ಹಿರಿಯ-ಕಿರಿಯ ಶ್ರೀಗಳ ಗುದ್ದಾಟಕ್ಕೆ ಶಿವಾನಂದ ಮಠದ ಅಡ್ಡ ಪಲ್ಲಕ್ಕಿ ಉತ್ಸವ, ರಥೋತ್ಸವ ಸ್ಥಗಿತ

ಗದಗ ನಗರದ ಶಿವಾನಂದ ಮಠದಲ್ಲಿ ಉಭಯ ಶ್ರೀಗಳ ಪೀಠ ಗುದ್ದಾಟಕ್ಕೆ ಜಾತ್ರೆಯೇ ಸ್ಥಗಿತಗೊಂಡಿದೆ. ಇಂದು ಸಂಜೆ ನಡೆಯಬೇಕಿದ್ದ ರಥೋತ್ಸವ, ಅಡ್ಡ ಪಲ್ಲಕ್ಕಿ ಉತ್ಸವ ಸ್ಥಗಿತಗೊಂಡಿದ್ದು, ಗದಗ ತಹಶೀಲ್ದಾರ್ ಅವರು ನಿಷೇಧಾಜ್ಞೆ ಜಾರಿ ಮಾಡಿ ಆದೇಶಿಸಿದ್ದಾರೆ. ಉಭಯ ಶ್ರೀಗಳ ವರ್ತನೆಗೆ ಭಕ್ತರು ಆಕ್ರೋಶ ಹೊರಹಾಕಿದ್ದಾರೆ.

ಹಿರಿಯ-ಕಿರಿಯ ಶ್ರೀಗಳ ಗುದ್ದಾಟಕ್ಕೆ ಶಿವಾನಂದ ಮಠದ ಅಡ್ಡ ಪಲ್ಲಕ್ಕಿ ಉತ್ಸವ, ರಥೋತ್ಸವ ಸ್ಥಗಿತ
ಹಿರಿಯ-ಕಿರಿಯ ಶ್ರೀಗಳ ಗುದ್ದಾಟಕ್ಕೆ ಶಿವಾನಂದ ಮಠದ ಅಡ್ಡ ಪಲ್ಲಕ್ಕಿ ಉತ್ಸವ, ರಥೋತ್ಸವ ಸ್ಥಗಿತ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: Rakesh Nayak Manchi

Updated on: Mar 09, 2024 | 5:06 PM

ಗದಗ, ಮಾ.9: ನಗರದ (Gadag) ಶಿವಾನಂದ ಮಠದಲ್ಲಿ (Shivanand Math) ಉಭಯ ಶ್ರೀಗಳ ಪೀಠ ಗುದ್ದಾಟಕ್ಕೆ ಜಾತ್ರೆಯೇ ಸ್ಥಗಿತಗೊಂಡಿದೆ. ಇಂದು ಸಂಜೆ ನಡೆಯಬೇಕಿದ್ದ ರಥೋತ್ಸವ, ಅಡ್ಡ ಪಲ್ಲಕ್ಕಿ ಉತ್ಸವ ಸ್ಥಗಿತಗೊಂಡಿದ್ದು, ಗದಗ ತಹಶೀಲ್ದಾರ್ ಅವರು ನಿಷೇಧಾಜ್ಞೆ ಜಾರಿ ಮಾಡಿ ಆದೇಶಿಸಿದ್ದಾರೆ. ಹಿರಿಯ ಸ್ವಾಮೀಜಿ ಅಭಿನವ ಶಿವಾನಂದ ಶ್ರೀ ಮತ್ತು ಕಿರಿಯ ಸ್ವಾಮೀಜಿ ಸದಾಶಿವಾನಂದ ಭಾರತಿ‌ ಶ್ರೀ ನಡುವಿನ ಗುದ್ದಾಟಕ್ಕೆ ಭಕ್ತರು ಆಕ್ರೋಶ ಹೊರಹಾಕಿದ್ದಾರೆ.

ಶಿವರಾತ್ರಿ ಮರುದಿನ ಅಂದರೆ ಇಂದು ಗದಗ ಶಿವಾನಂದ ಮಠದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿತ್ತು. ಕಳೆದ 104 ವರ್ಷಗಳಿಂದ ಅದ್ದೂರಿಯಾಗಿ ಅಡ್ಡ ಪಲ್ಲಕ್ಕಿ, ರಥೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಾ ಬಂದಿವೆ. ಮಾಹಾಮಾರಿ ಕೋವಿಡ್ ಸಮಯದಲ್ಲಿ ಕೂಡಾ ಈ ಜಾತ್ರಾ ಮಹೋತ್ಸವ ನಡೆದುಕೊಂಡು ಬಂದಿದೆ. ಆದರೆ ಈ ಬಾರಿ ಉಭಯ ಶ್ರೀಗಳ ಪೀಠಕ್ಕಾಗಿ ನಡೆಯುತ್ತಿರುವ ಹಗ್ಗ ಜಗ್ಗಾಟಕ್ಕೆ ಅಡ್ಡ ಪಲ್ಲಕ್ಕಿ, ರಥೋತ್ಸವವೇ ರದ್ದಾಗಿದೆ.

ಗದಗದ ಶ್ರೀ ಶಿವಾನಂದ ಮಠದ ಜಾತ್ರೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಹಿರಿಯ ಶ್ರೀ ಅಭಿನವ ಶಿವಾನಂದ ಸ್ವಾಮೀಜಿ ಹಾಗೂ ಕಿರಿಯ ಶ್ರೀ ಸದಾಶಿವಾನಂದ ಭಾರತಿ ಸ್ವಾಮೀಜಿಗಳ ನಡುವೆ ಪೀಠಕ್ಕಾಗಿ ಸಮರವೇ ಆರಂಭವಾಗಿತ್ತು. ನಿನ್ನೆಯವರಿಗೆ ಹತ್ತಾರು ಸಭೆಗಳನ್ನು ಮಾಡಿ, ಮನವೊಲಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಉಭಯ ಶ್ರೀಗಳು ತಮ್ಮ ಹಠವನ್ನು ಸಾಧಿಸಿದ್ದಾರೆ. ಹೀಗಾಗಿ ತಹಶೀಲ್ದಾರ್ ಅವರು 144 ಕಲಂ ಜಾರಿ ಮಾಡಿದ್ದಾರೆ. ಹೀಗಾಗಿ ಕಿರೀಟ ಪೂಜೆ, ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ರದ್ದು ಮಾಡಲಾಗಿದೆ. ಜಾತ್ರೆ ಇದೇ ಎಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಉಭಯ ಶ್ರೀಗಳ ನಡೆಯಿಂದ ಜಾತ್ರೆ ರದ್ದು ಆಗಿರುವುದು ಬೇಸರವಾಗುತ್ತಿದೆ ಎಂದು ಭಕ್ತರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಬಾಲಕಿಗೆ ಲೈಂಗಿಕ ಕಿರುಕುಳ: ಪೋಕ್ಸೊ ಕೇಸ್​ನಡಿ ಕುಣಿಗಲ್ ವಿದ್ಯಾಚೌಡೇಶ್ವರಿ ಮಠದ ಪೀಠಾಧ್ಯಕ್ಷ, ಆಪ್ತ ಸಹಾಯಕ ಅರೆಸ್ಟ್​

ಶಿವಾನಂದ ಮಠಕ್ಕೆ ತನ್ನದೆಯಾದ ಇತಿಹಾಸಯಿದೆ. ನೂರಾರು ವರ್ಷಗಳಿಂದ ಜಾತ್ರಾ ಮಹೋತ್ಸವ ನಡೆದುಕೊಂಡು ಬಂದಿದೆ.‌ ಈ ಭಾರಿಯೂ ಗದಗ, ಕೊಪ್ಪಳ, ಹಾವೇರಿ, ಧಾರವಾಡ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ನಾನಾ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಆದರೆ, 144 ಕಲಂ ಜಾರಿ ಮಾಡಿ, ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಹೀಗಾಗಿ ಶ್ರೀ ನಡೆಯ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.

ಮಠದ ಆವರಣದಲ್ಲಿ ಭಕ್ತರ ಸಂಖ್ಯೆ ವಿರಳವಾಗಿದೆ. ಗುರುಗಳ ಸ್ಥಾನದಲ್ಲಿ ಇರಬೇಕಾದ ಸ್ವಾಮೀಜಿಗಳು ಹೀಗೆ ಜಗಳ ಮಾಡಿದರೆ ಹೇಗೆ ಎಂದು ಭಕ್ತರು ಪ್ರಶ್ನಿಸುತ್ತಿದ್ದಾರೆ. ಜಾತ್ರೆಯನ್ನು ರದ್ದು ಮಾಡಿದ್ದಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.‌ ಸ್ಥಳೀಯ ಭಕ್ತರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬಂದ ಭಕ್ತರಿಗೆ ಯಾವುದೇ ವಿಷಯ ಹೇಳದೆ ಜಾತ್ರೆ ರದ್ದು ಮಾಡಲಾಗಿದೆ. ಮಠದ ಒಳಗೆ ರಾಜಕೀಯ ಬಂದು, ಐತಿಹಾಸಿಕ ಹಿನ್ನಲೆ ಇರುವ ಜಾತ್ರೆಯನ್ನು ರದ್ದು ಮಾಡಿರುವುದು ಭಕ್ತರಿಗೆ ಬಹಳ ನಿರಾಸೆಯಾಗಿದೆ.

ಶಿವಾನಂದ ಮಠದ ಕೋಟ್ಯಾಂತರ ರೂಪಾಯಿ ಆಸ್ತಿಯಿದೆ. ಹೀಗಾಗಿ ಮಠದ ಒಳಗಡೆ ರಾಜಕೀಯ ಎಂಟ್ರಿ ಆಗಿದ್ದಕ್ಕೆ ಜಾತ್ರೆ ರದ್ದಾಗಿದೆ ಎಂದು ಭಕ್ತರು ಕಿಡಿಕಾರಿದರು. ಒಟ್ಟಾರೆಯಾಗಿ, ಉಭಯ ಶ್ರೀಗಳ ಪೀಠ ಕಿತ್ತಾಟಕ್ಕೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯ, ರಥೋತ್ಸವ ರದ್ದಾಗಿದೆ. ಹೀಗಾಗಿ ಅಸಂಖ್ಯಾತ ಭಕ್ತರಿಗೆ ಸಾಕಷ್ಟು ನೋವು, ನಿರಾಸೆಯಾಗಿದೆ. ಇನಾದರೂ ಲಿಂಗೈಕ್ಯ ಶ್ರೀ ಶಿವಾನಂದ ಸ್ವಾಮೀಜಿ, ಉಭಯ ಶ್ರೀಗಳಿಗೆ ಒಳ್ಳೆಯ ಬುದ್ದಿ ನೀಡಲಿ ಎಂದು ಭಕ್ತರೆ ಪ್ರಾರ್ಥನೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ