Virat Kohli-Rohit Sharma: ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ನಿವೃತ್ತಿ ಘೋಷಿಸಲು ಇದುವೇ ಕಾರಣ

Virat Kohli and Rohit Sharma: ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ 125 ಪಂದ್ಯಗಳನ್ನಾಡಿದರೆ, ರೋಹಿತ್ ಶರ್ಮಾ 159 ಮ್ಯಾಚ್​ಗಳನ್ನಾಡಿದ್ದಾರೆ. ಇದೀಗ ಭಾರತ ತಂಡದ ಹಿರಿಯ ಆಟಗಾರರಿಬ್ಬರು ಏಕಕಾಲಕ್ಕೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದಾರೆ. ಹೀಗೆ ದಿಢೀರ್ ಆಗಿ ನಿವೃತ್ತಿ ಘೋಷಿಸಲು ಕಾರಣವೇನು ಎಂದು ನೋಡುವುದಾದರೆ....

ಝಾಹಿರ್ ಯೂಸುಫ್
|

Updated on: Jun 30, 2024 | 1:52 PM

T20 World Cup 2024: ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ನಿವೃತ್ತಿ ಘೋಷಿಸಿದ್ದಾರೆ. ವಿಶ್ವಕಪ್ ಗೆದ್ದ ಖುಷಿಗೆ ಇಬ್ಬರು ದಿಗ್ಗಜರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ನೀವಂದುಕೊಂಡರೆ ನಿಮ್ಮ ಊಹೆ ತಪ್ಪು. ಏಕೆಂದರೆ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಬಿಸಿಸಿಐ ಇಬ್ಬರಿಗೂ ಖಡಕ್ ಸೂಚನೆ ನೀಡಿದ್ದರು.

1 / 8
ಹೌದು, ಈ ಬಾರಿಯ ಟಿ20 ವಿಶ್ವಕಪ್​ಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡುವ ಉದ್ದೇಶ ಬಿಸಿಸಿಐಗೆ ಇರಲಿಲ್ಲ. ಹೀಗಾಗಿಯೇ ಕಳೆದ ಒಂದು ವರ್ಷದಿಂದ ಏಕದಿನ ವಿಶ್ವಕಪ್​ ಕಾರಣವನ್ನು ಮುಂದಿಟ್ಟು ಇಬ್ಬರು ಹಿರಿಯ ಆಟಗಾರರನ್ನು ಟಿ20 ತಂಡದಿಂದ ಹೊರಗಿಡಲಾಗಿತ್ತು.

2 / 8
ಆದರೆ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ ಅವರಿಗೆ ಕ್ಯಾಪ್ಟನ್ ಪಟ್ಟ ನೀಡಲು ಬಿಸಿಸಿಐ ಮುಂದಾಯಿತು. ಇದಕ್ಕೆ ಕಾರಣ ಭಾರತ ತಂಡವು ಏಕದಿನ ವಿಶ್ವಕಪ್​ನಲ್ಲಿ ಪ್ರಚಂಡ ಪ್ರದರ್ಶನ ನೀಡಿರುವುದು. ಇತ್ತ ರೋಹಿತ್ ಶರ್ಮಾಗೆ ಮತ್ತೆ ಟಿ20 ತಂಡದಲ್ಲಿ ಅವಕಾಶ ನೀಡಲು ಮುಂದಾಗುತ್ತಿದ್ದಂತೆ ವಿರಾಟ್ ಕೊಹ್ಲಿಯನ್ನು ಕೈ ಬಿಡುವ ಚರ್ಚೆಗಳು ಮುನ್ನಲೆಗೆ ಬಂದವು.

3 / 8
ಇದರಿಂದ ಇಕ್ಕಟಿಗೆ ಸಿಲುಕಿದ ಬಿಸಿಸಿಐ ವಿರಾಟ್ ಕೊಹ್ಲಿಯನ್ನು ಟಿ20 ವಿಶ್ವಕಪ್​ನಿಂದ ಹೊರಗಿಡುವ ಜವಾಬ್ದಾರಿಯನ್ನು ಆಯ್ಕೆ ಸಮಿತಿ ಹಾಗೂ ರೋಹಿತ್ ಶರ್ಮಾ ಹೆಗಲೇರಿಸಿದರು. ಆದರೆ ಕಿಂಗ್ ಕೊಹ್ಲಿಯನ್ನು ಕೈ ಬಿಟ್ಟು ವಿಶ್ವಕಪ್ ತಂಡ ರೂಪಿಸಲು ಹಿಟ್​ಮ್ಯಾನ್ ಸುತಾರಂ ಸಿದ್ಧರಿರಲಿಲ್ಲ. ಅಲ್ಲದೆ 15 ಸದಸ್ಯರ ಬಳಗದಲ್ಲಿ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಬೇಕೆಂದು ರೋಹಿತ್ ಶರ್ಮಾ ಪಟ್ಟು ಹಿಡಿದಿದ್ದರು.

4 / 8
ನಾಯಕನ ಒತ್ತಾಯದ ಮೇರೆಗೆ ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿಗೆ ವಿರಾಟ್ ಕೊಹ್ಲಿ ಆಯ್ಕೆಯಾದರು. ಈ ಸರಣಿಯಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಗಮನ ಸೆಳೆದ ಕೊಹ್ಲಿ, ಆ ಬಳಿಕ ಐಪಿಎಲ್​ನಲ್ಲಿ ಅಬ್ಬರಿಸಿದರು. ಹೀಗಾಗಿ ರೋಹಿತ್ ಶರ್ಮಾ ಜೊತೆ ವಿರಾಟ್ ಕೊಹ್ಲಿಯನ್ನು ಕೂಡ ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಲೇಬೇಕಾಯಿತು.

5 / 8
ಆದರೆ ಈ ಆಯ್ಕೆಗೂ ಮುನ್ನವೇ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಇದುವೇ ಕೊನೆಯ ಟಿ20 ವಿಶ್ವಕಪ್ ಎಂಬ ಸೂಚನೆ ನೀಡಿದ್ದರು. ಅಲ್ಲದೆ 2026ರ ಟಿ20 ವಿಶ್ವಕಪ್​ ಮುಂದಿಟ್ಟುಕೊಂಡು ಹೊಸ ತಂಡವನ್ನು ರೂಪಿಸಲಿದ್ದೇವೆ. ಹಿರಿಯ ಆಟಗಾರರನ್ನು ಟಿ20 ತಂಡದಿಂದ ಕೈ ಬಿಡಲಾಗುತ್ತದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ತಿಳಿಸಿದ್ದರು.

6 / 8
ಇದರ ಬೆನ್ನಲ್ಲೇ ಟೀಮ್ ಇಂಡಿಯಾಗೆ ನೂತನ ಕೋಚ್ ಆಗಿ ನೇಮಕವಾಗಲಿರುವ ಗೌತಮ್ ಗಂಭೀರ್ ಕೂಡ ತಮ್ಮ ಬೇಡಿಕೆಯಲ್ಲಿ ಟಿ20 ತಂಡದಿಂದ ಹಿರಿಯ ಆಟಗಾರರನ್ನು ಕೈ ಬಿಡಬೇಕೆಂದು ಬಿಸಿಸಿಐಗೆ ತಿಳಿಸಿದ್ದರು. ಅತ್ತ ಬಿಸಿಸಿಐ ಸೂಚನೆ, ಇತ್ತ ನೂತನ ಕೋಚ್ ಬೇಡಿಕೆಯನ್ನು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.

7 / 8
ಅಲ್ಲದೆ ಈ ಬಾರಿಯ ಟಿ20 ವಿಶ್ವಕಪ್​ ಮೂಲಕ ನಿವೃತ್ತಿ ಘೋಷಿಸುವಂತೆ ಇಬ್ಬರು ಆಟಗಾರರಿಗೆ ಸೂಚಿಸಲಾಗಿದೆ. ಅದರಂತೆ ಕೊನೆಯ ಬಾರಿ ಟಿ20 ವಿಶ್ವಕಪ್​ನಲ್ಲಿ ಕಾಣಿಸಿಕೊಂಡ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿಶ್ವಕಪ್ ವಿಜಯದೊಂದಿಗೆ ವಿದಾಯ ಹೇಳಿದ್ದಾರೆ. ಅತ್ತ ಮೊದಲೇ ನಿರ್ಧರಿಸಿದ್ದರಿಂದ ಇಬ್ಬರು ಕೂಡ ಭಾರತದ ಗೆಲುವಿನ ಬೆನ್ನಲ್ಲೇ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಅದು ಕೂಡ ವಿಶ್ವ ಚಾಂಪಿಯನ್ ಆಗುವ ಮೂಲಕ ಎಂಬುದು ವಿಶೇಷ.

8 / 8
Follow us
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ

ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ

70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್

ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್