ಕಲಬುರಗಿ: ಗ್ರಾಮ ಪಂಚಾಯತಿ ಚುನಾವಣೆ ಗಲಾಟೆಯಿಂದಾಗಿ ಜೈಲು ಸೇರಿದ್ದ ತಂದೆ ತಾಯಿ ಜೊತೆಗೆ ಜೈಲು ಪಾಲಾಗಿದ್ದ 3 ವರ್ಷದ ಬಾಲಕಿ ಸಾವಿಗೀಡಾದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೈನಾಪುರ ಗ್ರಾಮದಲ್ಲಿ ನಡೆದಿದೆ.
ಜೈನಾಪುರ ಗ್ರಾಮದ ನಿವಾಸಿಗಳಾದ ಸಂಗೀತಾ ಮತ್ತು ರವಿ ತಳವಾರ ದಂಪತಿ ಗ್ರಾಮ ಪಂಚಾಯತಿ ಚುನಾವಣೆ ವಿಷಯದಲ್ಲಿ ಗಲಾಟೆ ಮಾಡಿಕೊಂಡಿದ್ದು, ಈ ಸಂಬಂಧ ರವಿ ತಳವಾರ ಮತ್ತು ಶರಣಪ್ಪ ತಳವಾರ ಕುಟುಂಬದ 10 ಜನರನ್ನು ಜೇವರ್ಗಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದರು.
ಈ ನಿಟ್ಟಿನಲ್ಲಿ ಡಿಸೆಂಬರ್ 31 ರಂದು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಹೆತ್ತವರ ಜೊತೆ 3 ವರ್ಷದ ಭಾರತಿ ಕೋಡ ಹೋಗಿದ್ದಳು. ನಿನ್ನೆ ಭಾರತಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಭಾರತಿ ಸಾವನ್ನಪ್ಪಿದ್ದು, ಬಾಲಕಿ ಸಾವಿಗೆ ಜೇವರ್ಗಿ ಪೊಲೀಸರೇ ಕಾರಣ ಎಂದು ಬಾಲಕಿ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.