Gold Silver Price: ಚಿನ್ನ ದರ ಏರಿಕೆ, ಬೆಳ್ಳಿ ದರ ಇಳಿಕೆ.. ಎಷ್ಟಿದೆ ಗೊತ್ತಾ ಇಂದಿನ ದರ?

| Updated By: ಆಯೇಷಾ ಬಾನು

Updated on: Mar 07, 2021 | 9:58 AM

Gold Silver Rate: ನಿನ್ನೆಗಿಂತ ಇಂದಿನ ಚಿನ್ನ ದರದಲ್ಲಿ ಕೊಂಚ ಏರಿಕೆ ಕಂಡಿದೆ. ಬೆಳ್ಳಿ ದರ ಇಳಿಕೆಯತ್ತ ಮುಖ ಮಾಡಿದೆ. ಹಾಗಿದ್ದಲ್ಲಿ ಎಷ್ಟಿರಬಹುದು ದರ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

Gold Silver Price: ಚಿನ್ನ ದರ ಏರಿಕೆ, ಬೆಳ್ಳಿ ದರ ಇಳಿಕೆ.. ಎಷ್ಟಿದೆ ಗೊತ್ತಾ ಇಂದಿನ ದರ?
ಸಾಂರ್ಭಿಕ ಚಿತ್ರ
Follow us on

ಬೆಂಗಳೂರು: ಇಂದು 22 ಕ್ಯಾರೆಟ್​ 10 ಗ್ರಾಂ ಚಿನ್ನ ದರ 41,450 ರೂಪಾಯಿ ಇದೆ. ಹಾಗೂ 24 ಕ್ಯಾರೆಟ್​ 10 ಗ್ರಾಂ ಚಿನ್ನ ದರ 45,490 ರೂಪಾಯಿ ಇದೆ. ನಿನ್ನೆಗಿಂತ ಇಂದು ಚಿನ್ನ ದರ ಕೊಂಚ ಏರಿಕೆ ಕಂಡಿದೆ. ಹಾಗೂ ಬೆಳ್ಳಿ ದರ ಇಳಿಕೆಯತ್ತ ಮುಖ ಮಾಡಿದ್ದು, 1 ಕೆ.ಜಿ ಬೆಳ್ಳಿ ದರ ಇಂದು 65,400 ರೂಪಾಯಿ ನಿಗದಿಯಾಗಿದೆ. ಕಳೆದ ವರ್ಷಕ್ಕೆ ಚಿನ್ನ ದರ ಹೋಲಿಸಿದರೆ ಈ ವರ್ಷ ಭಾರಿ ಪ್ರಮಾಣದ ಇಳಿಕೆ ಕಂಡಿದೆ. ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಉತ್ತಮ ಸಮಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಚಿನ್ನ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಮಹಿಳೆಯರಂತೂ ಚಿನ್ನಕೊಳ್ಳಲು ಮುಗಿ ಬೀಳ್ತಾರೆ. ಚಿನ್ನ ಕೊಡಿಸುವವರು ತಲೆಕೆಡಿಸಿಕೊಳ್ಳಬೇಕೇ ವಿನಃ ಕೊಳ್ಳುವವರಿಗೆ ಯಾಕೆ ಚಿಂತೆ? ಚಿನ್ನ ಕೊಡಿಸುವವರಿಗೆ ಚಿನ್ನ ದರ ಎಷ್ಟಿರಬಹುದು ಎಂಬ ಆತಂಕ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಒಂದು ಸಲಹೆ. ದರ ಇಳಿಕೆಯತ್ತ ಮುಖ ಮಾಡಿದಾಗಲೇ ಚಿನ್ನ ಕೊಡಿಸುವುದು ಉತ್ತಮ. ಹಾಗಿದ್ದಲ್ಲಿ ದರ ಎಷ್ಟಿರಬಹುದು ಎಂಬ ಕುತೂಹಲ ಮೂಡುವುದು ಸಹಜವಲ್ವೇ? ಇಲ್ಲಿದೆ ಓದಿ ಚಿನ್ನ ದರದ ಮಾಹಿತಿ.

22 ಕ್ಯಾರೆಟ್​ ಚಿನ್ನ ದರ:
1ಗ್ರಾಂ ಚಿನ್ನ ದರ ನಿನ್ನೆ 4,145 ರೂಪಾಯಿ ಇದ್ದು, ಇಂದಿನ ದರ 4,170 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 25 ರೂಪಾಯಿ ಏರಿಕೆ ಕಂಡಿದೆ. 8 ಗ್ರಾಂ ಚಿನ್ನ ದರ ನಿನ್ನೆ 33,160 ರೂಪಾಯಿ ಇದ್ದು, ಇಂದು 33,360 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 200 ರೂಪಾಯಿ ಏರಿಕೆ ಕಂಡಿದೆ. 10 ಗ್ರಾಂ ಚಿನ್ನ ದರ ನಿನ್ನೆ 41,450 ರೂಪಾಯಿ ಇತ್ತು. ದೈನಂದಿನ ದರ ಬದಲಾವಣೆಯಲ್ಲಿ 250 ರೂಪಾಯಿ ಏರಿಕೆ ಕಂಡಿದೆ. ಇಂದಿನ ದರ 41,700 ರೂಪಾಯಿ ಆಗಿದೆ. 100 ಗ್ರಾಂ ಚಿನ್ನ ದರ ನಿನ್ನೆ 4,14,500 ರೂಪಾಯಿ ಇತ್ತು. ಇಂದಿನ ದರ 4,17,000 ಆಗಿದ್ದು, ದೈನಂದಿನ ದರ ಬದಲಾವಣೆಯಲ್ಲಿ 2,500 ರೂಪಾಯಿ ಏರಿಕೆ ಕಂಡಿದೆ.

24 ಕ್ಯಾರೆಟ್ ಚಿನ್ನ ದರ:
1ಗ್ರಾಂ ಚಿನ್ನ ದರ ನಿನ್ನೆ 4,522 ರೂಪಾಯಿಗೆ ಗ್ರಾಹಕರು ಕೊಂಡಿದ್ದರು. ಇಂದು ದರದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, 27 ರೂಪಾಯಿಕೆ ಏರಿಕೆ ಕಂಡಿದೆ. 1 ಗ್ರಾಂ ಚಿನ್ನ ದರ ಇಂದು 4,549 ರೂಪಾಯಿಗೆ ಮಾರಾಟವಾಗುತ್ತಿದೆ. 8 ಗ್ರಾಂ ಚಿನ್ನ ದರ ನಿನ್ನೆ 36,176 ರೂಪಾಯಿಗೆ ಮಾರಾವಾಗಿತ್ತು. ಇಂದು ದರದಲ್ಲಿ 216 ರೂಪಾಯಿ ಏರಿಕೆ ಕಂಡಿದ್ದು, ದರ 36,392 ರೂಪಾಯಿ ಆಗಿದೆ. 10 ಗ್ರಾಂ ಚಿನ್ನ ದರ ನಿನ್ನೆ 45,220 ರೂಪಾಯಿ ಇದ್ದು, ಇಂದಿನ ದರ 45,490 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 270 ರೂಪಾಯಿ ಏರಿಕೆ ಕಂಡಿದೆ. 100 ಗ್ರಾಂ ಚಿನ್ನ ದರ ನಿನ್ನೆ 4,52,200 ರೂಪಾಯಿ ಆಗಿದ್ದು, ಇಂದಿನ ದರ 4,54,900 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 2,700 ರೂಪಾಯಿಯಷ್ಟು ಏರಿಕೆ ಕಂಡಿದೆ.

ಬೆಳ್ಳಿ ದರ:

ಮನೆಯಲ್ಲಿ ವಿಶೇಷ ಪೂಜೆ ಪುನಸ್ಕಾರಗಳಿಗೆ ಬೆಳ್ಳಿ ಕೊಳ್ಳವುದು ಸಾಮಾನ್ಯ. ಹಾಗೂ ಪೂಜಾ ದಿಕ್ಕೆಂದು ಬೆಳ್ಳಿ ಕೊಳ್ಳುವುದು ಶ್ರೇಷ್ಠ ಎಂದೂ ಹೇಳುತ್ತಾರೆ. ಹೀಗಿದ್ದಲ್ಲಿ ಬೆಳ್ಳಿ ದರ ಇಳಿಕೆಯತ್ತ ಸಾಗಿದ್ದಾಗಲೇ ಬೆಳ್ಳಿ ಕೊಳ್ಳುವುದು ಒಳಿತು. ಬೆಳ್ಳಿ ದರ ಇಳಿಕೆಯತ್ತ ಸಾಗುತ್ತಿದೆ. ಹಾಗಿದ್ದಲ್ಲಿ ಎಷ್ಟಿರಬಹುದು ಬೆಳ್ಳಿ ದರ ಎನ್ನುವುದರ ಮಾಹಿತಿ ಇಲ್ಲಿದೆ.

1 ಗ್ರಾಂ ಬೆಳ್ಳಿ ದರ ನಿನ್ನೆ 67.60 ರೂಪಾಯಿ ಇದ್ದು, ಇಂದಿನ ದರ 65.40 ರೂಪಾಯಿ ಆಗಿದೆ. 8 ಗ್ರಾಂ ಚಿನ್ನ ದರ ನಿನ್ನೆ 540.80 ರೂಪಾಯಿ ಇತ್ತು, ಇಂದಿನ ದರ 523.20 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 17.60 ರೂಪಾಯಿ ಇಳಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ದರ ನಿನ್ನೆ 676 ರೂಪಾಯಿ ಇದ್ದು, ಇಂದಿನ ದರ 654 ರೂಪಾಯಿ ಆಗಿದೆ. ದೈಂದಿನ ದರ ಬದಲಾವಣೆಯಲ್ಲಿ 22 ರೂಪಾಯಿ ಇಳಿಕೆ ಕಂಡಿದೆ. 100 ಗ್ರಾಂ ಬೆಳ್ಳಿ ದರ ನಿನ್ನೆ 6,760 ರೂಪಾಯಿ ಇದ್ದು, ಇಂದಿನ ದರ 6,540 ರೂಪಾಯಿ ಆಗಿದೆ. ದರ ಬದಲಾವಣೆಯಲ್ಲಿ 220 ರೂಪಾಯಿಯಷ್ಟು ಇಳಿಕೆ ಕಂಡಿದೆ. 1ಕೆ.ಜಿ ಬೆಳ್ಳಿ ದರ ನಿನ್ನೆ 67,600 ರೂಪಾಯಿ ಇತ್ತು. ಇಂದು 65,400 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 2,200 ರೂಪಾಯಿ ಇಳಿಕೆ ಕಂಡಿದೆ.

ಇದನ್ನೂ ಓದಿ: Gold Silver Price: ಚಿನ್ನ ಕೊಳ್ಳಲು ಉತ್ತಮ ಸಮಯ.. ಇಂದು ಎಷ್ಟಿದೆ ಗೊತ್ತಾ ಚಿನ್ನ ದರ?

ಇದನ್ನೂ ಓದಿ: Gold Silver Price: ಗ್ರಾಹಕರೇ ಇಲ್ಲೊಮ್ಮೆ ಗಮನಿಸಿ.. ಏರಿಕೆಯತ್ತ ಹೆಜ್ಜೆ ಇಟ್ಟ ಚಿನ್ನ ದರ..