Coronavirus cases in India: ಕಳೆದ 24 ಗಂಟೆಗಳಲ್ಲಿ 62,224 ಹೊಸ ಕೊವಿಡ್ ಪ್ರಕರಣ, 2542 ಮಂದಿ ಸಾವು
Covid 19: ಚೇತರಿಕೆ ದರ ಶೇ 95.80ಕ್ಕೆ ಏರಿಕೆ ಆಗಿದ್ದು ಸಾಪ್ತಾಹಿಕ ಸಕಾರಾತ್ಮಕ ದರವು ಶೇ 5ಕ್ಕಿಂತ ಕಡಿಮೆಯಾಗಿದೆ. ಪ್ರಸ್ತುತ ಇದು ಶೇ 4.17ರಷ್ಟಿದೆ. ದೈನಂದಿನ ಸಕಾರಾತ್ಮಕತೆ ದರ 3.22%, ಸತತ 9 ದಿನಗಳವರೆಗೆ 5% ಕ್ಕಿಂತ ಕಡಿಮೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ದೆಹಲಿ: ಭಾರತದಲ್ಲಿ 62,224 ಹೊಸ ಕೊವಿಡ್ ಪ್ರಕರಣಗಳನ್ನು ವರದಿ ಆಗಿದ್ದು ಕಳೆದ 24 ಗಂಟೆಗಳಲ್ಲಿ 2,542 ಸಾವುಗಳು ಸಂಭವಿಸಿವೆ. ಇದರೊಂದಿಗೆ, ದೇಶದ ಒಟ್ಟಾರೆ ಸೋಂಕಿತರ ಸಂಖ್ಯೆ 2.96 ಕೋಟಿಗೆ ಏರಿದರೆ, ಸಾವಿನ ಸಂಖ್ಯೆ 3.62 ಲಕ್ಷಕ್ಕೆ ಏರಿದೆ. ಕೇರಳದಲ್ಲಿ ಅತೀ ಹೆಚ್ಚು ಪ್ರಕರಣ (12,246 ಹೊಸ ಪ್ರಕರಣ) ವರದಿ ಆಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್ 19 ಲಸಿಕೆಗಳ ಹೆಚ್ಚಿನ ಬೆಲೆಗಳ ಕುರಿತ ಚರ್ಚೆಯ ಮಧ್ಯೆ, ಲಸಿಕೆ ತಯಾರಕ ಭಾರತ್ ಬಯೋಟೆಕ್ ಅವರು ಕೊವಾಕ್ಸಿನ್ ಅನ್ನು ಸರ್ಕಾರಕ್ಕೆ ಪೂರೈಸುತ್ತಿರುವ ದರವು “ದೀರ್ಘಾವಧಿಯಲ್ಲಿ ಸಮರ್ಥನೀಯವಲ್ಲ” ಮತ್ತು ಖಾಸಗಿ ಮಾರುಕಟ್ಟೆಗಳಲ್ಲಿ ಭೇದಾತ್ಮಕ ಬೆಲೆ ಎಂದು ಹೇಳಿದ್ದಾರೆ.
India reports 62,224 new #COVID19 cases, 1,07,628 discharges & 2542 deaths in last 24 hours, as per Health Ministry
Total cases: 2,96,33,105 Total discharges: 2,83,88,100 Death toll: 3,79,573 Active cases: 8,65,432
Total Vaccination: 26,19,72,014 (28,00,458 in last 24 hrs) pic.twitter.com/mEVj5dNxHZ
— ANI (@ANI) June 16, 2021
ಚೇತರಿಕೆ ದರ ಶೇ 95.80ಕ್ಕೆ ಏರಿಕೆ ಆಗಿದ್ದು ಸಾಪ್ತಾಹಿಕ ಸಕಾರಾತ್ಮಕ ದರವು ಶೇ 5ಕ್ಕಿಂತ ಕಡಿಮೆಯಾಗಿದೆ. ಪ್ರಸ್ತುತ ಇದು ಶೇ 4.17ರಷ್ಟಿದೆ. ದೈನಂದಿನ ಸಕಾರಾತ್ಮಕತೆ ದರ 3.22%, ಸತತ 9 ದಿನಗಳವರೆಗೆ 5% ಕ್ಕಿಂತ ಕಡಿಮೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಏತನ್ಮಧ್ಯೆ, ಕೊವಿಶೀಲ್ಡ್ ಲಸಿಕೆ ಡೋಸ್ ನಡುವಿನ ಅಂತರವನ್ನು 4-6 ವಾರಗಳಿಂದ 12-16 ವಾರಗಳಿಗೆ ಹೆಚ್ಚಿಸುವ ನಿರ್ಧಾರವು “ಅಡೆನೊವೆಕ್ಟರ್ ಲಸಿಕೆಗಳ ವರ್ತನೆಗೆ ಸಂಬಂಧಿಸಿದ ಮೂಲಭೂತ ವೈಜ್ಞಾನಿಕ ಕಾರಣ” ದಲ್ಲಿದೆ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಹೇಳಿದೆ.
➡️Age bifurcation of #COVID19 cases in first and second COVID wave
There is no need to panic about children getting infected in successive waves; need to spread awareness among children and every family in the society: @MoHFW_INDIA
#IndiaFightsCorona #Unite2FightCorona pic.twitter.com/bu6flvPen9
— PIB India (@PIB_India) June 15, 2021
ಪಿಐಬಿ ಮಂಗಳವಾರ ಬಿಡುಗಡೆ ಮಾಡಿದ ಫ್ಯಾಕ್ಟ್-ಚೆಕ್ “ಆನ್‌ಲೈನ್ ನೋಂದಣಿ ಮೂಲಕ ವ್ಯಾಕ್ಸಿನೇಷನ್ ಗಾಗಿ ಪೂರ್ವ-ನೋಂದಣಿ ಮತ್ತು ಲಸಿಕೆ ಸೇವೆಗಳನ್ನು ಪಡೆಯಲು ಮೊದಲೇ ಕಾಯ್ದಿರಿಸುವುದು ಕಡ್ಡಾಯವಲ್ಲ” ಎಂದು ಹೇಳಿದೆ.
ಕೊವಿನ್ ಅಪ್ಲಿಕೇಶನ್‌ನಲ್ಲಿ ನೋಂದಾಯಿಸುವುದು “ನೋಂದಣಿಯ ಹಲವು ವಿಧಾನಗಳಲ್ಲಿ ಒಂದಾಗಿದೆ” ಎಂದು ಸ್ಪಷ್ಟಪಡಿಸಿದ ಪಿಐಬಿ ಬ, “18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾರಾದರೂ ನೇರವಾಗಿ ಹತ್ತಿರದ ವ್ಯಾಕ್ಸಿನೇಷನ್ ಕೇಂದ್ರಕ್ಕೆ ಹೋಗಬಹುದು, ಅಲ್ಲಿ ವ್ಯಾಕ್ಸಿನೇಟರ್ ಆನ್-ಸೈಟ್ ನೋಂದಣಿಯನ್ನು ಮಾಡಿ ಲಸಿಕೆ ಪಡೆಯಬಹುದು ಎಂದು ಹೇಳಿದೆ.
ಒಟ್ಟಾರೆಯಾಗಿ, 26,19,72,014 ಕೊವಿಡ್ ಲಸಿಕೆ ಡೋಸ್ ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ನೀಡಲಾಗಿದೆ.
ಭಾರತದ ಕೊವಿಡ್ ಪ್ರಕರಣಗಳ ಸಂಖ್ಯೆ ಆಗಸ್ಟ್ 7 ರಂದು 20 ಲಕ್ಷ, ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷ ದಾಟಿದೆ. ಇದು ಸೆಪ್ಟೆಂಬರ್ 28 ರಂದು 60 ಲಕ್ಷ ದಾಟಿದೆ, ಅಕ್ಟೋಬರ್ 11 ರಂದು 70 ಲಕ್ಷ ದಾಟಿದೆ. ಅಕ್ಟೋಬರ್ 29 ರಂದು 80 ಲಕ್ಷ, ನವೆಂಬರ್ 20 ರಂದು 90 ಲಕ್ಷ ಮತ್ತು ಡಿಸೆಂಬರ್ 19 ರಂದು ಒಂದು ಕೋಟಿ ಗಡಿ ದಾಟಿದೆ. ಭಾರತವು ಮೇ 4 ರಂದು 2 ಕೋಟಿಯ ಮೈಲಿಗಲ್ಲು ದಾಟಿದೆ.
2,542 ಹೊಸ ಸಾವು ಪ್ರಕರಣಗಳಲ್ಲಿ ಮಹಾರಾಷ್ಟ್ರದಿಂದ 1,458, ತಮಿಳುನಾಡಿನಿಂದ 267, ಕೇರಳದಿಂದ 166 ಮತ್ತು ಕರ್ನಾಟಕದಿಂದ 115 ಸಾವು ಪ್ರಕರಣಗಳು ಸೇರಿವೆ
ದೇಶದಲ್ಲಿ ಈವರೆಗೆ ಒಟ್ಟು 3,79,573 ಸಾವುಗಳು ಸಂಭವಿಸಿವೆ. ಮಹಾರಾಷ್ಟ್ರದಿಂದ 1,14,154, ಕರ್ನಾಟಕದಿಂದ 33,148, ತಮಿಳುನಾಡಿನಿಂದ 30,068, ದೆಹಲಿಯಿಂದ 24,851, ಉತ್ತರ ಪ್ರದೇಶದಿಂದ 21,914, ಪಶ್ಚಿಮ ಬಂಗಾಳದಿಂದ 17,049, ಪಂಜಾಬ್‌ನಿಂದ 15,650 ಮತ್ತು 13,342 ಪ್ರಕರಣಗಳು ಛತ್ತೀಸಗಡದಿಂದ ವರದಿ ಆಗಿದೆ.
70 ರಷ್ಟು ಸಾವುಗಳು ಕೊಮೊರ್ಬಿಡಿಟಿಗಳಿಂದಾಗಿ ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯ ಒತ್ತಿಹೇಳಿತು.
ಕೇರಳದಲ್ಲಿ ಕೊವಿಡ್ ನಿರ್ಬಂಧ ಸಡಿಲಿಕೆ ಕೊವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಹೇರಿದ ಕೆಲವು ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸಲು ಕೇರಳ ಸರ್ಕಾರ ಮಂಗಳವಾರ ನಿರ್ಧರಿಸಿದೆ. ವಿವರಗಳು ಇಲ್ಲಿವೆ. ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಕಾರ್ಯನಿರ್ವಹಿಸಬಹುದು. ಆ್ಯಪ್ ಮೂಲಕ ಮದ್ಯ ಮಾರಾಟ, ಲಾಟರಿ ಟಿಕೆಟ್ ಮಾರಾಟಕ್ಕೆ ಅವಕಾಶ, ಬ್ಯಾಂಕುಗಳು ವಾರದಲ್ಲಿ 3 ದಿನ ತೆರೆಯಲು, ಸಾರ್ವಜನಿಕ ಸಾರಿಗೆಯನ್ನು ನಿರ್ಬಂಧಿತ ರೀತಿಯಲ್ಲಿ ತೆರೆಯಲು ಅವಕಾಶ. ಪರೀಕ್ಷೆಗಳಿಗೆ ಅನುಮತಿ ನೀಡಲಾಗುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳು, ನಿಗಮಗಳು 25% ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಬಹುದು. ಭಾನುವಾರ, ಶನಿವಾರ ರಾಜ್ಯವ್ಯಾಪಿ ಲಾಕ್‌ಡೌನ್.
ಪ್ರವಾಸೋದ್ಯಮ ಚಟುವಟಿಕೆಗಳು ಮತ್ತು ಮಾಲ್‌ಗಳು ಮತ್ತು ಇತರ ಒಳಾಂಗಣ ಸ್ಥಳಗಳನ್ನು ತೆರೆಯಲು ಅನುಮತಿ ಇಲ್ಲ. ಸಾರ್ವಜನಿಕ ಕೂಟಗಳನ್ನು ನಿಷೇಧಿಸಲಾಗಿದೆ. ರೆಸ್ಟೋರೆಂಟ್‌ಗಳಲ್ಲಿ ಕುಳಿತು ಊಟದ ಸೇವೆಗಳಿಲ್ಲ. ಟೇಕ್ಅವೇ ಮತ್ತು ಹೋಮ್ ಡೆಲಿವರಿ ಮಾತ್ರ ಅನುಮತಿಸಲಾಗಿದೆ.
Published On - 10:40 am, Wed, 16 June 21