Hajj Yatra: 2 ವರ್ಷಗಳ ಬಳಿಕ ಹಜ್ ಯಾತ್ರೆ ಪ್ರಕ್ರಿಯೆಗೆ ಚಾಲನೆ; ಜನವರಿ 31ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕಾರ
ಈಗಾಗಲೇ ಹಜ್ ಯಾತ್ರೆಗೆ ಆನ್‍ಲೈನ್ ಅರ್ಜಿ ಸಲ್ಲಿಕೆ ಕಾರ್ಯ ಆರಂಭವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಇರುವ ಜನರು ಆನ್‍ಲೈನ್ ಮೂಲಕವೇ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು. 2022ರ ಜನವರಿ 31ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ.
ಬೆಂಗಳೂರು: ಕೊರೊನಾದಿಂದಾಗಿ ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಹಜ್ ಯಾತ್ರೆಯ (Haj Yatra) ಪ್ರಕ್ರಿಯೆಗೆ ಇಂದು ಬೆಂಗಳೂರಿನ ಹಜ್ ಭವನದಲ್ಲಿ ಚಾಲನೆ ನೀಡಲಾಗಿದೆ. ಹಜ್ ಯಾತ್ರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕಾರ ಪ್ರಕ್ರಿಯೆಗೆ ಹಜ್ ಖಾತೆಯ ಸಚಿವೆ ಶಶಿಕಲಾ ಜೊಲ್ಲೆ (Shashikala Jolle) ಇಂದು ಅಧಿಕೃತ ಚಾಲನೆ ನೀಡಿದರು. 2022ರ ಜನವರಿ ಅಂತ್ಯವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕಾರ ಮಾಡಲಾಗುವುದು.
ಸಿಎಂ ಸಮ್ಮುಖದಲ್ಲಿ ಖುರ್ರಾ ನಡೆಸಿ, 2022ರ ಜುಲೈನಲ್ಲಿ ಹಜ್ ಯಾತ್ರೆ ಅಯೋಜನೆ ಮಾಡಲಾಗುವುದು. ಹಜ್ ಯಾತ್ರೆಯ ಆನ್‍ಲೈನ್ ಅರ್ಜಿಗಳ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಹಜ್ ಮುಸ್ಲಿಂ ಸಮುದಾಯದ ಪ್ರಮುಖ ಧಾರ್ಮಿಕ ಯಾತ್ರೆಯಾಗಿದೆ. ಕೊರೊನಾದಿಂದ 2 ವರ್ಷಗಳಿಂದ ಈ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿರುವುದರಿಂದ 2022ರಲ್ಲಿ ಹಜ್ ಯಾತ್ರೆಗೆ ಅವಕಾಶ ನೀಡಲು ಆನ್‍ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ ಎಂದಿದ್ದಾರೆ.
ಈಗಾಗಲೇ ಹಜ್ ಯಾತ್ರೆಗೆ ಆನ್‍ಲೈನ್ ಅರ್ಜಿ ಸಲ್ಲಿಕೆ ಕಾರ್ಯ ಆರಂಭವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಇರುವ ಜನರು ಆನ್‍ಲೈನ್ ಮೂಲಕವೇ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು. 2022ರ ಜನವರಿ 31ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ. ಮುಖ್ಯಮಂತ್ರಿ ಅವರ ಸಮ್ಮುಖದಲ್ಲಿ ಖುರ್ರಾ(ಲಾಟರಿ) ನಡೆಸಿ, ಜುಲೈ 2022 ರಲ್ಲಿ ಹಜ್ ಯಾತ್ರೆಯನ್ನು ಅಯೋಜಿಸಲಾಗುವುದು.
ಇದನ್ನೂ ಓದಿ: Haj 2021: ಹಜ್ ಯಾತ್ರೆಗೆ ಸಲ್ಲಿಸಿದ್ದ ಎಲ್ಲ ಅರ್ಜಿ ರದ್ದು; ಭಾರತೀಯ ಹಜ್ ಕಮಿಟಿಯಿಂದ ಮಾಹಿತಿ ಪ್ರಕಟ
Hajj 2021: ಪವಿತ್ರ ಹಜ್ ಯಾತ್ರೆಗೆ ವಿದೇಶಿಯರಿಗಿಲ್ಲ ಅವಕಾಶ, ಸ್ಥಳೀಯ 60 ಸಾವಿರ ಯಾತ್ರಾರ್ಥಿಗಳಿಗಷ್ಟೇ ದರ್ಶನ ಭಾಗ್ಯ
Published On - 6:53 pm, Wed, 10 November 21