ಕೊಳ್ಳೇಗಾಲ ತಾಲ್ಲೂಕು ಸಿದ್ದಯ್ಯನಪುರದಲ್ಲಿ ಮತದಾನ ಸ್ಥಗಿತ; ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 27, 2020 | 12:57 PM

ಮತಗಟ್ಟೆ ಸಂಖ್ಯೆ 39ರಲ್ಲಿ ಮತದಾನ ಸ್ಥಗಿತಗೊಂಡಿದೆ. ಜಿಲ್ಲಾಧಿಕಾರಿ ಎಂ.ಆರ್. ರವಿ ಸ್ಥಳಕ್ಕೆ ಆಗಮಿಸಿ, ಮತ ಚಲಾಯಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.

ಕೊಳ್ಳೇಗಾಲ ತಾಲ್ಲೂಕು ಸಿದ್ದಯ್ಯನಪುರದಲ್ಲಿ ಮತದಾನ ಸ್ಥಗಿತ; ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ
ಚಾಮರಾಜನಗರ ಸಿದ್ದಯ್ಯನಪುರದಲ್ಲಿ ಎರಡನೇ ಹಂತದ ಮತದಾನ ಸ್ಥಗಿತ
Follow us on

ಚಾಮರಾಜನಗರ: ಕೊಳ್ಳೇಗಾಲ ತಾಲ್ಲೂಕು ಸಿದ್ದಯ್ಯನಪುರದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳಲು 1ನೇ ವಾರ್ಡ್​ನ​ ಗ್ರಾಮಸ್ಥರು ನಿರಾಕರಿಸಿದ್ದಾರೆ. ಜಿಲ್ಲಾಧಿಕಾರಿ ಎಂ.ಆರ್​. ರವಿ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು.

ಗ್ರಾಮದ 1ನೇ ವಾರ್ಡ್​ನಲ್ಲಿ ಎಸ್​ಸಿಗೆ 2, ಸಾಮಾನ್ಯ ವರ್ಗಕ್ಕೆ 2 ಸ್ಥಾನವಿತ್ತು. ಸಾಮಾನ್ಯ ವರ್ಗಕ್ಕೆ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಮೀಸಲು ವರ್ಗಕ್ಕೆ ಸೇರಿದವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಸಾಮಾನ್ಯ ವರ್ಗದವರು ನಾಮಪತ್ರ ಸಲ್ಲಿಸಿಲ್ಲ ಎಂಬ ಕಾರಣಕ್ಕೆ 2 ಮತಕ್ಕೆ ಮಾತ್ರ ಅವಕಾಶ ನೀಡಲಾಗಿದೆ. 4 ಮತ ಹಾಕಲು ಅವಕಾಶ ನೀಡಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ಮತಗಟ್ಟೆ ಸಂಖ್ಯೆ 39ರಲ್ಲಿ ಮತದಾನ ಸ್ಥಗಿತಗೊಂಡಿದೆ. ಜಿಲ್ಲಾಧಿಕಾರಿ ಎಂ.ಆರ್. ರವಿ ಸ್ಥಳಕ್ಕೆ ಆಗಮಿಸಿ, ಮತ ಚಲಾಯಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣಾ ಬಹಿಷ್ಕಾರ.. ಎಲ್ಲೆಲ್ಲಿ?

Published On - 12:57 pm, Sun, 27 December 20