Kannada News Photo gallery HD Kumaraswamy is an important step for the survival of century old Bhadravati Steel Plant Shivamogga News in Kannada
ಶತಮಾನದ ಇತಿಹಾಸವುಳ್ಳ ಭದ್ರಾವತಿ ಉಕ್ಕಿನ ಕಾರ್ಖಾನೆ ಉಳಿವಿಗೆ ಎಚ್ಡಿಕೆ ಮಹತ್ವದ ಹೆಜ್ಜೆ
ದಶಕಗಳಿಂದ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಗ್ರಹಣ ಹಿಡಿದಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಗ್ಗಜಗ್ಗಾಟದಲ್ಲಿ ದೇಶದ ಪ್ರತಿಷ್ಠಿತ ಕಾರ್ಖಾನೆಯ ಬಾಗಿಲು ಮುಚ್ಚುವ ಹಂತಕ್ಕೆ ಬಂದು ತಲುಪಿದೆ. ಸದ್ಯ ಭದ್ರಾವತಿಯ ವಿಐಎಸ್ಎಲ್ಗೆ ಈಗ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗುತ್ತಿದ್ದಂತೆ ಹೊಸ ಆಶಾಕಿರಣ ಸಿಕ್ಕಿದಂತಾಗಿದೆ. ಅದರಂತೆ ಅದರಂತೆ ಇಂದು(ಭಾನುವಾರ) ಖುದ್ದು ಕುಮಾರಸ್ವಾಮಿ ಅವರು ಭದ್ರಾವತಿಯ ವಿಐಎಸ್ಎಲ್ಗೆ ಭೇಟಿ ನೀಡಿ, ‘ವಿಶ್ವೇಶ್ವರಯ್ಯ ಹೆಸರಿನ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಚಿಂತನೆ ಮಾಡುತ್ತೇನೆ ಎಂದರು.
ದಶಕಗಳಿಂದ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಗ್ರಹಣ ಹಿಡಿದಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಗ್ಗಜಗ್ಗಾಟದಲ್ಲಿ ದೇಶದ ಪ್ರತಿಷ್ಠಿತ ಕಾರ್ಖಾನೆಯ ಬಾಗಿಲು ಮುಚ್ಚುವ ಹಂತಕ್ಕೆ ಬಂದು ತಲುಪಿದೆ. ಸದ್ಯ ಭದ್ರಾವತಿಯ ವಿಐಎಸ್ಎಲ್ಗೆ ಈಗ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗುತ್ತಿದ್ದಂತೆ ಹೊಸ ಆಶಾಕಿರಣ ಸಿಕ್ಕಿದಂತಾಗಿದೆ.
1 / 6
ಅದರಂತೆ ಇಂದು(ಭಾನುವಾರ) ಖುದ್ದು ಕುಮಾರಸ್ವಾಮಿ ಅವರು ಭದ್ರಾವತಿಯ ವಿಐಎಸ್ಎಲ್ಗೆ ಭೇಟಿ ನೀಡಿ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ‘ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಎರಡು ಬಾರೀ ರಾಘವೇಂದ್ರ ಜೊತೆ ಪ್ರಚಾರಕ್ಕೆ ಬಂದಿದ್ದೆ. ವಿಐಎಸ್ಎಲ್ ಕಾರ್ಖಾನೆ ಉಳಿಸುವುದು ಹಲವಾರು ವರ್ಷಗಳ ಬೇಡಿಕೆ ಇದೆ ಎಂದರು.
2 / 6
ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ ಕಾರ್ಖಾನೆ ಇದಾಗಿದ್ದು, ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದ್ದ ವಿಶ್ವೇಶ್ವರಯ್ಯರವರು, ಹಲವಾರು ರೀತಿಯ ಏಳು-ಬಿಳಿನ ನಡುವೆ ಕಾರ್ಖಾನೆ ಉಸಿರು ಹಿಡಿದುಕೊಂಡಿದೆ. ಸಂಸದ ರಾಘವೇಂದ್ರ ಅವರು ಕಾರ್ಖಾನೆ ಉಳಿಸಲು ಸಾಕಷ್ಟು ಶ್ರಮಿಸಿದ್ದಾರೆ ಎಂದು ಹೇಳಿದರು.
3 / 6
ಅಪ್ಪಾಜಿಗೌಡರು ಸಹ ಕಾರ್ಖಾನೆ ಉಳಿವಿಗೆ ಹೋರಾಟ ಮಾಡಿದ್ದು ಕಣ್ಮುಂದೆ ಇದೆ. ನಾಡಿನ ಜನತೆಯ ಆಶೀರ್ವಾದಿಂದ ದೇವರ ಆಶೀರ್ವಾದದಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸಚಿವ ಸ್ಥಾನ ನಿರ್ವಹಣೆ ಮಾಡುತ್ತಿದ್ದೇನೆ. ವಿಎಸ್ಎಲ್ ಉಳಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಬಂದಿದ್ದೆ. ಸೆಲ್ ಅಧ್ಯಕ್ಷ ಅಮರೇಂದ್ರ ಪ್ರಕಾಶ್ ಜೊತೆ ಬಂದು ಅಧಿಕಾರಿಗಳು, ಕಾರ್ಮಿಕರಿಂದ ಸಾಕಷ್ಟು ಮಾಹಿತಿ ತೆಗೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಕಾರ್ಖಾನೆ ಹೇಗೆ ಪುನಶ್ಚೇತನಗೊಳಿಸುವ ಕುರಿತು ಮಾಹಿತಿ ಪಡೆದಿದ್ದೇನೆ.
4 / 6
ಸಾರ್ವಜನಿಕವಾಗಿ ಕೆಲವು ನಿರ್ಧಾರ ಪ್ರಕಟ ಮಾಡಲು ಸಾಧ್ಯವಿಲ್ಲ. ಮಂದಿನ ದಿನಗಳಲ್ಲಿ ಕಾರ್ಖಾನೆ ವಿಷಯದಲ್ಲಿ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳುತ್ತೇವೆ. ವಿಶ್ವೇಶ್ವರಯ್ಯ ಹೆಸರಿನ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಮಾಹಿತಿ ಪಡೆದಿದ್ದೇನೆ. ಸ್ಟಿಲ್ ಅಥಾರಿಟಿ ಆಡಳಿತಕ್ಕೆ ಒಳ ಪಟ್ಟ ಕಾರ್ಖಾನೆ ಇದು, ಉಕ್ಕು ತಯಾರಿಕೆಯಲ್ಲಿ 2030ಕ್ಕೆ ನಮ್ಮ ದೇಶದಲ್ಲಿ 300 ಮಿಲಿಯನ್ ಕಬ್ಬಿಣ ತಯಾರಿಸುವ ಗುರಿ ಇದೆ.
5 / 6
13 ದಿನಂದಿದ 26 ದಿನಕ್ಕೆ ಕೆಲಸ ಕೊಡಬೇಕು ಎನ್ನುವ ಬೇಡಿಕೆ ಕಾರ್ಮಿಕರಿಂದ ಇದೆ. ಪಾರ್ಲಿಮೆಂಟ್ ನಡೆಯುತ್ತಿದೆ ಹಾಗಾಗಿ ಸಾರ್ವಜನಿಕವಾಗಿ ಏನು ಹೇಳಲು ಆಗಲ್ಲ. ಉಕ್ಕಿನ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಚಿಂತನೆ ಮಾಡುತ್ತೇನೆ. ಕಾರ್ಮಿಕ ಕುಟುಂಬಗಳ ಮುಂದಿನ ಪರಿಸ್ಥಿತಿ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.