ನಿರ್ಭಯಾ ಸೇಫ್ ಸಿಟಿ ಟೆಂಡರ್ಗೆ ಬಿಇಎಲ್ ಬಿಡ್ ಮಾಡಿರಲಿಲ್ಲ: ಹೇಮಂತ್ ನಿಂಬಾಳ್ಕರ್
ನಿರ್ಭಯಾ ಸೇಫ್ ಸಿಟಿ ಟೆಂಡರ್ ಮಾಹಿತಿ ಸೋರಿಕೆ ಕೇಸ್ಗೆ ಸಂಬಂಧಿಸಿ ಇಂದು ಬೆಂಗಳೂರು ನಗರ ಪೊಲೀಸ್ ಆಡಳಿತ ವಿಭಾಗದ ಐಜಿಪಿ ಹೇಮಂತ್ ನಿಂಬಾಳ್ಕರ್ ಸುದ್ದಿಗೋಷ್ಠಿ ನಡೆಸಿದ್ದಾರೆ.
ಬೆಂಗಳೂರು:619 ಕೋಟಿ ನಿರ್ಭಯಾ ಸೇಫ್ ಸಿಟಿ ಟೆಂಡರ್ ಮಾಹಿತಿ ಸೋರಿಕೆ ಕೇಸ್ಗೆ ಸಂಬಂಧಿಸಿ ಇಂದು ಬೆಂಗಳೂರು ನಗರದಲ್ಲಿ ಪೊಲೀಸ್ ಆಡಳಿತ ವಿಭಾಗದ ಐಜಿಪಿ ಹೇಮಂತ್ ನಿಂಬಾಳ್ಕರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ಮೂಲಕ ಐಪಿಎಸ್ ಅಧಿಕಾರಿ ಡಿ.ರೂಪಾ ಮಾಡಿದ್ದ ಆರೋಪಗಳಿಗೆ ಉತ್ತರಿಸಿದ್ದಾರೆ.
ಬೆಂಗಳೂರಿನಲ್ಲಿ ನಿರ್ಭಯಾ ಹೆಸರಿನ ಸೇಫ್ ಸಿಟಿ ಪ್ರಾಜೆಕ್ಟ್ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಊಹೆಗಳು ಹರಿದಾಡ್ತಿವೆ. ಟೆಂಡರ್ ಪ್ರಕ್ರಿಯೆ ಅನ್ ಫೇರ್ ಎಂದು ಟೀಕಿಸುತ್ತಿದ್ದಾರೆ. ಆದರೆ ಸರ್ಕಾರವು ಸ್ಟೇಟ್ ಲೆವೆಲ್ ಅಪೆಕ್ಸ್ ಕಮಿಟಿ(ಉನ್ನತ ಸಮಿತಿ), ಟೆಂಡರ್ ಇನ್ವೈಟಿಂಗ್ ಕಮಿಟಿ(ಟೆಂಡರ್ ಆಹ್ವಾನ), ಟೆಂಡರ್ ಸ್ಕ್ರೂಟನಿಂಗ್ ಕಮಿಟಿ(ಟೆಂಡರ್ ದಾಖಲೆಗಳ ಪರಾಮರ್ಶೆ) 3 ಹಂತಗಳಲ್ಲಿ ಕಮಿಟಿ ಸಮಿತಿಗಳನ್ನು ರಚಿಸಿತ್ತು.
ಮಹಿಳೆಯರ ಸುರಕ್ಷಿತೆಗಾಗಿ ಈ ಟೆಂಡರ್ ಕರೆಯಲಾಗಿತ್ತು. ನಾನು ಬರೆದ ಪತ್ರದ ಬಳೀಕ ಅನೇಕ ಊಹೆಗಳು ಉದ್ಭವಿಸಿವೆ. ಮೊದಲೆನೆಯದಾಗಿ BEL ಡಿಸ್ ಕ್ವಾಲಿಫೈ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ BEL ಬಿಡ್ಡಿಂಗ್‌ನಲ್ಲಿ ಭಾಗಿಯಾಗಿರಲಿಲ್ಲ. ಕಾಲ್ ಒನ್‌ನಲ್ಲಿ ಬಿಇಎಲ್ ಟೆಂಡರ್ ಹಾಕಿರಲಿಲ್ಲ. ಬಿಡ್ಡಿಂಗ್‌ನಲ್ಲಿ ಮೂರು ಕಂಪನಿಗಳು ಭಾಗಿಯಾಗಿದ್ದವು. ಆ ಕಂಪನಿಗಳು ಮೊದಲ ಹಂತದಲ್ಲಿ ಕ್ವಾಲಿಫೈ ಆಗಿರಲಿಲ್ಲ. ಬಳಿಕ ಜೂನ್ 20ರಂದು 3 ಕಂಪನಿಗಳು ಕ್ವಾಲಿಫೈ ಆಗಿದ್ದವು ಎಂದು ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಸ್ಪಷ್ಟನೆ ನೀಡಿದರು.
ಇನ್ನು 2ನೇ ಕಾಲ್‌ನಲ್ಲಿ L&T, ಮ್ಯಾಟ್ರಿಕ್ಸ್, BEL ಮೂರು ಕಂಪನಿಗಳು ಕ್ವಾಲಿಫೈ ಆದವು. ಆದರೆ ಚೀನಾ ವಸ್ತುಗಳು ಬಳಸದಂತೆ ಕೇಂದ್ರ ಸರ್ಕಾರ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಟೆಂಡರ್ ಸ್ಕ್ರೂಟನಿಂಗ್ ಕಮಿಟಿ ಹಾಗೂ ಅಪೆಕ್ಸ್ ಕಮಿಟಿ ತೀರ್ಮಾನಕ್ಕೆ ಬಂದು 2ನೇ ಕಾಲ್ ಕ್ಯಾನ್ಸಲ್ ಮಾಡಿದವು. ಬಳಿಕ ನವೆಂಬರ್ 11ರಲ್ಲಿ ಮತ್ತೆ ಮೂರನೇ ಬಿಡ್ಡಿಂಗ್ ಕರೆಯಲಾಗಿದ್ದು ಜನವರಿ 8ರವರೆಗೆ ಇದು ಚಾಲ್ತಿಯಲ್ಲಿರುತ್ತದೆ. ಯಾರು ಬೇಕಾದರೂ ಬಿಡ್ ಮಾಡಬಹುದಾಗಿದೆ. ನಾನು ಬರೆದ ಲೆಟರ್ ಪರಿಗಣಿಸಿದ ಸಮಿತಿ ರಚನೆಯಾಗಿರುವ ಹಿನ್ನೆಲೆ ನಾನು ಮಾತಾಡಲ್ಲ ಎಂದು ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ತಿಳಿಸಿದ್ರು.
ಬಿಡ್ಡಿಂಗ್ ಶಿಸ್ತುಬದ್ಧವಾಗಿ, ಪಾರದರ್ಶಕವಾಗಿ ನಡೆಯುತ್ತಿದೆ ಬಿಡ್ಡಿಂಗ್ ಶಿಸ್ತುಬದ್ಧವಾಗಿ, ಪಾರದರ್ಶಕವಾಗಿ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಇದರಲ್ಲಿ ಗೊಂದಲ ಇಲ್ಲ. ಇಲ್ಲಿ ಯಾವುದೇ ಪಕ್ಷಪಾತ ಪ್ರಕ್ರಿಯೆ ಇಲ್ಲ, ಎಲ್ಲವೂ ಪಾರದರ್ಶಕ. ನನ್ನ ಮೇಲಿನ ಆರೋಪ ವಿಚಾರ ನ್ಯಾಯಾಲಯದಲ್ಲಿ ಇದೆ. ಹೀಗಾಗಿ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಮಂತ್ ನಿಂಬಾಳ್ಕರ್ ಸ್ಪಷ್ಟ ಪಡಿಸಿದ್ದಾರೆ.
ನಿರ್ಭಯಾ ನಿಧಿ ಮಹಿಳಾ ಸುರಕ್ಷತಾ ಯೋಜನೆ: ಗೃಹ ಕಾರ್ಯದರ್ಶಿ ರೂಪಾ ಅವರಿಂದ ದಾಖಲೆ ಬಿಡುಗಡೆ, ವಿವಾದಕ್ಕೆ ಹೊಸ ಆಯಾಮ
Published On - 12:01 pm, Sun, 27 December 20