AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women’s Day: ಗದಗದಲ್ಲೊಬ್ಬರು ಪುರುಷರೂ ನಾಚುವಂತೆ ಎಲೆಕ್ಟ್ರಿಕ್ ವಸ್ತುಗಳ ರಿಪೇರಿ ಮಾಡುವ ಸಾಧಕಿ

International Women’s Day 2024: ಕರ್ನಾಟಕದಲ್ಲಿಯೂ ಅನೇಕ ಸಾಧಕ ಮಹಿಳೆಯರಿದ್ದಾರೆ. ಸಣ್ಣಪುಟ್ಟ ವ್ಯವಹಾರಗಳಿಂದ ತೊಡಗಿ ದೊಡ್ಡ ಉದ್ಯಮಗಳನ್ನು ಸ್ಥಾಪಿಸಿ ನೂರಾರು ಮಂದಿಗೆ ಕೆಲಸ ಕೊಡುವಂಥ ಸಾಧಕಿಯರೂ ರಾಜ್ಯದಲ್ಲಿದ್ದಾರೆ. ಗದಗ ನಗರದಲ್ಲಿ ಎಲೆಕ್ಟ್ರಿಕ್ ವಸ್ತುಗಳ ರಿಪೇರಿ ಕೆಲಸವನ್ನು ಮಾಡಿ ಸ್ವಾವಲಂಬಿ ಜೀವನ ನಡೆಸುತ್ತಿರುವ ಮಹಿಳೆಯೊಬ್ಬರ ಪರಿಚಯ ಇಲ್ಲಿದೆ.

Women's Day: ಗದಗದಲ್ಲೊಬ್ಬರು ಪುರುಷರೂ ನಾಚುವಂತೆ ಎಲೆಕ್ಟ್ರಿಕ್ ವಸ್ತುಗಳ ರಿಪೇರಿ ಮಾಡುವ ಸಾಧಕಿ
ಬೀಬಿಜಾನ್ ನಧಾಪ್ ಎ.
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Mar 08, 2024 | 2:30 PM

Share

ಗದಗ, ಮಾರ್ಚ್​ 8: ಆಕೆ ಓದಿದ್ದು ಎಂಟನೇ ತರಗತಿ. ಆದರೆ ಯಾವುದೇ ಡಿಪ್ಲೊಮಾ, ಐಟಿಐ ಮಾಡಿದವರಿಂತ ಏನೂ ಕಡಿಮೆ ಇಲ್ಲ. ಕಷ್ಟದ ಎಲೆಕ್ಟ್ರಿಕ್ ವಸ್ತುಗಳ ರಿಪೇರಿ ಕೆಲಸವನ್ನ ಸುಲಭವಾಗಿ ಮಾಡಿಬಿಡುತ್ತಾರೆ. ಕಳೆದ 13 ವರ್ಷಗಳಿಂದ ಎಲೆಕ್ಟ್ರಿಕ್ ವಸ್ತುಗಳ ರಿಪೇರಿ ಮಾಡುತ್ತಿದ್ದಾರೆ. ತಾಯಿಯ ಸಾಕಿ ಸಲಹಬೇಕೆಂಬ ಹಂಬಲದಿಂದ ಸ್ವಾವಲಂಬನೆಯ ಜೀವನ ಸಾಗಿಸುತ್ತಿರುವ ಮಹಿಳೆಯ ಹೆಸರು ಬೀಬಿಜಾನ್ ನಧಾಪ್ ಎ. ಇವರು ಇದು ಗದಗ (Gadag) ನಗರದ ಉಷಾ ಎಲೆಕ್ಟ್ರಿಕ್ಸ್ ಆ್ಯಂಡ್ ಸರ್ವಿಸ್ ಸೆಂಟರ್​​​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ 13 ವರ್ಷಗಳಿಂದ ಉಷಾ ಎಲೆಕ್ಟ್ರಿಕ್​ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಗದಗ ತಾಲೂಕಿನ ಅಡವಿಸೋಮಾಪೂರದ ನಿವಾಸಿಯಾಗಿರುವ ಬೀಬಿಜಾನ್ ನಧಾಪ್ ಬಡತನ ಕುಟುಂಬದಲ್ಲಿ ಜನಿಸಿದವರಾಗಿದ್ದು, ಕುಟುಂಬಕ್ಕೆ ಆಸರೆಯಾಗಬೇಕಿದ್ದ ತಂದೆಯನ್ನೂ ಸಹ ಕಳೆದುಕೊಂಡು, ಸದ್ಯ ಆತ್ಮವಿಶ್ವಾಸದ ಜೀವನವನ್ನು ಸಾಗಿಸುತ್ತಿದ್ದಾರೆ.

ಬೇಬಿಜಾನ್​ನ ನಾಲ್ಕು ಜನ ಸಹೋದರಿಯರು ಮದುವೆಯಾಗಿದ್ದಾರೆ. ಇನ್ನು ಬೀಬಿಜಾನ್ ತಾಯಿ ವೃಷ್ಣಬಿಗೆ ಈಗಾಗಲೇ 80 ಕ್ಕೂ ಹೆಚ್ಚು ವಯಸ್ಸು ಆಗಿದೆ. ಹೀಗಾಗಿ ಇಡೀ ಮನೆತನದ ಜವಾಬ್ದಾರಿ ಹೊತ್ತಿರುವ ಬೀಬಿಜಾನ್, ಜೀವನ ಸಾಗಿಸಲು ಏನಾದರೂ ಕೆಲಸ ಮಾಡಬೇಕೆಂದು ಅಂದುಕೊಂಡಾಗ ಗದಗದ ಉಷಾ ಎಲೆಕ್ಟ್ರಿಕ್ ಸರ್ವಿನ್ ಮಾಲೀಕರು ಕೆಲಸ ಕೊಟ್ಟಿದ್ದಾರೆ. ಶ್ರದ್ಧೆಯಿಂದ ಎಲೆಕ್ಟ್ರಿಕ್ ವಸ್ತುಗಳ ರಿಪೇರಿ ಮಾಡೋದನ್ನು ಕಲಿತ್ತಿದ್ದಾರೆ. ಇಲೆಕ್ಟ್ರಿಕ್ ವಸ್ತುಗಳಾದ ಫ್ಯಾನ್, ಪಂಪ್ ಮೋಟರ್, ರಿವೈಂಡಿಗ್ ಅಷ್ಟೇ ಅಲ್ದೆ ಎಂತಹದೇ ಎಲೆಕ್ಟ್ರಿಕ್ ವಸ್ತುಗಳು ಇರಲಿ, ಎಲ್ಲವನ್ನೂ ಥಟ್ಟ ಅಂತ ರಿಪೇರಿ ಮಾಡುತ್ತಾರೆ.

ಇತರ ಅನೇಕ ಮಹಿಳೆಯರಂತೆ ಬೀಬಿಜಾನ್ ಸಹ ತನ್ನ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಬೀಬಿಜಾನ್​​ಗೆ ಎಲೆಕ್ಟ್ರಿಕ್ ಕೆಲಸವು ಸ್ವಾವಲಂಬನೆಯ ಜೀವನ ಸಾಗಿಸಲು ಅನುವು ಮಾಡಿಕೊಟ್ಟಿದೆ.

ಇಂದು ವಿಶ್ವ ಮಹಿಳಾ ದಿನ

ಇಂದು (ಮಾರ್ಚ್ 8) ವಿಶ್ವದಾದ್ಯಂತ ಮಹಿಳಾ ದಿನ ಆಚರಿಸಲಾಗುತ್ತಿದೆ. ಇದು ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗುರುತಿಸುವ ಜಾಗತಿಕ ದಿನವಾಗಿದೆ. ಈ ದಿನವು ಲಿಂಗ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಆರಂಭವಾಗಿದೆ. ಈ ದಿನ ಮಹಿಳೆಯರು ಮಾಡಿದ ಸಾಧನೆಗಳು ಮತ್ತು ಅವರ ಪ್ರಗತಿಯ ಸಂಭ್ರಮವನ್ನು ಆಚರಿಸುವುದಲ್ಲದೆ, ಸಮಾನತೆಗಾಗಿ ನಡೆಯುತ್ತಿರುವ ಹೋರಾಟಗಳನ್ನು ಮತ್ತು ಆ ಕುರಿತ ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: ಮದುವೆಯಾಗಿ ಆಗಷ್ಟೇ 7 ತಿಂಗಳ ಗರ್ಭಿಣಿ, ಗಂಡ ವಿಧಿವಶವಾದಾಗ ಬದುಕು ಆಕೆಗೆ ಪಾಠ ಕಲಿಸಿತ್ತು! ಇಂದು ಅಮೆರಿಕನ್ನರ ಮೆಚ್ಚುಗೆ ಗಳಿಸಿದ್ದಾರೆ!

2024 ರ ಮಹಿಳಾ ದಿನಾಚರಣೆಗೆ ‘ಮಹಿಳೆಯರಲ್ಲಿ ಹೂಡಿಕೆ ಮಾಡಿ: ಪ್ರಗತಿಯನ್ನು ವೇಗಗೊಳಿಸಿ’ ಎಂಬ ಧ್ಯೇಯವಾಕ್ಯವನ್ನು ವಿಶ್ವಸಂಸ್ಥೆಯು ಗೊತ್ತುಪಡಿಸಿದೆ. ಈ ವರ್ಷದ ಅಭಿಯಾನದ ಧ್ಯೇಯ ‘ಇನ್‌ಸ್ಪೈರ್ ಇನ್‌ಕ್ಲೂಷನ್’ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್