ಗಂಡನ ಕಡತ ತುಡಿತ! ಗದಗ ನಗರಸಭೆಯಲ್ಲಿ ಅಧ್ಯಕ್ಷೆಯ ಗಂಡನದ್ದೇ ದರ್ಬಾರ್; ಪತಿ ನೋಡಿದ ಬಳಿಕವಷ್ಟೇ ಫೈಲ್ ಗೆ ಸಹಿ ಹಾಕ್ತಾರೆ ಮೇಡಂ
ಅಧ್ಯಕ್ಷ ಸ್ಥಾನ ಎಸ್ಸಿಗೆ ಹಾಗೂ ಮಹಿಳಾ ಮೀಸಲಾತಿ ಇರೋದ್ರಿಂದ ನಗರಸಭೆ ಅಧ್ಯಕ್ಷೆಯಾಗಿ ಉಷಾ ದಾಸರ್ ಆಯ್ಕೆಯಾಗಿದ್ದಾರೆ. ಆದ್ರೆ ಈ ನಗರಸಭೆಯಲ್ಲಿ ಉಷಾ ದಾಸರ್ ಕಿಂತಲೂ ಹೆಚ್ಚಾಗಿ ಅವರ ಗಂಡನೇ ಆಡಳಿತದಲ್ಲಿ ಹಸ್ತಕ್ಷೇಪ ಮಾಡ್ತಾಯಿದ್ದಾರೆ ಎನ್ನುವ ಆರೋಪ ಬಲವಾಗಿ ಕೇಳಿ ಬರ್ತಾಯಿದೆ.
ಗದಗ: ಮಹಿಳೆಯರಿಗೆ ಸಮಾನತೆ ಸಿಗಲಿ ಅಂತ ಸರ್ಕಾರ ಮಹಿಳಾ ಮೀಸಲಾತಿ ಜಾರಿ ಮಾಡಿದೆ. ಅದರಂತೆ ಈ ನಗರಸಭೆಗೆ ಮಹಿಳಾ ಅಧ್ಯಕ್ಷೆ ಆಗಿದ್ದಾರೆ. ಆದ್ರೆ, ಇಲ್ಲಿ ದರ್ಬಾರ್ ಮಾಡೋದು ಮಾತ್ರ ಅಧ್ಯಕ್ಷೆ ಗಂಡ. ಅಧ್ಯಕ್ಷೆ ಚೇಂಬರ್ಗೆ ಬಂದು ಅಧ್ಯಕ್ಷೆಯ ಪಕ್ಕದ ಖುರ್ಚಿಯಲ್ಲಿ ಕುಳಿತು ದರ್ಬಾರ್ ಮಾಡ್ತಾರೆ. ಫೈಲ್ ಪರಿಶೀಲನೆ ಮಾಡ್ತಾರೆ. ನಗರಸಭೆ ಸದಸ್ಯರ ಸಭೆಯಲ್ಲೂ ಅಧ್ಯಕ್ಷೆ ಪತಿ ಅಂದಾ ದರ್ಬಾರ್ ನಡೆಸಿದ್ದಾರಂತೆ. ಅಧ್ಯಕ್ಷೆ ಗಂಡ ಕೆಲಸ ನಗರಸಭೆಯಲ್ಲೇನಿದೇ ಅಂತ ಸದಸ್ಯರು ಪ್ರಶ್ನೆ ಮಾಡಿದ್ದಾರೆ. ಅಧ್ಯಕ್ಷೆಯ ಗಂಡನ ವರ್ತನೆಗೆ ಸದಸ್ಯರು ಬೇಸತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ನಿರ್ಧಾರ ಮಾಡಿದ್ದಾರೆ.
ಗದಗ-ಬೆಟಗೇರಿ ಅವಳಿ ನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ಅಧಿಕಾರಿಗಳು ಆಡಳಿತ ನಡೆಸುತ್ತಿದ್ದರು. ಆದ್ರೆ ಈಗ ಕಳೆದ ನಾಲ್ಕೈದು ತಿಂಗಳಿಂದ ಜನಪ್ರತಿನಿಧಿಗಳು ಆಡಳಿತ ನಡೆಸುತ್ತಿದ್ದಾರೆ. ಅಧ್ಯಕ್ಷ ಸ್ಥಾನ ಎಸ್ಸಿಗೆ ಹಾಗೂ ಮಹಿಳಾ ಮೀಸಲಾತಿ ಇರೋದ್ರಿಂದ ನಗರಸಭೆ ಅಧ್ಯಕ್ಷೆಯಾಗಿ ಉಷಾ ದಾಸರ್ ಆಯ್ಕೆಯಾಗಿದ್ದಾರೆ. ಆದ್ರೆ ಈ ನಗರಸಭೆಯಲ್ಲಿ ಉಷಾ ದಾಸರ್ ಕಿಂತಲೂ ಹೆಚ್ಚಾಗಿ ಅವರ ಗಂಡನೇ ಆಡಳಿತದಲ್ಲಿ ಹಸ್ತಕ್ಷೇಪ ಮಾಡ್ತಾಯಿದ್ದಾರೆ ಎನ್ನುವ ಆರೋಪ ಬಲವಾಗಿ ಕೇಳಿ ಬರ್ತಾಯಿದೆ. ಗದಗ ಬೆಟಗೇರಿ ನಗರಸಭೆ ಕಚೇರಿಯಲ್ಲಿ ಅಧ್ಯಕ್ಷೆಯ ಜೊತೆಗೆ ಆತನ ಗಂಡ ಮಹೇಶ ದಾಸರ್ ಹಾಗೂ ಕುಟುಂಬ ಸದಸ್ಯರು ಕಾಯಂ ಠಿಖಾಣಿ ಹೂಡಿರ್ತಾರೆ. ಇದನ್ನೂ ಓದಿ: Chethana Raj: ನಟಿ ಚೇತನಾ ರಾಜ್ಗೆ ಕಾಸ್ಮೆಟಿಕ್ ಸರ್ಜರಿ ನಡೆಸಿದ್ದ ಆಸ್ಪತ್ರೆಗೆ ಬೀಗ; ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಆದೇಶ
ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಬಂದ್ರು, ಅವರೊಂದಿಗೆ ಅಧ್ಯಕ್ಷೆಯ ಗಂಡನೇ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತಾರೆ. ಇಲ್ಲಿ ಅಧ್ಯಕ್ಷೆ ಏನೇ ನಿರ್ಧಾರ ಕೈಗೊಳ್ಳಬೇಕಾದ್ರೆ ಪತಿಯ ಅಪ್ಪಣೆ ಕಡ್ಡಾಯ. ಕಚೇರಿಗೆ ಸಂಬಂಧಿಸಿದ ಪೈಲ್ ಕೂಡ ಗಂಡ ಪರಿಶೀಲನೆ ಮಾಡಿದ ಬಳಿಕವೇ ಮುಂದಿನ ನಿರ್ಧಾರ. ಹೀಗೆ ಪ್ರತಿಯೊಂದು ಹಂತದಲ್ಲೂ ಆಡಳಿತಕ್ಕೆ ಅಧ್ಯಕ್ಷೆಯ ಗಂಡ ಹಸ್ತಕ್ಷೇಪ ಮಾಡ್ತಾರೆ ಎಂದು ಕಾಂಗ್ರೆಸ್ ಸದಸ್ಯ ಕೃಷ್ಣಾ ಪರಾಪೂರ ಆರೋಪ ಮಾಡಿದ್ದಾರೆ. ಅವರು ಗಂಡ-ಹೆಂಡತಿ ಇದ್ರೆ ಮನೆಯಲ್ಲಿ ಇಟ್ಟುಕೊಳ್ಳಲ್ಲಿ, ಸರ್ಕಾರದ ಕಚೇರಿಯಲ್ಲಿ ಗಂಡನ ಕೆಲಸವೇನು, ಆತ ಯಾಕೇ ಆಡಳಿತದಲ್ಲಿ ಹಸ್ತಕ್ಷೇಪ ಮಾಡ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಅಧ್ಯಕ್ಷೆ ಗಂಡನ ಆಡಳಿತಕ್ಕೆ ಬ್ರೇಕ್ ಹಾಕುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ ಅಂತ ಕಾಂಗ್ರೆಸ್ ಸದಸ್ಯ ಕೃಷ್ಣಾ ಪರಾಪೂರ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಗದಗ ಬೆಟಗೇರಿ ನಗರಸಭೆಗೆ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಉಷಾ ದಾಸರ್ ಅಧ್ಯಕ್ಷೆಯಾಗಿದ್ದು, ಬಿಜೆಪಿ ಸದಸ್ಯರನ್ನೂ ಕಡೆಗಣಿಸಿ ಪತಿ ದರ್ಬಾರ್ ನಡೆಸಿದ್ದಾರೆ ಅಂತ ಬಿಜೆಪಿ ಪಡಸಾಲೆಯಲ್ಲೂ ಗುಸು ಗುಸು ನಡೆದಿದೆ. ಈ ಹಿನ್ನಲೆಯಲ್ಲಿ ವಾರದ ಹಿಂದೆ ಸಚಿವ ಸಿ.ಸಿ. ಪಾಟೀಲ್ ಪ್ರವಾಸಿ ಮಂದಿರದಲ್ಲಿ ಸಭೆ ಮಾಡಿ ಬುದ್ದಿ ಹೇಳಿದ್ದಾರೆ. ಸದಸ್ಯರ ಅಭಿಪ್ರಾಯ ಪಡೆದುಕೊಳ್ಳಬೇಕು ಅದನ್ನು ಬಿಟ್ಟು ಅಧ್ಯಕ್ಷೆ ಗಂಡ ಮಹೇಶ ದಾಸರ್ ಅಭಿಪ್ರಾಯ ಪಡೆದುಕೊಂಡು ಅಧಿಕಾರ ಚಲಾವಣೆ ಮಾಡ್ತಾಯಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಇನ್ನೂ ಸರ್ವ ಸದಸ್ಯರ ಸಭೆ ಕರೆದಾಗಲು ಅಧ್ಯಕ್ಷೆ ಗಂಡನೇ ಎಲ್ಲರಿಗೂ ಕಾಲ್ ಮಾಡಿ ಸಭೆ ಬರುವಂತೆ ಸೂಚನೆ ನೀಡ್ತಾರಂತೆ. ಹಾಗೇ ಆಡಳಿತದಲ್ಲಿ ಸಂಪೂರ್ಣವಾಗಿ ಹಸ್ತಕ್ಷೇಪ ಮಾಡಿ ನಗರಸಭೆಯಲ್ಲಿ ಅಂದಾ ದರ್ಬಾರ್ ನಡೆಸುತ್ತಿದ್ದಾರೆ. ಇನ್ನೂ ಈ ಕುರಿತು ನಗರಸಭೆ ಅಧ್ಯಕ್ಷತೆಯನ್ನು ಕೇಳಿದ್ರೆ, ಹೌದು ಅವಳಿ ನಗರದಲ್ಲಿ 35 ವಾರ್ಡ್ ಇರೋದರಿಂದ ನಮ್ಮ ಯಜಮಾನರು ಹಾಗೂ ಕುಟುಂಬ ಸದಸ್ಯರು ಸಪೋರ್ಟ್ ಮಾಡ್ತಾರೆ. ಒಂದೊಂದು ಭಾರಿ ಫೈಲ್ ನೋಡ್ತಾರೆ, ನನಗೂ ಅನುಭವ ಇಲ್ಲಾ. ಹೀಗಾಗಿ ನಮ್ಮ ಯಜಮಾನರು ಫೈಲ್ ನೋಡ್ತಾರೆ, ನನ್ನಗೇ ಹೇಳಿ ಫೈನಲ್ ಮಾಡಿಸುತ್ತಾರೆ ಅಂತ ಗಂಡನ ದರ್ಬಾರ್ ಒಪ್ಪಿಕೊಂಡಿದ್ದಾರೆ. ಅದ್ರೂ ಕೂಡಾ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲಾ ಅಂತ ಅಧ್ಯಕ್ಷೆ ಉಷಾ ದಾಸರ್ ವಾದಿಸುತ್ತಾರೆ. ಇದನ್ನೂ ಓದಿ: Karnataka SSLC Result 2022: ಫಲಿತಾಂಶದ ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ ಸಹಾಯವಾಣಿ, ಏನೇ ಒತ್ತಡವಿದ್ದರೂ ಕರೆ ಮಾಡಿ ನಿಮ್ಹಾನ್ಸ್ ವೈದ್ಯರೊಂದಿಗೆ ಮಾತಾಡಿ
ನಗರಸಭೆ ಅಧ್ಯಕ್ಷೆ ಚೇಂಬರ್ ಗೆ ಬಂದ್ರೆ, ಅವರ ಗಂಡ ಅವರ ಕುಟುಂಬಸ್ಥರೆ ಇರ್ತಾರೆ. ಸದಸ್ಯರು ಬಂದ್ರೆ ಕೂರಲು ಜಾಗ ಇರೋದಿಲ್ವಂತೆ. ಅಧ್ಯಕ್ಷರ ಗಂಡ ಮಹೇಶ ದಾಸರ್ ಅಧಿಕಾರಗಳಿಗೂ ಆದೇಶ ಮಾಡ್ತಾರಂತೆ. ಹೀಗಾಗಿ ನಗರಸಭೆ ಅಧ್ಯಕ್ಷರು ಉಷಾ ದಾಸರ್ ಅಥವಾ ಅವರ ಗಂಡ ಮಹೇಶ್ ದಾಸರ್ ಅಂತಾ ಪ್ರಶ್ನೇ ಮಾಡ್ತಾರೆ. ಇದು ಬಿಜೆಪಿಗೆ ಮುಜುಗರ ತಂದಿದೆ. ಹೀಗಾಗಿ ಅಧ್ಯಕ್ಷೆಯ ಗಂಡ ಅಂದಾ ದರ್ಬಾರ್ ಕುರಿತು ಜಿಲ್ಲಾಧಿಕಾರಿಗಳ ಮನವಿ ಮಾಡಲು ಕಾಂಗ್ರೆಸ್ ಸದಸ್ಯರು ಮುಂದಾಗಿದ್ದಾರೆ.
ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ
Published On - 10:40 pm, Wed, 18 May 22