ಮಂಡ್ಯ: ಮಹಾಮಾರಿ ಕೊರೊನಾ ಸೋಂಕು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಕೊರೊನಾಗೆ ಬಲಿಯಾಗುವವರ ಮೃತ ದೇಹಗಳನ್ನು, ಅಸ್ಥಿಗಳನ್ನು ತೆಗೆದುಕೊಂಡು ಹೋಗಲು ಕುಟುಂಬಸ್ಥರು ಮುಂದಾಗುತ್ತಿಲ್ಲ. ನಮಗೂ ಸೋಂಕು ತಗುಲಬಹುದು ಎಂದು ತಮ್ಮವರ ಶವಗಳ ಬಲಿಯೂ ಕುಟುಂಬಸ್ಥರು ಸುಳಿಯಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕೊರೊನಾಗೆ ಬಲಿಯಾದ ಅನಾಥ ಶವಗಳಿಗೆ ಸರ್ಕಾರದಿಂದಲೇ ಮುಕ್ತಿ ಕಾರ್ಯ ನಡೆಯುತ್ತಿದೆ. ಸಚಿವ ಆರ್.ಅಶೋಕ್ ಅನಾಥ ಶವಗಳ ಅಸ್ಥಿ ವಿಸರ್ಜಿಸಲಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬೆಳಕವಾಡಿ ಬಳಿಯ ಶ್ರೀ ಕಾಶಿವಿಶ್ವನಾಥ ದೇವಾಲಯ ಸಮೀಪದ ಕಾವೇರಿ, ಕಪಿಲಾ ನದಿ ಬಳಿ ಶವಗಳ ಮುಕ್ತಿ ಕಾರ್ಯಕ್ಕೆ ಸಿದ್ಧತೆ ನಡೆಯುತ್ತಿದೆ. ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಅಸ್ಥಿ ವಿಸರ್ಜನೆ ವಿಧಿವಿಧಾನ ನಡೆಯಲಿದ್ದು ಕೊವಿಡ್ ಅನಾಥ ಶವಗಳ ಅಸ್ಥಿ ವಿಸರ್ಜನೆಯನ್ನು ಕಂದಾಯ ಸಚಿವ ಆರ್.ಅಶೋಕ್ ನೆರವೇರಿಸಲಿದ್ದಾರೆ.
ಇಂದು ಸಾವಿರಕ್ಕೂ ಹೆಚ್ಚು ಅನಾಥ ಶವಗಳ ಅಸ್ಥಿ ವಿಸರ್ಜನೆ ಮಾಡಲಾಗುತ್ತೆ. ಬೆಂಗಳೂರಿನ ವಿವಿಧೆಡೆ ಕೊವಿಡ್ ಮೃತರ ಅಂತ್ಯಕ್ರಿಯೆ ನಡೆದಿದೆ. ಆದರೆ ಅಂತ್ಯಕ್ರಿಯೆ ನಡೆದ ಬಳಿಕ ಸಂಬಂಧಿಕರು ಅಸ್ಥಿ ತೆಗೆದುಕೊಂಡು ಹೋಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರದಿಂದಲೇ ಅಸ್ಥಿ ವಿಸರ್ಜನೆಗೆ ನಿರ್ಧಾರ ಮಾಡಲಾಗಿದೆ. 12 ಪುರೋಹಿತರಿಂದ ಮಹಾಗಣಪತಿ ಪೂಜೆ, ನಾರಾಯಣ ಬಲಿ, ಅಕಾಲ ಮರಣ ಪ್ರಾಯಶ್ಚಿತ್ತ, ತಿಲಹೋಮ, ಪಿಂಡ ಪ್ರದಾನ, ಅಸ್ಥಿ ನಾರಾಯಣ ಪೂಜೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಕಲ್ಪತರು ನಾಡು ತುಮಕೂರಿನಲ್ಲಿ ಸಂಬಂಧಿಕರಿದ್ದರೂ ಕೊರೊನಾದಿಂದ 20 ಶವ ಅನಾಥ!