AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳೆದುಕೊಂಡಿದ್ದ ಚಿನ್ನಾಭರಣವನ್ನು ಮರಳಿಸಿ ದೀಪಾವಳಿಗೆ ಗಿಫ್ಟ್ ನೀಡಿದ ಗದಗ ಪೊಲೀಸರು: ಚಿನ್ನ ಕಳ್ಕೊಂಡಿದ್ದ ಮಾಲೀಕರು ಫುಲ್ ಖುಷ್

ಗದಗ ಜಿಲ್ಲೆಯಲ್ಲಿ ಆರು ತಿಂಗಳಲ್ಲಿ 77 ಕಳ್ಳತನ, ಮೋಸ ಪ್ರಕರಣಗಳು ಪೊಲೀಸ್ರು ಪತ್ತೆ ಹಚ್ಚಿದ್ದಾರೆ. 89 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟು ಮೊತ್ತ 81 ಲಕ್ಷ 27 ಸಾವಿರ 590 ರೂಪಾಯಿಯಷ್ಟು ಕಳ್ಳತನ, ಮೋಸ್ ಮಾಡಲಾಗಿತ್ತು. ಗದಗ ಜಿಲ್ಲೆಯ ಪೊಲೀಸ್ರು ಪ್ರಕಣಗಳು ಪತ್ತೆ ಹಚ್ಚಿ 64 ಲಕ್ಷ 55 ಸಾವಿರ 099 ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ವಾಹನಗಳು ವಶಪಿಡಿಸಿಕೊಳ್ಳಾಗಿದೆ .

ಕಳೆದುಕೊಂಡಿದ್ದ ಚಿನ್ನಾಭರಣವನ್ನು ಮರಳಿಸಿ ದೀಪಾವಳಿಗೆ ಗಿಫ್ಟ್ ನೀಡಿದ ಗದಗ ಪೊಲೀಸರು: ಚಿನ್ನ ಕಳ್ಕೊಂಡಿದ್ದ ಮಾಲೀಕರು ಫುಲ್ ಖುಷ್
ಕಳೆದುಕೊಂಡಿದ್ದ ಚಿನ್ನಾಭರಣವನ್ನು ಮರಳಿಸಿ ದೀಪಾವಳಿಗೆ ಗಿಫ್ಟ್ ನೀಡಿದ ಗದಗ ಪೊಲೀಸರು: ಚಿನ್ನ ಕಳ್ಕೊಂಡಿದ್ದ ಮಾಲೀಕರು ಫುಲ್ ಖುಷ್
TV9 Web
| Updated By: ಆಯೇಷಾ ಬಾನು|

Updated on:Nov 02, 2021 | 9:02 AM

Share

ಗದಗ: ಕೆಲ ತಿಂಗಳ ಹಿಂದೆ ಮನೆಯಲ್ಲಿನ ಚಿನ್ನಾಭರಣ, ಲಕ್ಷಾಂತರ ರೂ ಹಣ ಕಳೆದುಕೊಂಡು ಈ ಕುಟುಂಬ ಕಂಗಾಲಾಗಿತ್ತು. ಮಕ್ಕಳ ಮದುವೆ, ಮನೆ ಕಟ್ಟೋದಕ್ಕೆ ಅಂತ ಹಣ, ಚಿನ್ನ ಕೂಡಿಟ್ಟಿದ್ರು. ಆದ್ರೆ ಅದ್ಯಾರೋ ಕಳ್ಳರು ಈ ಕುಟುಂಬ ಕೂಡಿಟ್ಟ ಸಂಪಾದನೆಗೆ ಕನ್ನ ಹಾಕಿ ಸಂಕಷ್ಟಕ್ಕೆ ದೂಡಿದ್ರು. ಎಲ್ಲಾ ಕಳೆದುಹೋಯ್ತು ಮುಂದೆ ಜೀವನ ನಡೆಸೋದು ಹೇಗಪ್ಪ ಅಂತ ಮಾಲೀಕರು ತಲೆ‌ ಮೇಲೆ ಕೈ ಹೊತ್ತು ಕೂತಿದ್ರು. ಬರೋ ದೀಪಾವಳಿ ಸಂಭ್ರಮದಲ್ಲೇ ಚಿಂತೆಗೀಡಾಗಿದ್ದ ಮಾಲೀಕರಿಗೆ ಗದಗ ಪೊಲೀಸರು ದೀಪಾವಳಿ ಗಿಫ್ಟ್ ನೀಡಿದ್ದಾರೆ. ಮನೆಗಳಿಗೆ ಕನ್ನ ಹಾಕಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ ಖತರ್ನಾಕ ಕಳ್ಳರ ಬೇಟೆಯಾಡಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಜಪ್ತಿ ಮಾಡಿದ್ದಾರೆ. ಇವತ್ತು ನಡೆದ ಪ್ರಾಪರ್ಟಿ ಪರೇಡ್ ನಲ್ಲಿ ಎಸ್ಪಿ ಚಿನ್ನಾಭರಣ ಮಾಲೀಕರಿಗೆ ಹಸ್ತಾಂತರ ಮಾಡಿದ್ದಾರೆ.

ಮಹಿಳೆಯರಿಗೆ ಚಿನ್ನಾಭರಣ ಅಂದ್ರೆ ಬಲು ಪ್ರೀತಿ. ಅದ್ರಲ್ಲೂ ದೊಡ್ಡ ಹಬ್ಬಗಳು ಬಂದ್ರೆ ಸಾಕು ಹೊಸ ಹೊಸ ಸೀರೆ ತೊಟ್ಟು ಚಿನ್ನಾಭರಣಗಳಿಂದ ಅಲಂಕಾರ ಮಾಡಿಕೊಳ್ಳೋದು ಸಾಮಾನ್ಯ. ಆದ್ರೆ, ಗದಗ ಜಿಲ್ಲೆಯಲ್ಲಿ ನೂರಾರು ಮನೆಗಳಿಗೆ ಕಳ್ಳರು ಕನ್ನ ಹಾಕಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ರು. ಒಂದೊಂದು ಕುಟುಂಬಗಳು ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳೆದುಕೊಂಡು ಕಂಗಾಲಾಗಿದ್ರು. ಗದಗ ನಗರದ ಸಂಭಾಪೂರ ರಸ್ತೆಯ ಪೊಲೀಸ್ ಸಭಾಭವನದಲ್ಲಿ ಪ್ರಾಪರ್ಟಿ ಪರೇಡ್ ನಲ್ಲಿ ಮಾಲೀಕರಿಗೆ ಅವರು ಕಳೆದುಕೊಂಡಿದ್ದ ಚಿನ್ನಾಭರಣ ನೀಡಿದ್ದಾರೆ.

gadag police

ಕಳ್ಳತನವಾಗಿದ್ದ ವಸ್ತುಗಳನ್ನು ಮಾಲೀಕರಿಗೆ ಹಿಂತಿರುಗಿಸುತ್ತಿರುವ ಪೊಲೀಸರು

ಗದಗ ಜಿಲ್ಲೆಯಲ್ಲಿ ಆರು ತಿಂಗಳಲ್ಲಿ 77 ಕಳ್ಳತನ, ಮೋಸ ಪ್ರಕರಣಗಳು ಪೊಲೀಸ್ರು ಪತ್ತೆ ಹಚ್ಚಿದ್ದಾರೆ. 89 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟು ಮೊತ್ತ 81 ಲಕ್ಷ 27 ಸಾವಿರ 590 ರೂಪಾಯಿಯಷ್ಟು ಕಳ್ಳತನ, ಮೋಸ್ ಮಾಡಲಾಗಿತ್ತು. ಗದಗ ಜಿಲ್ಲೆಯ ಪೊಲೀಸ್ರು ಪ್ರಕಣಗಳು ಪತ್ತೆ ಹಚ್ಚಿ 64 ಲಕ್ಷ 55 ಸಾವಿರ 099 ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ವಾಹನಗಳು ವಶಪಿಡಿಸಿಕೊಳ್ಳಾಗಿದೆ ಅಂತ ಗದಗ ಎಸ್ಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.

ಚಿನ್ನಾಭರಣ ಕಳ್ಳತನವಾಗಿದ್ರಿಂದ ಜನ್ರು ಈಗ ದೀಪಾವಳಿ ಹಬ್ಬ ಬಂತು ಚಿನ್ನವಿಲ್ಲದೇ ಹಬ್ಬ ಮಾಡೋದು ಹೇಗೆ ಅಂತ ಚಿನ್ನಾಭರಣ ಕಳೆದುಕೊಂಡವ್ರು ಗೋಳಾಡುತ್ತಿದ್ರು. ಈ ಜನ್ರಿಗೆ ಗದಗ ಜಿಲ್ಲಾ ಪೊಲೀಸ್ರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ನೀಡುವ ಮೂಲಕ ದೀಪಾವಳಿ ಹಬ್ಬದ ಊಡುಗೂರೆ ನೀಡಿದ್ದಾರೆ. ಚಿನ್ನಾಭರಣ ತೊಟ್ಟು ಹಬ್ಬದಲ್ಲಿ ಮಿಂಚಲು ಮಹಿಳೆಯರು ಸಜ್ಜಾಗಿದ್ದಾರೆ. ಗದಗ-ಬೆಟಗೇರಿ ಅವಳಿ ನಗರ, ಶಿರಹಟ್ಟಿ, ರೋಣ, ನರಗುಂದ, ಮುಂಡರಗಿ ಸೇರಿ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ನಡೆದ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸ್ರು ಚಿನ್ನಾಭರಣ, ನಗದು ಕಳೆದುಕೊಂಡ ಜನ್ರಿಗೆ ಮತ್ತೆ ತಮ್ಮ ಚಿನ್ನಾಭರಣಗಳು, ಬೆಳ್ಳಿ, ವಾಹನಗಳು ಸಿಕ್ಕ ಖುಷಿಯಲ್ಲಿ ಇದ್ರು. ಚಿನ್ನಾಭರಣ ಸಿಕ್ಕ ಖುಷಿಯಲ್ಲಿ ಹೆಚ್ಚಾಗಿ ಮಹಿಳೆಯರು ಖುಷಿಯಾಗಿದ್ರೆ, ಬೈಕ್ ಕಳೆದುಕೊಂಡವರು ಮತ್ತೆ ತಮ್ಮ ಬೈಕ್ ಹತ್ತಿ ಮನೆಗೆ ಹೋದ್ರು. ಚಿನ್ನಾಭರಣ ಸಿಕ್ಕಿದ್ದು ಖುಷಿಯಾಗಿದೆ. ಕಡಿಮೆ ಅವಧಿಯಲ್ಲಿ ಪೊಲೀಸರು ಪತ್ತೆ ಹಂಚ್ಚಿದ್ದಾರೆ. ಪೊಲೀಸರಿಗೆ ಧನ್ಯವಾದ ಅಂತ ಚಿನ್ನಾಭರಣ ಪಡೆದ ಲತಾ ಹೇಳಿದ್ದಾರೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಇದನ್ನೂ ಓದಿ: Heart Attack: ಹೃದಯಾಘಾತದ ಸಾಮಾನ್ಯ ಲಕ್ಷಣಗಳಾವುವು? ತಿಳಿಯಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ

Published On - 9:01 am, Tue, 2 November 21