ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್​: 3ನೇ ಹಂತದ ಮೆಟ್ರೋಗೆ ಜಿಯೋ ಟೆಕ್ನಿಕಲ್ ಸರ್ವೆಗೆ ಮುಂದಾದ BMRC

| Updated By: ಗಂಗಾಧರ​ ಬ. ಸಾಬೋಜಿ

Updated on: Aug 21, 2024 | 9:16 PM

ಬೆಂಗಳೂರಿನ 3ನೇ ಹಂತದ ಮೆಟ್ರೋಗೆ ಕೇಂದ್ರ ಕ್ಯಾಬಿನೆಟ್​ನಲ್ಲಿ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇದರ ಬೆನ್ನಲ್ಲೇ ಮೆಟ್ರೋ 3ನೇ ಹಂತಕ್ಕೆ ಜಿಯೋ ಟೆಕ್ನಿಕಲ್ ಸರ್ವೆಗೆ ಬಿಎಂಆರ್​ಸಿಎಲ್​ ಮುಂದಾಗಿದೆ. ಹೊಸಹಳ್ಳಿ ಟೂ ಕಡಬಗೆರೆ ಮತ್ತು ಕೆಂಪಾಪುರ ಟೂ ಜೆಪಿ ನಗರ ಭೂ ಪರೀಕ್ಷೆ ಮಾಡಲಿರುವ ನಮ್ಮ ಮೆಟ್ರೋ, ಎರಡು ಮಾರ್ಗದಲ್ಲೂ 12 ರಿಂದ 20 ಮೀಟರ್ ಆಳ ಕೊರೆದು ಭೂಮಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಮೆಟ್ರೋ ಅಧಿಕಾರಿ ಯಶ್ವಂತ್ ಚೌವ್ಹಾಣ್ ಮಾಹಿತಿ ನೀಡಿದ್ದಾರೆ.

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್​: 3ನೇ ಹಂತದ ಮೆಟ್ರೋಗೆ ಜಿಯೋ ಟೆಕ್ನಿಕಲ್ ಸರ್ವೆಗೆ ಮುಂದಾದ BMRC
ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್​: 3ನೇ ಹಂತದ ಮೆಟ್ರೋಗೆ ಜಿಯೋ ಟೆಕ್ನಿಕಲ್ ಸರ್ವೆಗೆ ಮುಂದಾದ BMRC
Follow us on

ಬೆಂಗಳೂರು, ಆಗಸ್ಟ್​ 21: 3ನೇ ಹಂತದ ಮೆಟ್ರೋ (Metro) ಮಾರ್ಗಕ್ಕೆ ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ. ಇದರಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRC) ಅಧಿಕಾರಿಗಳು ಫುಲ್ ಆಕ್ಟಿವ್ ಆಗಿದ್ದು, ಜಿಯೋ ಟೆಕ್ನಿಕಲ್ ಸರ್ವೆ ಮಾಡಲು ಮುಂದಾಗಿದ್ದಾರೆ. ಕಳೆದ ವಾರವಷ್ಟೇ ಕೇಂದ್ರ ಕ್ಯಾಬಿನೆಟ್​ನಲ್ಲಿ ಬೆಂಗಳೂರಿನ 3ನೇ ಹಂತದ ಮೆಟ್ರೋಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಕೇಂದ್ರ ಅನುಮತಿ ಕೊಟ್ಟಿದೆ, ಫುಲ್ ಅಲರ್ಟ್ ಆಗಿರುವ ಬಿಎಂಆರ್​ಸಿಎಲ್​ ಈ ಮಾರ್ಗದ ಕಾಮಗಾರಿ ವಿಳಂಬವಾಗದಂತೆ ಕ್ರಮಕ್ಕೆ ಮುಂದಾಗಿದೆ‌.

ಮೆಟ್ರೋ 3ನೇ ಹಂತಕ್ಕೆ ಜಿಯೋ ಟೆಕ್ನಿಕಲ್ ಸರ್ವೆಗೆ ಬಿಎಂಆರ್​ಸಿಎಲ್​ ಮುಂದಾಗಿದೆ. ಹೊಸಹಳ್ಳಿ ಟೂ ಕಡಬಗೆರೆ ಮತ್ತು ಕೆಂಪಾಪುರ ಟೂ ಜೆಪಿ ನಗರ ಭೂ ಪರೀಕ್ಷೆ ಮಾಡಲಿರುವ ನಮ್ಮ ಮೆಟ್ರೋ, ಎರಡು ಮಾರ್ಗದಲ್ಲೂ 12 ರಿಂದ 20 ಮೀಟರ್ ಆಳ ಕೊರೆದು ಭೂಮಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಮೆಟ್ರೋ ಅಧಿಕಾರಿ ಯಶ್ವಂತ್ ಚೌವ್ಹಾಣ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಇಲ್ಲದೆ ಜನರ ಪರದಾಟ; ದುಪ್ಪಟ್ಟು ಹಣ ಪೀಕುತ್ತಿರುವ ಆಟೋ, ಕ್ಯಾಬ್ ಚಾಲಕರು

ಇನ್ನೂ ಈ ಜಿಯೋ ಟೆಕ್ನಿಕಲ್ ಸರ್ವೆಯಲ್ಲಿ 50 ಮೀಟರ್ ಉದ್ದ ಮತ್ತು ಅಗಲದ ಅಳತೆಯಲ್ಲಿ ಎಡಕ್ಕೆ ಮತ್ತು ಬಲಕ್ಕೆ 12 ರಿಂದ 20 ಮೀಟರ್ ಭೂಮಿಯನ್ನು ಕೊರೆದು ಪರೀಕ್ಷೆ ಮಾಡಲಾಗುತ್ತದೆ. ಕಾಳೇನ ಅಗ್ರಹಾರ ಟೂ ನಾಗವಾರ ಮೆಟ್ರೋ ಕಾಮಗಾರಿ ವೇಳೆ ಬೃಹತ್ ಬಂಡೆಗಲ್ಲುಗಳು ಸಿಕ್ಕಿ ಕಾಮಗಾರಿ ವಿಳಂಬವಾಗಿದೆ. ಹಾಗಾಗಿ ಈ ಮಾರ್ಗದಲ್ಲಿ ಯಾವ ಸ್ಥಳದಲ್ಲಿ ಬಂಡೆಗಲ್ಲು ಇದೆ ಎಂದು ಪರೀಕ್ಷೆ ಮಾಡಲು ಬಿಎಂಆರ್​ಸಿಎಲ್​ ಮುಂದಾಗಿದೆ.

ಎರಡು ತಿಂಗಳುಗಳ ಕಾಲ ಈ ಜಿಯೋ ಟೆಕ್ನಿಕಲ್ ಸರ್ವೆ ನಡೆಯಲಿದೆ. ಸರ್ವೆ ಬಂದ ಮೇಲೆ ಟೆಂಡರ್ ಕರೆದು ಮೆಟ್ರೋ ಕಾಮಗಾರಿ ಆರಂಭ ಮಾಡಲಾಗುತ್ತದೆ. 1ನೇ ಕಾರಿಡಾರ್​​ ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ 32.15 ಕಿಲೋ ಮೀಟರ್​ ಮಾರ್ಗದಲ್ಲಿ 21 ನಿಲ್ದಾಣಗಳಿರುತ್ತವೆ. 2ನೇ ಕಾರಿಡಾರ್​​ ಹೊಸಹಳ್ಳಿಯಿಂದ ಕಡಬಗೆರೆಯ ವರೆಗೂ ಇಲ್ಲಿ 12.50 ಕಿಲೋ ಮೀಟರ್ ಇದ್ದು 9 ನಿಲ್ದಾಣಗಳು ಇರಲಿವೆ. ಒಟ್ಟು 44.65 ಕಿ.ಮೀ ಉದ್ದವಿರುವ ಎರಡು ಮೆಟ್ರೋ ಮಾರ್ಗ, 15,611 ಕೋಟಿ ರೂ. ವೆಚ್ಚದಲ್ಲಿ ಎರಡು ಮಾರ್ಗದ ಕಾಮಗಾರಿ ನಡೆಯಲಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ: ಈ ದಿನಗಳಂದು ಸಂಪೂರ್ಣ ಸ್ಥಗಿತ

ಈ ಬಗ್ಗೆ ವಾಹನ ಸವಾರರು ಸಂತಸ ವ್ಯಕ್ತಪಡಿಸುತ್ತಾರೆ. ಈ ಮಾರ್ಗದಲ್ಲೂ ಮೆಟ್ರೋ ಬರಲಿ ಎಂದು ಸಾಕಷ್ಟು ವರ್ಷಗಳಿಂದ ಕಾಯುತ್ತಿದ್ದೆವು. ಕೇಂದ್ರ ಅನುಮತಿ ನೀಡಿರುವುದು ಸಂತೋಷ, ಜೆಪಿ ನಗರದಿಂದ ನಾಯಂಡಹಳ್ಳಿ ಸಿಗ್ನಲ್ ಹೋಗಬೇಕು ಅಂದರೆ ಗಂಟೆಗಟ್ಟಲೆ ಟ್ರಾಫಿಕ್​ನಲ್ಲಿ ನಿಲ್ಲಬೇಕು ಎಂದು ವಾಹನ ಸವಾರ ಇನಾಯತ್ ಅಲಿ ಹೇಳುತ್ತಾರೆ.

ಈ ಎರಡು ಮೆಟ್ರೋ ಮಾರ್ಗ ಓಪನ್ ಆಗುವುದರಿಂದ ಹೆಬ್ಬಾಳ ಮತ್ತು ಜೆಪಿ ನಗರ ಭಾಗದಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ, ದೊಡ್ಡ ಮಟ್ಟದಲ್ಲಿ ಅನುಕೂಲ ಆಗುವುದರಲ್ಲಿ ನೋ ಡೌಟ್. ಆದಷ್ಟು ಬೇಗ ಕಾಮಗಾರಿ ಆರಂಭ ಮಾಡಲಿ ಎನ್ನುವುದು ಮೆಟ್ರೋ ಪ್ರಯಾಣಿಕರ ಆಶಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:12 pm, Wed, 21 August 24