Haj 2021: ಹಜ್​ ಯಾತ್ರೆಗೆ ಸಲ್ಲಿಸಿದ್ದ ಎಲ್ಲ ಅರ್ಜಿ ರದ್ದು; ಭಾರತೀಯ ಹಜ್​ ಕಮಿಟಿಯಿಂದ ಮಾಹಿತಿ ಪ್ರಕಟ

Haj Committee: ಹಜ್ 1442 ರಲ್ಲಿ ಸೌದಿ ಅರೇಬಿಯಾದ ನಾಗರಿಕರು ಅದೂ ಸೀಮಿತ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸೌದಿ ಅರೇಬಿಯಾ ಆಡಳಿತ ಹೇಳಿದೆ. ಅಂತಾರಾಷ್ಟ್ರೀಯ ಹಜ್ ಯಾತ್ರೆಯನ್ನು ನಿಷೇಧಿಸಲಾಗಿದೆ.

Haj 2021: ಹಜ್​ ಯಾತ್ರೆಗೆ ಸಲ್ಲಿಸಿದ್ದ ಎಲ್ಲ ಅರ್ಜಿ ರದ್ದು; ಭಾರತೀಯ ಹಜ್​ ಕಮಿಟಿಯಿಂದ ಮಾಹಿತಿ ಪ್ರಕಟ
ಮೆಕ್ಕಾ
Follow us
TV9 Web
| Updated By: ganapathi bhat

Updated on: Jun 15, 2021 | 9:00 PM

ದೆಹಲಿ: ಈ ಬಾರಿಯ (2021ನೇ ಸಾಲಿನ) ಹಜ್​ ಯಾತ್ರೆಗೆ ಸಲ್ಲಿಸಿದ್ದ ಎಲ್ಲ ಅರ್ಜಿಯನ್ನು ರದ್ದುಗೊಳಿಸಲಾಗಿದೆ. ವಿದೇಶೀಯರಿಗೆ ಸೌದಿ ಅರೇಬಿಯಾ ಪ್ರವೇಶಕ್ಕೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಭಾರತೀಯ ಹಜ್​ ಕಮಿಟಿಯಿಂದ ಈ ಮಾಹಿತಿ ಪ್ರಕಟವಾಗಿದೆ. ಅದರಂತೆ, ಭಾರತೀಯರು ಹಜ್​ ಯಾತ್ರೆಗೆ ಸಲ್ಲಿಸಿದ್ದ ಅರ್ಜಿಗಳು ರದ್ದಾಗಿದೆ. ಕೊವಿಡ್-19 ಕಾರಣದಿಂದ ಈ ಬಾರಿ ಹಜ್ ಯಾತ್ರೆಗೆ ಸೌದಿ ಅರೇಬಿಯಾ ಇತ್ತೀಚೆಗಷ್ಟೇ ನಿರ್ಬಂಧ ಹೇರಿತ್ತು.

ಹಜ್ 1442 ರಲ್ಲಿ ಸೌದಿ ಅರೇಬಿಯಾದ ನಾಗರಿಕರು ಅದೂ ಸೀಮಿತ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸೌದಿ ಅರೇಬಿಯಾ ಆಡಳಿತ ಹೇಳಿದೆ. ಅಂತಾರಾಷ್ಟ್ರೀಯ ಹಜ್ ಯಾತ್ರೆಯನ್ನು ನಿಷೇಧಿಸಲಾಗಿದೆ. ಹೀಗಾಗಿ ಹಜ್- 2021ರ ಅರ್ಜಿಗಳನ್ನು ಭಾರತದ ಹಜ್ ಕಮಿಟಿ ಕೂಡ ರದ್ದುಗೊಳಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ವರ್ಷ ಕೊವಿಡ್ Haj Committee: ಸೋಂಕಿನ ಕಾರಣದಿಂದ ಪವಿತ್ರ ಹಜ್ ಯಾತ್ರೆಗೆ ವಿದೇಶಿ ಯಾತ್ರಾರ್ಥಿಗಳಿಗೆ ಅವಕಾಶ ನೀಡದಿರುವುದಾಗಿ ಸೌದಿ ಅರೇಬಿಯಾ ಜೂನ್ 12ರಂದು ತಿಳಿಸಿತ್ತು. ಈ ಬಾರಿ ಒಟ್ಟು 60 ಸಾವಿರ ಯಾತ್ರಾರ್ಥಿಗಳಿಗೆ ಮಾತ್ರ ಪವಿತ್ರ ಹಜ್ ಯಾತ್ರೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಸೌದಿ ಅರೇಬಿಯಾದ ಆರೋಗ್ಯ ಮತ್ತು ಹಜ್ ಸಚಿವಾಲಯ ತಿಳಿಸಿತ್ತು.

ಅಲ್ಲದೇ, ಸೌದಿ ಅರೇಬಿಯಾ ಸರ್ಕಾರ ನಿಗಡಿಪಡಿಸಿರುವ ನಿಯಮಗಳ ಪ್ರಕಾರ ಈಗಾಗಲೇ ಕೊವಿಡ್ ಲಸಿಕೆ ಪಡೆದುಕೊಂಡವರು, ಕನಿಷ್ಠ 14 ದಿನಗಳ ಹಿಂದಾದರೂ ಲಸಿಕೆ ಪಡೆದವರು ಮತ್ತು ಕೊವಿಡ್​ನಿಂದ ಗುಣಮುಖರಾದ ನಂತರ ಲಸಿಕೆ ಪಡೆದವರಿಗೆ ಮಾತ್ರ ಹಜ್ ದರ್ಶನ ಒದಗಿಸಲಾಗುವುದು ಎಂದು ವರದಿಯಾಗಿತ್ತು.

ಈ ವರ್ಷದ ಜುಲೈ ತಿಂಗಳ ಮಧ್ಯಭಾಗದಲ್ಲಿ ಆರಂಭವಾಗುವ ಮುಸ್ಲಿಂ ಸಮುದಾಯದ ಪವಿತ್ರ ಕ್ಷೇತ್ರದ ದರ್ಶನಕ್ಕೆ 18ರಿಂದ 65 ವರ್ಷದ ಒಳಗಿನವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಕಳೆದ ವರ್ಷವೂ ಕೊವಿಡ್​ ಪಿಡುಗಿನ ಕಾರಣದಿಂದ ಅತ್ಯಲ್ಪ ಯಾತ್ರಾರ್ಥಿಗಳಿಗಷ್ಟೇ ಹಜ್ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ಕುರಿತು ಹೊರಡಿಸಿರುವ ಪ್ರಕಟಣೆಯಲ್ಲಿ, ಸೌದಿ ಅರೇಬಿಯಾವು ಜನರ ಜೀವ ಮತ್ತು ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತದೆ. ಹೀಗಾಗಿ ವಿದೇಶಿಯವರಿಗೆ ಅವಕಾಶ ನೀಡದೇ, ದೇಶದ 60 ಸಾವಿರ ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿತ್ತು.

ಇದನ್ನೂ ಓದಿ: Hajj 2021: ಪವಿತ್ರ ಹಜ್ ಯಾತ್ರೆಗೆ ವಿದೇಶಿಯರಿಗಿಲ್ಲ ಅವಕಾಶ, ಸ್ಥಳೀಯ 60 ಸಾವಿರ ಯಾತ್ರಾರ್ಥಿಗಳಿಗಷ್ಟೇ ದರ್ಶನ ಭಾಗ್ಯ

ಮುಸ್ಲಿಮರಿಗೆ ಶುಭ ಸುದ್ದಿ; ಆದಷ್ಟು ಬೇಗ ನಿಗದಿಯಾಗಲಿದೆ ಹಜ್, ಉಮ್ರಾ ತೀರ್ಥ ಯಾತ್ರೆ ದಿನಾಂಕ.. ಸೌದಿ ಪ್ರಕಟಣೆ