ಹಣದ ವಿಚಾರಕ್ಕೆ ಆಪ್ತ ಸ್ನೇಹಿತನನ್ನೇ ಕೊಂದ ಕಿರಾತಕನನ್ನು ಎರಡೇ ದಿನದಲ್ಲಿ ಹೆಡೆಮುರಿ ಕಟ್ಟಿದ ಪೊಲೀಸ್ರು

ಆಗಸ್ಟ್ 24ರ ರಾತ್ರಿ ಆರ್​ಟಿಓ ಏಜಂಟ್ ಜಂತ್ಲಿಶಿರೂರ ಗ್ರಾಮದ ರಸ್ತೆಯಲ್ಲಿ ಭೀಕರವಾಗಿ ಕೊಲೆಯಾಗಿದ್ದ. ಈ ಸುದ್ದಿ ಕೇಳಿ ಇಡೀ ಗದಗ ಜಿಲ್ಲೆಯೇ ಬೆಚ್ಚಿಹೋಗಿತ್ತು. ಆದ್ರೆ, ಎಲ್ಲರಿಗೂ ಕಾಡಿದ್ದು, ಇದು ಕೊಲೆಯೋ.. ಅಪಘಾತವೋ ಅನ್ನೋದು.

ಹಣದ ವಿಚಾರಕ್ಕೆ ಆಪ್ತ ಸ್ನೇಹಿತನನ್ನೇ ಕೊಂದ ಕಿರಾತಕನನ್ನು ಎರಡೇ ದಿನದಲ್ಲಿ ಹೆಡೆಮುರಿ ಕಟ್ಟಿದ ಪೊಲೀಸ್ರು
ಕೊಲೆಯಾದ ಮಾರುತಿ ಅಂಕಲಗಿ, ಆರೋಪಿ ಮುತ್ತಪ್ಪ ಬೆಟಗೇರಿ
Follow us
TV9 Web
| Updated By: ಆಯೇಷಾ ಬಾನು

Updated on:Sep 01, 2022 | 8:13 PM

ಗದಗ: ಆಗಸ್ಟ್ 24ರ ರಾತ್ರಿ ಆರ್​ಟಿಓ ಏಜೆಂಟ್ ಭೀಕರ ಕೊಲೆಯಾಗಿದ್ದರು. ಕೊಲೆ ಮಾಡಿ ರಸ್ತೆಯ ಪಕ್ಕದಲ್ಲೇ ಎಸೆದಿದ್ರು. ಹೀಗಾಗಿ ಇದು ಕೊಲೆಯೋ, ಅಪಘಾತವೋ ಅನ್ನೋ ಅನುಮಾನ ಎಲ್ಲರಿಗೂ ಕಾಡಿತ್ತು. ಆದ್ರೆ ಸ್ಥಳಕ್ಕೆ ಬಂದ ಪೊಲೀಸ್ರಿಗೆ ಮಾತ್ರ ಇದು ಪಕ್ಕಾ ಮರ್ಡರ್ ಅಂತ ಗೊತ್ತಾಗಿತ್ತು. ಈ ವಿಷಯ ತಿಳಿದಿದ್ದೇ ತಡ ಕೊಲೆಗಾರ ಊರು ಬಿಟ್ಟು ಪರಾರಿಯಾಗಿದ್ದ. ಸಣ್ಣ ಸುಳಿವಿನ ಬೆನತ್ತಿದ ಪೊಲೀಸ್ರು ಕೊಲೆ ರಹಸ್ಯ ಬೇಧಿಸಿದ್ದಾರೆ.

ಆಗಸ್ಟ್ 24ರ ರಾತ್ರಿ ಆರ್​ಟಿಓ ಏಜಂಟ್ ಜಂತ್ಲಿಶಿರೂರ ಗ್ರಾಮದ ರಸ್ತೆಯಲ್ಲಿ ಭೀಕರವಾಗಿ ಕೊಲೆಯಾಗಿದ್ದ. ಈ ಸುದ್ದಿ ಕೇಳಿ ಇಡೀ ಗದಗ ಜಿಲ್ಲೆಯೇ ಬೆಚ್ಚಿಹೋಗಿತ್ತು. ಆದ್ರೆ, ಎಲ್ಲರಿಗೂ ಕಾಡಿದ್ದು, ಇದು ಕೊಲೆಯೋ.. ಅಪಘಾತವೋ ಅನ್ನೋದು. ಆದ್ರೆ, ಪೊಲೀಸ್ರಿಗೆ ಮಾತ್ರ ಇದೊಂದು ಕೊಲೆ ಅಂತ ಅಂದೇ ಗೊತ್ತಾಗಿತ್ತು. ಎಂಥ ಕೊಲೆಗಾರನೇ ಆದ್ರೂ ಒಂದು ಕ್ಲ್ಯೂ ಬಿಟ್ಟೇ ಬಿಟ್ಟಿರ್ತಾನೆ ಅಂತಾರಲ್ಲ. ಹಾಗೇ ಈ ಕೊಲೆಗಾರನೂ ಕೂಡ ಒಂದು ಸಣ್ಣ ಕ್ಲ್ಯೂ ಬಿಟ್ಟಿದ್ದ. ಇದನ್ನೆ ಬೆನ್ನಟ್ಟಿದ್ದ ಮುಂಡರಗಿ ಪೊಲೀಸ್ರು ಹಂತಕನನ್ನು ಎರಡೇ ದಿನದಲ್ಲಿ ಹೆಡೆಮುರಿ ಕಟ್ಟಿದ್ದಾರೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತ್ಲಿಶಿರೂರ ಗ್ರಾಮದ ರಸ್ತೆಯಲ್ಲಿ ಗದಗ ನಗರದ ಗಂಗಿಮಡಿ ನಿವಾಸಿ ಆರ್​ಟಿಓ ಏಜೆಂಟ್ ಮಾರುತಿ ಅಂಕಲಗಿ ಎಂಬಾತನ ಭೀಕರ ಕೊಲೆಯಾಗಿತ್ತು. ಈ ಕೊಲೆಯನ್ನು ಮಾಡಿದ್ದು ಅವರ ಸ್ನೇಹಿತ ಮುತ್ತಪ್ಪ ಬೆಟಗೇರಿ. ಇವರಿಬ್ಬರು ಕುಚ್ಚುಕು ಗೆಳೆಯರು. ಆರ್ಟಿಓ ಕಚೇರಿಯಲ್ಲಿ ಏಜಂಟ್ ಆಗಿ ಕೆಲ್ಸ್ ಮಾಡ್ತಾಯಿದ್ರು. ಆರೋಪಿ ಮುತ್ತಪ್ಪ ಬೆಟಗೇರಿ, ಕೊಲೆಯಾದ ಮಾರುತಿಗೆ ಒಂದೂವರೆ ಲಕ್ಷ ಹಣ ನೀಡಿದ್ದನಂತೆ. ಹೀಗಾಗಿ ಸಾಕಷ್ಟು ಬಾರಿ ಕೇಳಿದ್ದಾನೆ. ಇಂದು ನಾಳೆ ಅಂತ ದಿನದೂಡಿದ್ದಾನಂತೆ. ಹೀಗಾದ್ರೆ ನಡೆಯಲ್ಲಿ ಅಂತ ಪ್ಲಾನ್ ಮಾಡಿ ಮುತ್ತಪ್ಪ ಆಗಸ್ಟ್ 24 ರಂದು ಗೆಳೆಯನಿಗೆ ಫೋನ್ ಮಾಡಿ ಕಪ್ಪತ್ತಗುಡ್ಡಕ್ಕೆ ಹೋಗೋಣ ಬಾ ಅಂತ ಕರೆದಿದ್ದಾನೆ. ಗೆಳೆಯ ಕರೆದಿದ್ದಾನಂತೆ ಅಂತ ಮಾರುತಿ ಬಸ್ ಹತ್ತಿ ಡಂಬಳ ಗ್ರಾಮಕ್ಕೆ ಬಂದಿದ್ದಾನೆ. ಅಲ್ಲಿಂದ ಆರೋಪಿ ಮುತ್ತಪ್ಪ ಬೆಟಗೇರಿ ಬೈಕ್ ಮೇಲೆ ಸವಾರಿ ಮಾಡಿ ಆರೋಪಿ ಜಮೀನಿಗೆ ಹೋಗಿದ್ದಾರೆ. ಅಲ್ಲಿ ಇಬ್ಬರು ಕಠಪೂರ್ತಿ ಕುಡಿದು ಭರ್ಜರಿ ಪಾರ್ಟಿ ಮಾಡಿದ್ದಾರೆ. ಆ ಮೇಲೆ ಮತ್ತೆ ಹಣಕಾಸಿನ ವಿಷಯವಾಗಿ ಜಗಳ ಮಾಡಿದ್ದಾರೆ. ಆಗ ವಿಕೋಪಕ್ಕೆ ಹೋದಾಗ ಆರೋಪಿ ಮುತ್ತಪ್ಪ ಬಟ್ಟೆಯಲ್ಲಿ ಕಲ್ಲು ಹಾಕಿ ಮಾರುತಿಗೆ ಬಲವಾಗಿ ಹೊಡೆದಿದ್ದಾನೆ. ಆಗ ಮಾರುತಿ ಸ್ಥಳದಲ್ಲೇ ಉಸಿರುಚೆಲ್ಲಿದ್ದಾನೆ.

ಆದ್ರೆ, ಗೆಳೆಯನ ಕೈಯಲ್ಲಿ ಕೊಲೆಯಾಗ್ತೀನಿ ಅಂತ ಮಾತ್ರ ಆತನಿಗೆ ಗೋತ್ತಿರಲಿಲ್ಲ. ಕೊಲೆಗಾರ ಯಾರೂ ಅನ್ನೋದೇ ನಿಗೂಢವಾಗಿತ್ತು. ಕುಚ್ಚುಕು ಗೆಳೆಯನ ಕೊಂದು ಕಿರಾತಕ ಎಸ್ಕೇಪ್ ಆಗಿದ್ದ. ನಿಗೂಢ ಕೊಲೆ ಭೇಧಿಸೋದು ಪೊಲೀಸ್ರಿಗೆ ಸವಾಲಾಗಿತ್ತು. ಅಗ ಮೊದ್ಲು ಪೊಲೀಸ್ರು ಮಾಡಿದ್ದು. ಮಾರುತಿಗೆ ಆ ದಿನ ಯಾರ್ಯಾರೂ ಫೋನ್ ಮಾಡಿದ್ದಾಂತೆ. ಫೋನ್ ಕಾಲ್ ಹಾಗೂ ಡಂಬಳ, ಜಂತ್ಲಿಶಿರೂರು ಗ್ರಾಮಗಳ ಸುತ್ತಮುತ್ತಲಿ ಇವ್ರು ಸುತ್ತಾಡಿದ ಚಲನವಲನ ಬಗ್ಗೆ ತಕ್ಷಣ ಅಲರ್ಟ್ ಆದ ಪೊಲೀಸ್ರು ಹಂತಕ ಬೇಟೆಗೆ ಇಳಿದಿದ್ದಾರೆ. ಹಂತಕನ ಬಲೆಗೆ ನೇಮಿಸಿದ ವಿಶೇಷ ತಂಡಕ್ಕೆ ಮೊದ್ಲು ಅನುಮಾನ ಬಂದಿದ್ದೇ ಕುಚ್ಚುಕು ಗೆಳೆಯ ಮುತ್ತಪ್ಪ ಬೆಟಗೇರಿ ಮೇಲೆ. ಅಷ್ಟರಲ್ಲೇ ಆರೋಪಿ ಮುತ್ತಪ್ಪ ಊರು ಬಿಟ್ಟು ಪರಾರಿಯಾಗಿದ್ದ. ಆಗ ಪೊಲೀಸ್ರ ಅನುಮಾನ ಮತ್ತಷ್ಟು ಹೇಚ್ಚಾಯ್ತು. ಕೊನೆಗೆ ಆರೋಪಿಯನ್ನು ಪತ್ತೆ ಹಚ್ಚಿ ಹೆಡೆಮುರಿ ಕಟ್ಟಿದ್ದಾರೆ. ಠಾಣೆಗೆ ಕರೆತಂದು ಪೊಲೀಸ್ರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗಿ ಹಂತಕ ಗೆಳೆಯನನ್ನು ಕೊಂದಿದ್ದು ನಾನೇ ಅಂತ ಬಾಯಿ ಬಿಟ್ಟಿದ್ದಾನೆ. ಒಂದೂವರೆ ಲಕ್ಷದ ಕೊಲೆ ಇದು ಅಂತ ಒಪ್ಪಿಕೊಂಡಿದ್ದಾನೆ. ಕೊಲೆಗಾರನಿಗೆ ನಮ್ಮ ತಮ್ಮನಿಗೆ ಆದ ಶಿಕ್ಷೆಯೇ ಆಗಬೇಕು ಅಂತ ಕೊಲೆಯಾದ ಮಾರುತಿ ಕುಟುಂಬ ಒತ್ತಾಯಿಸಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

Published On - 8:13 pm, Thu, 1 September 22

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು