ಗದಗ, ಆಗಸ್ಟ್.26: ಗದಗ-ಬೆಟಗೇರಿ (Gadag Betageri) ಅವಳಿ ನಗರದಲ್ಲಿ ಭಯಾನಕ ಗ್ಯಾಸ್ ರೀಫಿಲಿಂಗ್ ಮಾಫಿಯಾ (Gas Re-Filling) ಎಗ್ಗಿಲ್ಲದೇ ನಡೆದಿದೆ. ಪ್ರತಿ ಕ್ಷಣವೂ ಜನ್ರು ಭಯದಲ್ಲೇ ಬದುಕುವಂತಾಗಿದೆ. ಯಾವಾಗ ಬ್ಲಾಸ್ಟ್ ಆಗುತ್ತೋ, ದುರಂತ ಸಂಭವಿಸುತ್ತೋ ಅನ್ನೋ ಆತಂಕದಲ್ಲೇ ಜೀವನ ಮಾಡ್ತಾಯಿದ್ದಾರೆ. ಅಕ್ರಮ ಗ್ಯಾಸ್ ರೀಫಿಲಿಂಗ್ ದಂಧೆ ಅವಳಿ ನಗರದ ಜನ್ರನ್ನು ಬೆಚ್ಚಿಬಿಳಿಸಿದೆ. ಜಿಲ್ಲಾ ಕೇಂದ್ರದಲ್ಲೇ ರಾಜಾರೋಷವಾಗಿ ಈ ದಂಧೆ ನಡೆಯುತ್ತಿದ್ರೂ ಆಡಳಿತ ಕುಂಭಕರ್ಣ ನಿದ್ದೆ ಮಾಡ್ತಿದೆ. ಟಿವಿ9 ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಭಯಾನಕ, ಕರಾಳ ದಂಧೆಯ ಅಸಲಿಯತ್ತು ಬಯಲಾಗಿದೆ.
ಎರಡು ದಿನಗಳ ಹಿಂದೆಯೇ ಬೆಂಗಳೂರಿನ ಬೇಕರಿ ಅಂಗಡಿ ಸಿಲಿಂಡರ್ಗಳು ಬ್ಲಾಸ್ಟ್ ಆಗಿ ಇಡೀ ಅಗಂಡಿ ಸುಟ್ಟು ಕರಕಲಾಗಿತ್ತು. ಈ ಘಟನೆ ಇನ್ನೂ ಕಣ್ಮುಂದೆ ಇರುವಾಗಲೇ ಅಕ್ರಮ ಗ್ಯಾಸ್ ರೀಫಿಲಿಂಗ್ ಡೇಂಜರ್ಸ್ ದಂಧೆ ಟಿವಿ9 ಬಯಲು ಮಾಡಿದೆ. ಈ ಭಯಾನಕ, ಡೇಂಜರ್ಸ್ ಅಕ್ರಮ ಗ್ಯಾಸ್ ರೀಫಿಲಿಂಗ್ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ ಜನರ ಮಧ್ಯೆಯೇ ಅಕ್ರಮ ಗ್ಯಾಸ್ ರೀಫಿಲಿಂಗ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಅವಳಿ ನಗರದ ಗಲ್ಲಿಗಲ್ಲಿಯಲ್ಲೂ, ಸಂದಿಗೊಂದಿಯಲ್ಲಿ ಶೆಡ್ ಹಾಕಿ ಗ್ಯಾಸ್ ರೀಫಿಲಿಂಗ್ ಮಾಡಲಾಗ್ತಾಯಿದೆ. ಟಿವಿ9 ರಹಸ್ಯ ಕಾರ್ಯಚರಣೆಯಲ್ಲಿ ಡೇಂಜರ್ಸ್ ದಂಧೆಯ ದೃಶ್ಯಗಳು ಸೆರೆಯಾಗಿವೆ.
ಗ್ರಾಹಕರ ಮನೆಗಳಿಗೆ ಹೋಗಬೇಕಿರೋ ಗ್ಯಾಸ್ ಸಿಲಿಂಡರ್ ಗಳು ಈ ಅಕ್ರಮ ಅಡ್ಡಾದಲ್ಲಿ ಸಂಗ್ರಹ ಮಾಡಲಾಗಿದೆ. ಮಷಿನ್ ಮೂಲಕ ಅಕ್ರಮವಾಗಿ ಗ್ಯಾಸ್ ಆಟೋಗಳಿಗೆ ರೀಫಿಲಿಂಗ್ ಮಾಡಲಾಗ್ತಾಯಿದೆ. ಸ್ವಲ್ಪ ಹೆಚ್ಚು ಕಮ್ಮಿಯಾದ್ರೂ ಮುಗಿತು. ದೊಡ್ಡ ದುರಂತವೇ ನಡೆದು ಹೋಗುತ್ತೆ. ಈ ಭಯಾನಕ ದಂಧೆ ಕದ್ದು ಮುಚ್ಚಿ ಏನೂ ನಡೆಯಲ್ಲ. ಆಹಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಗೊತ್ತಿದೆ. ಆದ್ರೆ, ಯಾರೂ ಕೂಡ ಕ್ರಮ ಕೈಗೊಳ್ಳುವ ಗೋಜಿಗೆ ಹೋಗ್ತಾಯಿಲ್ಲ. ಈ ಇಲಾಖೆಗಳು ಯಾಕೇ ಗಪ್ ಚುಪ್ ಆಗಿವೆ ಅನ್ನೋದು ಗೊತ್ತೇ ಆಗುತ್ತಿಲ್ಲ. ಸ್ಥಳೀಯರು ಹೇಳೋ ಪ್ರಕಾರ ಈ ಅಕ್ರಮ ಗ್ಯಾಸ್ ರೀಫಿಲಿಂಗ್ ಅಡ್ಡಾಗಳಿಂದ ಈ ಎರಡು ಇಲಾಖೆ ಅಧಿಕಾರಿಗಳಿಗೆ ಮಾಮುಲಿ ಹೋಗುತ್ತಂತೆ. ಹೀಗಾಗಿ ಡೇಂಜರ್ಸ್ ಅಂತ ಗೋತ್ತಿದ್ರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಅನ್ನೋ ಆರೋಪ ಅವಳಿ ನಗರದಲ್ಲಿ ಕೇಳಿ ಬರ್ತಾಯಿದೆ. ಟಿವಿ9 ಕಳೆದ 15 ದಿನಗಳಿಂದ ಅವಳಿ ನಗರದ ಗಲ್ಲಿ ಗಲ್ಲಿಯಲ್ಲಿ ಸುತ್ತಾಡಿ ಈ ಅಕ್ರಮ ಗ್ಯಾಸ್ ರೀಫಿಲಿಂಗ್ ಅಡ್ಡಾಗಳನ್ನು ಪತ್ತೆ ಹಚ್ಚಿದೆ.
ಇದನ್ನೂ ಓದಿ: TRAI, ಮುಂಬೈ ಪೊಲೀಸರೆಂದು ಕರೆ ಮಾಡಿ ಹಿರಿಯ ವೈದ್ಯನಿಗೆ 1.27 ಕೋಟಿ ವಂಚನೆ ಮಾಡಿದ ಸೈಬರ್ ಖದೀಮರು
ಯಾವುದೇ ಭಯ, ಅಂಜಿಕೆ ಇಲ್ಲದೇ ಅಕ್ರಮ ದಂಧೆ ಸಾಗಿದೆ. ಮನೆಗಳಿಗೆ ಉಪಯೋಗಿಸುವ ಸಿಲಿಂಡರ್ ಗಳ ಶೆಡ್ ಗಳಲ್ಲಿ ಆಕ್ರಮ ದಾಸ್ತಾನು ಮಾಡಲಾಗಿದೆ. ಅಕ್ರಮ ಸಿಲಿಂಡರ್ ಗಳು ಮಷಿನ್ ಮೂಲಕ ಆಟೋಗಳಿಗೆ ರೀಫಿಲಿಂಗ್ ಮಾಡುವ ಮಾಫಿಯಾ ಗದಗ-ಬೆಟಗೇರಿ ಅವಳಿ ನಗರದ ಗಲ್ಲಿ ಗಲ್ಲಿಯಲ್ಲಿ ರಾಜಾರೋಷವಾಗಿ ನಡೆದಿದೆ. ಈ ಅಪಾಯಕಾರಿ ದಂಧೆಯಿಂದ ಅಕ್ಕಪಕ್ಕದ ಜನ್ರು ನಿತ್ಯವೂ ಭಯದಲ್ಲೇ ಬದುಕುತ್ತಿದ್ದಾರೆ. ರೀಫಿಲಿಂಗ್ ಮಾಡುವ ವೇಳೆ ಸ್ವಲ್ಪ ಹೆಚ್ಚು ಕಮ್ಮಿಯಾದ್ರೂ ದೊಡ್ಡ ದುರಂತ ಗ್ಯಾರಂಟಿ.
ಗದಗ ಶಹರ, ಬೆಟಗೇರಿ ಪೊಲೀಸ್ ಠಾಣೆ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಗ್ಗಿಲ್ಲದೇ ಅಕ್ರಮ ದಂಧೆ ಸಾಗಿದೆ. ಮುಳಗುಂದ ರಸ್ತೆಯ ಧೋಬಿ ಘಾಟ್ ಬಳಿಯ ರಿಂಗ್ ರೋಡ್ ಬಳಿ ಎರಡು ಅಕ್ರಮ ಗ್ಯಾಸ್ ರೀಫಿಲಿಂಗ್ ಅಡ್ಡಾಗಳಿವೆ. ಬೆಟಗೇರಿಯ ಮಂಜುನಾಥ್ ನಗರದಲ್ಲಿ ರೀಫಿಲಿಂಗ್ ದಂಧೆ ಸದ್ದಿಲ್ಲದೇ ನಡೆಯುತ್ತಿದೆ. ಕುರಟ್ಟಿಪೇಟೆ, ಕಳಸಾಪೂರ ರಸ್ತೆಯಲ್ಲೂ ಭರ್ಜರಿ ರೀಫಿಲಿಂಗ್ ಮಾಫಿಯಾ ನಡೆಯುತ್ತಿದೆ. ಇನ್ನೂ ಅನೇಕ ಕಡೆಗಳಲ್ಲಿ ಪೊಲೀಸ್, ಆಹಾರ ಇಲಾಖೆ ಅಧಿಕಾರಿಗಳ ಅಂಜಿಕೆ ಇಲ್ಲದೇ ಭರ್ಜರಿ ನಡೆದಿದೆ. ಆಹಾರ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ಇದ್ರೂ ಗಪ್ ಚುಪ್ ಆಗಿದ್ದಾರಂತೆ. ಆಹಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ವಿರುದ್ಧ ಅವಳಿ ನಗರದ ಜನ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಹಸ್ಯ ಕಾರ್ಯಾಚರಣೆ ಮೂಲಕ ಟಿವಿ9 ಅಕ್ರಮ ಗ್ಯಾಸ್ ರೀಫಿಲಿಂಗ್ ದಂಧೆಯ ಕರಾಳ ಮುಖವಾಡ ಬಯಲು ಮಾಡಿದೆ. ಆಟೋಗಳಿಗೆ ರಾಜಾರೋಷವಾಗಿ ಗ್ಯಾಸ್ ರೀಫಿಲಿಂಗ್ ಮಾಡಲಾಗುತ್ತಿದೆ. 1ಕೆಜಿ ಗ್ಯಾಸ್ ಹಾಕಲು 110 ರೂಪಾಯಿ ಪಡೆಯಲಾಗುತ್ತದೆ. ಇನ್ನೂ ಕಾರ್ ಗಳಿಗೂ ರೀಫಿಲಿಂಗ್ ಮಾಡಲಾಗುತ್ತಿದೆ. ದೊಡ್ಡ ದುರಂತ ನಡೆಯುವ ಮುನ್ನವೇ ಜಿಲ್ಲಾಡಳಿ, ಪೊಲೀಸ್ ಎಚ್ಚೆತ್ತುಕೊಂಡು ಅಕ್ರಮ ಗ್ಯಾಸ್ ರೀಫಿಲಿಂಗ್ ದಂಧೆಗೆ ಬ್ರೇಕ್ ಹಾಕಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ