India-Pakistan War Updates; ಮುನ್ನೆಚ್ಚರಿಕೆಯ ಕ್ರಮವಾಗಿ 24 ವಿಮಾನ ನಿಲ್ದಾಣಗಳನ್ನು ಬಂದ್ ಮಾಡಿದ ಭಾರತ

Updated on: May 09, 2025 | 9:32 PM

ನಾಗರಿಕರ ಭದ್ರತೆ ಮತ್ತು ರಕ್ಷಣೆ ವಿಷಯದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಳೆ ಪೊಲೀಸ್ ಕಮೀಶನರ್, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಲಿದ್ದಾರೆ, ಯುದ್ದ ಶುರುವಾದರೆ ನಾಗರಿಕರ ತಯಾರಿ ಹೇಗಿರಬೇಕು ಅನ್ನೋದು ಚರ್ಚೆಯ ಮುಖ್ಯ ವಿಷಯವಾಗಲಿದೆ.

ಬೆಂಗಳೂರು, ಮೇ 9: ಭಾರತ ಮತ್ತು ಪಾಕಿಸ್ತಾನ ನಡುವೆ ಈಗ ಜಾರಿಯಲ್ಲಿರುವ ಮಿಲಿಟರಿ ಕಾರ್ಯಾಚರಣೆ ನಿಲ್ಲುವ ಸೂಚನೆಗಳು ಸದ್ಯಕ್ಕಂತೂ ಕಾಣುತ್ತಿಲ್ಲ. ಪಾಕಿಸ್ತಾನ ನಾಗರಿಕ ನೆಲೆಗಳ (Civil bases) ಮೇಲೆ ಗುಂಡಿನ ದಾಳಿ ನಡೆಸುವುದನ್ನು ಮುಂದುವರಿಸಿದೆ ಮತ್ತು ಭಾರತದ ಸೇನೆ ಅದಕ್ಕೆ ತಕ್ಕ ಉತ್ತರ ನೀಡುತ್ತಿದೆ. ಪಾಕಿಸ್ತಾನದ ನೀಚ ಬುದ್ಧಿಯ ಬಗ್ಗೆ ಚೆನ್ನಾಗಿ ಅರಿತಿರುವ ಭಾರತ ಮುಂಜಾಗ್ರತೆ ಕ್ರಮವಾಗಿ 24 ಏರ್ಪೋರ್ಟ್ ಗಳನ್ನು ಬಂದ್ ಮಾಡಿದೆ. ಹಾಗೆಯೇ, ರೇಲ್ವೇ ನಿಲ್ದಾಣಗಳು, ಮೆಟ್ರೋ ಸ್ಟೇಷನ್ ಗಳು, ಜಲಾಶಯಗಳು, ಅಣುಸ್ಥಾವರ ಇರುವ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಇದನ್ನೂ ಓದಿ:  PSL 2025: ಪಾಕಿಸ್ತಾನ್ ಸೂಪರ್ ಲೀಗ್​ಗೆ ವಿದೇಶಿ ಆಟಗಾರರು ಗುಡ್ ಬೈ?

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ