ಗದಗ: ಪಂಚಪೀಠಾಧಿಪತಿಗಳ ವಿರುದ್ಧ ವಚನಾನಂದ ಸ್ವಾಮೀಜಿ ಆಕ್ರೋಶ, ವಿಡಿಯೋ ವೈರಲ್
ಪಂಚಪೀಠಗಳ ಸ್ವಾಮೀಜಿಗಳನ್ನು ಪಲ್ಲಕ್ಕಿ ಮೆರವಣಿಗೆ ಮಾಡಿದ್ದೀವಿ. ಆ ಮಠಗಳು ಕಟ್ಟಿರುವ ಶಿಕ್ಷಣ ಸಂಸ್ಥೆಗಳಿಗೆ ದಾನ ಮಾಡಿದ್ದೇವೆ. ಅಷ್ಟೇ ಅಲ್ಲದೇ ಅವರೇ ನಮ್ಮ ಗುರುಗಳು ಎಂದು ತಿಳಿದುಕೊಂಡಿದ್ದೆವು ಆದರೂ ಅವರು ನಾವು ಬೇಡ ಜಂಗಮರು SC ಸರ್ಟಿಫಿಕೆಟ್ ಕೊಡಿ ಎಂದು ಕೇಳಿದ್ದಾರೆ ಎಂದು ವಚನಾನಂದ ಸ್ವಾಮೀಜಿ ಆಕ್ರೋಶ ಹೊರ ಹಾಕಿದ್ದಾರೆ.
ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನಡೆದ ಭಕ್ತರ ಸಭೆಯಲ್ಲಿ ಪಂಚಪೀಠಾಧಿಪತಿಗಳ ವಿರುದ್ಧ ವಚನಾನಂದ ಸ್ವಾಮೀಜಿ(Vachanananda Swamiji) ಆಕ್ರೋಶ ಹೊರ ಹಾಕಿದ್ದಾರೆ. ಪಂಚಪೀಠಾಧಿಗಳ ವಿರುದ್ಧ ಮಾತ್ ಮಾತಲ್ಲೂ ಹರಿಹಾಯ್ದ ವಿಡಿಯೋ ಈಗ ಫುಲ್ ವೈರಲ್ ಆಗಿದೆ.
ನಾಡಿನಲ್ಲಿ 3-4 ಸಾವಿರ ಮಠಗಳು ಇದ್ದವು. ಎಲ್ಲ ಮಠಗಳ ಶ್ರೀಗಳು ಇದ್ರು. ಅವ್ರಿಗೆ ದವಸ ಧಾನ್ಯ ನೀಡ್ತಾಯಿದ್ವಿ. ಪಂಚಪೀಠಗಳ ಸ್ವಾಮೀಜಿಗಳನ್ನು ಪಲ್ಲಕ್ಕಿ ಮೆರವಣಿಗೆ ಮಾಡಿದ್ದೀವಿ. ಆ ಮಠಗಳು ಕಟ್ಟಿರುವ ಶಿಕ್ಷಣ ಸಂಸ್ಥೆಗಳಿಗೆ ದಾನ ಧರ್ಮ ಮಾಡಿದ್ದೇವೆ. ಅಷ್ಟೇ ಅಲ್ಲದೇ ಅವರೇ ನಮ್ಮ ಗುರುಗಳು ಎಂದು ತಿಳಿದುಕೊಂಡಿದ್ದೆವು. ಅಂದ ಮೇಲೆ ಮತ್ತೇಕೆ ಪಂಚಮಸಾಲಿ ಪೀಠ ಮಾಡಬೇಕಿತ್ತು. ಯಾವ ಅವಶ್ಯಕತೆ ಇತ್ತು. ಯಾಕೇ ಪಂಚಮಸಾಲಿ ಜಗದ್ಗುರು ಪೀಠ ಆಯ್ತು. ಆಗಲಿಕ್ಕೇ ಕಾರಣ ಏನೂ ನಿಮಗೆ ಮಾಹಿತಿ ಇರಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಶ್ರೀಗಳು ಪಂಚಮಸಾಲಿ ಜಗದ್ಗುರು ಪೀಠ ಸ್ಥಾಪನೆಯ ಗುಟ್ಟು ಹೊರಹಾಕಿದ್ದಾರೆ.
ಮೀಸಲಾತಿಗಾಗಿಯೇ ಪಂಚಮಸಾಲಿ ಜಗದ್ಗುರು ಪೀಠ ಸ್ಥಾಪನೆ ಆಗಿದ್ದು
2003ರಲ್ಲಿ ವಾಜಪೇಯಿ ಪ್ರಧಾನಿ ಆಗಿದ್ರು, ಅಡ್ವಾನಿ ಉಪಪ್ರಧಾನಿ ಆಗಿದ್ರು. ಅಂದು ಐದು ಜನ ಜಗದ್ಗುರುಗಳು ಅವ್ರನ್ನು ಭೇಟಿಯಾಗಿ ಒಂದು ಮನವಿ ಮಾಡಿದ್ರು. ನಾವು ಬೇಡ ಜಂಗಮರು ಬೇಡಿಕೊಂಡು ತಿನ್ನುವರು. ನಮಗೆ ಎಸ್ಸಿ ಸರ್ಟಿಫಿಕೇಟ್ ಕೊಡಿ ಅಂತ ಕೇಳಿದ್ರು. ಅದು ಪತ್ರಿಕೆಗಳಲ್ಲಿ ಬಂತು. ಅಂದು ಪಂಚಮಸಾಲಿ ಮುಖಂಡರು ಯೋಚನೆ ಮಾಡಿದ್ರು. ನೀವು ಯಾವ ಆಧಾರದ ಮೇಲೆ ಎಸ್ಸಿ ಸರ್ಟಿಫಿಕೆಟ್ ಕೇಳ್ತೀರಾ? ನಿಮಗೆ ನಡೆದುಕೊಳ್ಳುವ ಭಕ್ತರು ನಾವು ಇದ್ದೇವೆ. ನಿಮಗೆ ಗುರುಗಳು ಅಂತ ಎತ್ತರದ ಮೇಲೆ ಕೂಡಿಸಿಕೊಂಡು ಪೂಜೆ ಪುನಸ್ಕಾರ ಮಾಡಿ ಆಶೀರ್ವಾದ ಪಡೆದುಕೊಳ್ತೀವಿ. ಇಂಥವರು ಹೇಗೆ ಎಸ್ಸಿ ಆಗ್ತೀರಿ ಎಂದು ಕೇಳಿದ್ರು. ದಾನಧರ್ಮ ಮಾಡೋರು ನಾವು ಭಕ್ತರು ಪಂಚಮಸಾಲಿಗಳು. ನಿಮ್ಮ ಮಠಕ್ಕೆ ಅಕ್ಕಿ, ಜೋಳ ಮನೆಯಲ್ಲಿ ಪ್ರತಿನಿತ್ಯ ಮೊದಲ ರೊಟ್ಟಿ ಮಠಕ್ಕೆ ಇಟ್ಟವ್ರು ನಾವು. ನಿಮ್ಮ ಶಿಕ್ಷಣ ಸಂಸ್ಥೆಗಳಿಗೆ ಸಾಕಷ್ಟು ಜಮೀನುಗಳು ದಾನ ಮಾಡಿದವ್ರು ನಾವು. ನೀವು ನಿಮ್ಮ ಜಾತಿಗಾಗಿ ಕೇಳಿದ್ರಿ. ಆದ್ರೆ, ಪಂಚಮಸಾಲಿ ಸಮುದಾಯಕ್ಕೆ ಭಕ್ತರಿಗಾಗಿ ಏನೂ ಕೇಳಿಲ್ಲ ಅಂತ ಪ್ರಶ್ನೆ ಬಂತು ಎಂದು ಪಂಚಪೀಠಗಳ ವಿರುದ್ಧ ವಚನಾನಂದ ಶ್ರೀಗಳು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ತಡೆಗೆ ಹೊಸ ಮಾರ್ಗ ಕಂಡುಹಿಡಿದ ಕೊಪ್ಪಳ ಎಸ್ಪಿ
ಅಂದು ಪಂಚ ಪೀಠಗಳಲ್ಲಿ ಎರಡು ಪೀಠಗಳನ್ನು ಪಂಚಮಸಾಲಿ ಸಮಾಜಕ್ಕೆ ನೀಡುವಂತೆ ಮನವಿ ಮಾಡಿದ್ವಿ. ಪಂಚಮಸಾಲಿ ಸಮಾಜದಲ್ಲಿ ಹುಟ್ಟಿದ ಸ್ವಾಮೀಗಳಿಗೆ ನೀಡುವಂತೆ ಮನವಿ ಮಾಡಲಾಗಿತ್ತು. ಕಾಯ, ವಚಾ, ಮನಸಾ, ಧರ್ಮ, ತತ್ವಜ್ಞಾನ ಹೊಂದಿರುವ ವ್ಯಕ್ತಿಯನ್ನು ಪೀಠಕ್ಕೆ ಮಾಡಿಕೊಳ್ಳುವಂತೆ ಹೇಳಿದ್ರು. ನೀವೆಲ್ಲಾ ಪೀಠಾಧ್ಯಕ್ಷರು ನಿಮ್ಮ ಜಾತಿಯಲ್ಲಿ ಹುಟ್ಟಿದವರನ್ನು ನಿಮ್ಮ ಸಂಬಂಧಿಕರನ್ನು ಪೀಠಕ್ಕೆ ಮಾಡಿಕೊಳ್ಳುತ್ತಿರಾ. ಪಂಚ ಪೀಠ ಜಗದ್ಗುರುಗಳು ಪಂಚಮಸಾಲಿ ಸಮಾಜಕ್ಕೆ ಬಿಟ್ಟುಕೊಡುವಂತೆ ಕೇಳಿದ್ರು. ಅದು ಸಾಧ್ಯವಿಲ್ಲ ಎಂದು ಪಂಚ ಪೀಠದ ಜಗದ್ಗುರು ಹೇಳಿದ್ರು. ಅಂದು ರಾಣೆಬೆನ್ನೂರಿನ ಕೊಡಿಗಾಳ ಹೊಸಪೇಟೆಯಲ್ಲಿ ಒಂದು ಮೀಟಿಂಗ್ ಆಗುತ್ತೇ. ಎಲ್ಲಾ ಪಂಚ ಪೀಠ ಜಗದ್ಗುರು ಹಾಗೂ ಭಕ್ತರು ಮೀಟಿಂಗ್ ಮಾಡ್ತಾರೆ. ಕೊಡುವುದಕ್ಕೆ ಬರವುದಿಲ್ಲ, ನೀವು ಜಗದ್ಗುರು, ಸ್ವಾಮೀಜಿ ಆಗಲು ಬರೋದಿಲ್ಲ ಅಂತಾ ಹೇಳಿದ್ರು.
ನಾವು ದಾನ ಮಾಡೋದಕ್ಕೆ ಬರುತ್ತೇ, ಮೆರವಣಿಯಲ್ಲಿ ಕುಡಿಸೋಕ್ಕೆ ಬರುತ್ತೇ ಸ್ವಾಮೀಗಳು ಆಗಲು ಯಾಕೇ ಬರಲ್ಲ ಎನ್ನುವ ಯೋಚನೆ ಮಾಡಲಾಯಿತು. ಆಗ ನಾವೇ ಒಂದು ಪ್ರತ್ಯೇಕ ಪಂಚಮಸಾಲಿ ಪೀಠವನ್ನು ಸ್ಥಾಪನೆ ಮಾಡ್ತಾರೆ. ಮಾಹಾಂತ ಶಿವಾಚಾರ್ಯ ನೇತೃತ್ವದಲ್ಲಿ, ರಾಜ್ಯಾದ್ಯಂತ ಸಾಕಷ್ಟು ಪ್ರತಿಭಟನೆ ಆಗುತ್ತೇ. ಬಿಎಸ್ ಯಡಿಯೂರಪ್ಪನವರು 2009 ರಲ್ಲಿ ಪಂಚಮಸಾಲಿ 3ಬಿ ಕೆಟಗೇರಿ ಕೊಡ್ತಾರೆ. ಆಗಲೇ ನಮ್ಮ ಸಮುದಾಯಕ್ಕೆ 2 ಎ ಮೀಸಲಾತಿ ಆಗಬೇಕು ಅಂತಾ ಇತ್ತು. ಮುಂದೆ ಬಂದಂತಹ ಸರ್ಕಾರಗಳು 2 ಎ ಮೀಸಲಾತಿ ನೀಡಲಿಲ್ಲ. ರಾಜ್ಯದ ನಾಯಕರು ವೀರಶೈವ ಲಿಂಗಾಯತ ಒಂದು ಎಂದು ಅಧಿಕಾರ ಚಲಾವಣೆ ಮಾಡ್ತಾಯಿದ್ರು. ಕಾಂಗ್ರೆಸ್ ಹಾಗೂ ಬಿಜೆಪಿ ಹೈಕಮಾಂಡಗಳಿಗೆ ಪಂಚಮಸಾಲಿ ಸಮುದಾಯದ ಬಗ್ಗೆ ಮನವರಿಕೆ ಮಾಡಲಾಯಿತು. ಹೋರಾಟದ ಪ್ರತಿಫಲವಾಗಿ ಪಂಚಮಸಾಲಿ ಸಮಾಜದ ಕುಲಶಾಸ್ತ್ರಅಧ್ಯಾಯನ ಮಾಡಲು ಹಿಂದುಳಿದ ವರ್ಗದ ಇಲಾಖೆ ಶಿಫಾರಸು ಮಾಡಲಾಯಿತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:07 am, Sat, 12 November 22