾಲೆಯ ವಿದ್ಯಾರ್ಥಿಯೂ ಆಗಿರುವ ಗೀತಾರ ಮಗ ಭರತ್ (10) ಮೇಲೆ ಅತಿಥಿ ಶಿಕ್ಷಕ ಮುತ್ತಪ್ಪ ಸಲಾಕೆಯಿಂದ ಗಂಭೀರವಾಗಿ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದನು. ಘಟನೆಯಲ್ಲಿ ಭರತ್ ಸಾವನ್ನಪ್ಪಿದ್ದರೆ, ಗೀತಾರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ದಾವಿಸಿದ ನರಗುಂದ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:49 am, Tue, 20 December 22