AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೃತ ಗರ್ಭಿಣಿಯ ಹೊಟ್ಟೆಯಿಂದ ಜೀವಂತ ಮಗು ಹೊರತೆಗೆದ ವೈದ್ಯರಿಗೆ ಸಚಿವ ಸಿ.ಸಿ ಪಾಟೀಲ್ ಮೆಚ್ಚುಗೆ, ಅಭಿನಂದನೆ

ತಾಯಿ ಸಾವನ್ನಪ್ಪಿದ‌ 10 ನಿಮಿಷದಲ್ಲಿ ಆಪರೇಷನ್ ಮಾಡಿ ಶಿಶುವನ್ನು ಬದುಕಿಸಿದ್ದ ವೈದ್ಯರಿಗೆ ಅಭಿನಂದನೆ ಸಲ್ಲಿಸಲಾಗಿದೆ. ಗದಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಲೋಕೋಪಯೋಗಿ ಇಲಾಖೆ‌ ಸಚಿವ ಸಿ.ಸಿ ಪಾಟೀಲ್ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೃತ ಗರ್ಭಿಣಿಯ ಹೊಟ್ಟೆಯಿಂದ ಜೀವಂತ ಮಗು ಹೊರತೆಗೆದ ವೈದ್ಯರಿಗೆ ಸಚಿವ ಸಿ.ಸಿ ಪಾಟೀಲ್ ಮೆಚ್ಚುಗೆ, ಅಭಿನಂದನೆ
ವೈದ್ಯರು ಮೃತ ಗರ್ಭಿಣಿಯ ಗರ್ಭದಿಂದ ಜೀವಂತ ಮಗುವನ್ನು ಹೊರತೆಗೆದಿದ್ದಾರೆ
TV9 Web
| Edited By: |

Updated on:Nov 12, 2021 | 3:36 PM

Share

ಗದಗ: ಮೃತ ಗರ್ಭಿಣಿಯ ಹೊಟ್ಟೆಯಿಂದ ಜೀವಂತ ಮಗು ಹೊರತೆಗೆದು, ಶಿಶುವಿನ ಜೀವ ಉಳಿಸಿದ ವೈದ್ಯರಿಗೆ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ. ಗದಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಲೋಕೋಪಯೋಗಿ ಇಲಾಖೆ‌ ಸಚಿವ ಸಿ.ಸಿ ಪಾಟೀಲ್ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಯಿ ಸಾವನ್ನಪ್ಪಿದ‌ 10 ನಿಮಿಷದಲ್ಲಿ ಆಪರೇಷನ್ ಮಾಡಿ ಶಿಶುವನ್ನು ಬದುಕಿಸಿದ್ದ ವೈದ್ಯರಿಗೆ ಅಭಿನಂದನೆ ಸಲ್ಲಿಸಲಾಗಿದೆ.

ಗದಗದ ದಂಡಪ್ಪ ಮಾನ್ವಿ ಮಹಿಳಾ ಆ್ಯಂಡ್ ಮಕ್ಕಳ ಆಸ್ಪತ್ರೆ ವೈದ್ಯರು ಮೃತ ಗರ್ಭಿಣಿ ಹೊಟ್ಟೆಯಿಂದ ಜೀವಂತ ಮಗುವನ್ನು ಹೊರತೆಗೆದಿದ್ದರು. ಗರ್ಭಿಣಿ ಅನ್ನಪೂರ್ಣ ಎಂಬುವವರು ಲೋ ಬಿಪಿ, ಮೂರ್ಛೆ ರೋಗದಿಂದ ಬಳಲುತ್ತಿದ್ದರು. ಊರಿನಿಂದ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಗರ್ಭಿಣಿ ಮೃತಪಟ್ಟಿದ್ದರು. ಆದರೆ ಹೊಟ್ಟೆಯಲ್ಲಿದ್ದ ಮಗು ಜೀವಂತವಿರುವುದು ವೈದ್ಯರಿಗೆ ತಿಳಿದ ತಕ್ಷಣ ಆಪರೇಷನ್ ಮಾಡಿದ್ದರು. ಆಪರೇಷನ್ ನಡೆಸಿದ ವೈದ್ಯರ ತಂಡ ಹೆಣ್ಣು ಮಗುವನ್ನು ಹೊರತೆಗೆದಿದ್ದರು. ನವೆಂಬರ್ 4ರಂದು ನಡೆದ ಅಪರೂಪದ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು.

ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಆಡಳಿತ ಅಧಿಕಾರಿ ಬಸನಗೌಡ ಕರಿಗೌಡರ್, ಡಾ. ಶೃತಿ, ಡಾ. ವಿನೋದ್, ಡಾ. ಜಯರಾಜ್, ಡಾ. ಅಜಯ್, ಡಾ. ಕೀರ್ತನ್ ಅವರಿಗೆ ಅಭಿನಂದನೆ ಸಲ್ಲಿಸಲಾಗಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಮುಶಿಗೇರಿಯ ಅನ್ನಪೂರ್ಣ ಅಬ್ಬಿಗೇರಿ ಎಂಬ ತುಂಬು ಗರ್ಭಿಣಿಗೆ ಇದೇ ನವೆಂಬರ್ 4ರಂದು ಹೆರಿಗೆ ಆರೋಗ್ಯದಲ್ಲಿ ಏರುಪೇರಾಗಿತ್ತು. ತುಂಬು ಗರ್ಭಿಣಿಯಾಗಿದ್ದರೂ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿರಲಿಲ್ಲ. ಮೂರ್ಛೆ ರೋಗ ಕಾಣಿಸಿಕೊಂಡು ತೀವ್ರ ಅಸ್ವಸ್ಥಳಾಗಿದ್ದರು. ಆಸ್ಪತ್ರೆಗೆ ಬರುತ್ತಿದ್ದಂತೆ ಗರ್ಭಿಣಿ ಮೃತಪಟ್ಟಿದ್ದರು. ಡಿಎಂಎಂ ಹೆರಿಗೆ ಆಸ್ಪತ್ರೆಯ ವೈದ್ಯರು ಸ್ಕ್ಯಾನಿಂಗ್ ಮಾಡಿ ನೋಡಿದಾಗ ಮಗುವಿನ ಹಾರ್ಟ್ ಬೀಟ್ ಇನ್ನೂ ಬಡಿದುಕೊಳ್ಳುತ್ತಿತ್ತು. 10 ನಿಮಿಷದೊಳಗೆ ಕುಟುಂಬಸ್ಥರೊಂದಿಗೆ ವೈದ್ಯರು ಚರ್ಚೆ ಮಾಡಿ ಆಪರೇಷನ್ ಮಾಡಲು ಮುಂದಾಗಿದ್ದರು.

ಬಳಿಕ, ಹೆಣ್ಣು ಮಗುವಿನ ಜನನವಾಗಿದ್ದು, ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಸವಾಲಾಗಿ ಮಗುವನ್ನ ಬದುಕಿಸಿರುವ ವೈದ್ಯರು ಈ ಮಗುವಿನ ಆರೈಕೆಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಮಗುವಿನ ಆರೋಗ್ಯ ದಿನದಿಂದ ದಿನಕ್ಕೆ ಚೇತರಿಕೆ ಕಾಣುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಗುವಿನ ತಂದೆ, ಮದುವೆಯಾಗಿ ಒಂದು ವರ್ಷ ಆಗಿತ್ತು. ಈಗ ನನ್ನ ಒಂಟಿ ಮಾಡಿ ನನ್ನ ಹೆಂಡತಿ ಹೋಗಿದ್ದಾಳೆ. ಮಗುವನ್ನ ನಾನು ಚೆನ್ನಾಗಿ ಸಾಕಿ ನನ್ನ ಹೆಂಡತಿ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡುತ್ತೀನಿ ಅಂತ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಗದಗ ಜಿಲ್ಲೆಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮರಳು ದಂಧೆ, ಕ್ರಮ ತೆಗೆದುಕೊಳ್ಳದ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

ಇದನ್ನೂ ಓದಿ: ಕಳೆದುಕೊಂಡಿದ್ದ ಚಿನ್ನಾಭರಣವನ್ನು ಮರಳಿಸಿ ದೀಪಾವಳಿಗೆ ಗಿಫ್ಟ್ ನೀಡಿದ ಗದಗ ಪೊಲೀಸರು: ಚಿನ್ನ ಕಳ್ಕೊಂಡಿದ್ದ ಮಾಲೀಕರು ಫುಲ್ ಖುಷ್

Published On - 3:33 pm, Fri, 12 November 21