AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿರಹಟ್ಟಿಯಲ್ಲಿ ಮಹಿಳೆಯರ ಜೊತೆಗೆ ಕುಳಿತು ಹೆದರದೆ-ಹೆದರಿಸದೆ ಪಂಕ್ತಿ ಭೋಜನ ಮಾಡಿದ ಮಂಗಣ್ಣ!

ಶಿರಹಟ್ಟಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಂಗನಿಗೆ ಊಟ ನೀಡಿ ಮಾನವೀಯತೆಯನ್ನು ಮೆರೆದರು. ಮಹಿಳೆಯರು ತಟ್ಟೆಯಲ್ಲಿ ಆಹಾರವನ್ನು ಹಾಕಿದ್ರು, ಅವರ ಜೊತೆಗೆ ಕುಳಿತು, ಹೆದರದೆ/ ಹೆಸರಿಸದೆ ಪಂಕ್ತಿ ಭೋಜನ ಮಾಡಿದ್ದಾನೆ ಮಂಗಣ್ಣ.

ಶಿರಹಟ್ಟಿಯಲ್ಲಿ ಮಹಿಳೆಯರ ಜೊತೆಗೆ ಕುಳಿತು ಹೆದರದೆ-ಹೆದರಿಸದೆ ಪಂಕ್ತಿ ಭೋಜನ ಮಾಡಿದ ಮಂಗಣ್ಣ!
ಗದಗ: ಮಹಿಳೆಯರ ಜೊತೆಗೆ ಕುಳಿತು ಊಟ ಮಾಡಿದ ಮಂಗ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Mar 20, 2023 | 5:43 PM

Share

ಗದಗ: ಮಹಿಳೆಯರ ಜೊತೆಗೆ ಕುಳಿತು ಊಟ ಮಾಡಿದ ಮಂಗ – ಈ ತಲೆಬರಹ ನಾನಾ ಅರ್ಥಗಳು, ಒಳಾರ್ಥಗಳು, ಗೂಡಾರ್ಥಗಳು ನೀಡುತ್ತಿದೆ. ಆದರೆ ಅದು ಅವರವರ ಭಾವಕ್ಕೆ, ಅನುಭವಕ್ಕೆ ಬಿಟ್ಟ ಸಂಗತಿಯಾಗಿದೆ. ಹೌದು ಗದಗ ಜಿಲ್ಲೆ ಶಿರಹಟ್ಟಿ (Shirahatti) ಪಟ್ಟಣದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಶಿರಹಟ್ಟಿ ಪಟ್ಟಣದ ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆ ಕಚೇರಿ ಆವರಣದಲ್ಲಿ ಇಂದು ಸೋಮವಾರ ಈ ದೃಶ್ಯಾವಳಿ ಕಂಡುಬಂದಿದೆ. ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು (Anganavadi Karyakarte) ಮೀಟಿಂಗ್ ಅಂಗವಾಗಿ ಆಗಮಿಸಿದ್ದರು. ಸಹಜವಾಗಿಯೆ, ಊಟದ ಸಮಯವಾಗಿದ್ದರಿಂದ (Eating) ಮೂರ್ನಾಲ್ಕು ಅಂಗನವಾಡಿ ಕಾರ್ಯಕರ್ತೆಯರು ಮರದ ಕೆಳಗೆ ಊಟಕ್ಕೆ ಕುಳಿತಿದ್ದಾರೆ. ಆ ವೇಳೆ, ಮರದ ಮೇಲಿದ್ದ ಮಂಗವೊಂದು (Monkey) ಕೆಳಗಿಳಿದು ಅನಿರೀಕ್ಷಿತವಾಗಿ ಎಂಟ್ರಿ ಕೊಟ್ಟಿದೆ.

Also Read:

Buntings: ರಾಜಕೀಯ ಪಕ್ಷದ ಬಂಟಿಂಗ್ಸ್​​​ಗೆ ಸಿಲುಕಿ ಅಮಾಯಕ ಕೋತಿಯ ದುರ್ಮರಣ

ಆ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆ ಭಾಗಿರತಿ ಸಾತಪುತೆ ಅವರು ಮಂಗನಿಗೆ ತುತ್ತು ಮಾಡಿ ಊಟ ಮಾಡಿಸಿದರು. ನಾಗಲಕ್ಷ್ಮಿ ಕುಲಕರ್ಣಿ, ಲಕ್ಷ್ಮಿ ನವಲೆ, ರೂಪಾ ಕಟ್ಟಿಮನಿ ಹಾಗೂ ಭಾಗಿರತಿ ನಾಲ್ಕೂ ಜನ ಊಟ ಮಾಡುವಾಗ ಈ ಘಟನೆ ನಡೆದಿದೆ.

ಕಾರ್ಯಕರ್ತೆಯರು ಮಂಗನಿಗೆ ಊಟ ನೀಡಿ ಮಾನವೀಯತೆಯನ್ನು ಮೆರೆದರು. ಮಹಿಳೆಯರು ತಟ್ಟೆಯಲ್ಲಿ ಆಹಾರವನ್ನು ಹಾಕಿದ್ರು, ಅವರ ಜೊತೆಗೆ ಕುಳಿತು, ಹೆದರದೆ/ ಹೆಸರಿಸದೆ ಪಂಕ್ತಿ ಭೋಜನ ಮಾಡಿದ್ದಾನೆ ಮಂಗಣ್ಣ. ಅಪರೂಪದ ಈ ದೃಶ್ಯಗಳು ಸ್ಥಳೀಯರ‌ ಮೊಬೈಲ್ ನಲ್ಲಿ ಸೆರೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು