NEET ಪರೀಕ್ಷೆಯಲ್ಲಿ ಕೋವಿಡ್ ವಾರಿಯರ್ಸ್‌ಗೆ Grace Marks ನೀಡುತ್ತಾ ರಾಜ್ಯ ಸರ್ಕಾರ?
ಬೆಂಗಳೂರು: ಬೆಂಗಳೂರಿನ ೧೭ ಮೆಡಿಕಲ್ ಕಾಲೇಜುಗಳಲ್ಲಿ ೨೦೦೦ ಜನ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿದ್ದು, ಅವರು ಪಾಸ್ ಔಟ್ ಆಗ್ತಿದ್ದಂತೆ ಹಾಗೂ ಹೌಸ್ ಸರ್ಜನ್‌ಗಳನ್ನು ಕೋವಿಡ್ ಕೇರ್ ಸೆಂಟರ್ ಗೆ ಬಳಸಿಕೊಳ್ಳುವ ಚಿಂತನೆಯಿದೆ. ಅಷ್ಟೇ ಅಲ್ಲ ಪೋಸ್ಟ್ ಗ್ರಾಜ್ಯುವೇಶನ್‌ನಲ್ಲಿ ನೀಟ್ ಪರೀಕ್ಷೆ ಬರೆಯುವವರಿಗೆ ಕೋವಿಡ್ ವಾರಿಯರ್‌ಆಗಿ ಸೇವೆ ಸಲ್ಲಿಸಿದ ಉಪಕಾರಾರ್ಥವಾಗಿ ಐದು ಗ್ರೇಸ್ ಮಾರ್ಕ್ಸ್ ನೀಡಲೂ ಸಹ ಚಿಂತನೆ ನಡೆದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಹೇಳಿದ್ದಾರೆ. 102 ವರ್ಷಗಳ ಹಿಂದೆ ಆಗಿನ ಸರ್ಕಾರ ಪಾಲಿಸಿದ್ದ ದಾಖಲೆ […]
ಬೆಂಗಳೂರು: ಬೆಂಗಳೂರಿನ ೧೭ ಮೆಡಿಕಲ್ ಕಾಲೇಜುಗಳಲ್ಲಿ ೨೦೦೦ ಜನ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿದ್ದು, ಅವರು ಪಾಸ್ ಔಟ್ ಆಗ್ತಿದ್ದಂತೆ ಹಾಗೂ ಹೌಸ್ ಸರ್ಜನ್‌ಗಳನ್ನು ಕೋವಿಡ್ ಕೇರ್ ಸೆಂಟರ್ ಗೆ ಬಳಸಿಕೊಳ್ಳುವ ಚಿಂತನೆಯಿದೆ. ಅಷ್ಟೇ ಅಲ್ಲ ಪೋಸ್ಟ್ ಗ್ರಾಜ್ಯುವೇಶನ್‌ನಲ್ಲಿ ನೀಟ್ ಪರೀಕ್ಷೆ ಬರೆಯುವವರಿಗೆ ಕೋವಿಡ್ ವಾರಿಯರ್‌ಆಗಿ ಸೇವೆ ಸಲ್ಲಿಸಿದ ಉಪಕಾರಾರ್ಥವಾಗಿ ಐದು ಗ್ರೇಸ್ ಮಾರ್ಕ್ಸ್ ನೀಡಲೂ ಸಹ ಚಿಂತನೆ ನಡೆದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಹೇಳಿದ್ದಾರೆ.
102 ವರ್ಷಗಳ ಹಿಂದೆ ಆಗಿನ ಸರ್ಕಾರ ಪಾಲಿಸಿದ್ದ ದಾಖಲೆ ಲಭ್ಯ ಇದೇ ಸಂದರ್ಭದಲ್ಲಿ ೧೯೧೮ ರಲ್ಲಿ ಸ್ಪ್ಯಾನಿಷ್ ಫ್ಲೂ ಬಂದಾಗಿನ ಘಟನೆ ಬಗ್ಗೆ ಮಾತನಾಡಿದ ಸುಧಾಕರ್, ೧೦೨ ವರ್ಷದ ಹಿಂದೆ ಸ್ಪ್ಯಾನಿಷ್ ಫ್ಲೂ ಬಂದಾಗ ಸಾರ್ವಜನಿಕರಿಗೆ ಅಂದಿನ ಸರಕಾರ ನೀಡಿದ್ದ ಸೂಚನೆ ಸಿಕ್ಕಿದೆ. ಆಗಲೂ ಸಹ ಇದೇ ರೀತಿ ಸ್ವಚ್ಚತೆ, ಶುಚಿತ್ವ ಬಗ್ಗೆ ಸಾಮಾಜಿಕ ಅಂತರದ ಬಗ್ಗೆ ತಿಳಿಸಿದ್ದಾರೆ ಮತ್ತು ಪಾಲಿಸಿದ್ದಾರೆ ಎಂದು ಡಾ. ಸುಧಾಕರ್ ತಿಳಿಸಿದ್ದಾರೆ.
Published On - 7:43 pm, Mon, 6 July 20