ಹರಿಹರದ ಹರ ಜಾತ್ರೆಗೆ ಭರ್ಜರಿ ಚಾಲನೆ.. ಜ.15ಕ್ಕೆ ಪುನೀತ್ ಭೇಟಿ
ರಾಜ್ಯದ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹರಜಾತ್ರೆ ಮತ್ತು ಸಂಕ್ರಾಂತಿ ಸಂಭ್ರಮ ಸಮಾವೇಶ ಉದ್ಘಾಟಿಸಿದ್ರು. ಈ ವೇಳೆ ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಉಪಸ್ಥತರಿದ್ರು.
ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಹಣಗವಾಡಿ ಬಳಿ ಇರೋ ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಆವರಣದಲ್ಲಿ ಸಂಭ್ರಮ ಮನೆ ಮಾಡಿದೆ. ಪ್ರತಿ ವರ್ಷದಂತೆ ಇಂದಿನಿಂದ 2 ದಿನಗಳ ಕಾಲ ಮಠದ ಆವರಣದಲ್ಲಿ ಹರ ಜಾತ್ರೆ ನಡೆಯಲಿದೆ.
ಜಾತ್ರೆಯನ್ನ ವರ್ಚುವಲ್ ಆಗಿ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಉದ್ಘಾಟನೆ ಮಾಡಿದ್ದಾರೆ. ಹಾಗೂ ರಾಜ್ಯದ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹರಜಾತ್ರೆ ಮತ್ತು ಸಂಕ್ರಾಂತಿ ಸಂಭ್ರಮ ಸಮಾವೇಶ ಉದ್ಘಾಟಿಸಿದ್ರು. ಈ ವೇಳೆ ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ಉಪಸ್ಥತರಿದ್ರು.
ಜ.15ಕ್ಕೆ ಪುನೀತ್ ಭೇಟಿ ಹರಜಾತ್ರೆಯ ಇನ್ನೊಂದು ವಿಶೇಷ ಅಂದ್ರೆ ಇದೇ 15ರಂದು ಯುವರತ್ನ ಸಮಾವೇಶ ಇದೆ. ನಟ ಪುನಿತ್ ರಾಜ್‌ಕುಮಾರ್ ಪಾಲ್ಗೊಳ್ಳಲಿದ್ದಾರೆ. ಇದ್ರಲ್ಲಿ ಬಿಎಸ್‌ವೈ ಪುತ್ರ ಬಿ.ವೈ ವಿಜಯೇಂದ್ರ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
2 ದಿನಗಳ ಕಾಲ ನಡೆಯೋ ಹರಜಾತ್ರೆ ಪಂಚಮಸಾಲಿ ಲಿಂಗಾಯತರ ಪ್ರಸಿದ್ಧ ಜಾತ್ರೆ. ಈ ಜಾತ್ರೆಯಲ್ಲಿ ತೆಗೆದುಕೊಳ್ಳೋ ನಿರ್ಧಾರಗಳು ರಾಜ್ಯದ ಗಮನ ಸೆಳೆಯುತ್ತಿವೆ. ಒಟ್ನಲ್ಲಿ ರಾಜ್ಯದ ಪ್ರತಿಯೊಂದು ರಾಜಕಾರಣಿಯೂ ಈ ಹರಜಾತ್ರೆಯಲ್ಲಿ ಪಾಲ್ಗೊಳ್ಳೋದು ವಿಶೇಷ.