ಗದಗ: ಮುತ್ತು ಕೃಷಿ ಮಾಡಿ ಯಶಸ್ವಿಯಾದ ಎಂಬಿಎ ಹುಡುಗರು, ವಿಭಿನ್ನ ಕೃಷಿ‌ ಮಾಡಿ ಲಕ್ಷ ಲಕ್ಷ ಆದಾಯ!

Success Story: ಎಂಬಿಎ ಅಧ್ಯಯನ ಮಾಡಿ ನಗರದತ್ತ ಮುಖ ಮಾಡದ ಗದಗದ ಕೆಲ ಸ್ನೇಹಿತರು ಇದೀಗ ಊರಿನಲ್ಲೇ ಕುಳಿತುಕೊಂಡು ಲಕ್ಷ ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಇದೀಗ ಕೋಟಿಗಳ ಲೆಕ್ಕದಲ್ಲಿ ಆದಾಯ ಗಳಿಸಲು ಸಿದ್ಧರಾಗಿದ್ದಾರೆ. ಇದಕ್ಕೆ ಅವರು ಕಂಡುಕೊಂಡ ದಾರಿ ಮುತ್ತು ಕೃಷಿ. ಗದಗದ ಸ್ನೇಹಿತರ ವಿನೂತನ ಸಾಧನೆ ಬಗ್ಗೆ ಇಲ್ಲಿದೆ ವಿವರ.

ಗದಗ: ಮುತ್ತು ಕೃಷಿ ಮಾಡಿ ಯಶಸ್ವಿಯಾದ ಎಂಬಿಎ ಹುಡುಗರು, ವಿಭಿನ್ನ ಕೃಷಿ‌ ಮಾಡಿ ಲಕ್ಷ ಲಕ್ಷ ಆದಾಯ!
ಗದಗ: ಮುತ್ತು ಕೃಷಿ ಮಾಡಿ ಯಶಸ್ವಿಯಾದ ಎಂಬಿಎ ಹುಡುಗರು
Follow us
| Updated By: ಗಣಪತಿ ಶರ್ಮ

Updated on: Jun 20, 2024 | 10:32 AM

ಗದಗ, ಜೂನ್ 20: ಪದವಿ, ಸ್ನಾತಕೋತ್ತರ ಪದವಿ ಪಡೆದರೆ ಸಾಕು, ದೊಡ್ಡ ನಗರಗಳಿಗೆ ತೆರಳಿ ಕಂಪನಿಗಳ ಉದ್ಯೋಗ ಗಿಟ್ಟಿಸಿಕೊಳ್ಳುವವರೇ ಹೆಚ್ಚಿರುವ ಈ ಕಾಲದಲ್ಲಿ ಗದಗದ (Gadag) ಕೆಲವು ಯುವಕರು ಎಂಬಿಎ (MBA Students) ಪದವಿ ಪಡೆದರೂ ಯಾರ ಕೈ ಕೈಕೆಳಗೂ ಕೆಲಸ ಮಾಡದೆ, ಊರಲ್ಲೇ ಇದ್ದು ಲಕ್ಷ ಲಕ್ಷ ರೂಪಾಯಿ ಆದಾಯ (Revenue) ಗಳಿಸುತ್ತಿದ್ದಾರೆ. ಇದಕ್ಕೆ ಇವರು ಆರಿಸಿಕೊಂಡಿರುವ ಉದ್ಯೋಗ ಮಾತ್ರ ವಿಭಿನ್ನವಾದದ್ದು. ಅದುವೇ ಮುತ್ತು ಕೃಷಿ (Pearl Farming). ಗದಗ ತಾಲೂಕಿನ ಹಾತಲಗೇರಿ ಗ್ರಾಮದ ಎಂಬಿಎ ಪದವೀಧರ ಯುವಕರ ಬದುಕು ಈ ತಿರುವು ಪಡೆಯಲು ಕಾರಣವಾದದ್ದು ಕೊರೊನಾ ಸಾಂಕ್ರಾಮಿಕ!

ಕೊರೊನಾ ಮಹಾಮಾರಿ ಈ ಯುವಕರ ಜೀವನವನ್ನೇ ಬದಲಾಯಿಸಿದೆ. ಕೊರೋನಾ ಲಾಕ್​ಡೌನ್ ಸಂದರ್ಭದಲ್ಲಿ ಮೊಬೈಲ್ ಹಿಡಿದು ಕುಳಿತಿದ್ದಾಗ ಈ ಯುವಕರಿಗೆ ಕಂಡಿದ್ದು ಮುತ್ತು ಕೃಷಿ ಅಥವಾ ಪರ್ಲ್ ಕೃಷಿ. ಸಾಮಾನ್ಯವಾಗಿ ನದಿಗಳಲ್ಲಿ ಸಿಗುವ ಕಪ್ಪೆಚಿಪ್ಪುಗಳೇ ಇಂದು ಇವರಿಗೆ ಲಕ್ಷ್ಮೀಪಾತ್ರೆಗಳಾಗಿವೆ. ಖಾಸಗಿ ಕಂಪನಿಯೊಂದರ ಮೇಲೆ ನಂಬಿಕೆ ಇಟ್ಟು ಒಪ್ಪಂದ ಮಾಡಿಕೊಂಡ ಸ್ನೇಹಿತರಾದ, ವಿರೇಶ, ವೀರಭದ್ರ ಹಾಗೂ ಕೃಷ್ಣ, ಆರಂಭದಲ್ಲಿ 12,000 ಕಪ್ಪೆಚಿಪ್ಪುಗಳನ್ನು ಖರೀದಿಸಿ, ಅವುಗಳನ್ನ ಸರ್ಜರಿ (ಮುತ್ತಿನ ಕೃಷಿ) ಮಾಡಿ 18 ತಿಂಗಳ ಕಾಲ ನೀರಿನಲ್ಲಿ ಸಂಗ್ರಹಿಸಿಡುತ್ತಾರೆ. ನಂತರ ನೀರಿನಲ್ಲಿದ್ದ ಕಪ್ಪೆಚಿಪ್ಪುಗಳನ್ನ ಹೊರತೆಗೆದು ನೋಡಿದಾಗ ಮೊದಲ ಮುತ್ತುಕೃಷಿ ಪ್ರಯತ್ನ ಇವರಿಗೆ ಯಶಸ್ಸು ತಂದುಕೊಟ್ಟಿತ್ತು. ಈಗ ಮುತ್ತು ಕೃಷಿ ಮಾಡಿ ಲಕ್ಷ ಲಕ್ಷ ಆದಾಯ ಪಡೆಯುತ್ತಿದ್ದಾರೆ.

ಇವರು ಒಡಂಬಡಿಕೆ ಮಾಡಿಕೊಂಡಿದ್ದ ಕಂಪನಿ ಕೂಡ, ಮೊದಲು ಪೇಮೆಂಟ್ ಮಾಡಿಯೇ ಈ ಕಪ್ಪೆಚಿಪ್ಪುಗಳನ್ನ ಖರೀದಿಸಿತ್ತು. 6 ಲಕ್ಷ ಬಂಡವಾಳ ಹೂಡಿದ್ದ ಯುವಕರು,18 ತಿಂಗಳಿನ ತಮ್ಮ ತಾಳ್ಮೆಯ ಫಲವಾಗಿ, 14 ಲಕ್ಷ ರೂಪಾಯಿ ಚೆಕ್ ಮರಳಿ ಪಡೆದಿದ್ದರು. ಬಳಿಕ ಎರಡನೇ ಪ್ರೊಜೆಕ್ಟನಲ್ಲಿ 40 ಲಕ್ಷಕ್ಕಿಂತಲೂ ಹೆಚ್ಚಿನ ಮೊತ್ತ ಹೂಡಿಕೆ ಮಾಡಿದ್ದ ಯುವಕರು, ಬರುವ ಅಗಸ್ಟ್ ತಿಂಗಳಲ್ಲಿ ಕೋಟಿ ರೂ, ಮೊತ್ತದ ಚೆಕ್ ಪಡೆಯಲು ಉಸ್ತುಕರಾಗಿದ್ದಾರೆ.

ಎಂಬಿಎ ಮುಗಿಸಿ ಎಂಎನ್ಸಿ ಕಂಪನಿಯಲ್ಲಿ ವರ್ಷಾನುಗಟ್ಟಲೇ ಕೆಲಸ‌ ಮಾಡಿದರೂ,ಇಷ್ಟು ದೊಡ್ಡ ಮೊತ್ತವನ್ನ ನಾವು ಗಳಿಸೋಕೆ ಅಸಾಧ್ಯವಾಗುತ್ತಿತ್ತು. ಆದರೆ ನಮ್ಮೂರಿನಲ್ಲೇ ಇದ್ದುಕೊಂಡು,‌ ಕುಟುಂಬದ ಜೊತೆಗೇ ಇದ್ದು, ಬೇರೆ ಕೆಲಸ‌ ಮಾಡಿಕೊಂಡೇ, ಇಷ್ಟು ಆರಾಮದಾಯಕ‌ ಗಳಿಕೆ ಮಾಡ್ತಿರೋದು ನಮಗೆ ಸಾಕಷ್ಟು ಖುಷಿ ತಂದು ಕೊಟ್ಟಿದೆ ಎಂದು ಮುತ್ತು ಕೃಷಿ ಮಾಡಿದ ಯುವಕ ವೀರೇಶ ಹೇಳಿದ್ದಾರೆ.

ಇದನ್ನೂ ಓದಿ: ಗದಗ: ಗೋದಾಮಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ಕಿ, ಗೋಧಿ ಹುಳುಗಳ ಪಾಲು, ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

ಹೀಗೆ ಎರೆಡು ಬಾರಿಯೂ ಈ ಮುತ್ತು ಕೃಷಿಯಲ್ಲಿ ಯಶಸ್ವಿ ಕಂಡ ಸ್ನೇಹಿತರು, ಇದೀಗ ಮೂರನೇ ಬಾರಿಗೆ ದೊಡ್ಡ ಮೊತ್ತದಲ್ಲಿ ಹೂಡಿಕೆ ಮಾಡಲು ಸಿದ್ಧರಾಗಿದ್ದಾರೆ. ಅಲ್ಲದೇ ಬೇರೆ‌ ಕಡೆಯಿಂದಲೂ ಇವರ ಕೃಷಿಗೆ ಆಸಕ್ತರು ಹೂಡಿಕೆ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್