ಪ್ರೇತಗಳಿಗೆ ವಿವಾಹನಾ? ಇಂತಹದೊಂದು ವಿಶಿಷ್ಟ ಆಚರಣೆ ಕರ್ನಾಟಕದಲ್ಲಿ ಎಲ್ಲಿ ನಡೆಯುತ್ತೆ? ಇದು ನಿಜನಾ?

ಕರಾವಳಿಯ ಉಡುಪಿ ಜಿಲ್ಲೆಯ ಆಚಾರ ವಿಚಾರ ಮತ್ತು ವಿಶಿಷ್ಟ ಪದ್ದತಿಗಳ ಮೂಲಕ ರಾಜ್ಯದಲ್ಲಿಯೇ ಒಂದು ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಜಿಲ್ಲೆ. ಇಲ್ಲಿ ದೈವ ಮತ್ತು ದೇವರುಗಳ ವಿಚಾರದಲ್ಲಿ ವಿಶೇಷವಾದ ಭಕ್ತಿ ಮತ್ತು ಅದಕ್ಕೆ ಸಂಬಂಧಿಸಿದ ವಿಶೇಷ ಆಚರಣೆಗಳನ್ನು ಕೂಡ ನೋಡಬಹುದು. ಇತ್ತೀಚಿಗೆ ಕರಾವಳಿಯ ಜಿಲ್ಲೆಯಲ್ಲಿ ಪ್ರೇತ ಮದುವೆಯ ಜಾಹೀರಾತು ಸಾಕಷ್ಟು ಸುದ್ದಿ ಮಾಡಿತ್ತು.

ಪ್ರೇತಗಳಿಗೆ ವಿವಾಹನಾ? ಇಂತಹದೊಂದು ವಿಶಿಷ್ಟ ಆಚರಣೆ ಕರ್ನಾಟಕದಲ್ಲಿ ಎಲ್ಲಿ ನಡೆಯುತ್ತೆ? ಇದು ನಿಜನಾ?
ಪ್ರೇತಗಳಿಗೆ ವಿವಾಹನಾ? ಇಂತಹದೊಂದು ವಿಶಿಷ್ಟ ಆಚರಣೆ ಕರ್ನಾಟಕದಲ್ಲಿ ಎಲ್ಲಿ ನಡೆಯುತ್ತೆ? ಇದು ನಿಜನಾ?
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jun 17, 2024 | 7:55 PM

ಉಡುಪಿ, ಜೂನ್ 17: ಹಿಂದೂ ಸಂಪ್ರದಾಯದಲ್ಲಿ ಶೋಡಶ ಸಂಸ್ಕಾರಕ್ಕೆ ಅತ್ಯಂತ ಮಹತ್ವವಿದೆ. ಅದರಲ್ಲೂ ಶೋಡಶ ಸಂಸ್ಕಾರದಲ್ಲಿ ಬರುವ ವಿವಾಹಕ್ಕೆ (marriage) ಹೆಚ್ಚಿನ ಪ್ರಾಶಸ್ತ್ಯವಿದೆ. ಹುಟ್ಟಿನಿಂದ ಸಾಯುವ ದಿನದ ಒಳಗೆ ವಿವಾಹಿತನಾಗಿ ಸಂಸಾರ ಜೀವನ ನಡೆಸಬೇಕು ಎನ್ನುವುದು ಇಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಇನ್ನು ಈ ಶೋಡಶ ಸಂಸ್ಕಾರದ ಪ್ರಮುಖ ಅಂಗವಾಗಿರುವ ವಿವಾಹವು ಮರಣ ನಂತರವೂ ಕೂಡ ಬೇಕು ಎನ್ನುವುದಕ್ಕೆ ಪ್ರೇತ (Ghost) ಮದುವೆ ಸಾಕ್ಷಿ‌. ಹಾಗಾದರೆ ಏನಿದು ಪ್ರೇತ ಮದುವೆ ಅಂತೀರಾ ಈ ಸ್ಟೋರಿ ಓದಿ.

ಹೌದು ಕರಾವಳಿಯ ಉಡುಪಿ ಜಿಲ್ಲೆಯ ಆಚಾರ ವಿಚಾರ ಮತ್ತು ವಿಶಿಷ್ಟ ಪದ್ದತಿಗಳ ಮೂಲಕ ರಾಜ್ಯದಲ್ಲಿಯೇ ಒಂದು ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಜಿಲ್ಲೆ. ಇಲ್ಲಿ ದೈವ ಮತ್ತು ದೇವರುಗಳ ವಿಚಾರದಲ್ಲಿ ವಿಶೇಷವಾದ ಭಕ್ತಿ ಮತ್ತು ಅದಕ್ಕೆ ಸಂಬಂಧಿಸಿದ ವಿಶೇಷ ಆಚರಣೆಗಳನ್ನು ಕೂಡ ನೋಡಬಹುದು. ಇತ್ತೀಚಿಗೆ ಕರಾವಳಿಯ ಜಿಲ್ಲೆಯಲ್ಲಿ ಪ್ರೇತ ಮದುವೆಯ ಜಾಹೀರಾತು ಸಾಕಷ್ಟು ಸುದ್ದಿ ಮಾಡಿತ್ತು.

ಇದನ್ನೂ ಓದಿ: ನಾಗರ ಪಂಚಮಿಯಂದು ಇಲ್ಲಿ ನಡೆಯಲ್ಲ ಪೂಜೆ; ಮುಗ್ಗೇರ ಜನಾಂಗ ಆರಾಧಿಸುವ ಈ ನಾಗಾರಾಧನೆಯಲ್ಲಿದೆ ವಿಶಿಷ್ಟ ಹರಕೆ

ಪ್ರೇತಗಳ ಮದುವೆ ಮಾಡಿಸುವ ವಿಡಿಯೋ ಒಂದು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು. ಇದು ನಿಜನ? ಅಥವಾ ಸುಮ್ಮನೆ ಲೈಕ್ ಸಬ್‌ಸ್ಕ್ರೈಬರ್​ ಗೋಸ್ಕರ ಮಾಡಿದ ಗಿಮಿಕ್ಕಾ ಎನ್ನುವ ಕುತೂಹಲ ಸಾಕಷ್ಟ ಜನರಲ್ಲಿದೆ. ಇದು ನಿಜ ಎನ್ನಲು ಸಾಕ್ಷಿ ದೇವಾಲಯಗಳ ನಗರಿ ಬಾರಕೂರಿನಲ್ಲಿ ಸಿಗುತ್ತದೆ. ಬಾರಕೂರು ಕೂಡ್ಲಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನೂರಾರು ವರ್ಷದಿಂದ ಪ್ರತೀ ಅಮಾವಾಸ್ಯೆಯ ದಿನ ಪ್ರೇತಗಳ ಮದುವೆ ನಡೆಯುತ್ತದೆ.

ಬಾರಕೂರು ಕೂಡ್ಲಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಪ್ರೇತ ವಿವಾಹ ಇಲ್ಲಿನ ಅರ್ಚಕ ಗಣಪತಿ ಉಡುಪ ಮತ್ತು ಬಳಗದವರಿಂದ ನಡೆಯುತ್ತದೆ. ಆಕಸ್ಮಿಕ, ಅಕಾಲ ಮರಣಹೊಂದಿದ ಗಂಡು ಅಥವಾ ಹೆಣ್ಣುಗಳು ಅನೇಕ ಆಸೆ, ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳದೆ ಅಗೋಚರವಾಗಿ ಪ್ರೇತಗಳಾಗಿ ಇರುತ್ತದೆ ಮತ್ತು ಪ್ರಾಯ ಕಳೆದಂತೆ ಆಸೆಯನ್ನು ನೆರವೇರಿಸುವಂತೆ ಕುಟುಂಬವನ್ನು ಕಾಡುತ್ತಾ ಇದ್ದು ಪೀಡನೆ ನೀಡುತ್ತಿರುವುದಕ್ಕೆ ಪ್ರೇತಗಳಿಗೆ ವಿವಾಹ ಶಾಸ್ತ್ರ ಮಾಡಿ ಬಳಿಕ ಸದ್ಗತಿ ಮಾಡಲಾಗುತ್ತದೆ.

ದೇವಸ್ಥಾನದ ಎದುರು ಭಾಗದಲ್ಲಿರಿರುವ ಶಂಖ ತೀರ್ಥ ಸರೋವರದಲ್ಲಿ ಪ್ರೇತವನ್ನು ಆಕರ್ಷಿಸಿ ಇರಿಸಲಾದ ತೆಂಗಿನ ಕಾಯಿ ಮೂಲಕ ನಾನಾ ಕರ್ಮಾಂಗ ಮಾಡಿ ಬಳಿಕ ದೇವಸ್ಥಾನದ ಎದುರು ಭಾಗದಲ್ಲಿ 2 ತೆಂಗಿನ ಗಿಡಕ್ಕೆ ಗಂಡು ಹೆಣ್ಣಿಗೆ ಮಧುವಣಗಿತ್ತಿಗೆ ಅಲಂಕಾರ ಮಾಡಿದಂತೆ ಸೀರೆ ಪಂಚೆ ಶಾಲು ಕಾಲುಂಗುರ ಕರಿಯಮಣೆ ನೀಡಿ ಬೇರೆ ಗೋತ್ರ ಅಥವಾ ಬಳಿಯವರೊಂದಿಗೆ ತಾಂಬೂಲ ಬದಲಾವಣೆ ಮಾಡಿ ಬಳಿಕ ಮದುವೆ ಶಾಸ್ತ್ರ ಮಾಡಲಾಗುತ್ತದೆ. ಬಳಿಕ ತೆಂಗಿನಕಾಯಿಯಲ್ಲಿ ಆವಾಹನೆ ಮಾಡಲಾದ ಪ್ರೇತವನ್ನು ಮತ್ತೊಂದು ತೆಂಗಿನ ಕಾಯಿಜೊತೆ ಅವರಿಗೆ ಸಂಭಂದಿಸಿದ ದೈವಸ್ಥಾನದಲ್ಲಿ ಒಡೆಯಲಾಗುತ್ತದೆ.

ಇದನ್ನೂ ಓದಿ: ಉಡುಪಿ ಜಿಲ್ಲೆಗೆ ಪ್ರವಾಸಕ್ಕೆ ತೆರಳುವವರಿಗೆ ಕಹಿ ಸುದ್ದಿ! ಮಲ್ಪೆ ಬೀಚ್ ಪ್ರವೇಶ ನಿಷೇಧ

ಇದು ನೂರಾರು ವರ್ಷದಿಂದ ನಡೆದುಕೊಂಡು ಬಂದ ಧಾರ್ಮಿಕ ವಿಧಿಯಾಗಿದ್ದು ವಿಜ್ಞಾನಯುಗದಲ್ಲೂ ಮುಂದುವರಿಯುತ್ತಿದೆ. ಇಂದಿಗೂ ಕೂಡ ಸಮಸ್ಯೆಯಿಂದ ಸಂತ್ರಸ್ಥರಾದವರು ಇಲ್ಲಿ ಪ್ರೇತಗಳ ವಿವಾಹಗಳ ಮಾಡುವ ಮೂಲಕ ನೆಮ್ಮದಿ ಕಾಣುತ್ತಿರುವುದು ಆಧುನಿಕ ಜಗತ್ತಿಗೆ ಸವಾಲು ಎಂದರೆ ತಪ್ಪಾಗಲಾರದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್