ನಗರಸಭೆ ಮಾಜಿ ಅಧ್ಯಕ್ಷನ ವಿರುದ್ಧ ದಬ್ಬಾಳಿಕೆ ಆರೋಪ, ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಯುವಕ
ಜಮೀನು ವಿಚಾರವಾಗಿ ನಗರಸಭೆ ಮಾಜಿ ಅಧ್ಯಕ್ಷ ಪೀರಸಾಬ್ ಕೌತಳ ಹಾಗೂ ವೀರಯ್ಯ ನಡುವೆ ಗಲಾಟೆಯಾಗಿತ್ತು. ಪೀರಸಾಬ್ ಕೌತಳ ತಮ್ಮ ಅಧಿಕಾರ ಬಳಸಿ ವೀರಯ್ಯನಿಗೆ ಒಂದಲ್ಲ ಒಂದು ರೀತಿ ನಿರಂತರ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.
ಗದಗ: ನಗರಸಭೆ ಮಾಜಿ ಅಧ್ಯಕ್ಷನ ವಿರುದ್ಧ ದಬ್ಬಾಳಿಕೆ ಆರೋಪ ಕೇಳಿ ಬಂದಿದ್ದು ದಬ್ಬಾಳಿಕೆಗೆ ಬೇಸತ್ತ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ನಡೆದಿದೆ. ವೀರಯ್ಯ ಹಿರೇಮಠ(32) ಆತ್ಮಹತ್ಯೆ ಮಾಡಿಕೊಂಡವರು.
ಜಮೀನು ವಿಚಾರವಾಗಿ ನಗರಸಭೆ ಮಾಜಿ ಅಧ್ಯಕ್ಷ ಪೀರಸಾಬ್ ಕೌತಳ ಹಾಗೂ ವೀರಯ್ಯ ನಡುವೆ ಗಲಾಟೆಯಾಗಿತ್ತು. ಪೀರಸಾಬ್ ಕೌತಳ ತಮ್ಮ ಅಧಿಕಾರ ಬಳಸಿ ವೀರಯ್ಯನಿಗೆ ಒಂದಲ್ಲ ಒಂದು ರೀತಿ ನಿರಂತರ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಪೀರಸಾಬ್ ನೀಡುತ್ತಿದ್ದ ಕಿರುಕುಳ ತಾಳಲಾಗದೆ ಡೆತ್‌ನೋಟ್ ಬರೆದಿಟ್ಟು ವೀರಯ್ಯ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಆತ್ಮಹತ್ಯೆಗೂ ಮುನ್ನ ವೀರಯ್ಯ ಬರೆದಿಟ್ಟ ಡೆತ್‌ನೋಟ್ ಬಹಿರಂಗಪಡಿಸಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಆದ್ರೆ ಕುಟುಂಬ ಸದಸ್ಯರಿಗೂ ಡೆತ್ನೋಟ್ ತೋರಿಸದೆ ಮುಚ್ಚಿಡಲಾಗಿದೆ. ಹೀಗಾಗಿ ಪಿಎಸ್ಐ ರಾಜೇಶ್ ವಿರುದ್ಧ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೃತ ವೀರಯ್ಯ ತಮ್ಮ ಆತ್ಮಹತ್ಯೆಗೂ ಮುನ್ನ ಪೀರಸಾಬ್ ವಿರುದ್ಧ ಆಡಿಯೋ ರೆಕಾರ್ಡ್ ಮಾಡಿ ಫೇಸ್ಬುಕ್ನಲ್ಲಿ ಹರಿಬಿಟ್ಟಿದ್ದರು. ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಫಕೀರಯ್ಯ ಹಿರೇಮಠ ಕುಟುಂಬದಲ್ಲಿ ಜಮೀನು ವಿಷಯದಲ್ಲಿ ವ್ಯಾಜ್ಯ ಇತ್ತಂತೆ. ಹೀಗಾಗಿ ಇದನ್ನೆ ಬಂಡವಾಳ ಮಾಡಿಕೊಂಡ ನಗರಸಭೆ ಮಾಜಿ ಅಧ್ಯಕ್ಷ ಪೀರಸಾಬ್ ಕೋಟ್ಯಾಂತರ ಮೌಲ್ಯದ ಜಮೀನು ಕೇವಲ 10ಲಕ್ಷಕ್ಕೆ ಪಡೆದಿದ್ದಾನಂತೆ. ಈಗ ಫಕೀರಯ್ಯ ಹಿರೇಮಠ ಕುಟುಂಬಕ್ಕೆ ಉಳಿದಿದ್ದು ಮೂರು ಎಕರೆ ಜಮೀನು ಮಾತ್ರ ಆ ಜಮೀನು ಕೂಡ ಲಪಟಾಯಿಸಲು ಬೆದರಿಕೆ, ಕಿರುಕುಳ ನೀಡುತ್ತಿದ್ದಾನಂತೆ. ಹೀಗಾಗಿ ಪೀರಸಾಬ್ ಕೌತಾಳ ಎಂಬಾತನಿಂದ ತನಗಾದ ಅನ್ಯಾಯದ ಬಗ್ಗೆ ಸುದೀರ್ಘ ಆಡಿಯೋ ರಿಕಾರ್ಡ್ ಮಾಡಿ ಫೇಸ್ಬುಕ್ ಗೆ ಅಪ್ ಲೋಡ್ ಮಾಡಿದ್ದಾನೆ. ನಾನು ಸತ್ತ ಮೇಲೆ ಈ ನಾಯಕನಿಗೆ ತಕ್ಕ ಶೀಕ್ಷೆ ಆಗಬೇಕು ಅಂತ ಒತ್ತಾಯಿಸಿದ್ದಾನೆ. ನನಗೆ ಅಷ್ಟೇ ಅಲ್ಲಾ ಸಾಕಷ್ಟು ಜನ್ರಿಗೆ ಮೋಸ್ ಮಾಡಿದ್ದಾನೆ ಅಂತ ಆಡಿಯೋದಲ್ಲಿ ಹೇಳಿದ್ದಾನೆ. ಆತ ಪ್ರಭಾವಿ ಪೊಲೀಸ್ರು, ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಕೇಸ್ ಮುಚ್ಚಿ ಹಾಕ್ತಾನೆ. ಯಾವುದೇ ಕಾರಣಕ್ಕೆ ನನ್ನ ಜಮೀನು ಆತನ ಹೆಸರಿಗೆ ಆಗಬಾರ್ದು ಅಂತ ಆಡಿಯೋದಲ್ಲಿ ಹೇಳಿದ್ದಾನೆ. ಆದ್ರೆ, ಈ ಬಗ್ಗೆ ಮಾಜಿ ಅಧ್ಯಕ್ಷ ಪೀರಸಾಬ್ ಕೌತಾಳ ಅವ್ರನ್ನು ಕೇಳಿದ್ರೆ, ಆತನ ಸಾವಿಗೂ ನನಗೆ ಏನೂ ಸಂಬಂಧ ಇಲ್ಲ. ನನಗೆ ಜುಲೈ 18, 2019ರಂದು ಸರ್ವೇ ನಂಬರ್ 18/4 ರ 5 ಎಕರೆ, 32 ಗುಂಟೆ ಜಮೀನು 25ಲಕ್ಷ ರೂಪಾಯಿಗೆ ನನಗೆ ಆತ್ಮಹತ್ಯೆ ಮಾಡಿಕೊಂಡ ವಿರಯ್ಯ ಅವ್ರ ತಂದೆ ಫಕೀರಯ್ಯ ಹಿರೇಮಠ 5ಲಕ್ಷ ಮುಂಗಡ ಪಡೆದು ಬಾಂಡ್ ಮಾಡಿಕೊಟ್ಟಿದ್ದಾರೆ. ಆದ್ರೆ, 2021ರಲ್ಲಿ ಇದೇ ಇದೇ ಜಮೀನು ಪುತ್ರ ವೀರಯ್ಯ ಹಿರೇಮಠ ಅವ್ರ ಹೆಸ್ರಿಗೆ ಮಾಡಿದ್ದಾರೆ. ಅವ್ರೇ ನನಗೆ ಚಿಟಿಂಗ್ ಮಾಡಿದ್ದಾರೆ ಅಂತಾರೆ.
ಈತನ ತಂದೆ ಫಕೀರಯ್ಯ ಹಿರೇಮಠ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಈಗ ಒಬ್ಬನೇ ಮಗನನ್ನು ಕಳೆದುಕೊಂಡು ವೃದ್ಧ ದಂಪತಿ ಕಂಗಾಲಾಗಿದ್ದಾರೆ. ನನ್ನ ಮಗನ ಸಾವಿಗೆ ಕಾರಣವಾದ ಪೀರಸಾಬ್ ಕೌತಾಳಗೆ ಶಿಕ್ಷೆ ಆಗಬೇಕು ಅಂತ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ ಯುವಕ ಡೆತ್ ನೋಟ್ ಕೂಡ ಬರೆದಿಟ್ಟಿದ್ದಾನೆ. ಆದ್ರೆ, ಪೊಲೀಸ್ರು ಡೆತ್ ನೋಟ್ ಮುಚ್ಚಿಟ್ಟಿದ್ದಾರೆ. ಸ್ಥಳದಲ್ಲೇ ಡೆತ್ ನೋಟ್ ನಲ್ಲಿ ಏನಿದೇ ಅಂತ ಭಹಿರಂಗ ಮಾಡಿ ಅಂತ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಪಟ್ಟು ಹಿಡಿದ್ರು ಬೆಟಗೇರಿ ಪೊಲೀಸ್ರು ಮಾತ್ರ ಡೆತ್ ಭಹಿರಂಗ ಮಾಡಿಲ್ಲ. ಪಿಎಸ್ಐ ರಾಜೇಶ್ ನಡೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿದೆ. ಏನೇ ಇರಲಿ ಜಮೀನು ಲೂಟಿಗಾಗಿ ಅಮಾಯಕ ಯುವಕನಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಟಾರ್ಚರ್ ನೀಡಿದ್ದು ಮಾತ್ರ ವಿಪರ್ಯಸ. ಪೊಲೀಸ್ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ ಪ್ರಾಮಾಣಿಕ ತನಿಖೆ ಮಾಡಲಿ ಅನ್ನೋದು ಕುಟುಂಬಸ್ಥರ ಒತ್ತಾಯ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಕಾರು ಸಮೇತ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನ; ಇಬ್ಬರು ನೀರುಪಾಲು
Published On - 12:39 pm, Thu, 26 August 21