AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Government Employees Strike: ಸರ್ಕಾರಿ ನೌಕರರ ಮುಷ್ಕರ ವಾಪಸ್; ಷಡಕ್ಷರಿ, ಗುರುಸ್ವಾಮಿ ಮಧ್ಯೆ ವಾಕ್ಸಮರ

ನೌಕರರ ಹಿತದೃಷ್ಟಿಯಿಂದ ಷಡಕ್ಷರಿ ನಡೆಯನ್ನು ವಿರೋಧಿಸುತ್ತೇನೆ. ನಮ್ಮ ಬೇಡಿಕೆ ಸರಿಯಾಗಿ ಈಡೇರುವುದಕ್ಕೂ ಮುನ್ನವೇ ಅಧ್ಯಕ್ಷರ ಈ ಆತುರದ ನಿರ್ಧಾರವೇಕೆ? ಅವರು ಏನೇ ಹೇಳಲಿ ನಾವು ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಗುರುಸ್ವಾಮಿ ಹೇಳಿದ್ದಾರೆ.

Government Employees Strike: ಸರ್ಕಾರಿ ನೌಕರರ ಮುಷ್ಕರ ವಾಪಸ್; ಷಡಕ್ಷರಿ, ಗುರುಸ್ವಾಮಿ ಮಧ್ಯೆ ವಾಕ್ಸಮರ
ಸಿ.ಎಸ್.ಷಡಕ್ಷರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ
Ganapathi Sharma
|

Updated on:Mar 01, 2023 | 2:48 PM

Share

ಬೆಂಗಳೂರು: ಶೇಕಡಾ 17ರಷ್ಟು ವೇತನ ಹೆಚ್ಚಿಸಿ ಆದೇಶ ಪ್ರಕಟವಾದ ಬೆನ್ನಲ್ಲೇ ಸರ್ಕಾರಿ ನೌಕರರು  (government employees) ಮುಷ್ಕರ ವಾಪಸ್ ಪಡೆದಿರುವುದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್​ ಷಡಕ್ಷರಿ ಹಾಗೂ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ. ಗುರುಸ್ವಾಮಿ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ. ಷಡಕ್ಷರಿ ಏಕಪಕ್ಷಿಯಾಗಿ ನಿರ್ಧಾರ ತೆಗೆದುಕೊಂಡಿದ್ದು ಸರಿಯಲ್ಲ ಎಂದು ಗುರುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೋರಾಟದಲ್ಲಿ ರಾಜಕಾರಣ ಬೆರೆಯಬಾರದು. ಷಡಕ್ಷರಿ ನಡೆ ಸರಿಯಿಲ್ಲ. ಇದನ್ನು ವಿರೋಧಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಜತೆಗೆ ಎನ್​ಪಿಎಸ್ ಹೋರಾಟ ಸಂಘದ ಅಧ್ಯಕ್ಷ ಶಾಂತರ‍ಾಮ್​ರಿಂದಲೂ ವಿರೋಧ ವ್ಯಕ್ತವಾಗಿದೆ.

ನೌಕರರ ಹಿತದೃಷ್ಟಿಯಿಂದ ಷಡಕ್ಷರಿ ನಡೆಯನ್ನು ವಿರೋಧಿಸುತ್ತೇನೆ. ನಮ್ಮ ಬೇಡಿಕೆ ಸರಿಯಾಗಿ ಈಡೇರುವುದಕ್ಕೂ ಮುನ್ನವೇ ಅಧ್ಯಕ್ಷರ ಈ ಆತುರದ ನಿರ್ಧಾರವೇಕೆ? ಅವರು ಏನೇ ಹೇಳಲಿ ನಾವು ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಗುರುಸ್ವಾಮಿ ಹೇಳಿದ್ದಾರೆ.

ಗುರುಸ್ವಾಮಿ ವಿರುದ್ಧ ಷಡಕ್ಷರಿ ಏಕವಚನದಲ್ಲಿ ವಾಗ್ದಾಳಿ

ಗುರುಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿರುವ ಷಡಕ್ಷರಿ, ಆತ ಒಬ್ಬ ಸರ್ಕಾರಿ ನೌಕರ. ಹಂಗಾಮಿ ಅಧ್ಯಕ್ಷ ಅಷ್ಟೇ ಎಂದು ಹೇಳಿದ್ದಾರೆ. ಮೊನ್ನೆ ನಡೆದಿರುವ ಸಭೆಯಲ್ಲಿ ಗುರುಸ್ವಾಮಿ ಕೂಡ ಇದ್ದರು. ಅವರು ಪ್ರಚಾರಕ್ಕಾಗಿ ಈಗ ಹೀಗೆ ಮಾಡುತ್ತಿದ್ದಾರೆ. ಅವರ ಮಾತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾದ ಅಗತ್ಯ ಇಲ್ಲ. ಸಚಿವಾಲಯದ ಎಲ್ಲಾ ನೌಕರರು ನಮ್ಮ ಜೊತೆಯೇ ಇದ್ದಾರೆ ಎಂದು ಷಡಕ್ಷರಿ ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರಿ ನೌಕರರ ವೇತನ ಶೇ.17ರಷ್ಟು ಹೆಚ್ಚಳಕ್ಕೆ ನಿರ್ಧಾರ: ಮಧ್ಯಂತರ ಪರಿಹಾರ ವೇತನ ಘೋಷಿಸಿದ ಬೊಮ್ಮಾಯಿ

ಸರ್ಕಾರಿ ನೌಕರರು ಮುಷ್ಕರ ನಿಲ್ಲಿಸಲು ಪಟ್ಟು ಬಿಡದ ಕಾರಣ ತ್ವರಿತ ನಿರ್ಧಾರ ಕೈಗೊಂಡಿದ್ದ ರಾಜ್ಯ ಸರ್ಕಾರ ಶೇ 17ರಷ್ಟು ವೇತನ ಹೆಚ್ಚಳ ನಿರ್ಧಾರ ಪ್ರಕಟಿಸಿತ್ತು. ವೇತನ ಹೆಚ್ಚಳ ಆದೇಶವನ್ನು ನೌಕರರ ಸಂಘ ಸ್ವಾಗತಿಸಿದ್ದು, ಮುಷ್ಕರವನ್ನು ಕೊನೆಗೊಳಿಸಿತ್ತು. 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ವೇತನ ಹೆಚ್ಚಳ ಮಾಡಬೇಕು, ಎನ್​ಪಿಎಸ್ ಬದಲಿಗೆ ಒಪಿಎಸ್​ ಜಾರಿಗೆ ತರಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ನೌಕರರು ಬುಧವಾರ ಬೆಳಗ್ಗೆಯಿಂದ ಮುಷ್ಕರ ಆರಂಭಿಸಿದ್ದರು. ನೌಕರರ ಮನವೊಲಿಸುವ ನಿಟ್ಟಿನಲ್ಲಿ ಮಂಗಳವಾರ ತಡರಾತ್ರಿವರೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆದಿತ್ತು. ಆದರೆ, ಅಂತಿಮ ತೀರ್ಮಾನಕ್ಕೆ ಬಾರದ ಕಾರಣ ಮುಷ್ಕರ ನಡೆಸುವ ನಿರ್ಧಾರವನ್ನು ನೌಕರರ ಸಂಘ ಕೈಬಿಟ್ಟಿರಲಿಲ್ಲ. ಇದೀಗ ಸರ್ಕಾರ ಜಾಣ ನಡೆ ಅನುಸರಿಸಿದ್ದು, ನೌಕರರು ಮುಷ್ಕರ ವಾಪಸ್ ಪಡೆಯುವಂತೆ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:41 pm, Wed, 1 March 23