ಗ್ರಾ.ಪಂ ಚುನಾವಣೆ: ಗ್ರಾಮ ಪಂಚಾಯಿತಿ RO ವಿರುದ್ಧ ನಿಯಮ ಉಲ್ಲಂಘನೆ ಆರೋಪ

ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮ ಪಂಚಾಯಿತಿ RO ವಿರುದ್ಧ ಅಭ್ಯರ್ಥಿಗಳು ನಿಯಮ ಉಲ್ಲಂಘನೆ ಆರೋಪ ಮಾಡಿದ್ದಾರೆ.

ಗ್ರಾ.ಪಂ ಚುನಾವಣೆ:  ಗ್ರಾಮ ಪಂಚಾಯಿತಿ RO ವಿರುದ್ಧ ನಿಯಮ ಉಲ್ಲಂಘನೆ ಆರೋಪ
ಅಭ್ಯರ್ಥಿಗಳಿಂದ ಅಧಿಕಾರಿಯ ಮೇಲೆ ಆರೋಪ
shruti hegde

|

Dec 20, 2020 | 10:28 AM

ಗದಗ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮ ಪಂಚಾಯಿತಿ RO ವಿರುದ್ಧ ಅಭ್ಯರ್ಥಿಗಳು ನಿಯಮ ಉಲ್ಲಂಘನೆ ಆರೋಪ ಮಾಡಿದ್ದಾರೆ. ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಮಾಡದ ಕಾರಣ ಅಭ್ಯರ್ಥಿಗಳು ಕಿಡಿಕಾರಿದ್ದಾರೆ.

ನಿನ್ನೆ ನಾಮಪತ್ರ ಹಿಂಪಡೆಯುವ ಕೊನೆಯ ದಿನವಾಗಿತ್ತು. ಹೀಗಾಗಿ ಅಂದೇ ಚಿಹ್ನೆ ನೀಡುವಂತೆ ಮನವಿ ಮಾಡಿದ್ದರು. ಆದರೆ ಅಧಿಕಾರಿ ಸೋಮವಾರ ನೀಡುವುದಾಗಿ ಹೇಳಿದ್ದರು. ಬಳಿಕ ನಿನ್ನೆ ತಡ ರಾತ್ರಿಯಲ್ಲಿ ಏಕಾಏಕಿ ಕರೆ ಮಾಡಿ ಚಿಹ್ನೆ ಹಂಚಿಕೆ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ ಅಧಿಕಾರಿ ನಡೆಗೆ ಅಭ್ಯರ್ಥಿಗಳು ಆಕ್ರೋಶಗೊಂಡಿದ್ದಾರೆ.

ನಾವು ಚಿಹ್ನೆ ಹಂಚಿಕೆ ಮಾಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೆವು. ಸೋಮವಾರ ಚಿಹ್ನೆ ಹಂಚಿಕೆ ಮಾಡುತ್ತೇವೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದರು. ಆದರೆ ತಡ ರಾತ್ರಿಯಲ್ಲಿ ಚಿಹ್ನೆ ಹಂಚಿಕೆ ಮಾಡುವುದಾಗಿ ಕರೆ ಮಾಡಿದ್ದಾರೆ. ಕಚೇರಿ ಅವಧಿಯನ್ನು ಬಿಟ್ಟು ರಾತ್ರಿ ವೇಳೆಯಲ್ಲಿ ಚಿಹ್ನೆ ಹಂಚಿಕೆ ಮಾಡುವುದೇಕೆ? ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಗ್ರಾಮ ಪಂಚಾಯತಿ ಚುನಾವಣೆ: ಅಕ್ಕಪಕ್ಕದ ವಾರ್ಡ್​ನಲ್ಲೇ ಅಖಾಡಕ್ಕೆ ಇಳಿದ ಡಬಲ್ ಡಿಗ್ರಿ ದಂಪತಿಗಳು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada