ಗದಗದ ಜುಮ್ಮಾ ಮಸೀದಿ ಮೂಲತಃ ವೆಂಕಟೇಶ್ವರ ದೇಗುಲ; ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ: ಪ್ರಮೋದ್ ಮುತಾಲಿಕ್
Gadag News: ಇದಕ್ಕೆ ದಾಖಲೆ ಇವೆ, ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಗದಗದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ. ಮತಾಂತರ ಖಂಡಿಸಿ ಪಥಸಂಚಲನ ಸಮಾರೋಪದಲ್ಲಿ ಮುತಾಲಿಕ್ ಹೀಗೆ ಹೇಳಿದ್ದಾರೆ.
ಗದಗ: ಇಲ್ಲಿನ ಜುಮ್ಮಾ ಮಸೀದಿ ಮೂಲತಃ ವೆಂಕಟೇಶ್ವರ ದೇಗುಲ. ರಾಮಮಂದಿರ ಮಾದರಿಯಲ್ಲಿ ವೆಂಕಟೇಶ್ವರ ದೇವಸ್ಥಾನ ಇದೆ. ಟಿಪ್ಪು ಸುಲ್ತಾನ್ ಅವಧಿಯಲ್ಲಿ ದೇಗುಲ ಕೆಡವಿ ಮಸೀದಿ ಆಗಿದೆ. ಇದಕ್ಕೆ ದಾಖಲೆ ಇವೆ, ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಗದಗದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ. ಇಂದು (ಅಕ್ಟೋಬರ್ 17) ಮತಾಂತರ ಖಂಡಿಸಿ ಪಥಸಂಚಲನ ಸಮಾರೋಪದಲ್ಲಿ ಮುತಾಲಿಕ್ ಹೀಗೆ ಹೇಳಿದ್ದಾರೆ.
ನಾವು ಸೌಹಾರ್ದತೆಯಿಂದ ಇರಬೇಕಾದ್ರೆ ನಮ್ಮ ದೇವಸ್ಥಾನ ನಮಗೆ ವಾಪಸ್ ಕೊಡಿ. ಈ ವಿಷಯ ಪ್ರಶ್ನೆ ಮಾಡಿದವರನ್ನು ಗಡಿಪಾರು ಮಾಡಿ ಅಂತಾರೆ. ಮೊದಲು ನಿಮ್ಮನ್ನು ಗಡಿಪಾರು ಮಾಡಬೇಕು ಎಂದು ಮುತಾಲಿಕ್ ಕಿಡಿಕಾರಿದ್ದಾರೆ.
ಭಾರತ ಪಾಕಿಸ್ತಾನ ಟಿ20 ಕ್ರಿಕೆಟ್ ಪಂದ್ಯಾವಳಿಗೆ ಪ್ರಮೋದ್ ಮುತಾಲಿಕ್ ವಿರೋಧ ಭಾರತ ಪಾಕಿಸ್ತಾನ ಟಿ20 ಕ್ರಿಕೆಟ್ ಪಂದ್ಯಾವಳಿಗೆ ಪ್ರಮೋದ್ ಮುತಾಲಿಕ್ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಶ್ಮೀರದಲ್ಲಿ ಸೈನಿಕರ, ನಾಗರಿಕರ ನಿರಂತರ ಹತ್ಯೆಯಾಗ್ತಿದ್ದು ಸರ್ಕಾರಕ್ಕೆ ಗೊತ್ತಿಲ್ವಾ. ನಮ್ಮ ಜೊತೆ ಆಟ ಆಡಿ ಕೋಟಿ ಹಣಗಳಿಸಿ ನಮ್ಮ ವಿರುದ್ಧ ಮದ್ದು ಗುಂಡು ಹಾರಿಸೋದು ಗೊತ್ತಾಗ್ತಿಲ್ವೆ. ಆಟವಾಡಲು ಅನುಮತಿ ಕೊಟ್ಟಿದ್ದೇ ತಪ್ಪು. ಪಾಕಿಸ್ತಾನ ಜಗತ್ತಿಗೆ ಕಂಟಕವಾಗಿದೆ. ತಾಲಿಬಾನ್ಗೆ ಸಪೋರ್ಟ್ ಮಾಡುವ ಪಾಕಿಸ್ತಾನದ ಜೊತೆ ಕ್ರಿಕೆಟ್ ಆಡ್ತೀರಾ? ರಾಕ್ಷಸರು ರಾಕ್ಷಸರೇ. ಭಯೋತ್ಪಾದಕರು ಭಯೋತ್ಪಾದಕರೆ. ಅವರಿಗೆ ಅಮೃತ ಕುಡಿಸಿದ್ರೂ ವಿಷವನ್ನೇ ಕೊಡ್ತಾರೆ. ಅವರ ಜೊತೆ ಕ್ರಿಕೆಟ್ ಆಡೋದು ಸ್ವಾಭಿಮಾನದ ಶೂನ್ಯತೆ ತೋರುತ್ತೆ. ಕ್ರಿಕೆಟ್ ಆಟಗಾರರಿಗೆ ದೇಶದ ಸೈನಿಕರ ಬಗ್ಗೆ ಕರುಣೆ ಇದೆಯಾ? ಭಯೋತ್ಪಾದನೆ ನಿಲ್ಲುವವರೆಗೂ ಆಟ ಆಡೋದಿಲ್ಲ ಅಂತಾ ಹೇಳ್ಬೇಕಿತ್ತು. ಶ್ರೀರಾಮ ಸೇನೆ ಭಾರತ ಪಾಕ್ ಮ್ಯಾಚ್ ಆಡಿಸೋ ನಿರ್ಧಾರವನ್ನ ಖಂಡಿಸುತ್ತೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಹುಬ್ಬಳ್ಳಿ: ಚರ್ಚ್ ಫಾದರ್ ವಿರುದ್ಧ ಮತಾಂತರ ಆರೋಪ ಹುಬ್ಬಳ್ಳಿಯ ಭೈರದೇವರಕೊಪ್ಪ ಚರ್ಚ್‌ನಲ್ಲಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚ್ ಪಾಸ್ಟರ್ ಸೋಮು ವಿರುದ್ಧ ಮತಾಂತರ ಆರೋಪ ಕೇಳಿಬಂದಿದೆ. ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಪಾಸ್ಟರ್ ಸೋಮು ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ. ಹಿಂದೂ ಪರ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನಾ ಸ್ಥಳಕ್ಕೆ ಶಾಸಕ ಅರವಿಂದ ಬೆಲ್ಲದ ಭೇಟಿ ನೀಡಿದ್ದಾರೆ. ನವನಗರ ಪೊಲೀಸರ ಜೊತೆ ಶಾಸಕ ಬೆಲ್ಲದ ಮಾತುಕತೆ ನಡೆಸಿದ್ದಾರೆ.
ಹುಬ್ಬಳ್ಳಿಯ ನವನಗರದ ಚರ್ಚ್‌ನಲ್ಲಿ ಮತಾಂತರ ಆರೋಪ ಕೇಳಿಬಂದಿರುವ ಬೆನ್ನಲ್ಲೇ ಚರ್ಚ್ ಒಳಗಡೆ ಹಿಂದೂಪರ ಸಂಘಟನೆಗಳು ರಾಮಜಪ ನಡೆಸಿದ್ದಾರೆ. ಮತಾಂತರ ಮಾಡುವವರನ್ನು ಬಂಧಿಸುವಂತೆ ಆಗ್ರಹಿಸಿ ಧರಣಿ ನಡೆಸಿದ್ದಾರೆ. ರಸ್ತೆಯಲ್ಲಿ ಪ್ರತಿಭಟನೆಯಿಂದಾಗಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದೆ. ಪ್ರತಿಭಟನೆಗೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಸಾಥ್ ನೀಡಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.
ಹುಬ್ಬಳ್ಳಿಯ ನವನಗರದ ಚರ್ಚ್‌ನಲ್ಲಿ ಮತಾಂತರ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ದೂರು ನೀಡಿದ್ದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ಬಂಧಿಸದಿದ್ದರೆ ಪ್ರತಿಭಟನೆ ಕೈಬಿಡಲ್ಲವೆಂದು ಬೆಲ್ಲದ್ ಎಚ್ಚರಿಕೆ ನೀಡಿದ್ದಾರೆ. ಪೊಲೀಸರು ಕಾನೂನು ಬದ್ಧವಾಗಿ ಕೆಲಸ ಮಾಡಲಿ. ಅವರಿಗೆ ಯಾವುದೇ ಜಾತಿ ಇರಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮದುವೆಯಾಗಲೆಂದೇ ಮತಾಂತರಗೊಳ್ಳುವುದು ತಪ್ಪು: ಮೋಹನ್ ಭಾಗವತ್
ಇದನ್ನೂ ಓದಿ: ನ್ಯಾಯಬೆಲೆ ಅಂಗಡಿಯಲ್ಲಿ ದಲಿತ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ; ನೊಂದ ಮಹಿಳೆ ಮನೆಗೆ ಸಚಿವ ಸುಧಾಕರ್ ಭೇಟಿ
Published On - 8:49 pm, Sun, 17 October 21