ಉದ್ಯಮಿ ಮೋಹನ್ ದಾಸ್ ಪೈ ಭೇಟಿಯಾದ ಕೇಂದ್ರ ಸಚಿವ ಕುಮಾರಸ್ವಾಮಿ: ಮಹತ್ವದ ಚರ್ಚೆ

ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರು ರವಿವಾರ (ಸೆ.8) ಉದ್ಯಮಿ ಮೋಹನ್​ದಾಸ್​ ಪೈ ಭೇಟಿಯಾದರು. ಈ ಕುರಿತು ಹೆಚ್​ಡಿ ಕುಮಾರಸ್ವಾಮಿ ತಮ್ಮ ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ಪೋಸ್ಟ್​​ ಹಾಕಿಕೊಂಡಿದ್ದು, ಹಲವು ವಿಚಾರಗಳನ್ನು ಚರ್ಚಿಸಲಾಗಿದೆ ಎಂದಿದ್ದಾರೆ.

ಉದ್ಯಮಿ ಮೋಹನ್ ದಾಸ್ ಪೈ ಭೇಟಿಯಾದ ಕೇಂದ್ರ ಸಚಿವ ಕುಮಾರಸ್ವಾಮಿ: ಮಹತ್ವದ ಚರ್ಚೆ
ಉದ್ಯಮಿ ಮೋಹನ್​ದಾಸ್ ಪೈ ಜೊತೆಗೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ​
Follow us
|

Updated on:Sep 08, 2024 | 3:27 PM

ಬೆಂಗಳೂರು, ಸೆಪ್ಟೆಂಬರ್​ 08: ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಅವರು ರವಿವಾರ (ಸೆ.8) ಉದ್ಯಮಿ ಮೋಹನ್​ದಾಸ್​ ಪೈ (Mohandas Pai) ಭೇಟಿಯಾದರು. ಈ ಕುರಿತು ಹೆಚ್​ಡಿ ಕುಮಾರಸ್ವಾಮಿ ತಮ್ಮ ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ಪೋಸ್ಟ್​​ ಹಾಕಿಕೊಂಡಿದ್ದು, ಇಂದು ಉದ್ಯಮಿಗಳಾದ ಮೋಹನ್‌ದಾಸ್ ಪೈ, ಅಭಯ್ ಜೈನ್ ಮತ್ತು ಉಮಾಕಾಂತ್ ಸೋನಿ ಅವರನ್ನು ಭೇಟಿಯಾಗಿ ಹಲವು ವಿಚಾರಗಳನ್ನು ಚರ್ಚಿಸಲಾಯಿತು ಎಂದು ಬರೆದುಕೊಂಡಿದ್ದಾರೆ.

ರೊಬೊಟಿಕ್ಸ್ ಮತ್ತು ಉತ್ಪಾದನೆಯು ಕುರಿತಾಗಿ ಹಲವು ವಿಚಾರಗಳನ್ನು ಚರ್ಚಿಸಲಾಯಿತು. ಭವಿಷ್ಯದ ದಿನಗಳಲ್ಲಿ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕೈಗಾರಿಕೆ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಬಹುದು ಎಂಬುವುದರ ಕುರಿತಾಗಿ ಚರ್ಚಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಉಡುಗೊರೆಯಾಗಿ HMT ವಾಚ್​ನ್ನೇ ನೀಡಿ: ರಾಜ್ಯದ ಸಂಸದರಿಗೆ ಕುಮಾರಸ್ವಾಮಿ ಕರೆ

ಹೆಚ್​ಡಿ ಕುಮಾರಸ್ವಾಮಿ ಅವರು ಕೇಂದ್ರ ಕೈಗಾರಿಕಾ ಸಚಿವರಾದ ಬಳಿಕ, ದೇಶಿ ಉತ್ಪಾದನಾ ಸಂಸ್ಥಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದರ ಭಾಗವಾಗಿ ಇತ್ತೀಚಿಗೆ ಹೆಚ್​ಡಿ ಕುಮಾರಸ್ವಾಮಿ ಅವರು ಬೆಂಗಳೂರು, ಹೈದರಾಬಾದ್, ಅಜ್ಮೀರ್ ಮತ್ತು ಕೇರಳದ ಹೆಚ್‌ಎಂಟಿಯ ಎಲ್ಲ ಘಟಕಗಳಿಗೆ ಭೇಟಿ ನೀಡಿದ್ದರು.

ಭೇಟಿ ಬಳಿಕ ಹೆಚ್​ಡಿ ಕುಮಾರಸ್ವಾಮಿ, ಉಡುಗೊರೆಯಾಗಿ ಹೆಚ್​ಎಂಟಿ ಕಂಪನಿಯ ವಾಚ್​ನ್ನೇ ನೀಡಿ ಎಂದು ಕರ್ನಾಟಕ ಸಂಸದರಿಗೆ ಕರೆ ಕೊಟ್ಟರು. ಈ ಮೂಲಕ ಭಾರತೀಯ ಕಾರ್ಖಾನೆಗಳಿಗೆ ಮರು ಜೀವ ನೀಡಲು ಪಣ ತೊಟ್ಟಿದ್ದಾರೆ.

ಇದೇ ವರ್ಷ ಜೂನ್​ ತಿಂಗಳಲ್ಲಿ ಹೆಚ್​ಡಿ ಕುಮಾರಸ್ವಾಮಿ ಅವರು ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಭೇಟಿ ನೀಡಿ, ವಿಶ್ವೇಶ್ವರಯ್ಯ ಹೆಸರಿನ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಚಿಂತನೆ ಮಾಡುತ್ತೇನೆ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:25 pm, Sun, 8 September 24