ಗದಗ: ಇಂದು ಕೂಡ ಮುಂದುವರೆದ ಶಿವಾನಂದ ಮಠದ ಉತ್ತರಾಧಿಕಾರಿ ವಿವಾದ, ಮಠಕ್ಕೆ ಪೊಲೀಸರ ಎಂಟ್ರಿ

ಶಿವಾನಂದ ಮಠದ ಆವರಣದಲ್ಲಿ ಪೀಠಾಧಿಪತಿಗಳ ನಡುವೆ ಉಂಟಾದ ಉತ್ತರಾಧಿಕಾರಿ ವಿವಾದ ಇಂದು ನಡೆದ ಸದಾಶಿವಾನಂದ ಶ್ರೀಗಳ 54ಪುಣ್ಯಸ್ಮರಣೋತ್ಸವದಲ್ಲೂ ಮುಂದುವರಿದಿದೆ. ಮಠದ ಅಂಗಳದಲ್ಲಿ ಮತ್ತೆ ಭಕ್ತರ ನಡುವೆ ಗದ್ದಲ ಏರ್ಪಟ್ಟಿತು.

ಗದಗ: ಇಂದು ಕೂಡ ಮುಂದುವರೆದ ಶಿವಾನಂದ ಮಠದ ಉತ್ತರಾಧಿಕಾರಿ ವಿವಾದ, ಮಠಕ್ಕೆ ಪೊಲೀಸರ ಎಂಟ್ರಿ
ಶಿವಾನಂದ ಮಠದಲ್ಲಿ ಉತ್ತರಾಧಿಕಾರಿ ವಿಚಾರದಲ್ಲಿ ಗದ್ದಲ
Follow us
TV9 Web
| Updated By: Rakesh Nayak Manchi

Updated on:Jan 30, 2023 | 8:18 PM

ಗದಗ: ನಗರ ಪ್ರತಿಷ್ಠಿತ ಮಠ ಶಿವಾನಂದ ಮಠದಲ್ಲಿ (Shivananda Mutt succession controversy) ಕಳೆದ ಎರಡು ತಿಂಗಳಿಂದ ಆರಂಭವಾದ ಹಿರಿಯ, ಕಿರಿಯ ಸ್ವಾಮಿಜಿಗಳ ಪೀಠ ಗುದ್ದಾಟ, ರಾದ್ಧಾಂತ ಇನ್ನೂ ಮುಗಿದಿಲ್ಲ. ಇಂದೂ ಮಠದ ಅಂಗಳದಲ್ಲಿ ಉಭಯ ಶ್ರೀಗಳ ಪೀಠದ ಜಟಾಪಟಿ ಬಲು ಜೋರಾಯ್ತು. ಇಂದು ಲಿಂಗೈಕ್ಯ ಸದಾಶಿವಾನಂದ ಶ್ರೀಗಳ 54ಪುಣ್ಯಸ್ಮರಣೋತ್ಸವ. ಕಿರಿಯ ಶ್ರೀಗಳನ್ನು ಹೊರಗಿಟ್ಟು ಹಿರಿಯ ಶ್ರೀಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಆಗ ಮಠದ ಅಂಗಳದಲ್ಲಿ ಮತ್ತೆ ಭಕ್ತರ ನಡುವೆ ಗದ್ದಲ, ಗಲಾಟೆ, ವಾಗ್ವಾದ ನಡೆಯುತು. ಮಠದ ಅಂಗಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಪಡೆ ಬೀಡುಬಿಟ್ಟಿದೆ.

ಕಳೆದ ಎರಡು ತಿಂಗಳಿಂದ ಶಿವಾನಂದ ಮಠದ ಹಿರಿಯ ಶ್ರೀ ಅಭಿನವ ಶಿವಾನಂದ ಶ್ರೀಗಳು ಹಾಗೂ ಕಿರಿಯ ಶ್ರೀ ಸದಾಶಿವಾನಂದ ಭಾರತಿ ಶ್ರೀಗಳ ನಡುವೆ ಪೀಠ ಗುದ್ದಾಟ ತಾರಕ್ಕೇರಿದೆ. ಮಠದ ಅಂಗಳದಲ್ಲಿ ಮಠದ ಸಂಪ್ರದಾಯ ಎರಡು ಭಾಗವಾದಂತಾಗಿದೆ. ಹೌದು ಇಂದು ಲಿಂಗೈಕ್ಯ ಸದಾಶಿವಾನಂದ ಶ್ರೀಗಳ 54 ಪುಣ್ಯಸ್ಮರಣೋತ್ಸವ ಕಾರ್ಯಕ್ರಮ. ಪ್ರತಿವರ್ಷ ಶ್ರೀಗಳ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಶೃದ್ಧೆ, ಭಕ್ತಿಯಿಂದ ಮಾಡಲಾಗುತ್ತಿತ್ತು. ಅಪಾರ ಭಕ್ತ ಸಮೂಹ ಆಗಮಿಸುತ್ತಿತ್ತು.

ಆದರೆ, ಈ ಬಾರಿ ಉಭಯ ಶ್ರೀಗಳ ಪೀಠ ಗುದ್ದಾಟದಲ್ಲಿ ಪುಣ್ಯಸ್ಮರಣೋತ್ಸವ ಕಾರ್ಯಕ್ರಮಕ್ಕೆ ಕಳೆಗುಂದಿದೆ. ಮಠಕ್ಕೆ ಆಗಮಿಸಿದ ಭಕ್ತರಲ್ಲೂ ಗೊಂದಲ ಉಂಟಾಗಿದೆ. ಉಭಯ ಶ್ರೀಗಳ ನಡೆಗೆ ಭಕ್ತರಲ್ಲೂ ತೀವ್ರ ಆಕ್ರೋಶ, ಅಸಮಾಧಾನ ಮೂಡಿಸಿದೆ. ಕಿರಿಯ ಶ್ರೀ ಸದಾಶಿವಾನಂದ ಭಾರತಿ ಶ್ರೀಗಳ ಹೊರಗಿಟ್ಟು, ಹಿರಿಯ ಶ್ರೀ ಅಭಿನವ ಶಿವಾನಂದ ಶ್ರೀಗಳ ನೇತೃತ್ವದಲ್ಲಿ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದಕ್ಕೆ ಕಿರಿಯ ಶ್ರೀಗಳ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಎಂಟ್ರಿ ಕೊಟ್ಟ ಕೆಲ ಭಕ್ತರು ಕಿರಿಯ ಶ್ರೀಗಳ ಕರೆದು ಸಭೆ ಮಾಡಿ ಅಂತ ಪಟ್ಟು ಹಿಡಿದರು. ಇಲ್ಲಾಂದರೆ ಸಭೆ, ಕಾರ್ಯಕ್ರಮಕ್ಕೆ ಅವಕಾಶ ಕೊಡಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮತ್ತೆ ಉಭಯ ಶ್ರೀಗಳ ಭಕ್ತರ ನಡುವೆ ಮಾತಿನ ಜಟಾಪಟಿ ನಡೆಯಿತು. ಆಗ ವಿರೋಧದ ಮಧ್ಯೆಯೂ ಹಿರಿಯ ಶ್ರೀಗಳ ನೇತೃತ್ವದಲ್ಲಿ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಓಂ ನಮಃ ಶಿವಾಯ ಮಂತ್ರಘೋಷದೊಂದಿಗೆ ಮುಂದುವರೆಸಿದರು.

ಇದನ್ನೂ ಓದಿ: ಗದಗ: ಮತ್ತೆ ತಾರಕಕ್ಕೇರಿದ ಶಿವಾನಂದ ಮಠದ ಉತ್ತರಾಧಿಕಾರಿ ವಿವಾದ, ಹಿರಿಯ, ಕಿರಿಯ ಶ್ರೀಗಳೆದುರೇ ಭಕ್ತರ ವಾಗ್ವಾದ

ಹಿರಿಯ ಶ್ರೀಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿರಿಯ ಶ್ರೀಗಳ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡಲೇ ಇಲ್ಲ. ಆಗ ರೊಚ್ಚಿಗೆದ್ದ ಶ್ರೀಗಳು, ಭಕ್ತರು ಪೊಲೀಸರ ಬಳಿ ಕಾರ್ಯಕ್ರಮ ನಿಲ್ಲಿಸುವಂತೆ ಒತ್ತಡ ಹಾಕಿದರು. ಪೊಲೀಸರಿಗೆ ಇದು ಬಿಸಿತುಪ್ಪವಾಗಿತ್ತು. ಮಠದೊಳಗೆ ನುಗ್ಗಿದ ಭಕ್ತರು ಕಾರ್ಯಕ್ರಮ ಯಾಕೇ ನಿಲ್ಲಿಸಬೇಕು ಅಂತ ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಾತಿನ ಸಮರ ಜೋರಾಯಿತು. ಪೊಲೀಸರು ಮಧ್ಯಪ್ರವೇಶ ಮಾಡಿ ತಿಳಿ ಮಾಡಿದರು.

ಇಷ್ಟಕ್ಕೆ ನಿಲ್ಲದ ಶ್ರೀಗಳ ಸಿಟ್ಟು, ಹಿರಿಯ ಶ್ರೀಗಳು ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದಂತೆ. ಅದೇ ಜಾಗದಲ್ಲಿ ಕಿರಿಯ ಶ್ರೀ ಸದಾಶಿವಾನಂದ ಭಾರತಿ ಶ್ರೀಗಳ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಆರಂಭ ಮಾಡಿದರು. ಇದು ಹಿರಿಯ ಶ್ರೀ ಅಭಿನವ ಶಿವಾನಂದ ಶ್ರೀಗಳ ಆಕ್ರೋಶಕ್ಕೆ ಕಾರಣವಾಯಿತು. ಡಿವೈಎಸ್​ಪಿ ಶಿವಾನಂದ ಪವಾಡಶೆಟ್ಟರ ನೇತೃತ್ವದಲ್ಲಿ ಆಗಮಿಸಿದ ಹಿರಿಯ ಶ್ರೀಗಳು ಮಠದಲ್ಲಿ ‌ಕಾರ್ಯಕ್ರಮ ನಡೆಸಬಾರದು ಅಂತ ಕಿರಿಯ ಶ್ರೀಗಳಿಗೆ ತಾಕೀತು ಮಾಡಿದರು. ಕಾರ್ಯಕ್ರಮ ನಡೆದಂತೆ ತಡೆಯುವಂತೆ ಪೊಲೀಸರಿಗೆ ಹಿರಿಯ ಶ್ರೀಗಳು ಮನವಿ ಮಾಡಿದರು.

ಆದರೆ, ಸಣ್ಣ ಶ್ರೀಗಳು ಕೂಡ ಮಂತ್ರಘೋಷದೊಂದಿಗೆ ಕಾರ್ಯಕ್ರಮ ಮಾಡಿದರು. ಮಠಕ್ಕೆ ಆಗಮಿಸಿದ ಗದಗ ತಹಶೀಲ್ದಾರ್ ಕಿಶನ್ ಕಲಾಲ್ ಉಭಯ ಶ್ರೀಗಳು ಹಾಗೂ ಭಕ್ತರೊಂದಿಗೆ ಚರ್ಚೆ ಮಾಡಿದರು. ಕೋರ್ಟ್ ಆದೇಶ ಪರಿಶೀಲನೆ ಮಾಡಿ. ಶಾಂತಿ, ಸುವ್ಯವಸ್ಥೆಗೆ ಭಂಗ ಬಾರದಂತೆ ಎಚ್ಚರಿಕೆ ವಹಿಸುವಂತೆ ಉಭಯ ಶ್ರೀಗಳು, ಭಕ್ತರಿಗೆ ಗದಗ ತಹಶಿಲ್ದಾರ್ ಕಿಶನ್ ಕಲಾಲ್ ಸೂಚಿಸಿದ್ದಾರೆ.

ಶಿವಾನಂದ ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮಠದ ಅಂಗಳದಲ್ಲಿ ಖಾವಿದಾರಿಗಳಿಂದ ಖಾಕಿ ಪಡೆಯೇ ಹೆಚ್ಚಾಗಿದೆ. ಪೊಲೀಸ್ ಪಹರೆ ಮಠಕ್ಕೆ ಒದಗಿಸಲಾಗಿದೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಮಠದ ಆವರಣಕ್ಕೆ ಡಿವೈಎಸ್​​ಪಿ ಶಿವಾನಂದ ಪವಾಡಶೆಟ್ಟರ, ತಹಶಿಲ್ದಾರ್ ಕಿಶನ್ ಕಲಾಲ್ ದೌಡಾಯಿಸಿದ್ದಾರೆ. ಉಭಯ ಶ್ರೀಗಳ ಗುದ್ದಾಟ ಪೊಲೀಸರಿಗೂ ತಲೆನೋವಾಗಿದೆ. ಮುಂದಿನ ತಿಂಗಳ ಜಾತ್ರಾಮಹೋತ್ಸವ ಇದೆ. ಗದಗ ಸೇರಿ ವಿವಿಧ ಜಿಲ್ಲೆಗಳ ಸಾವಿರಾರು ಭಕ್ತರು ಆಗಮಿಸ್ತಾರೆ. ಆದರೆ, ಶ್ರೀಗಳ ಗುದ್ದಾಟ ನೋಡಿದರೆ ಎಲ್ಲಿ ಎರಡು ಅಡ್ಡಪಲ್ಲಕಿ ಉತ್ಸವ, ಎರಡು ಜಾತ್ರೆಗಳು ಆಗುತ್ತವೆಯೋ ಅನ್ನೋ ಆತಂಕ ಭಕ್ತರಲ್ಲಿ ಕಾಡುತ್ತಿದೆ. ಇನ್ನಾದ್ರೂ ಉಭಯ ಶ್ರೀಗಳು ಪೀಠ ಗುದ್ದಾಟಕ್ಕೆ ಬ್ರೇಕ್ ಹಾಕಿ ಒಂದಾಗಬೇಕು ಅಂತ ಭಕ್ತರು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:17 pm, Mon, 30 January 23

Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ