Gold Silver Price: ಚಿನ್ನ ಕೊಳ್ಳಲು ಉತ್ತಮ ಸಮಯ.. ಇಂದು ಎಷ್ಟಿದೆ ಗೊತ್ತಾ ಚಿನ್ನ ದರ?

Gold Rate in Bangalore: ಚಿನ್ನ ಮತ್ತು ಬೆಳ್ಳಿ ದರ ನಿನ್ನೆಗಿಂತ ಇಂದು ಕೊಂಚ ಏರಿಕೆಯತ್ತ ಮುಖ ಮಾಡಿದೆ. ಹಾಗಿದ್ದರೆ ನಿನ್ನೆ ಚಿನ್ನ ದರ ಎಷ್ಟಿತ್ತು? ಇಂದಿನ ದರ ಎಷ್ಟಿರಬಹುದು ಎಂಬುದರ ಮಾಹಿತಿ ಇಲ್ಲಿದೆ.

Gold Silver Price: ಚಿನ್ನ ಕೊಳ್ಳಲು ಉತ್ತಮ ಸಮಯ.. ಇಂದು ಎಷ್ಟಿದೆ ಗೊತ್ತಾ ಚಿನ್ನ ದರ?
ಸಾಂದರ್ಭಿಕ ಚಿತ್ರ
Follow us
shruti hegde
|

Updated on: Mar 04, 2021 | 9:01 AM

ಬೆಂಗಳೂರು: ನಿನ್ನೆಗಿಂತ ಚಿನ್ನ ದರ ಇಂದು ಕೊಂಚ ಏರಿಕೆ ಕಂಡಿದ್ದು, 22 ಕ್ಯಾರೆಟ್ ಚಿನ್ನ ದರ 10 ಗ್ರಾಂಗೆ 42,450 ರೂಪಾಯಿ ಆಗಿದೆ. ಹಾಗೂ 24 ಕ್ಯಾರೆಟ್ ಚಿನ್ನ ದರ 10ಗ್ರಾಂಗೆ 46,300 ರೂಪಾಯಿ ಆಗಿದೆ. ಜೊತೆಗೆ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. 1ಕೆ.ಜಿ ಬೆಳ್ಳಿ ದರ ಇಂದು 67,600 ರೂಪಾಯಿ ಇದೆ. ಈ ವಾರದ ಮೊದಲ ದಿನ ಸೋಮವಾರ ಮತ್ತು ಮಂಗಳವಾರ ಚಿನ್ನ ಇಳಿಕೆಯತ್ತ ಸಾಗುತ್ತಿತ್ತು. ತದ ನಂತರ ದರದಲ್ಲಿ ಬದಲಾವಣೆಯಾಗಿ ನಿನ್ನೆ, ಚಿನ್ನ ಮತ್ತು ಬೆಳ್ಳಿ ದರ ಕೊಂಚ ಇಳಿಕೆ ಕಂಡಿತ್ತು.

ಚಿನ್ನ ದರ ಹಾವು ಏಣಿ ಆಟವಾಡುತ್ತಿರುವುದರಿಂದ ಅಮೂಲ್ಯವಾದ ಲೋಹಗಳಲ್ಲಿ ಹೂಡಿಕೆ ಮಾಡುವುದು ಉತ್ತಮವೇ? ತಮ್ಮಲ್ಲಿರುವುದನ್ನು ಮಾರಾಟ ಮಾಡಬೇಕೇ ಅಥವಾ ಇನ್ನೂ ಸ್ವಲ್ಪ ದಿನಗಳ ಕಾಲ ಕಾಯಬೇಕೆ ಎಂಬ ಗೊಂದಲ ಗ್ರಾಹಕರಿಗೆ ಸೃಷ್ಟಿಯಾಗುತ್ತಿದೆ. ನೀವು ಚಿನ್ನ ಕೊಳ್ಳಲೆಂದು ಹಣವನ್ನು ವೆಚ್ಚ ಮಾಡುತ್ತೀರಿ. ಹಾಗಾಗಿ, ಮೊದಲು ಚಿನ್ನದ ಕುರಿತಾಗಿ ಪರಿಪೂರ್ಣ ಮಾಹಿತಿ ತಿಳಿದುಕೊಂಡಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತುಗಳ ಖರೀದಿಗೆ ಸಂಬಂಧಿಸಿದಂತೆ ಸ್ಪಷ್ಟವಾದ ಮಾಹಿತಿ ಇರಬೇಕು. ಏಕೆಂದರೆ ಚಿನ್ನ ದುಬಾರಿ ವಸ್ತು. ಹೆಚ್ಚಿನ ಹಣ ವ್ಯಯಿಸುವುದು ಬೇಡ. ಸೂಕ್ತ ಸಮಯದಲ್ಲಿ ಚಿನ್ನ ಖರೀದಿಸಿದರೆ ಹಣವೂ ಉಳಿಯುತ್ತೆ, ಚಿನ್ನವೂ ಕೈ ಸೇರುತ್ತೆ.

ಹಿಂದಿನ ವರ್ಷದಲ್ಲಿ 24 ಕ್ಯಾರೆಟ್ ಚಿನ್ನದ ದರ 57 ಸಾವಿರ ರೂಪಾಯಿ ಸನಿಹಕ್ಕೆ ತಲುಪಿತ್ತು. ಅದಾದ ನಂತರದಲ್ಲಿ ಚಿನ್ನದ ದರ ಇಳಿಕೆಯತ್ತ ಮುಖ ಮಾಡಿತ್ತು. ಚಿನ್ನದ ದರ 47 ಸಾವಿರ ರೂಪಾಯಿಗೆ ಬಂದು ತಲುಪಿತು. ಮಧ್ಯಂತರದಲ್ಲಿ ದರ ಹಾವು ಏಣಿ ಆಟ ಪ್ರಾರಂಭಿಸಿದ್ದರೂ ಸಹ ಇದೀಗ ಬೆಂಗಳೂರಿನಲ್ಲಿ ಚಿನ್ನದ ದರ 10 ಗ್ರಾಂಗೆ 46,300 ರೂಪಾಯಿ ಆಗಿದೆ. ಚಿನ್ನ ಖರೀದಿಗೆಂದು ಹಣ ಕೂಡಿಟ್ಟ ಜನರಿಗೆ ಇದು ಭಾರೀ ಪ್ರಮಾಣದ ಖುಷಿ ತಂದಿದೆ.

ನಿನ್ನೆ ಮತ್ತು ಇಂದು 22 ಕ್ಯಾರೆಟ್ ಚಿನ್ನ ದರದ ಮಾಹಿತಿ 1 ಗ್ರಾಂ ಚಿನ್ನ ದರ ನಿನ್ನೆ 4,210 ರೂಪಾಯಿಗೆ ಮಾರಾಟವಾಗಿದೆ. ಇಂದಿನ ದರದಲ್ಲಿ 35 ರೂಪಾಯಿಯಷ್ಟು ಏರಿಕೆ ಕಂಡಿದ್ದು, ಇಂದಿನ ದರ 4,245 ರೂಪಾಯಿ ಆಗಿದೆ. 8 ಗ್ರಾಂ ಚಿನ್ನ ದರ ನಿನ್ನೆ 33,680 ರೂಪಾಯಿ ಇದ್ದು, ಇಂದಿನ ದರ 33,960 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 280 ರೂಪಾಯಿಯಷ್ಟು ಏರಿಕೆ ಕಂಡಿದೆ. 10 ಗ್ರಾಂ ಚಿನ್ನ ದರ ನಿನ್ನೆ 42,100 ರೂಪಾಯಿ ಇದ್ದು, ದೈನಂದಿನ ದರ ಬದಲಾವಣೆಯಲ್ಲಿ 350 ರೂಪಾಯಿ ಏರಿಕೆ ಕಂಡಿದೆ. ಇಂದಿನ ದರ 42,450 ರೂಪಾಯಿ ಆಗಿದೆ. ಹಾಗೆಯೇ 100 ಗ್ರಾಂ ಚಿನ್ನ ದರ ನಿನ್ನೆ 4,21,000 ರೂಪಾಯಿಯಾಗಿದ್ದು ಇಂದಿನ ದರ 4,24,500 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 3,500 ರೂಪಾಯಿಯಷ್ಟು ಏರಿಕೆ ಕಂಡಿದೆ.

24 ಕ್ಯಾರೆಟ್ ಚಿನ್ನ ದರದ ಸಂಪೂರ್ಣ ಮಾಹಿತಿ 1ಗ್ರಾಂ ಚಿನ್ನ ದರ ನಿನ್ನೆ 4,593 ರೂಪಾಯಿಗೆ ಮಾರಾಟವಾಗಿದೆ. ಇಂದಿನ ದರ 4,630 ರೂಪಾಯಿ ಇದೆ. 8 ಗ್ರಾಂ ಚಿನ್ನ ದರ ನಿನ್ನೆ 37,040 ರೂಪಾಯಿ ಇದ್ದು ಇಂದಿನ ದರ 37,040 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 296 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. 10 ಗ್ರಾಂ ಚಿನ್ನ ದರ ನಿನ್ನೆ 45,930 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 46,300 ರೂಪಾಯಿಯಾಗಿದೆ. ಹಾಗೂ 100 ಗ್ರಾಂ ಚಿನ್ನ ದರ ನಿನ್ನೆ 4,59,300 ರೂಪಾಯಿ ಇದ್ದು, ಇಂದಿನ ದರ 4,63,000 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 3,700 ರೂಪಾಯಿ ಏರಿಕೆ ಕಂಡಿದೆ.

ನಿನ್ನೆ ಮತ್ತು ಇಂದಿನ ದರ ಬದಲಾವಣೆಯ ಬೆಳ್ಳಿ ದರದ ಮಾಹಿತಿ 1 ಗ್ರಾಂ ಬೆಳ್ಳಿ ದರ 67.60 ರೂಪಾಯಿ ಆಗಿದೆ. 8 ಗ್ರಾಂ ಬೆಳ್ಳಿ ಬೆಲೆ 540.80 ರೂಪಾಯಿ ಆಗಿದೆ. 10 ಗ್ರಾಂ ಬೆಳ್ಳಿ ದರ 676 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ದರ 6,760 ರೂಪಾಯಿ ಆಗಿದೆ. ಹಾಗೆಯೇ 1 ಕೆ.ಜಿ ಬೆಳ್ಳಿ ದರ ದರ 2,500 ರೂಪಾಯಿ ಇದೆ.

ಇದನ್ನೂ ಓದಿ: Taxation On Gold Investments: ಚಿನ್ನದ ಮೇಲಿನ ಹೂಡಿಕೆಗೆ ತೆರಿಗೆ ಲೆಕ್ಕಾಚಾರ ಹೇಗೆ?

ಇದನ್ನೂ ಓದಿ: Gold Silver Price: ಗ್ರಾಹಕರೇ ಇಲ್ಲೊಮ್ಮೆ ಗಮನಿಸಿ.. ಏರಿಕೆಯತ್ತ ಹೆಜ್ಜೆ ಇಟ್ಟ ಚಿನ್ನ ದರ..