ಕೃಷ್ಣಾ ಮೇಲ್ದಂಡೆ ಯೋಜನೆಯ 130 ಟಿಎಂಸಿ ನೀರು ಬಳಕೆಗೆ ಕಾರ್ಯರೂಪ ಸಿದ್ಧ: ಡಿಸಿಎಂ ಗೋವಿಂದ ಕಾರಜೋಳ
ಪಕ್ಷ ರಾಜಕಾರಣ ಏನೇ ಇರಲಿ, ಜಿಲ್ಲೆಯ ಅಭಿವೃದ್ಧಿ ಹಾಗೂ ನೀರಾವರಿ ಯೋಜನೆಯ ವಿಚಾರದಲ್ಲಿ ಒಗ್ಗಟ್ಟಾಗಿರಬೇಕೆಂದು ಡಿಸಿಎಂ ಗೋವಿಂದ ಕಾರಜೊಳ ಜಿಲ್ಲಾ ಜನಪ್ರತಿನಿಧಿಗಳಿಗೆ ಕಿವಿ ಮಾತು ಹೇಳಿದರು. ಸದ್ಯ ನಮ್ಮ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ 5,600 ಕೋಟಿ ರೂಪಾಯಿ ಅನುದಾನ ಒದಗಿಸಿದೆ.
ವಿಜಯಪುರ: ರಾಜ್ಯ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ 130 ಟಿಎಂಸಿ ನೀರನ್ನು ಬಳಸಲು ಕಾರ್ಯರೂಪ ಸಿದ್ಧಪಡಿಸಲು ಭದ್ಧವಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ. ಮಾರ್ಚ್ 21 ರಂದು ವಿಜಯಪುರ ಜಿಲ್ಲಾ ಪ್ರವಾಸದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ವೇಳೆ ಯುಕೆಪಿ ಯೋಜನಾ ವ್ಯಾಪ್ತಿಯ ಸಮಗ್ರ ನೀರು ಬಳಕೆಗೆ ಕಾರ್ಯ ರೂಪಿಸಲು ಭದ್ಧವಾಗಿದೆ ಎಂದು ಹೇಳಿದರು. ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಪಟ್ಟಂತೆ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ಮಿಶ್ರಾ ಅವರ ತೀರ್ಪಿನನ್ವಯ ಹಂಚಿಕೆಯಾದ 130 ಟಿಎಂಸಿ ನೀರು ಉಪಯೋಗಿಸಲು ಉದ್ದೇಶಿಸಿದ್ದು, ಆ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮ ರೂಪಿಸಲು ಬದ್ಧವಾಗಿದೆ ಎಂದು ಡಿಸಿಎಂ ಹೇಳಿದರು.
ನೀರಾವರಿಗಾಗಿ ಒಗ್ಗಟ್ಟಿನ ಮಂತ್ರ ಪಕ್ಷ ರಾಜಕಾರಣ ಏನೇ ಇರಲಿ, ಜಿಲ್ಲೆಯ ಅಭಿವೃದ್ಧಿ ಹಾಗೂ ನೀರಾವರಿ ಯೋಜನೆಯ ವಿಚಾರದಲ್ಲಿ ಒಗ್ಗಟ್ಟಾಗಿರಬೇಕೆಂದು ಡಿಸಿಎಂ ಗೋವಿಂದ ಕಾರಜೊಳ ಜಿಲ್ಲಾ ಜನಪ್ರತಿನಿಧಿಗಳಿಗೆ ಕಿವಿ ಮಾತು ಹೇಳಿದರು. ಸದ್ಯ ನಮ್ಮ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ 5,600 ಕೋಟಿ ರೂಪಾಯಿ ಅನುದಾನ ಒದಗಿಸಿದೆ. ಇದರ ಜೊತೆಗೆ ಹೆಚ್ಚಿನ ಅನುದಾನ ಸಹ ಕೋರಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಅನುದಾನ ವಿಚಾರದಲ್ಲಿ ಸ್ವಲ್ಪ ಹಿನ್ನಡೆಯಾಗಿದ್ದು, ಮುಂದಿನ ದಿನಗಳಲ್ಲಿ ಪ್ರಗತಿಯ ಕಾರ್ಯಕ್ಕೆ ಒತ್ತು ನೀಡಲಾಗುವುದು ಎಂದು ಹೇಳಿದ್ದಾರೆ.
ಕೆರೆಗಳಿಗೆ ನೀರು ಮುಳವಾಡ ಏತ ನೀರಾವರಿ ಹಂತ-3 ಅಡಿಯಲ್ಲಿ ಬರುವ ತಿಡಗುಂದಿ ಶಾಖಾ ಕಾಲುವೆಯ 56 ರಿಂದ 66 ರವರೆಗಿನ ಕಾಮಗಾರಿಯ ಮೂಲಕ ಇಂಡಿ ತಾಲೂಕಿನ ರಾಜನಾಳ ತಡವಲಗಾ ಹಾಗೂ ಹಂಜಗಿ ಕೆರೆಗಳಿಗೆ ಮುಂದಿನ 60 ದಿನಗಳಲ್ಲಿ ನೀರು ಹರಿಸಬೇಕು. ಮೂರು ಕೆರೆಗಳನ್ನು ತುಂಬುವ ಪೂರ್ಣ ಕಾಮಗಾರಿಯನ್ನು 18 ತಿಂಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಡಿಸಿಎಂ ಸೂಚಿಸಿದ್ದಾರೆ. ಜೊತೆಗೆ ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ನಿರ್ವಹಣೆಯ ದೃಷ್ಟಿಯಿಂದ ಆಲಮಟ್ಟಿ ಜಲಾಶಯದಲ್ಲಿ ಕುಡಿಯುವ ನೀರಿನ ಸಂಗ್ರಹಕ್ಕೆ ವಿಶೇಷ ಗಮನ ನೀಡಿಲಾಗಿದೆ. ಇದನ್ನು ಹೊರತುಪಡಿಸಿ ಕಾಲುವೆಗಳಿಗೆ ನೀರು ಬಿಡಲು, ಡ್ಯಾಂನಲ್ಲಿನ ನೀರಿನ ಸಂಗ್ರಹದ ಆಧಾರದ ಮೇಲೆ ಪೂರೈಕೆ ಮಾಡಲಾಗುತ್ತದೆ.
ಸುತ್ತಮುತ್ತಲ ಗ್ರಾಮಗಳಿಗೆ ಅನಕೂಲ ಇಂಡಿ ತಾಲೂಕಿನ ರಾಜನಾಳ, ತಡವಲಗಾ ಹಾಗೂ ಹಂಜಗಿ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಸುತ್ತಮುತ್ತಲ 15 ಗ್ರಾಮಗಳ ಜನ, ಜಾನುವಾರು, ಪ್ರಾಣಿ-ಪಕ್ಷಿಗಳಿಗೆ ಅನಕೂಲವಾಗುತ್ತದೆ. ಮುಂದಿನ 60 ದಿನಗಳಲ್ಲಿ ಪ್ರಾಥಮಿಕವಾಗಿ ಕೆರೆಗಳಿಗೆ ನೀರು ಹರಿದು ಬರಲಿದೆ. ಒಟ್ಟು 100 ಕೋಟಿ 49 ಲಕ್ಷ ರೂ. ವೆಚ್ಚದ ಕಾಮಗಾರಿ ಇದಾಗಿದೆ. ಈ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿಯನ್ನು ಬೆಂಗಳೂರಿನ ಮೆ.ಎಚ್.ಡಿ ಇನ್ಫ್ರಾಸ್ಟ್ರಕ್ಚರ್ಗೆ ನೀಡಲಾಗಿದೆ. ಕಳೆದ 2020 ನವೆಂಬರ್ 12 ರಂದು ಕಾಮಗಾರಿಗೆ ಒಪ್ಪಂದವಾಗಿದೆ. ಕಾಮಗಾರಿ ಆರಂಭವಾದ ಬಳಿಕ 18 ತಿಂಗಳಲ್ಲಿ ಪೂರ್ಣ ಕಾಮಗಾರಿ ಮುಕ್ತಾಯವಾಗಲಿದೆ.
ಇದನ್ನೂ ಓದಿ
ಶೇ 50ಕ್ಕಿಂತ ಮೀಸಲಾತಿ ನೀಡಲು ಅವಕಾಶ ಕೊಡಿ.. ಯಡಿಯೂರಪ್ಪ ಸರ್ಕಾರ ಸಲ್ಲಿಸಿತು ಸುಪ್ರೀಂಗೆ ಮನವಿ
Published On - 11:11 am, Tue, 23 March 21