AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಬ್ಲಿಕ್ ಟ್ರಾನ್ಸ್‌ಪೋರ್ಟ್‌ ವಾಹನಗಳಿಗೆ ಜಿಪಿಎಸ್, ಪ್ಯಾನಿಕ್ ಬಟನ್ ಕಡ್ಡಾಯ; 24/7 ಕಂಟ್ರೋಲ್ ರೂಮ್ ಓಪನ್

ರಾಜಧಾನಿಯಲ್ಲಿ ಇತ್ತೀಚಿಗೆ ಕೆಲ ಕ್ಯಾಬ್ ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಲೈಂಗಿಕ ಕಿರುಕುಳ, ಪ್ರಯಾಣಿಕರನ್ನು ದರೋಡೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಇಲಾಖೆ ಇದನ್ನು ತಡೆಗಟ್ಟಲು ಈಗಾಗಲೇ ಸಾರ್ವಜನಿಕ ಸಾರಿಗೆ ವಾಹನಗಳಿಗೆ ಜಿಪಿಎಸ್, ಪ್ಯಾನಿಕ್ ಬಟನ್ ಕಡ್ಡಾಯ ಮಾಡಿದೆ. ಆ ವಾಹನಗಳ ಮೇಲೆ ಹದ್ದಿನ ಕಣ್ಣಿಡಲು 24 ಗಂಟೆ ಕೆಲಸ ಮಾಡುವ ಕಂಟ್ರೋಲ್ ರೂಮ್ ಓಪನ್ ಮಾಡಲಾಗಿದೆ.

ಪಬ್ಲಿಕ್ ಟ್ರಾನ್ಸ್‌ಪೋರ್ಟ್‌ ವಾಹನಗಳಿಗೆ ಜಿಪಿಎಸ್, ಪ್ಯಾನಿಕ್ ಬಟನ್ ಕಡ್ಡಾಯ; 24/7 ಕಂಟ್ರೋಲ್ ರೂಮ್ ಓಪನ್
ಸಾರಿಗೆ ಸಚಿವ ರಾಮಲಿಂಗ ರೆಡ್ಡಿ
Kiran Surya
| Edited By: |

Updated on:Jun 20, 2024 | 2:28 PM

Share

ಬೆಂಗಳೂರು, ಜೂನ್.20; ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಕೇಂದ್ರ ಸರ್ಕಾರ (Central Government) ಮತ್ತು ರಾಜ್ಯ ಸರ್ಕಾರದ (Karnataka Government) ಸಾರಿಗೆ ಇಲಾಖೆಯಿಂದ ಮಾಸ್ಟರ್ ಪ್ಲಾನ್ ಮಾಡಲಾಗಿದೆ. ಕೇಂದ್ರ ಸರ್ಕಾರದ ನಿರ್ಭಯ ಯೋಜನೆ ಅಡಿಯಲ್ಲಿ ಸಾರಿಗೆ ಇಲಾಖೆ ಮುಖ್ಯ ಕಚೇರಿಯಲ್ಲಿ 24/7 ಕೆಲಸ ಮಾಡುವ ಕಾಲ್ ಸೆಂಟರ್ ಅನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ (Ramalinga Reddy) ರಿಬ್ಬನ್ ಕಟ್ ಮಾಡುವ ಮೂಲಕ ಓಪನ್ ಮಾಡಿದ್ದಾರೆ.

ಜಿಪಿಎಸ್ ಪ್ಯಾನಿಕ್ ಬಟನ್ ಹಾಕಿಸಿಕೊಂಡಿರುವ ವಾಹನಗಳ ಚಲನವಲನಗಳ ಮೇಲೆ ಕಣ್ಣಿಡಲಾಗುತ್ತದೆ‌‌. ಇತ್ತೀಚೆಗೆ ಓಲಾ ಉಬರ್ ಮತ್ತು ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವುದು ಮತ್ತು ಆಕ್ಸಿಡೆಂಟ್, ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ವು. ಇದನ್ನು ತಡೆಗಟ್ಟಲು ರಾಜ್ಯ ಸಾರಿಗೆ ಇಲಾಖೆ ರಾಜ್ಯದ ಸುಮಾರು ಆರು ಲಕ್ಷ ಯೆಲ್ಲೋ ಬೋರ್ಡ್ ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸಲು ಆದೇಶ ನೀಡಿದೆ. ಸೆಪ್ಟೆಂಬರ್ 10 ರೊಳಗೆ ಎಲ್ಲಾ ವಾಣಿಜ್ಯ ಬಳಕೆ ವಾಹನಗಳಿಗೆ ಹಾಕಿಸಿಕೊಳ್ಳಲು ಡೆಡ್ಲೆನ್ ನೀಡಲಾಗಿದೆ.

ಈ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ನಿಂದ ವಾಹನ ಎಲ್ಲಿದೆ, ಯಾವ ರೂಟ್ ನಲ್ಲಿ ಸಂಚಾರ ಮಾಡುತ್ತಿದೆ ಅನ್ನೋ ಸಂಪೂರ್ಣ ಮಾಹಿತಿಯನ್ನು ಆರ್​​ಟಿಓ ಕಂಟ್ರೋಲ್ ರೂಮ್​ಗೆ ನೀಡುತ್ತದೆ. ಕೂಡಲೇ ಪ್ಯಾನಿಕ್ ಬಟನ್ ಪ್ರೆಸ್ ಮಾಡಿದ ಮಹಿಳೆಯರು ಇರುವ ಹತ್ತಿರ ಪೊಲೀಸ್ ಸ್ಟೇಷನ್ ಗೆ ಆರ್​ಟಿಓ ಕಂಟ್ರೋಲ್ ರೂಮ್ ನಿಂದ ಮಾಹಿತಿ ನೀಡಲಾಗುತ್ತದೆ. ನಂತರ ಸ್ಥಳೀಯ ಪೊಲೀಸ್ ಸ್ಟೇಷನ್​ನಿಂದ ಪೋಲಿಸರು ಆ ಸ್ಥಳಕ್ಕೆ ಹೊಯ್ಸಳ, ಪೊಲೀಸ್ ಜೀಪ್ ಮೂಲಕ ಆಗಮಿಸಿ ರಕ್ಷಣೆ ನೀಡುತ್ತಾರೆ.

ಇದನ್ನೂ ಓದಿ: ಕಲಬುರಗಿ: ಜಯದೇವದಲ್ಲಿ ನೀರಿಲ್ಲದೇ ಶಸ್ತ್ರಚಿಕಿತ್ಸೆ ಸ್ಥಗಿತ ಮಾಡಿದವರ ಮೇಲೆ ಕ್ರಮಕ್ಕೆ ಅಶೋಕ್ ಆಗ್ರಹ

ಇನ್ನೂ ರಾಜ್ಯದ ಆರು ಲಕ್ಷ ವಾಹನಗಳ ಪೈಕಿ ಸದ್ಯ 1,085 ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸಿಕೊಳ್ಳಲಾಗಿದೆ. ಕೆಎಸ್ಆರ್​ಟಿಸಿ ಬಸ್ಸು, ಬಿಎಂಟಿಸಿ ಬಸ್ಸು, ಕ್ಯಾಬ್, ಖಾಸಗಿ ಬಸ್ಸು ಸೇರಿದಂತೆ ಎಲ್ಲಾ ವಾಹನಗಳ ಸಂಪೂರ್ಣ ಲೈವ್ ಲೋಕೆಷನ್ ಡ್ರೈವರ್ ಮತ್ತು ಮಾಲೀಕನ ಪೋನ್ ನಂಬರ್, ಮನೆ ವಿಳಾಸ ಎಲ್ಲಾವು ಲಭ್ಯವಾಗುತ್ತದೆ.

ಒಂದು ವೇಳೆ ಜಿಪಿಎಸ್ ಪ್ಯಾನಿಕ್ ಬಟನ್ ಹಾಕಿಸಿಕೊಂಡು ಪ್ರಯಾಣ ಮಾಡುವ ಸಂದರ್ಭದಲ್ಲಿ ಕಿರುಕುಳ, ಪ್ರಯಾಣಿಕರಿಗೆ ತೊಂದರೆ ನೀಡುವ ಉದ್ದೇಶದಿಂದ ಅದನ್ನು ಕಿತ್ತು ಬಿಸಾಕಲು ಪ್ರಯತ್ನ ಪಟ್ಟರೂ ಅಂತಹ ವಾಹನಗಳ ಮಾಹಿತಿಯನ್ನು ಆರ್​ಟಿಓ ಕಂಟ್ರೋಲ್ ರೂಮ್ ಗೆ ಮಾಹಿತಿ ತಿಳಿಯುತ್ತದೆ. ಆರ್​ಟಿಓನ ಕಂಟ್ರೋಲ್ ರೂಮ್ ಮತ್ತು ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ರಾಜಧಾನಿಯ ಪ್ರತಿ ವಾಹನದ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲು ಸಹಾಯ ಆಗಲಿದೆ.

ಒಟ್ನಲ್ಲಿ ವರ್ಷದ 365 ದಿನವೂ ಈ ಆರ್​ಟಿಓ ಕಂಟ್ರೋಲ್ ರೂಮ್ ಓಪನ್ ಇರಲಿದ್ದು ಮಹಿಳೆಯರ ಸಂಕಷ್ಟಕ್ಕೆ ಎಷ್ಟರಮಟ್ಟಿಗೆ ಧಾವಿಸಲಿದೆ ಎಂದು ಕಾದು ನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:25 pm, Thu, 20 June 24