ನರಗುಂದಲ್ಲಿ ಮತ್ತೆ ಭೂಕುಸಿತ: ಗುಂಡಿಗೆ ಬಿದ್ದ ಅಂಗನವಾಡಿ ಸಹಾಯಕಿ ಬಚಾವ್

  • TV9 Web Team
  • Published On - 16:53 PM, 28 Feb 2020
ನರಗುಂದಲ್ಲಿ ಮತ್ತೆ ಭೂಕುಸಿತ: ಗುಂಡಿಗೆ ಬಿದ್ದ ಅಂಗನವಾಡಿ ಸಹಾಯಕಿ ಬಚಾವ್

ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮತ್ತೆ ಭೂಕುಸಿತವಾಗಿದೆ. ಇದರ ಪರಿಣಾಮ ಗುಂಡಿಯಲ್ಲಿ ಅಂಗನವಾಡಿ ಸಹಾಯಕಿಯೊಬ್ಬರು ಬಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನರಗುಂದ ಪಟ್ಟಣದಲ್ಲಿ ಭೂಕುಸಿತದ ಪ್ರಕರಣಗಳು ಹೆಚ್ಚಾಗುತ್ತಿವೆ. ಅಂಬೇಡ್ಕರ್ ಬಡಾವಣೆಯ ಅಂಗನವಾಡಿ ಕೇಂದ್ರದ ಮುಂದಿರುವ ನಳದಲ್ಲಿ ನೀರು ತುಂಬುವಾಗ ಭೂಕುಸಿತವಾಗಿ ಅಂಗನವಾಡಿ ಸಹಾಯಕಿ ಕಾಶವ್ವ ಬೆಟಗೇರಿ ಬಿದ್ದಿದ್ದಾರೆ. ತಕ್ಷಣ ಗಮನಿಸಿದ ಸ್ಥಳೀಯರು ಆಕೆಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.