ಬಿಎಸ್​ಪಿ ಉಚ್ಛಾಟಿಸಿದ ಶಾಸಕರಿಂದ ಅಖಿಲೇಶ್ ಯಾದವ್ ಭೇಟಿ, ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಸಮಾಜವಾದಿ ಪಕ್ಷಕ್ಕೆ ಸೇರುವ ಸಾಧ್ಯತೆ

Uttar Pradesh Assembly Elections 2022: ತಮ್ಮ ಭವಿಷ್ಯದ ಬಗ್ಗೆ ಚರ್ಚಿಸಲು ನಾವು ಎಸ್‌ಪಿ ಮುಖ್ಯಸ್ಥರನ್ನು ಭೇಟಿಯಾಗಿದ್ದೇವೆ ಎಂದು ಜೌನ್‌ಪುರ ಜಿಲ್ಲೆಯ ಮುಂಗ್ರಾ ಬಾದ್‌ಶಾಹ್‌ಪುರ ಕ್ಷೇತ್ರದ ಶಾಸಕರಾದ ಸುಷ್ಮಾ ಪಟೇಲ್ ಹೇಳಿದ್ದಾರೆ

ಬಿಎಸ್​ಪಿ ಉಚ್ಛಾಟಿಸಿದ ಶಾಸಕರಿಂದ ಅಖಿಲೇಶ್ ಯಾದವ್ ಭೇಟಿ, ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಸಮಾಜವಾದಿ ಪಕ್ಷಕ್ಕೆ ಸೇರುವ ಸಾಧ್ಯತೆ
ಅಖಿಲೇಶ್ ಯಾದವ್

ಲಕ್ನೊ: ಬಹುಜನ್ ಸಮಾಜ ಪಕ್ಷದ (ಬಿಎಸ್ಪಿ)ಯಿಂದ ಉಚ್ಛಾಟಿಸಲ್ಪಟ್ಟ ಐವರು ಶಾಸಕರು ಮಂಗಳವಾರ ಬೆಳಿಗ್ಗೆ ಲಕ್ನೋದಲ್ಲಿ ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಭೇಟಿಯಾದರು . 2022 ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಅವರು ಸಮಾಜವಾದಿ ಪಕ್ಷಕ್ಕೆ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ವರದಿ ಮಾಡಿವೆ.

ತಮ್ಮ ಭವಿಷ್ಯದ ಬಗ್ಗೆ ಚರ್ಚಿಸಲು ನಾವು ಎಸ್‌ಪಿ ಮುಖ್ಯಸ್ಥರನ್ನು ಭೇಟಿಯಾಗಿದ್ದೇವೆ ಎಂದು ಜೌನ್‌ಪುರ ಜಿಲ್ಲೆಯ ಮುಂಗ್ರಾ ಬಾದ್‌ಶಾಹ್‌ಪುರ ಕ್ಷೇತ್ರದ ಶಾಸಕರಾದ ಸುಷ್ಮಾ ಪಟೇಲ್ ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. “”ನಾನು ಸಮಾಜವಾದಿ ಪಕ್ಷದ ಟಿಕೆಟ್​ನಲ್ಲಿ  2022 ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ನೀವು ಖಚಿತವಾಗಿ ಹೇಳಬಹುದು” ಎಂದಿದ್ದಾರೆ ಪಟೇಲ್.

ರಾಜ್ಯಸಭಾ ಚುನಾವಣೆಗೆ ತನ್ನ ಅಧಿಕೃತ ಅಭ್ಯರ್ಥಿ ರಾಮ್ಜಿ ಗೌತಮ್ ಅವರನ್ನು ನಾಮನಿರ್ದೇಶನ ಮಾಡುವುದನ್ನು ವಿರೋಧಿಸಿದ ನಂತರ ಕಳೆದ ಐದು ಅಕ್ಟೋಬರ್ ತಿಂಗಳಲ್ಲಿ ಬಿಎಸ್ಪಿಯಿಂದ ಹೊರಹಾಕಲ್ಪಟ್ಟ ಏಳು ಜನರಲ್ಲಿ ಈ ಐದು ಶಾಸಕರು ಸೇರಿದ್ದಾರೆ ಎಂದು ಅವರು ಹೇಳಿದರು.

ಏಳು ಶಾಸಕರು- ಚೌಧರಿ ಅಸ್ಲಂ ಅಲಿ (ಧೋಲಾನಾ, ಹಾಪುರ್) ಹಕೀಮ್ ಲಾಲ್ ಬಿಂಡ್ (ಹ್ಯಾಂಡಿಯಾ, ಪ್ರಯಾಗ್ರಾಜ್), ಮೊಹಮ್ಮದ್ ಮುಜತಾಬಾ ಸಿದ್ದಿಕಿ (ಪ್ರತಾಪುರ, ಪ್ರಯಾಗ್ರಾಜ್), ಅಸ್ಲಂ ರೈನಿ (ಭಿಂಗಾ, ಶ್ರಾವಸ್ತಿ), ಸುಷ್ಮಾ ಪಟೇಲ್ (ಮುಂಗ್ರಾ ಬಾದ್‌ಶಾಹ್‌ಪುರ, ಜೌನ್ಪುರ್), , ಹರ್ಗೋವಿಂದ್ ಭಾರ್ಗವ (ಸಿಧೌಲಿ, ಸೀತಾಪುರ) ಮತ್ತು ಬಂದಾನ ಸಿಂಗ್ (ಸಗ್ಡಿ, ಅಜಮ್‌ಗಡ).

“ಹಾಪುರದ ಅಸ್ಲಂ ಅಲಿ ಕೂಡ ಬರಬೇಕಿತ್ತು, ಆದರೆ ಅವರ ಪತ್ನಿ ಜಿಲ್ಲೆಯ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಅವರಿಗೆ ಸಾಧ್ಯವಾಗಲಿಲ್ಲ” ಎಂದು ಪಟೇಲ್ ಹೇಳಿದರು.

ಕಳೆದ ವರ್ಷ ನಡೆದ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ಏಳು ಶಾಸಕರನ್ನು ಪಕ್ಷದಿಂದ ಹೊರಹಾಕಲಾಯಿತು. ಪಕ್ಷದ ಚಿಹ್ನೆ ಅಥವಾ ಧ್ವಜವನ್ನು ಬಳಸಬೇಡಿ ಮತ್ತು ಪಕ್ಷದ ಸಭೆಗಳಿಗೆ ಹಾಜರಾಗಬೇಡಿ ಎಂದು ನಮಗೆ ತಿಳಿಸಲಾಯಿತು. ಚುನಾವಣೆಗೆ ಮುನ್ನ ನಾವು ಅಖಿಲೇಶ್ ಅವರನ್ನು ಭೇಟಿ ಮಾಡಿದ್ದೇವೆ ಎಂಬ ಊಹಾಪೋಹಗಳ ಆಧಾರದ ಮೇಲೆ ಇದನ್ನು ಮಾಡಲಾಗಿದೆ. ನಮ್ಮ ಬಗ್ಗೆ ವಿವರಣೆ ನೀಡುವುದಕ್ಕೂ ನಮಗೆ ಅವಕಾಶ ನೀಡಲಾಗಿಲ್ಲ ”ಎಂದು ಪಟೇಲ್ ಹೇಳಿದರು.

ಮಂಗಳವಾರ ಅಖಿಲೇಶ್ ಅವರನ್ನು ಭೇಟಿಯಾದ ಮತ್ತೊಬ್ಬ ಶಾಸಕ – ಮೊಹಮ್ಮದ್ ಮುಜತಾಬಾ ಸಿದ್ದಿಕಿ “ಇದು ಎಸ್‌ಪಿ ಮುಖ್ಯಸ್ಥರೊಂದಿಗೆ ಔ ಪಚಾರಿಕ ಸಭೆ. ಏನು ಮಾಡಬೇಕೆಂದು ಚರ್ಚಿಸಲು ನಾವು ಭವಿಷ್ಯದಲ್ಲಿ ಇತರ ಸಭೆಗಳನ್ನು ನಡೆಸುವ ಸಾಧ್ಯತೆಯಿದೆ, ”ಎಂದು ಹೇಳಿದ್ದಾರೆ.

ಜೂನ್ 3 ರಂದು, ಬಿಎಸ್ಪಿ ನಾಯಕ ಮಾಯಾವತಿ ತನ್ನ ಇಬ್ಬರು ಪ್ರಮುಖ ನಾಯಕರಾದ ಲಾಲ್ಜಿ ವರ್ಮಾ ಮತ್ತು ರಾಮ್ ಅಚಲ್ ರಾಜ್ಭರ್ ಅವರನ್ನು ಇತ್ತೀಚಿನ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ “ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ” ಹೊರಹಾಕಿದರು. ವರ್ಮಾ ರಾಜ್ಯ ವಿಧಾನಸಭೆಯಲ್ಲಿ ಪಕ್ಷದ ನಾಯಕರಾಗಿದ್ದರೆ, ರಾಜ್ಭರ್ ಮಾಜಿ ರಾಜ್ಯ ಬಿಎಸ್ಪಿ ಮುಖ್ಯಸ್ಥರಾಗಿದ್ದು, ಹಿಂದಿನ ಬಿಎಸ್ಪಿ ಸರ್ಕಾರಗಳಲ್ಲಿ ಸಚಿವರಾಗಿದ್ದರು.

ಉಚ್ಚಾಟನೆಯ ನಂತರ ಬಿಎಸ್ಪಿಯಲ್ಲಿ ಕೇವಲ ಏಳು ಶಾಸಕರೊಂದಿಗೆ ವಿಧಾನಸಭೆಯಲ್ಲಿ ಉಳಿದು ಬಿಟ್ಟರು, ಅವರಲ್ಲಿ ಒಬ್ಬರು (ಮುಖ್ತಾರ್ ಅನ್ಸಾರಿ) ಜೈಲಿನಲ್ಲಿದ್ದರು. 2017 ರ ವಿಧಾನಸಭಾ ಚುನಾವಣೆಯಲ್ಲಿ 403 ಸ್ಥಾನಗಳಲ್ಲಿ 19 ಸ್ಥಾನಗಳನ್ನು ಬಿಎಸ್ಪಿ ಗೆದ್ದಿತ್ತು.

ಲಾಲ್ಜಿ ವರ್ಮಾ ಮತ್ತು ಅರಾಮ್ ಅಚಲ್ ರಾಜ್ಭರ್ ಅವರು ಮಂಗಳವಾರ ಸಭೆಗೆ ಬರಲಿಲ್ಲ. ಒಮ್ಮೆ ನಾವು ಅವರೊಂದಿಗೆ ವಿಷಯಗಳನ್ನು ಚರ್ಚಿಸಿ ಏನು ಮಾಡಬೇಕೆಂದು ನಾವು ನೋಡುತ್ತೇವೆ, ”ಎಂದು ಸಿದ್ದಿಕಿ ಹೇಳಿದರು.

ಹೊರಹಾಕಲ್ಪಟ್ಟ ಶಾಸಕರು ಹೊಸ ಪಕ್ಷವನ್ನು ರಚಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಅಸ್ಲಂ ರೈನಿ ಹೇಳಿದರು. “11 ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ನಾವೆಲ್ಲರೂ ಸಂಪರ್ಕದಲ್ಲಿದ್ದೇವೆ. ನಾವು ಇನ್ನೊಬ್ಬ ಶಾಸಕರನ್ನು ಪಡೆಯಲು ಸಾಧ್ಯವಾದರೆ, ನಾವು ನಮ್ಮದೇ ಪಕ್ಷವನ್ನು ರಚಿಸಬಹುದು. ಒಮ್ಮೆ ನಾವು ನಮ್ಮ ಪಕ್ಷವನ್ನು ರಚಿಸಿದರೆ, ನಮ್ಮ ನಾಯಕ ಲಾಲ್ಜಿ ವರ್ಮಾ ಆಗಿರುತ್ತಾರೆ ಎಂದು ಲಕ್ನೋದಲ್ಲಿ ರೈನಿ ಮಂಗಳವಾರ ಹೇಳಿದರು.

ಇದನ್ನೂ ಓದಿ:   ಬಿಎಸ್​ಪಿ ಅಭ್ಯರ್ಥಿಗೆ ಹಣದ ಆಮಿಷ ಒಡ್ಡಿದ ಆರೋಪ; ಕೇರಳ ಬಿಜೆಪಿ ಅಧ್ಯಕ್ಷನ ವಿರುದ್ಧ ಎಫ್​ಐಆರ್​