Gadag News: ಗದಗ ಜಿಲ್ಲಾ ಪೊಲೀಸರ ಭರ್ಜರಿ ಮೊಬೈಲ್ ಕಾರ್ಯಾಚರಣೆ; ಒಂದೇ ತಿಂಗಳಲ್ಲಿ ಲಕ್ಷಾಂತರ ರೂ. ಮೊಬೈಲ್​ಗಳು ಪತ್ತೆ

|

Updated on: Jun 03, 2023 | 1:47 PM

ಆ ಜಿಲ್ಲೆಯಲ್ಲಿ ನೂರಾರು ಜನ್ರು ಮೊಬೈಲ್ ಕಳೆದುಕೊಂಡು ಒದ್ದಾಡುತ್ತಿದ್ರು. ಕೆಲವರಂತೂ ಮೊಬೈಲ್ ಕಳೆದುಕೊಂಡು ವರ್ಷಗಳು ಕಳೆದ್ರೂ ಪತ್ತೆಯಾಗಿಲ್ಲವೆಂದು ಮರೆತು ಸುಮ್ಮನಾಗಿದ್ರು, ಆದ್ರೆ, ಪೊಲೀಸ್ ಇಲಾಖೆ ಆ್ಯಪ್​ಗಳ ಮೂಲಕ ಕಳೆದುಕೊಂಡವರ ಮೊಬೈಲ್ ಪತ್ತೆ ಹಚ್ಚುವ ಮೂಲಕ ಜನರಿಗೆ ಮೊಬೈಲ್ ಕೈ ಸೇರುವಂತೆ ಮಾಡಿದ್ದಾರೆ.

Gadag News: ಗದಗ ಜಿಲ್ಲಾ ಪೊಲೀಸರ ಭರ್ಜರಿ ಮೊಬೈಲ್ ಕಾರ್ಯಾಚರಣೆ; ಒಂದೇ ತಿಂಗಳಲ್ಲಿ ಲಕ್ಷಾಂತರ ರೂ. ಮೊಬೈಲ್​ಗಳು ಪತ್ತೆ
ಗದಗ
Follow us on

ಗದಗ: ವಿವಿಧ ಕಂಪನಿಯ ಹಲವು ಮಾದರಿಯ ಮೊಬೈಲ್(Mobile)​ಗಳು, ಅದನ್ನು ಕಳೆದುಕೊಂಡವರಿಗೆ ಕೊಡುತ್ತಿರುವ ಪೊಲೀಸರು. ಈ ದೃಶ್ಯಗಳು ಕಂಡು ಬಂದಿದ್ದು, ಗದಗ(Gadag)ನಗರದ ಎಸ್ಪಿ ಕಚೇರಿಯಲ್ಲಿ. ಹೌದು ಜಿಲ್ಲೆಯಲ್ಲಿ ಒಂದು, ಎರಡು ವರ್ಷಗಳಿಂದ ಮೊಬೈಲ್ ಕಳೆದುಕೊಂಡವರಿಗೆ ಹುಡುಕಿ ಪುನಃ ಕೊಡಲಾಗಿದೆ. ಮೊಬೈಲ್ ಕಳ್ಳತನ ಹಾಗೂ ಕಳೆದುಕೊಂಡ ಜನರು ಪೊಲೀಸ್ ಠಾಣೆಗೆ ಬಂದು ದೂರು ಕೊಡುವುದು ವಿರಳ. ಆದ್ರೆ, ಗದಗ ಜಿಲ್ಲಾ ಪೊಲೀಸರು ಮೊಬೈಲ್ ಕಳೆದುಕೊಂಡ ಜನರಿಂದ ಮೊಬೈಲ್ ಆ್ಯಪ್​ಗಳ ಮೂಲಕ ಸ್ವಯಂ ದೂರು ದಾಖಲಿಸಿಕೊಂಡು, ಮೊಬೈಲ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ನಮ್ಮ ಮೊಬೈಲ್ ಸಿಗಲ್ಲ ಅಂದುಕೊಂಡು ಸುಮ್ಮನಾಗಿದ್ದ ಜನರಿಗೆ, ಮೊಬೈಲ್ ಮರಳಿ ನೀಡುವ ಮೂಲಕ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೊಬೈಲ್ ಪತ್ತೆ ಹಚ್ಚುವ ಹೊಸ ಮೋಬಿಫೈ ಆಪ್ ಹಾಗೂ ಸಿಇಆರ್​ಐ ತಂತ್ರಜ್ಞಾನ ಮೂಲಕ ಮೊಬೈಲ್​ಗಳ ಪತ್ತೆ ಹಚ್ಚುವ ಮೂಲಕ ಜನರಿಗೆಗೆ ತಲಿಪಿಸುವ ಕೆಲಸ ಗದಗ ಪೊಲೀಸ್ರು ಮಾಡಿದ್ದಾರೆ. ತಿಂಗಳಲ್ಲಿ ಬರೊಬ್ಬರಿ 80 ಮೊಬೈಲ್​ಗಳು ಪತ್ತೆ ಹಚ್ಚಿದ್ದಾರೆ. ಇಂದು ಮೊಬೈಲ್ ಕಳೆದುಕೊಂಡ ಮಾಲೀಕರಿಗೆ ವಿತರಣೆ ಮಾಡಲಾಯಿತು.

ಇದನ್ನೂ ಓದಿ:Viral: ತನ್ನ ಮೊಬೈಲ್​ ​ಹುಡುಕಲು 21 ಲಕ್ಷ ಲೀಟರ್​ ನೀರುಪೋಲು ಮಾಡಿದ ಛತ್ತೀಸ್​ಗಢ ಅಧಿಕಾರಿ ಅಮಾನತು

ಮೂರು ತಿಂಗಳ ಹಿಂದೆ 40 ಲಕ್ಷ ಮೌಲ್ಯದ 295 ಮೊಬೈಲ್ ಪತ್ತೆ

ಇನ್ನು ಆ್ಯಪಲ್, ಸ್ಯಾಮಸಂಗ್, ವಿವೋ, ವೋಪೋ ಸೇರಿದಂತೆ ವಿವಿಧ ಕಂಪನಿಗಳ ಬೆಲೆ ಬಾಳುವ ಮೊಬೈಲ್ ಕಳೆದುಕೊಂಡು, ಇನ್ನೇನು ಸಿಗಲ್ಲವೆಂದು ಸುಮ್ಮನಾಗಿದ್ದ ಜನರು, ಮೊಬೈಲ್ ಮತ್ತೆ ತಮ್ಮ ಕೈಸೆರುತ್ತೆ ಅನ್ನೋ ಖುಷಿ ಕಳೆದುಕೊಂಡವರ ಮುಖದಲ್ಲಿ ಕಾಣುತ್ತಿತ್ತು. ಜಿಲ್ಲೆಯ ರೋಣ, ಗಜೆಂದ್ರಗಡ, ಶಿರಹಟ್ಟಿ, ಮುಂಡರಗಿ, ನರಗುಂದ ಸೇರಿದಂತೆ ಎಲ್ಲ ಪೊಲೀಸ್ ಠಾಣೆಗಳಲ್ಲಿ ಒಟ್ಟು 1124 ದೂರುಗಳು ದಾಖಲಾಗಿದ್ದು, ಮೂರು ತಿಂಗಳ ಹಿಂದೆ 40 ಲಕ್ಷ ಮೌಲ್ಯದ 295 ಮೊಬೈಲ್ ಪತ್ತೆ ಹಚ್ಚಿದ್ರು. ಈಗ ಲಕ್ಷಾಂತರ ಮೌಲ್ಯದ 80 ಮೊಬೈಲ್ ಕಳೆದುಕೊಂಡ ಮೊಬೈಲ್ ಮಾಲೀಕರಿಗೆ ವಿತರಣೆ ಮಾಡಲಾಯಿತು.

ಪೊಲೀಸರ ಭರ್ಜರಿ ಬೇಟೆಯಾಡಿದ್ದು, ಕಳ್ಳತನ ಹಾಗೂ ಕಳೆದುಕೊಂಡ ನೂರಾರು ಮೊಬೈಲ್​ಗಳನ್ನು ಪತ್ತೆ ಮಾಡಿದ್ದಾರೆ. ಈ ಮೂಲಕ ರಾಜ್ಯದಲ್ಲೇ ಮೊಬೈಲ್ ಪತ್ತೆ ಹಚ್ಚುವುದರಲ್ಲಿ ಗದಗ ಜಿಲ್ಲೆ 5 ಸ್ಥಾನದಲ್ಲಿದೆ. ಏನೇ ಇರಲಿ ಪೊಲೀಸರು ಮನಸ್ಸು ಮಾಡಿದ್ರೆ, ಎಂತಹ ಕೇಸ್​ ಇರಲಿ ಪತ್ತೆ ಮಾಡುತ್ತಾರೆ ಅನ್ನೂದಕ್ಕೆ ಗದಗ ಪೊಲೀಸರ ಕಾರ್ಯವೇ ಸಾಕ್ಷಿ.

ವರದಿ: ಸಂಜೀವ ಪಾಂಡ್ರೆ ಟಿವಿ9 ಗದಗ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ