ಒಂದೇ ದಿನದಲ್ಲಿ ಬೆಂಗಳೂರಿನಲ್ಲಿ ಬರೋಬ್ಬರಿ 2ಲಕ್ಷಕ್ಕೂ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 08, 2024 | 3:42 PM

ಬೆಂಗಳೂರಿನ ಜನರು ಗೌರಿ-ಗಣೇಶ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದ್ದು, ಇದೀಗ ವಿಸರ್ಜನೆಗೂ ಮುಂದಾಗಿದ್ದಾರೆ. ಹೀಗಾಗಿ ನಿನ್ನೆ ಒಂದೇ ದಿನ ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ ಒಟ್ಟು 2 ಲಕ್ಷದ 17 ಸಾವಿರದ 6 ಗಣಪತಿ ಮೂರ್ತಿಗಳ ವಿಸರ್ಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.

ಒಂದೇ ದಿನದಲ್ಲಿ ಬೆಂಗಳೂರಿನಲ್ಲಿ ಬರೋಬ್ಬರಿ 2ಲಕ್ಷಕ್ಕೂ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನೆ
ಒಂದೇ ದಿನದಲ್ಲಿ ಬೆಂಗಳೂರಿನಲ್ಲಿ ಬರೋಬ್ಬರಿ 2ಲಕ್ಷಕ್ಕೂ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನೆ
Follow us on

ಬೆಂಗಳೂರು, ಸೆಪ್ಟೆಂಬರ್​ 08: ನಿನ್ನೆ ನಾಡಿನೆಲ್ಲಡೆ ಗಣೇಶ ಚತುರ್ಥಿ ಹಬ್ಬದ (Ganesh Chaturthi)
ಸಂಭ್ರಮ ಜೋರಾಗಿತ್ತು. ಸಿಲಿಕಾನ್ ಸಿಟಿಯಲ್ಲಿ ಅದ್ದೂರಿಯಿಂದ ಗಣೇಶ ಚತುರ್ಥಿಯನ್ನ ಬರಮಾಡಿಕೊಂಡಿದ್ದು, ನಿನ್ನೆ ಒಂದೇ ದಿನ ಬಿಬಿಎಂಪಿ 8 ವಲಯಗಳಲ್ಲಿ 2,17,006 ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗಿದೆ. ಕೆರೆಗಳು, ಕಲ್ಯಾಣಿ, ಮೊಬೈಲ್ ಟ್ಯಾಂಕರ್ ಸೇರಿ ಹಲವೆಡೆ ಗಣೇಶ ವಿಸರ್ಜನೆ ಮಾಡಲಾಗಿದೆ. ವಲಯವಾರು ಗಣಪನ ಮೂರ್ತಿಗಳ ವಿಸರ್ಜನೆ ಮಾಡಿರುವ ಬಗ್ಗೆ ಪಾಲಿಕೆ ಅಂಕಿ-ಅಂಶ ಬಿಡುಗಡೆಗೊಳಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿರುವ ವಿವರ:

  • ಪೂರ್ವ ವಲಯ: 40791
  • ಪಶ್ಚಿಮ ವಲಯ: 52429
  • ದಕ್ಷಿಣ ವಲಯ: 84149
  • ಬೊಮ್ಮನಹಳ್ಳಿ ವಲಯ: 3915
  • ದಾಸರಹಳ್ಳಿ ವಲಯ: 1719
  • ಮಹದೇವಪುರ ವಲಯ: 7229
  • ಆರ್.ಆರ್.ನಗರ ವಲಯ: 12680
  • ಯಲಹಂಕ ವಲಯ: 14094
  • ಒಟ್ಟು: 217006

ಗಣೇಶ ವಿಸರ್ಜನೆಗೆ ಮುಂದಾಗುತ್ತಿರುವ ಸಿಲಿಕಾನ್ ಮಂದಿ

ಸಿಲಿಕಾನ್ ಸಿಟಿಯಲ್ಲಿ ಅದ್ದೂರಿಯ ಗಣೇಶ ಹಬ್ಬ ಆಚರಿಸಲಾಗಿದ್ದು, ಹಬ್ಬ ಮಾಡಿ ಗಣೇಶ ವಿಸರ್ಜನೆಗೆ ಸಿಲಿಕಾನ್ ಮಂದಿ ಮುಂದಾಗುತ್ತಿದ್ದಾರೆ. ಗಣೇಶ ವಿಸರ್ಜನೆ ವೇಳೆ ಸಾಕಷ್ಟು ಪಿಒಪಿ ಗಣೇಶ ಮೂರ್ತಿಗಳು ಪತ್ತೆ ಆಗಿವೆ. ಪಿಒಪಿ ಗಣೇಶ ಮೂರ್ತಿಗಳನ್ನ ವಿಸರ್ಜನೆ ಮಾಡದೇ ಹಾಗೇಯೆ ಇಟ್ಟಿದ್ದು, ನಿನ್ನೆ ಒಂದೇ ದಿನ ಯಡಿಯೂರು ಕೆರೆ ಗೆ 200ಕ್ಕೂ ಹೆಚ್ಚು ಪಿಒಪಿ ಗಣೇಶ ಮೂರ್ತಿಗಳು ಬಂದಿದ್ದವು.

ಇದನ್ನೂ ಓದಿ: ಮನೆಮಂದಿಯೊಂದಿಗೆ ಗಣೇಶ ಹಬ್ಬ ಆಚರಿಸಿದ ರಾಜ್ಯ ರಾಜಕೀಯ ನಾಯಕರು: ಇಲ್ಲಿವೆ ಫೋಟೋಸ್​

ಇನ್ನು ನಗರದ ಹೆಬ್ಬಾಳ, ಸ್ಯಾಂಕಿ ಟ್ಯಾಂಕಿಯಲ್ಲಿ ಕೆರೆಯಗೆ ಸಾಕಷ್ಟು ಪಿಒಪಿ ಗಣೇಶ ಮೂರ್ತಿಗಳು ಬಂದಿದ್ದು
ಮೊದಲು ಮಣ್ಣಿನ ಗಣೇಶ, ಪೇಪರ್ ಗಣೇಶನನ್ನ ವಿಸರ್ಜನೆ ಮಾಡಿ ನಂತರ ಪಿಒಪಿ ವಿಸರ್ಜನೆಗೆ ಚಿಂತನೆ ಮಾಡಲಾಗುತ್ತಿದೆ.

ಪಿಒಪಿ ಗಣೇಶ ಮೂರ್ತಿಗಳ ಬಗ್ಗೆ ಸಿಲಿಕಾನ್ ಸಿಟಿ ಜನರು ಬೇಸರ

ಇನ್ನು ಪಿಒಪಿ ಗಣೇಶ ಮೂರ್ತಿಗಳ ಬಗ್ಗೆ ಸಿಲಿಕಾನ್ ಸಿಟಿ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಪಿಒಪಿ ಗಣೇಶ ಮೂರ್ತಿಗಳ ಬಗ್ಗೆ ಜಾಗೃತಿ ಹೆಚ್ಚಾಗಬೇಕು. ಪೂಜೆ ಮಾಡಿ ಗಣೇಶ ಮೂರ್ತಿಗಳನ್ನ ಸಾಕಷ್ಟು ಇಟ್ಟು ಹೋಗಿದ್ದಾರೆ. ಹಬ್ಬ ಒಂದೇ ದಿನಕ್ಕೆ ಸೀಮಿತವಾಗಬಾರದು. ನಾವು ಗಣೇಶನ ಮೇಲೆ‌ ಹಾಕಿದ ಹೂವನ್ನ ಎಸೆಯುವುದಕ್ಕು ಹಿಂದೆ ಮುಂದೆ ನೋಡುತ್ತೇವೆ. ಹೀಗಿರುವಾಗ ಮೂರ್ತಿಗಳನ್ನ ರಸ್ತೆಯಲ್ಲಿ ಬಿಟ್ಟು ಹೋದರೆ ನೋಡುವುದಕ್ಕೆ ತುಂಬ ಬೇಜಾರ್ ಆಗಾತ್ತೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.