AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈಗಾರಿಕಾ ಅಭಿವೃದ್ಧಿ ನೆಪದಲ್ಲಿ ಭೂಸ್ವಾಧೀನಕ್ಕೆ ಮುಂದಾದ ಸರ್ಕಾರ? ತಿರುಗಿ ಬಿದ್ದ ರೈತರು

ಧಾರವಾಡ ನಗರಕ್ಕೆ ಹೊಂದಿಕೊಂಡೇ ಇರೋ ಈ ಗ್ರಾಮಸ್ಥರು ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಾರೆ. ಆದರೆ ಈಗಾಗಲೇ ಕೈಗಾರಿಕೆಗಳು ಮತ್ತು ಐಐಟಿ ತಮ್ಮ ಜಮೀನುಗಳನ್ನು ಕೊಟ್ಟಿದ್ದಾರೆ. ಈಗ ಅಳಿದುಳಿದ ಜಮೀನನ್ನು ಸಹ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಯೋಜನೆಯಡಿಯಲ್ಲಿ ಭೂ ಬ್ಯಾಂಕ್ ಮಾಡಲು ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳೋಕೆ ಮುಂದಾಗಿದೆ. ಆದರೆ ಇದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಕೈಗಾರಿಕಾ ಅಭಿವೃದ್ಧಿ ನೆಪದಲ್ಲಿ ಭೂಸ್ವಾಧೀನಕ್ಕೆ ಮುಂದಾದ ಸರ್ಕಾರ? ತಿರುಗಿ ಬಿದ್ದ ರೈತರು
ಕೈಗಾರಿಕಾ ಅಭಿವೃದ್ಧಿ ನೆಪದಲ್ಲಿ ಭೂಸ್ವಾಧೀನಕ್ಕೆ ಮುಂದಾದ ಸರ್ಕಾರ? ತಿರುಗಿ ಬಿದ್ದ ರೈತರು
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on:May 15, 2024 | 10:54 PM

Share

ಧಾರವಾಡ, ಮೇ 15: ಊರಿನ ರೈತರು ಕೇಂದ್ರ ಮತ್ತು ರಾಜ್ಯದ ಸರ್ಕಾರದ (Govt) ಮಹತ್ವದ ಯೋಜನೆಗಳಿಗೆಲ್ಲ ತಮ್ಮ ಭೂಮಿ ಕೊಟ್ಟವರು. ಧಾರವಾಡದ ಪ್ರತಿಷ್ಠಿತ ಐಐಟಿ ಇರೋದು ಕೂಡ ಆ ರೈತರ ಜಮೀನಿನಲ್ಲೇ. ಹೀಗಾಗಿ ಆ ರೈತರಿಗೆ ಇದ್ದಿದ್ದು ಅಳಿದುಳಿದ ಒಂದಷ್ಟು ಜಮೀನು (land) ಮಾತ್ರ. ಆದರೆ ಈಗ ಅದರ ಮೇಲೆಯೂ ಕಣ್ಣು ಹಾಕಿರೋ ಸರ್ಕಾರ, ಕೈಗಾರಿಕಾ ಅಭಿವೃದ್ಧಿ ನೆಪದಲ್ಲಿ ಭೂಸ್ವಾಧೀನಕ್ಕೆ ಮುಂದಾಗಿದೆ. ಆದರೆ ಭೂಮಿ ಬಿಟ್ಟು ಕೊಡಲು ಒಪ್ಪದ ರೈತರು ಸರ್ಕಾರದ ವಿರುದ್ಧ ಸಮರವನ್ನೇ ಸಾರಿದ್ದಾರೆ.

ಧಾರವಾಡದ ಪ್ರತಿಷ್ಠಿತ ಐಐಟಿ ಕಂಪೌಂಡ್​ಗೆ ಹೊಂದಿಕೊಂಡಿರುವ ಜಾಗ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ರೈತರ ಜಮೀನು. ಧಾರವಾಡ ನಗರಕ್ಕೆ ಹೊಂದಿಕೊಂಡೇ ಇರೋ ಈ ಗ್ರಾಮಸ್ಥರು ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಾರೆ. ಆದರೆ ಈಗಾಗಲೇ ಕೈಗಾರಿಕೆಗಳು ಮತ್ತು ಐಐಟಿ ತಮ್ಮ ಜಮೀನುಗಳನ್ನು ಕೊಟ್ಟಿದ್ದಾರೆ. ಈಗ ಅಳಿದುಳಿದ ಜಮೀನನ್ನು ಸಹ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಯೋಜನೆಯಡಿಯಲ್ಲಿ ಭೂ ಬ್ಯಾಂಕ್ ಮಾಡಲು ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳೋಕೆ ಮುಂದಾಗಿದೆ. ಆದರೆ ಇದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಧಾರವಾಡದಲ್ಲಿ ಮಾವು ಮೇಳ ಆರಂಭ; ಇಲ್ಲಿವೆ ವಿವಿಧ ಬಗೆಯ ಹಣ್ಣುಗಳು

ಯಾಕಂದ್ರೆ ಐಐಟಿಗಾಗಿ 470 ಎಕರೆ 21 ಗುಂಟೆ ಜಮೀನನ್ನು 2010-11ರಲ್ಲಿ ಎಕರೆಗೆ 26 ಲಕ್ಷ ರೂಪಾಯಿಯಂತೆ ಪಡೆದಿದ್ದಾರೆ. ಈಗ ಮತ್ತೇ 537 ಎಕರೆ 28 ಗುಂಟೆ ಕೃಷಿ ಜಮೀನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ವಿಚಿತ್ರ ಅಂದರೆ ಈ ಹಿಂದೆಯೇ 2009ರಲ್ಲಿ ಒಂದು ಅಧಿಸೂಚನೆ ಹೊರಡಿಸಿದ್ದರು. ಅದಾದ 13 ವರ್ಷಕ್ಕೆ ಎಕರೆಗೆ 30 ಲಕ್ಷದಂತೆ ಪಡೆಯಲು ಮುಂದಾದಾಗ ವಿರೋಧ ವ್ಯಕ್ತವಾಗಿತ್ತು. ಇದಕ್ಕೆ ವಿರೊಧ ಬಂದಾಗ, ಅದನ್ನು 35 ಲಕ್ಷಕ್ಕೆ ಏರಿಸಿದ್ದರು. ಇದಕ್ಕೂ ಒಪ್ಪದ ಸುಮಾರು 320 ಎಕರೆಗೆಯ ಜಮೀನಿನ ಮಾಲೀಕರು ಹೈಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಉಳಿದವರು ಕಡಿಮೆ ಬೆಲೆಗೆ ಭೂಮಿ ಕೊಡೋದಿಲ್ಲ ಅಂತಾ ಪಟ್ಟು ಹಿಡಿದಿದ್ದಾರೆ.

ಸದ್ಯ ರೈತರು ಎಕರೆಗೆ 35 ಲಕ್ಷದಂತೆ ಭೂಮಿ ಕೊಡಲು ಒಪ್ಪದೇ ಇರೋದಕ್ಕೆ ಸರ್ಕಾರದ ತಾರತಮ್ಯ ನೀತಿಯೇ ಕಾರಣವಾಗಿದೆ. ಏಕೆಂದರೆ ಇತ್ತೀಚೆಗೆ ಭೂಸ್ವಾಧೀನ ಮಾಡಿಕೊಳ್ಳುತ್ತಿರೋ ಹೊಸವಾಳ, ರಾಮಾಪುರ, ಕಲ್ಲಾಪುರ ಗ್ರಾಮದ ಜಮೀನುಗಳಿಗೆ 45 ಲಕ್ಷ ರೂ. ನಿಗದಿ ಮಾಡಿದ್ದಾರೆ. ಆದರೆ ಐಐಟಿ ಸಮೀಪವೇ ಇರೋ ಜಮೀನಿಗೆ ಮಾತ್ರ ಕಡಿಮೆ ಬೆಲೆ ಯಾಕೆ ಅನ್ನೋದು ರೈತರ ಪ್ರಶ್ನೆ. ಹೀಗಾಗಿ ಹೈಕೋರ್ಟ್ ತಡೆ ಹೊರತಾಗಿ ಇರೋ ಜಮೀನನ್ನು ಬಿಟ್ಟು ಕೊಡೋದಿಲ್ಲ. ಯಾವುದೇ ಒತ್ತಡ ಮಾಡುವಂತಿಲ್ಲ ಅಂತಾ ಜಿಲ್ಲಾಧಿಕಾರಿಗೂ ಮನವಿ ಸಲ್ಲಿರೋ ರೈತರು ಉಗ್ರ ಹೋರಾಟ ಮಾಡೋದಕ್ಕೂ ಮುಂದಾಗಿದ್ದಾರೆ. ಹೀಗಾಗಿ ಪರಿಶೀಲಿಸಿ ನೋಡೋದಾಗಿ ಡಿಸಿ ಹೇಳಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: ಮಗು ಆಗುತ್ತಿದ್ದಂತೆ ಪತ್ನಿ ಬಿಟ್ಟು ಪರಾರಿಯಾದ ಪತಿ; ಅನೇಕ ಹೆಣ್ಮಕ್ಕಳಿಗೆ ಮೋಸ ಮಾಡಿರುವ ಆರೋಪ

ಈಗ ಹಳೆ ಅಧಿಸೂಚನೆ ಮತ್ತು ಹಳೆ ದರ ಇಟ್ಟುಕೊಂಡು ಸ್ವಾಧೀನಪಡಿಸಿಕೊಳ್ಳುತ್ತಿರೋದಕ್ಕೆ ರೈತರು ತಿರುಗಿ ಬಿದ್ದಿದ್ದು, ಹೆಚ್ಚಿಗೆ ದರ ಕೊಟ್ಟರೆ ಭೂಮಿ ಕೊಡುತ್ತೇವೆ ಅಂತಾ ಪಟ್ಟು ಹಿಡಿದು ಕುಳಿತಿದ್ದು, ಜಿಲ್ಲಾಡಳಿತ ತಮ್ಮ ಬೇಡಿಕೆಗೆ ಮಣಿಯದೇ ಹೋದಲ್ಲಿ ಉಗ್ರ ಹೋರಾಟ ಮಾಡೋದಕ್ಕೆ ನಿರ್ಧರಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:52 pm, Wed, 15 May 24

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ