ಗದಗ: ಶಿಕ್ಷಣ ಪಡೆಯಲು ವಿದ್ಯಾರ್ಥಿಗಳ ಪರದಾಟ; ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಪೋಷಕರು ಕಿಡಿ

TV9 Digital Desk

| Edited By: sandhya thejappa

Updated on: Sep 02, 2021 | 4:10 PM

ಹೈತಾಪೂರದಿಂದ ನಾಲ್ಕೈದು ಕಿಲೋಮೀಟರ್ ನಡೆದುಕೊಂಡು ಹೋಗಿ ಬರಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳದ್ದು. ವೆಂಕಟಾಪೂರದಿಂದ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೂ ಕೂಡ ಶಿಕ್ಷಣಕ್ಕಾಗಿ ಪಾದಯಾತ್ರೆಯೇ ಗತಿಯಾಗಿದೆ.

ಗದಗ: ಶಿಕ್ಷಣ ಪಡೆಯಲು ವಿದ್ಯಾರ್ಥಿಗಳ ಪರದಾಟ; ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಪೋಷಕರು ಕಿಡಿ
ನಾಲ್ಕೈದು ಕಿಲೋಮೀಟರ್ ನಡೆದು
Follow us

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಯಕಲಸಾಪೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಹೀಗಾಗಿ ಇದು ಸರ್ಕಾರಿ ಶಾಲೆ ಆಗಿದ್ದರೂ ಸುತ್ತಮುತ್ತಲಿನ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಈ ಹೈಸ್ಕೂಲ್ ಬೇಕು. ಆದರೆ ಸುತ್ತಲಿನ ಗ್ರಾಮದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ನಿತ್ಯ ನಾಲ್ಕೈದು ಕಿಲೋಮೀಟರ್ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿರುವುದು ಮಾತ್ರ ವಿಪರ್ಯಾಸವಾಗಿದೆ.

ಜಿಲ್ಲೆಯ ಮುಂಡರಗಿ ತಾಲೂಕಿನ ಯಕಲಸಾಪೂರ ಗ್ರಾಮದ ಸರ್ಕಾರಿ ಪ್ರೌಢ ಶಿಕ್ಷಣಕ್ಕಾಗಿ ಕಿಲೋಮೀಟರ್ ಗಟ್ಟಲೆ ವಿದ್ಯಾರ್ಥಿಗಳ ಪಾದಯಾತ್ರೆ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಸ್ಥಿತಿ ಕಂಡು ಮಮ್ಮಲ ಪಾಲಕರು ಮರಗುತ್ತಿದ್ದಾರೆ. ಶಾಲಾ ಅವಧಿಗೆ ಬಸ್ ಬಿಡಿ ಅಂತ ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ. ಈ ಶಾಲೆಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಹೈತಾಪೂರ ಗ್ರಾಮದಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು, ವೆಂಕಟಾಪೂರ ಗ್ರಾಮದಿಂದ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಗೆ ಬರುತ್ತಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ ನಿತ್ಯ ಶಿಕ್ಷಣ ಪಡೆಯುವುದು ಸವಾಲಿನ ವಿಷಯವಾಗಿದೆ.

ಹೈತಾಪೂರದಿಂದ ನಾಲ್ಕೈದು ಕಿಲೋಮೀಟರ್ ನಡೆದುಕೊಂಡು ಹೋಗಿ ಬರಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳದ್ದು. ವೆಂಕಟಾಪೂರದಿಂದ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೂ ಕೂಡ ಶಿಕ್ಷಣಕ್ಕಾಗಿ ಪಾದಯಾತ್ರೆಯೇ ಗತಿಯಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಅನ್ನೋದು ಶಿಕ್ಷೆ ಆಗಿದೆ. ಲಾಕ್​ಡೌನ್​ನಲ್ಲಿ ಬಸ್ ಸಂಚಾರ ಬಂದ್ ಆಗಿದ್ದು, ಇನ್ನೂ ಆರಂಭವಾಗಿಲ್ಲ. ಹೀಗಾಗಿ ಮಕ್ಕಳು ನಡೆದುಕೊಂಡು ಬರುವ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಅಂತ ಶರಣಯ್ಯ ಹಿರೇಮಠ ಒತ್ತಾಯಿಸಿದ್ದಾರೆ.

ಶಾಲೆಯ ಸಮಯಕ್ಕೆ ಬಸ್ ಸೌಲಭ್ಯವಿತ್ತು. ಆದರೆ ಕೊರೊನಾದಿಂದಾಗಿ ಲಾಕ್​ಡೌನ್​ ಘೋಷಣೆ ಮಾಡಿದ ನಂತರ ಬಸ್ ವ್ಯವಸ್ಥೆಯೇ ಇಲ್ಲ. ಗದಗ ಘಟಕದಿಂದ ಬೆಳಿಗ್ಗೆ ಶಾಲೆಯ ಅವಧಿಗೆ ಬಸ್ ಓಡಿಸಲಾಗುತ್ತಿತ್ತು. ಇದು ವಿದ್ಯಾರ್ಥಿಗಳಿಗಷ್ಟೆ ಅಲ್ಲದೇ ಶಿಕ್ಷಕರಿಗೂ ಅನುಕೂಲವಾಗಿತ್ತು. ಆದರೆ ಇದೀಗ ಶಿಕ್ಷಕರು ಕೂಡ ಪರದಾಡುವಂತಾಗಿದೆ. ಇದರಿಂದ ಶಿಕ್ಷಣ ಪಡೆಯುವುದು ಕಷ್ಟವಾಗುತ್ತಿದೆ. ನಮಗೆ ಬಸ್ ಸೌಲಭ್ಯ ಒದಗಿಸಿಕೊಡಿ ಎನ್ನುವುದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಆದರೆ ಈ ಬಗ್ಗೆ ಮುಂಡರಗಿ ತಾಲೂಕಿನ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ ಅಂತ ಪೋಷಕರು ಕಿಡಿಕಾರಿದ್ದಾರೆ.

ಮೊದಲು ಬಸ್ ವ್ಯವಸ್ಥೆ ಇತ್ತು ಹೀಗಾಗಿ ಬೆಳಗ್ಗೆ 8 ಗಂಟೆಗೆ ಬರುತ್ತಿದ್ದೇವು. ಆದರೆ ಈಗ ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ ನಾಲ್ಕೈದು ಕಿಲೋಮೀಟರ್ ದೂರ ನಡೆದು ಬರುತ್ತಿದ್ದೇವೆ. ಹೀಗಾಗಿ ಸಾರಿಗೆ ಇಲಾಖೆ, ಜಿಲ್ಲಾಡಳಿತ ಬಸ್ ವ್ಯವಸ್ಥೆ ಮಾಡಬೇಕು ಅಂತ ವಿದ್ಯಾರ್ಥಿನಿ ಅನುಸೂಯಾ ಒತ್ತಾಯಿಸಿದ್ದಾಳೆ.

ಇದನ್ನೂ ಓದಿ

ಪೌರ ಕಾರ್ಮಿಕರಿಗೆ ಸದ್ಯದಲ್ಲೇ ಕೈಮಗ್ಗದ ಸಮವಸ್ತ್ರ; ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಹೊಸ ಪ್ರಯೋಗ

ಜಲ್ಲಿಕಟ್ಟು ಕ್ರೀಡೆಯಲ್ಲಿ ವಿದೇಶಿ ತಳಿಗಳ ಎತ್ತುಗಳನ್ನು ಬಳಸುವಂತಿಲ್ಲ: ಮದ್ರಾಸ್​ ಹೈಕೋರ್ಟ್ ಆದೇಶ

(Students are walking from five kilometers to government high school in Yakalasapura village of gadag)

ತಾಜಾ ಸುದ್ದಿ

Related Stories

Click on your DTH Provider to Add TV9 Kannada