AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TRAI, ಮುಂಬೈ ಪೊಲೀಸರೆಂದು ಕರೆ ಮಾಡಿ ಹಿರಿಯ ವೈದ್ಯನಿಗೆ 1.27 ಕೋಟಿ ವಂಚನೆ ಮಾಡಿದ ಸೈಬರ್ ಖದೀಮರು

ಚಿತ್ರದುರ್ಗದ ಹಿರಿಯ ವೈದ್ಯ ಡಾ.ಶ್ರೀನಿವಾಸ್ ಶೆಟ್ಟಿ ಎಂಬುವವರಿಗೆ ಕರೆ ಮಾಡಿದ ಸೈಬರ್ ಖದೀಮರು, ನಾವು TRAI ಮತ್ತು ಮುಂಬೈ ಪೊಲೀಸರೆಂದು ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ನಿಮ್ಮ ಬ್ಯಾಂಕ್ ಖಾತೆ ಬಳಸಿ ಮನಿ ಲ್ಯಾಂಡರಿಂಗ್ ವಂಚನೆ ಆಗಿದೆ ಎಂದು ನಂಬಿಸಿ ವಂಚನೆ ಮಾಡಿದ್ದಾರೆ.

TRAI, ಮುಂಬೈ ಪೊಲೀಸರೆಂದು ಕರೆ ಮಾಡಿ ಹಿರಿಯ ವೈದ್ಯನಿಗೆ 1.27 ಕೋಟಿ ವಂಚನೆ ಮಾಡಿದ ಸೈಬರ್ ಖದೀಮರು
ಚಿತ್ರದುರ್ಗದ CEN ಪೊಲೀಸ್ ಠಾಣೆ
ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on:Aug 26, 2024 | 3:54 PM

Share

ಚಿತ್ರದುರ್ಗ, ಆಗಸ್ಟ್​.26: ಹಿರಿಯ ವೈದ್ಯರೊಬ್ಬರಿಗೆ ಸೈಬರ್ ಖದೀಮರು ಬರೋಬ್ಬರಿ 1.27 ಕೋಟಿ ರೂಪಾಯಿ ವಂಚನೆ (Cheat) ಮಾಡಿರುವ ಘಟನೆ ಕೋಟೆನಾಡು ಚಿತ್ರದುರ್ಗದಲ್ಲಿ ನಡೆದಿದೆ. ನಿಮ್ಮ ಬ್ಯಾಂಕ್ ಖಾತೆ ಬಳಸಿ ಮನಿ ಲ್ಯಾಂಡರಿಂಗ್ (Money Laundering) ವಂಚನೆ ಆಗಿದೆ. ಖಾತೆಯ ಹಣದ ಆಡಿಟ್ ಮಾಡಬೇಕಿದೆ ಎಂದು ನಂಬಿಸಿ ವಾಟ್ಸಾಪ್​, ನಾರ್ಮಲ್ ಕಾಲ್ ಮಾಡಿ ಖದೀಮರು ವಂಚಿಸಿದ್ದಾರೆ. ಚಿತ್ರದುರ್ಗದ CEN ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗದ ಹಿರಿಯ ವೈದ್ಯ ಡಾ.ಶ್ರೀನಿವಾಸ್ ಶೆಟ್ಟಿ ಎಂಬುವವರಿಗೆ ಕರೆ ಮಾಡಿದ ಸೈಬರ್ ಖದೀಮರು, ನಾವು TRAI ಮತ್ತು ಮುಂಬೈ ಪೊಲೀಸರೆಂದು ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ನಿಮ್ಮ ಬ್ಯಾಂಕ್ ಖಾತೆ ಬಳಸಿ ಮನಿ ಲ್ಯಾಂಡರಿಂಗ್ ವಂಚನೆ ಆಗಿದೆ. ಖಾತೆಯ ಹಣದ ಆಡಿಟ್ ಮಾಡಬೇಕಿದೆ ಎಂದು ಹೇಳಿ ನಂಬಿಸಿದ್ದಾರೆ. ನಂತರ ತಮ್ಮ ಖಾತೆಗೆ 1 ಕೋಟಿ 27ಲಕ್ಷ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ. ಚಿತ್ರದುರ್ಗದ CEN ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Krishna Janmashtami: ಇಸ್ಕಾನ್​ನಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ, ನೃತ್ಯ ಮಾಡುತ್ತ ಭಕ್ತಿಯಲ್ಲಿ ಮೈ ಮರೆತ ಭಕ್ತರು

ಹಣಕಾಸು ವಿಚಾರಕ್ಕೆ ಗಲಾಟೆ.. ಯುವಕನ ಮೇಲೆ ಹಲ್ಲೆ

ಇಟ್ಟಿಗೆ ಫ್ಯಾಕ್ಟರಿ ಬಾಡಿಗೆ ವಿಚಾರಕ್ಕೆ ಗಲಾಟೆ ನಡೆದಿದ್ದು, ಯುವಕನ ಮೇಲೆ ಹತ್ತಾರು ಜನರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ. ಬೆಂಗಳೂರು ಜಿಲ್ಲೆ ಗೆರಟಿಗನಬೆಲೆ ಗ್ರಾಮದ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಘಟನೆ ನಡೆದಿದೆ. ಮೋಹನ್ ಎಂಬುವರು ಪ್ರವೀಣ್​ಗೆ ಗುಡ್ನಹಳ್ಳಿ ಗ್ರಾಮದಲ್ಲಿ ಇಟ್ಟಿಗೆ ಫ್ಯಾಕ್ಟರಿ ಬಾಡಿಗೆಗೆ ಕೊಟ್ಟಿದ್ರು. 8 ತಿಂಗಳಿನಿಂದ ಪ್ರವೀಣ್ ಬಾಡಿಗೆ ಕಟ್ಟಿರಲಿಲ್ಲ. ಬಾಡಿಗೆ ಕೇಳಲು ಹೋದಾಗ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಮಾಲೀಕ ಮೋಹನ್ ಮೇಲೆ ಪ್ರವೀಣ್, ಜೀವನ್ ಮತ್ತು ಗ್ಯಾಂಗ್ ಹಲ್ಲೆ ನಡೆಸಿದೆ. ಆನೇಕಲ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:27 am, Mon, 26 August 24