ದಸರಾ ಹಬ್ಬಕ್ಕಾಗಿ ಗೃಹಲಕ್ಷ್ಮೀ ಹಣಕ್ಕೆ ಕಾಯುತ್ತಿರುವವರಿಗೆ ಗುಡ್ನ್ಯೂಸ್
ಎರಡು ತಿಂಗಳ ಕಂತಿನ ಹಣ ಹಾಕಿಲ್ಲ ಅಂತ ಚಿಂತೆಯಲ್ಲಿದ್ದ ಗೃಹಲಕ್ಷ್ಮೀಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇದೀಗ ಗುಡ್ ನ್ಯೂಸ್ ನೀಡಿದ್ದು, ಸಂತಸ ಉಂಟುಮಾಡಿದೆ. ನಾಲ್ಕು ಸಾವಿರ ಹಣವನ್ನ ಜಮಾವಣೆ ಮಾಡುವುದು ಕೊನೆ ಹಂತದಲ್ಲಿದ್ದು ಇದರಿಂದ ಸರ್ಕಾರಕ್ಕೂ ಮಹಿಳೆಯರು ಧನ್ಯವಾದ ತಿಳಿಸುತ್ತಿದ್ದಾರೆ.
ಬೆಳಗಾವಿ, ಅಕ್ಟೋಬರ್ 04: ಎಲ್ಲಡೆ ನವರಾತ್ರಿ ಸಂಭ್ರಮ ಮನೆ ಮಾಡಿ, ಮಹಿಳೆಯರು ಒಂಬತ್ತು ದಿನಗಳ ಕಾಲ ದೇವಿ ಆರಾಧನೆ ಮಾಡುವ ಈ ಹಬ್ಬಕ್ಕೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಗೃಹಲಕ್ಷ್ಮೀ ಯೋಜನೆಯ (Gruha Lakshmi Scheme) ಎರಡು ಕಂತಿನ ಹಣ ಬಿಡುಗಡೆ ಮಾಡುತ್ತಿದ್ದು, ನಾಲ್ಕು ಸಾವಿರ ರೂ. ಮಹಿಳಾ ಮಣಿಗಳಿಗೆ ಅನುಕೂಲ ಆಗಿದೆ. ಗೃಹಲಕ್ಷ್ಮೀ ಹಣ ಬಿಡುಗಡೆ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನೂ? ಯಾವ ಯಾವ ತಿಂಗಳ ಹಣ ಮಹಿಳೆಯರ ಅಕೌಂಟ್ಗೆ ಬರಲಿದೆ ಈ ಕುರಿತು ಒಂದು ವರದಿ ಇಲ್ಲಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಸಾಕಷ್ಟು ಅನುಕೂಲ ಆಗಿದೆ. ಸರ್ಕಾರ ರಚನೆಯಾದ ಬಳಿಕ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಕ್ಕಿತ್ತು. ಈವರೆಗೂ ಬರೋಬ್ಬರಿ 1ಕೋಟಿ 24 ಲಕ್ಷಕ್ಕೂ ಅಧಿಕ ಮನೆಯ ಯಜಮಾನಿಯರು ಈ ಯೋಜನೆ ನೊಂದಣಿ ಮಾಡಿಕೊಂಡಿದ್ದಾರೆ. ಗೃಹಲಕ್ಷ್ಮೀ ಯೋಜನೆ ಆರಂಭವಾದಾಗಿನಿಂದ ಹದಿಮೂರು ಕಂತುಗಳ ಹಣ ಅಂದರೆ ಬರೋಬ್ಬರಿ 26 ಸಾವಿರ ಪ್ರತಿಯೊಬ್ಬ ಮನೆ ಯಜಮಾನಿ ಅಕೌಂಟ್ಗೆ ಜಮಾ ಆಗಿವೆ.
ಇದನ್ನೂ ಓದಿ: ಗೃಹಲಕ್ಷ್ಮೀಯರಿಗೆ ದಸರಾ ಗಿಫ್ಟ್: ನವರಾತ್ರಿಗೆ ಮಹಿಳೆಯರ ಖಾತೆಗೆ 4 ಸಾವಿರ ರೂ. ಜಮೆ
ಆದರೆ ಕಳೆದ ಎರಡು ತಿಂಗಳಿಂದ ಜುಲೈ ಮತ್ತು ಆಗಷ್ಟ್ ಎರಡು ತಿಂಗಳ ಕಂತಿನ ಹಣ ಬಂದಿರಲಿಲ್ಲ. ಹಲವು ತಾಂತ್ರಿಕ ಕಾರಣಗಳಿಂದ ಎರಡು ತಿಂಗಳ ಕಂತಿನ ಹಣ ಜಮಾವಣೆ ಆಗಿರಲಿಲ್ಲ. ಆದರೆ ಇದೀಗ ಎರಡು ಕಂತಿನ ಹಣ ನವರಾತ್ರಿ ಹಬ್ಬದಲ್ಲೇ ಜಮಾವಣೆ ಮಾಡಲಾಗುತ್ತಿದೆ ಅಂತಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಇನ್ನೂ ಜುಲೈ ಮತ್ತು ಆಗಷ್ಟ್ ತಿಂಗಳ ಕಂತಿನ ಹಣವನ್ನ ಹಾಕಿಯೇ ಬೆಂಗಳೂರಿನಿಂದ ಬೆಳಗಾವಿಗೆ ಬಂದಿದ್ದೇನೆ ಅಂತಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಜುಲೈ ತಿಂಗಳ ಕಂತಿನ ಹಣವನ್ನ ಇದೇ ತಿಂಗಳು ಏಳರಂದು ಹಾಗೂ ಆಗಷ್ಟ್ ತಿಂಗಳ ಹಣವನ್ನ ಇದೇ ತಿಂಗಳು 9ರಂದು ಜಮಾವಣೆ ಮಾಡಲಾಗುತ್ತಿದೆ. ಎರಡು ದಿನದ ಅಂತರದಲ್ಲಿ ನಾಲ್ಕು ಸಾವಿರ ರೂಪಾಯಿ ಹಣವನ್ನ ಜಮಾವಣೆ ಮಾಡಲಾಗುತ್ತಿದ್ದು, ಒಳ್ಳೆ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳುವಂತೆ ಹೆಬ್ಬಾಳ್ಕರ್ ಮನವಿ ಮಾಡಿಕೊಂಡಿದ್ದಾರೆ.
ಇನ್ನೂ ರಾಜ್ಯದ 1 ಲಕ್ಷ 22 ಸಾವಿರ ಗೃಹಲಕ್ಷ್ಮೀಯರಿಗೆ ಐದು ಸಾವಿರ ಕೋಟಿ ರೂ. ಹಣ ಜಮಾವಣೆ ಮಾಡುತ್ತಿರುವುದಾಗಿ ಕೂಡ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಇನ್ನೂ ಹಬ್ಬದ ಸಂದರ್ಭದಲ್ಲಿ ಜಮಾವಣೆ ಮಾಡುತ್ತಿರುವುದು ಮಹಿಳೆಯರಿಗೆ ಸಾಕಷ್ಟು ಖುಷಿ ತಂದು ಕೊಟ್ಟಿದೆ. ಒಮ್ಮೆಲೆ ನಾಲ್ಕು ಸಾವಿರ ಹಣ ಬರುತ್ತಿರುವುದು ಹಬ್ಬದಲ್ಲಿ ಅನುಕೂಲ ಆಗಲಿದೆ ಅಂತಾ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಯ 9 ನೇ ಕಂತು ಬಿಡುಗಡೆ; ಮನೆಗೆ ವಾಷಿಂಗ್ ಮಷಿನ್ ತಂದ ಗೃಹಿಣಿ
ಒಟ್ಟಿನಲ್ಲಿ ಎರಡು ತಿಂಗಳ ಕಂತಿನ ಹಣ ಹಾಕಿಲ್ಲ ಅಂತ ಚಿಂತೆಯಲ್ಲಿದ್ದ ಗೃಹಲಕ್ಷ್ಮೀಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇದೀಗ ಗುಡ್ ನ್ಯೂಸ್ ನೀಡಿದ್ದು, ಸಂತಸ ಉಂಟುಮಾಡಿದೆ. ನಾಲ್ಕು ಸಾವಿರ ಹಣವನ್ನ ಜಮಾವಣೆ ಮಾಡುವುದು ಕೊನೆ ಹಂತದಲ್ಲಿದ್ದು ಇದರಿಂದ ಸರ್ಕಾರಕ್ಕೂ ಮಹಿಳೆಯರು ಧನ್ಯವಾದ ತಿಳಿಸುತ್ತಿದ್ದಾರೆ. ಪ್ರತಿ ತಿಂಗಳು ತಪ್ಪದೇ ಗೃಹಲಕ್ಷ್ಮೀ ಯೋಜನೆ ಬರ್ತಿರುವುದು ಸಾಕಷ್ಟು ಬಡ ಕುಟುಂಬಗಳಿಗೆ ಅನಕೂಲ ಕೂಡ ಆಗಿದ್ದು ಹೆಬ್ಬಾಳ್ಕರ್ ಅವರಿಗೂ ಅಭಿನಂದಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.