ಸಮಸ್ಯೆ ಆಲಿಸದ ಡಿಸಿಎಂ ಕಾರಜೋಳ ವಿರುದ್ಧ ವಿದ್ಯಾರ್ಥಿನಿಯರ ಕಿಡಿ

ಸಮಸ್ಯೆ ಆಲಿಸದ ಡಿಸಿಎಂ ಕಾರಜೋಳ ವಿರುದ್ಧ ವಿದ್ಯಾರ್ಥಿನಿಯರ ಕಿಡಿ

ಗದಗ: ಡಿಸಿಎಂ ಗೋವಿಂದ ಕಾರಜೋಳ ವಿರುದ್ಧ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೂತನ ವಸತಿ ನಿಲಯ ಉದ್ಘಾಟನೆಗೆ ಬಂದಿದ್ದ ಡಿಸಿಎಂ ಕಾರಜೋಳ ವಿದ್ಯಾರ್ಥಿನಿಯರ ಗೋಳು ಕೇಳದೆ ಅಲ್ಲಿಂದ ಹೊರಟು ಹೋಗಿದ್ದಾರೆ.

ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರು ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕಾಲೇಜ್​ಗೂ ವಸತಿ ನಿಲಯಕ್ಕೂ 7 ಕಿ.ಮೀ ಅಂತರ ಇದೆ. ಕೂಡಲೇ ಬಸ್ ಸೌಲಭ್ಯ ಕಲ್ಪಿಸಬೇಕೆಂದು ವಿದ್ಯಾರ್ಥಿನಿಯರು ಮನವಿ ಮಾಡಿದ್ದಾರೆ. ಆದರೆ ಡಿಸಿಎಂ ಇವರ ಬೇಡಿಕೆಗೆ ಕಿವಿಕೊಡದೆ ಕೇಳಿಯೂ ಕೇಳಿಸದಂತೆ ಹೊರಟು ಹೋಗಿದ್ದಾರೆ.

Click on your DTH Provider to Add TV9 Kannada