
ಗದಗ, ಮಾರ್ಚ್ 08: ತುಂಗಭದ್ರಾ ನದಿಯಲ್ಲಿ (Tungabhadra River) ಈಜಲು ತೆರಳಿದ್ದ ಐವರು ಸ್ನೇಹಿತರ ಪೈಕಿ ಮೂವರು ನೀರುಪಾಲಾಗಿರುವಂತಹ (death) ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರಲಹಳ್ಳಿ ಬಳಿ ನಡೆದಿದೆ. ಶರಣಪ್ಪ ಬಡಿಗೇರ(34), ಮಹೇಶ್(36), ಗುರುನಾಥ್(38) ಮೃತರು. ನದಿಯಲ್ಲಿ ನಾಪತ್ತೆಯಾಗಿರುವ ಮೂವರಿಗಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಮೀನುಗಾರರಿಂದ ಶೋಧ ಕಾರ್ಯ ನಡೆಯುತ್ತಿದೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬರ್ತ್ಡೇ ಹಿನ್ನೆಲೆ ಸೇಹಿತರೊಂದಿಗೆ ಗದಗ ಜಿಲ್ಲೆಯ ಶಿರಹಟ್ಟಿಯಿಂದ ಐವರು ಸ್ನೇಹಿತರ ತಂಡ ದೇವಸ್ಥಾನಕ್ಕೆ ಬಂದಿದ್ದರು. ಆಂಜನೇಯನ ದರ್ಶನ ಪಡೆದು ನದಿಗೆ ಈಜಲು ಮೂವರು ಇಳಿದಿದ್ದಾರೆ. ಈಜಲು ಬಾರದಿದ್ದರೂ ಮಹೇಶ್ ಬಡಿಗೇರ ನದಿಗೆ ಇಳಿದಿದ್ದಾರೆ. ಹೀಗಾಗಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಮಹೇಶ್ನನ್ನು ರಕ್ಷಿಸಲು ನದಿಗೆ ಇಳಿದಿದ್ದ ಶರಣಪ್ಪ, ಗುರುನಾಥ್ ಕೂಡ ಮೃತಪಟ್ಟಿದ್ದಾರೆ.
ವ್ಹೀಲಿಂಗ್ ಪುಂಡರ ಅಟ್ಟಹಾಸಕ್ಕೆ ಹಾಲು ತರಲು ಹೋಗಿದ್ದ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ತುಮಕೂರಿನ ಟೂಡಾ ಕಚೇರಿ ಬಳಿ ದುರ್ಘಟನೆ ಸಂಭವಿಸಿದೆ. ನಗರದ ಸತ್ಯಮಂಗದಲ್ಲಿರುವ ಹೇಮಾದ್ರಿ ವಿದ್ಯಾಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ತಿಪ್ಪೇಸ್ವಾಮಿ ಮೃತ ವ್ಯಕ್ತಿ.
ಇದನ್ನೂ ಓದಿ: ದುಬೈಯಿಂದ 3.44 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ: ರನ್ಯಾ ಬಂಧನದ ಮರುದಿನವೇ ಅಂಧ ವ್ಯಕ್ತಿ ಅರೆಸ್ಟ್
ಬೆಳಗ್ಗೆ ಹಾಲು ತರಲು ಮನೆಯಿಂದ ಹೊರಗೆ ಬಂದಿದ್ದ ತಿಪ್ಪೇಸ್ವಾಮಿ, ಈ ವೇಳೆ ವ್ಹೀಲಿಂಗ್ ಮಾಡುತ್ತಿದ್ದ ಪುಂಡರ ಬೈಕ್ ಡಿಕ್ಕಿಯಾಗಿತ್ತು. ಬೈಕ್ ಡಿಕ್ಕಿಯಾಗಿ ತಿಪ್ಪೇಸ್ವಾಮಿ ತಲೆ, ಕಾಲಿಗೆ ಗಂಭೀರವಾಗಿತ್ತು
ತಿಪ್ಪೇಸ್ವಾಮಿಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರಿನ ಕಡೂರು ತಾಲೂಕಿನ ಹಳೇಹಟ್ಟಿ ಗೇಟ್ ಬಳಿ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಮಂಜುನಾಥ(26) ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಮೊಬೈಲ್ನಲ್ಲಿ ಮಾತನಾಡಿಕೊಂಡು ಬೈಕ್ ಓಡಿಸುತ್ತಿದ್ದ ದೊಡ್ಡಬುಕ್ಕಸಾಗರ ನಿವಾಸಿ ಮಂಜುನಾಥ್, ಚಿಕ್ಕಮಗಳೂರಿನಿಂದ ಕಡೂರಿಗೆ KSRTC ಬಸ್ ತೆರಳುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಸುಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. 3 ದಿನದ ಹಿಂದೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿವೇಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: 33 ಸೆಕೆಂಡ್ನಲ್ಲಿ 33 ಲಕ್ಷ ರೂ ಎಗರಿಸಿದ ಖತರ್ನಾಕ್ ಕಳ್ಳರುಳ ಬೆಚ್ಚಿಬಿದ್ದ ಹಾವೇರಿ ಜನ
ಮೃತ ವಿವೇಕ್ ICICI ಬ್ಯಾಂಕ್ನಲ್ಲಿ ಲೋನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಮೃತನ ಪತ್ನಿಯಿಂದ ತಲಘಟ್ಟಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಎರಡ್ಮೂರು ದಿನದಿಂದ ಡಲ್ ಆಗಿದ್ರು, ನಿಖರ ಕಾರಣ ಗೊತ್ತಿಲ್ಲ. ಸಾವಿಗೆ ನಿಖರ ಕಾರಣ ಪತ್ತೆ ಮಾಡುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮನೆಯಲ್ಲಿ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.