
ಬೆಂಗಳೂರು, ಮೇ 29: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ನೈರುತ್ಯ ರೈಲ್ವೆ (South Western Railway) ಆಗಾಗ ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸುತ್ತಿರುತ್ತದೆ. ಅದೇ ರೀತಿಯಾಗಿ ಕೆಲ ರೈಲುಗಳಿಗೆ ತಾತ್ಕಾಲಿಕ ಹೆಚ್ಚುವರಿ ಬೋಗಿಗಳನ್ನು (additional coaches) ಅಳವಡಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದೆ. ಮೈಸೂರು- ತಾಳಗುಪ್ಪ- ಮೈಸೂರು ಮತ್ತು ಬೆಂಗಳೂರು-ಸಾಂಗಲಿ-ಬೆಂಗಳೂರು ಸೇರಿದಂತೆ 10 ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ನೈರುತ್ಯ ರೈಲ್ವೆ ನೀಡಿದೆ. ಯಾವೆಲ್ಲಾ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ನೀಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.
1. ರೈಲು ಸಂಖ್ಯೆ 16227/16228 ಮೈಸೂರು – ತಾಳಗುಪ್ಪ – ಮೈಸೂರು ದೈನಂದಿನ ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ಸಾಮಾನ್ಯ ದ್ವಿತೀಯ ದರ್ಜೆ (ಜಿಎಸ್) ಕೋಚ್ ಅಳವಡಿಸಲಾಗುವುದು.
Kindly note the extension of temporary augmentation of additional coaches for the following trains to manage the extra rush of passengers.#SWRupdates pic.twitter.com/xjVGiJioZB
— South Western Railway (@SWRRLY) May 27, 2025
ಇದನ್ನೂ ಓದಿ: Karnataka Rains: ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಧಾರಾಕಾರ ಮಳೆಯ ಮುನ್ಸೂಚನೆ
2. ರೈಲು ಸಂಖ್ಯೆ 16589/16590 ಕೆಎಸ್ಆರ್ ಬೆಂಗಳೂರು-ಸಾಂಗ್ಲಿ- ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕವಾಗಿ ಒಂದು ಎಸಿ ಪ್ರಥಮ ದರ್ಜೆ ಕೋಚ್ ಅಳವಡಿಸಲಾಗುವುದು.
3. ರೈಲು ಸಂಖ್ಯೆ 20653/20654 ಕೆಎಸ್ಆರ್ ಬೆಂಗಳೂರು – ಬೆಳಗಾವಿ – ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕವಾಗಿ ಒಂದು ಎಸಿ ಪ್ರಥಮ ದರ್ಜೆ ಕೋಚ್ ಅಳವಡಿಸಲಾಗುವುದು.
4. ರೈಲು ಸಂಖ್ಯೆ 22685/22686 ಯಶವಂತಪುರ-ಚಂಡೀಗಢ – ಯಶವಂತಪುರ ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕವಾಗಿ ಒಂದು ಎಸಿ 3-ಟೈರ್ ಕೋಚ್ ಅಳವಡಿಸಲಾಗುವುದು.
5. ರೈಲು ಸಂಖ್ಯೆ 12079/12080 ಕೆಎಸ್ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ – ಕೆಎಸ್‌ಆರ್ ಬೆಂಗಳೂರು ಜನ ಶತಾಬ್ದಿ ಎಕ್ಸ್‌ಪ್ರೆಸ್ ಅನ್ನು ತಾತ್ಕಾಲಿಕವಾಗಿ ಒಂದು ಎರಡನೇ ದರ್ಜೆಯ ಚೇರ್ ಕಾರ್ ಕೋಚ್‌ನೊಂದಿಗೆ ಹೆಚ್ಚಿಸಲಾಗುವುದು.
6. ರೈಲು ಸಂಖ್ಯೆ 12089/12090 ಕೆಎಸ್ಆರ್ ಬೆಂಗಳೂರು – ಶಿವಮೊಗ್ಗ ಪಟ್ಟಣ – ಕೆಎಸ್ಆರ್ ಬೆಂಗಳೂರು ಜನ ಶತಾಬ್ದಿ ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕವಾಗಿ ಒಂದು ಎರಡನೇ ದರ್ಜೆಯ ಚೇರ್ ಕಾರ್ (1-LSCZ) ಕೋಚ್ ಅಳವಡಿಸಲಾಗುವುದು.
7. ರೈಲು ಸಂಖ್ಯೆ 12649/12650 ಯಶವಂತಪುರ – ಹಜರತ್ ನಿಜಾಮುದ್ದೀನ್ – ಯಶವಂತಪುರ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕವಾಗಿ ಒಂದು ಎಸಿ 3-ಟೈರ್ ಕೋಚ್ ಅಳವಡಿಸಲಾಗುವುದು.
ಇದನ್ನೂ ಓದಿ: ಕರ್ನಾಟಕದಲ್ಲಿ 15,441 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ: 5,277 ಉದ್ಯೋಗ ಸೃಷ್ಟಿ
8. ರೈಲು ಸಂಖ್ಯೆ 12629/12630 ಯಶವಂತಪುರ-ಹಜರತ್ ನಿಜಾಮುದ್ದೀನ್ – ಯಶವಂತಪುರ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕವಾಗಿ ಒಂದು ಎಸಿ 3-ಟೈರ್ ಕೋಚ್ ಅಳವಡಿಸಲಾಗುವುದು.
9. ರೈಲು ಸಂಖ್ಯೆ 16591/16592 ಎಸ್‌ಎಸ್‌ಎಸ್ ಹುಬ್ಬಳ್ಳಿ-ಮೈಸೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕವಾಗಿ ಒಂದು ಸ್ಲೀಪರ್ ಕ್ಲಾಸ್ ಕೋಚ್ ಅಳವಡಿಸಲಾಗುವುದು.
10. ರೈಲು ಸಂಖ್ಯೆ 16535/16536 ಮೈಸೂರು-ಪಂಢರಪುರ-ಮೈಸೂರು ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕವಾಗಿ ಒಂದು ಸ್ಲೀಪರ್ ಕ್ಲಾಸ್ ಕೋಚ್ ಅಳವಡಿಸಲಾಗುವುದು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.