ನನ್ನ ನೇತೃತ್ವದ ವಿಜಯ ಸಂಕಲ್ಪ ರಥಯಾತ್ರೆಗೆ ಮಾ.3ರಂದು ಅಮಿತ್ ಶಾ ಚಾಲನೆ: ಆರ್ ಅಶೋಕ್
ಕಾಂಗ್ರೆಸ್ನವರಿಗೆ ಪಾಪ ನಾಯಕತ್ವದ ಕೊರತೆ ಇದೆ. ಕಾಂಗ್ರೆಸ್ ನಾಯಕತ್ವ ಇಲ್ಲದ ಬಂಜರು ಭೂಮಿ. ಕಾಂಗ್ರೆಸ್ನವರು ಮರುಭೂಮಿಯಲ್ಲಿ ನೀರು ಹುಡುಕುತ್ತಿದ್ದಾರೆ. ಕಾಂಗ್ರೆಸ್ಗೆ ಅಂತಿಮ ಮೊಳೆ ಹೊಡೆಯುವ ಚುನಾವಣೆ ಇದು ಎಂದು ಕಂದಾಯ ಸಚಿವ ಆರ್. ಅಶೋಕ್ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರು: ನನ್ನ ನೇತೃತ್ವದ ವಿಜಯ ಸಂಕಲ್ಪ ರಥಯಾತ್ರೆಗೆ ಮಾ.3ರಂದು ಚಾಲನೆ ಸಿಗಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ ದೇವನಹಳ್ಳಿಯ ಆವತಿ ಗ್ರಾಮದ ಚೆನ್ನಕೇಶವ ದೇಗುಲ ಬಳಿ ಚಾಲನೆ ನೀಡಲಾಗುವುದು. ಬಳಿಕ ದೇವನಹಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತೆ ಎಂದು ಕಂದಾಯ ಸಚಿವ ಆರ್. ಅಶೋಕ್ (R Ashok) ಹೇಳಿದ್ದಾರೆ.
ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನನ್ನ ನೇತೃತ್ವದಲ್ಲಿ ರಥಯಾತ್ರೆಯಲ್ಲಿ ಸಚಿವರಾದ ಅಶ್ವತ್ಥ್ ನಾರಾಯಣ, ಗೋಪಾಲಯ್ಯ, ಡಾ.ಸುಧಾಕರ್ ಇರಲಿದ್ದಾರೆ. ಈ ರಥಯಾತ್ರೆ ರಾಮನಗರ, ಚನ್ನಪಟ್ಟಣ, ಕೋಲಾರ, ತುಮಕೂರು, ಚಿತ್ರದುರ್ಗ ಮೂಲಕ ಮಾರ್ಚ್ 25ಕ್ಕೆ ದಾವಣಗೆರೆ ತಲುಪುತ್ತದೆ ಮಾಹಿತಿ ನೀಡಿದರು. ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಸಾರ್ವಜನಿಕ ಸಭೆಯಲ್ಲಿ 30 ರಿಂದ 40 ಸಾವಿರ ಜನ ಸೇರುತ್ತಾರೆ. ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರ ತರಲು ಮೋದಿ ಪಾಂಚಜನ್ಯ ಊದುತ್ತಾರೆ ಎಂದು ಹೇಳಿದರು.
ನಾಯಕತ್ವ ಇಲ್ಲದ ಬಂಜರು ಭೂಮಿ ಕಾಂಗ್ರೆಸ್ಗೆ ಇದು ಅಂತಿಮ ಮೊಳೆ ಹೊಡೆಯುವ ಚುನಾವಣೆ
ಕಾಂಗ್ರೆಸ್ನವರಿಗೆ ಪಾಪ ನಾಯಕತ್ವದ ಕೊರತೆ ಇದೆ. ಕಾಂಗ್ರೆಸ್ (Congress) ನಾಯಕತ್ವ ಇಲ್ಲದ ಬಂಜರು ಭೂಮಿ. ಕಾಂಗ್ರೆಸ್ನವರು ಮರುಭೂಮಿಯಲ್ಲಿ ನೀರು ಹುಡುಕುತ್ತಿದ್ದಾರೆ. ಕಾಂಗ್ರೆಸ್ಗೆ ಅಂತಿಮ ಮೊಳೆ ಹೊಡೆಯುವ ಚುನಾವಣೆ ಇದು. ನಮ್ಮ ಅಶ್ವಮೇಧದ ಕುದುರೆ ತಡೆಯಲು ಕಾಂಗ್ರೆಸ್ನಿಂದ ಅಸಾಧ್ಯ. ರಾಜ್ಯದಲ್ಲಿ ನಮ್ಮ ನಾಯಕ ಯಾರು ಎಂದು ನಮಗೆ ಕೇಳುತ್ತಾರೆ. ಕರ್ನಾಟಕದಲ್ಲಿ ನಮಗೆ ಬಿಎಸ್ ಯಡಿಯೂರಪ್ಪ (BS Yediyurappa), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನಾಯಕತ್ವ ಇದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi), ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath), ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಇದ್ದಾರೆ ಎಂದು ಮಾತನಾಡಿದರು.
ಮಧ್ಯಂತರ ವೇತನ ಹೆಚ್ಚಳ ವಿಚಾರವಾಗಿ ಮಾತನಾಡಿದ ಅವರು ಪ್ರತೀ 5 ವರ್ಷಕ್ಕೊಮ್ಮೆ ವೇತನ ಹೆಚ್ಚಳ ಮಾಡಬೇಕು. ಸಿದ್ದರಾಮಯ್ಯ ಸರ್ಕಾರ ಕೂಡ ಚುನಾವಣಾ ಸಮಯದಲ್ಲಿ ವೇತನ ಹೆಚ್ಚಿಸಿದ್ದರು. ನಿನ್ನೆ ಮುಖ್ಯಮಂತ್ರಿಗಳ ಜೊತೆ ಭೇಟಿಯಾಗಿ ಮಾತನಾಡಲಾಗಿತ್ತು. ಈಗ ವೇತನ ಹೆಚ್ಚಳ ಮಾಡಲಾಗಿದೆ. ನಿನ್ನೆ ರಾತ್ರಿಯೇ ಸಭೆ ಮಾಡಿರೋದ್ರಿಂದ ರಾಜ್ಯಪಾಲರ ಆದೇಶದ ಮೇಲೆ, ವೇತನ ಹೆಚ್ಚಳದ ಆದೇಶ ಆಗಿದೆ. ಎನ್ಪಿಎಸ್ ಬಗ್ಗೆ ಬೇಡಿಕೆ ಇಟ್ಟಿದ್ದು, ಚರ್ಚೆಯಾಗಿದೆ. 5 ರಾಜ್ಯಗಳಲ್ಲಿ ಮಾಡಿದ್ದಾರೆ. ಅದನ್ನು ಅಧ್ಯಯನ ಮಾಡಬೇಕಿದೆ. ಐದು ರಾಜ್ಯಗಳಲ್ಲಿ ಏನಾಗಿದೆ ವರದಿ ಕೊಡಿ ಅಂತ ಸೂಚಿಸಿದ್ದೇವೆ ಎಂದು ತಿಳಿಸಿದರು.
ನಾನು ಎಲ್ಲ ಜಾತಿಯ ನಾಯಕ, ಒಕ್ಕಲಿಗ ಜಾತಿಯಲ್ಲಿ ಹುಟ್ಟಿರುವೆ ಅಷ್ಟೆ
ನಾನು ಎಲ್ಲ ಜಾತಿಯ ನಾಯಕ, ಒಕ್ಕಲಿಗ ಜಾತಿಯಲ್ಲಿ ಹುಟ್ಟಿರುವೆ ಅಷ್ಟೇ. ನನ್ನನ್ನು ಯಾಕೆ ಒಕ್ಕಲಿಗ ಸಮುದಾಯಕ್ಕೆ ಸೀಮಿತ ಮಾಡುತ್ತೀರಿ. ನಾನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರೀತಿ ಹೇಳಲ್ಲ, ಮುಖ್ಯಮಂತ್ರಿಯಾಗುವುದು ಹಣೆಯಲ್ಲಿ ಬರೆದಿರಬೇಕು. ನನ್ನನ್ನು ಬೆಂಗಳೂರಿಗೆ ಸೀಮಿತ ಮಾಡಬೇಡಿ, ರಾಜ್ಯಾದ್ಯಂತ ಓಡಾಡುತ್ತಿದ್ದೇನೆ.ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಬಗ್ಗೆ ಸಿಎಂ ನಿರ್ಧರಿಸುತ್ತಾರೆ ಎಂದು ಜಾರಿಕೊಂಡರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:32 pm, Wed, 1 March 23