ಹರಿಯಣ ಫಲಿತಾಂಶ: ಕರ್ನಾಟಕ ಕಾಂಗ್ರೆಸ್ ರಾಜಕೀಯದ ಮೇಲೆ ಬೀರಲಿದೆ ಕೊಂಚ ಪರಿಣಾಮ

| Updated By: ರಮೇಶ್ ಬಿ. ಜವಳಗೇರಾ

Updated on: Oct 08, 2024 | 7:31 PM

ಹರಿಯಾಣ ವಿಧಾನಸಭೆ ಫಲಿತಾಂಶದ ಮೇಲೆ ರಾಜ್ಯ ಕಾಂಗ್ರೆಸ್ ನಾಯಕರು ಭಾರೀ ಆತ್ಮವಿಶ್ವಾಸ ಇಟ್ಡುಕೊಂಡಿದ್ದರು. ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡುವುದು ಗ್ಯಾರಂಟಿಯೇ ಗ್ಯಾರಂಟಿ ಎಂದುಕೊಂಡಿದ್ದರು. ರಾಜ್ಯ ಕಾಂಗ್ರೆಸ್ ನಾಯಕರ ನಿರೀಕ್ಷೆಗಳನ್ನೆಲ್ಲ ಫಲಿತಾಂಶ ತಲೆ ಕೆಳಗು ಮಾಡಿದೆ. ಅದರಲ್ಲೂ ಪದೇ ಪದೇ ಹರಿಯಾಣ ಚುನಾವಣೆಯಲ್ಲೂ ಕೂಡ ಮುಡಾ ವಿಚಾರ ಪ್ರಚಾರ ತೆಗೆದುಕೊಂಡಿದ್ದು ಮುಜುಗರ ಹೆಚ್ಚಾಗುವಂತೆ ಮಾಡಿದೆ.

ಹರಿಯಣ ಫಲಿತಾಂಶ: ಕರ್ನಾಟಕ ಕಾಂಗ್ರೆಸ್ ರಾಜಕೀಯದ ಮೇಲೆ ಬೀರಲಿದೆ ಕೊಂಚ ಪರಿಣಾಮ
Follow us on

ಬೆಂಗಳೂರು, (ಅಕ್ಟೋಬರ್ 08): ಕಳೆದ ವಾರ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದಿದ್ದ ಹಿರಿಯ ಕಾಂಗ್ರೆಸ್ ನಾಯಕ ಕೆಬಿ ಕೋಳಿವಾಡ ಹರಿಯಾಣ ಚುನಾವಣೆ ಮೇಲೆ ಮುಡಾ ಪ್ರಕರಣ ಪರಿಣಾಮ ಬೀರಬಹುದು ಎಂದಿದ್ದರು. ಇಂದು ರಿಸಲ್ಟ್ ಎಲ್ಲಾ ಉಲ್ಟಾ ಪಲ್ಟಾ ಆಗಿ ಕೈ ನಾಯಕರು ತಲೆ ಕೆಡಿಸಿಕೊಳ್ಳುತ್ತಿದ್ದಂತೆ ಕೆಬಿ ಕೋಳಿವಾಡ ತನ್ನ ಎಚ್ವರಿಕೆಯ ಮಾತುಗಳನ್ನು ಪುನರುಚ್ಚರಿಸಿದ್ದಾರೆ. ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ಎಲ್ಲಿಯ ಸಂಬಂಧ ಅನ್ನೋ ಹಾಗೆ, ಮೈಸೂರಿನ ಮುಡಾ ಗೂ ದೂರದ ಹರಿಯಾಣ ಗೂ ಎತ್ತಣಿಂದೆತ್ತ ಸಂಬಂಧ ಅಂತ ಎಲ್ಲ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಆದರೆ ನಿಜಕ್ಕೂ ಹರಿಯಾಣ ಫಲಿತಾಂಶ ರಾಜ್ಯ ರಾಜಕೀಯದ ಮೇಲೆ ಅಲ್ಪ ಸ್ವಲ್ಪ ಪರಿಣಾಮ ಬೀರುವುದು ಖಂಡಿತ ಎನ್ನಲಾಗುತ್ತಿದೆ.

ರಾಜ್ಯದಲಿ ಮುಡಾ ಪ್ರಕರಣ ಮುನ್ನೆಲೆಯಲ್ಲಿ ಇರದಿದ್ದರೆ ಈ ರಿಸಲ್ಟ್ ಎಳ್ಳಷ್ಟೂ ಪರಿಗಣನೆಗೇ ಬರುತ್ತಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರದ ಮೇಲೆ ಸಾಲು ಸಾಲು ಆಪಾದನೆಗಳ ಬೆಟ್ಟದ ರಾಶಿಯೇ ಧುತ್ತೆಂದು ಮೇಲೆದ್ದು ನಿಂತಿರುವಾಗ ಹರಿಯಾಣ ರಿಸಲ್ಟ್ ಬಹಳ ಇಂಪಾರ್ಟೆಂಟ್ ಆಗಿದೆ.

ಇದನ್ನೂ ಓದಿ: ಹರಿಯಾಣಾ ವಿಧಾನಸಭೆ ಫಲಿತಾಂಶ- ಮುಡಾ ಹಗರಣಕ್ಕೆ ತಿರುವು, ಸಿದ್ದುಗೆ ಸಂಕಷ್ಟ

  • ರಾಜ್ಯ ಕಾಂಗ್ರೆಸ್ ಪಾಲಿಟಿಕ್ಸ್ ಮೇಲೂ ಬೀರಲಿದೆ ಕೊಂಚ ಪರಿಣಾಮ
  • ಸದ್ಯದ ಗೊಂದಲಕಾರಿ ಸನ್ನಿವೇಶದಲ್ಲಿ ರಾಜ್ಯ ಕಾಂಗ್ರೆಸ್ ಮೇಲೂ ಪರಿಣಾಮ
  • ರಾಜ್ಯ ಕಾಂಗ್ರೆಸ್ ಗೂ ರವಾನೆಯಾಗಲಿದೆ ಎಚ್ಚರಿಕೆ ಸಂದೇಶ
  •  ಎಲ್ಲವನ್ನೂ ಸಲೀಸಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶ
  •  ಸರ್ಕಾರ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ
  •  ಬಿಜೆಪಿ ಅಲೆ ಇನ್ನೂ ಕಡಿಮೆಯಾಗಿಲ್ಲ ಎಂಬ ಕಟುವಾದ ವಾಸ್ತವ ಅರಿತುಕೊಳ್ಳಬೇಕಾದ ಕಾಂಗ್ರೆಸ್
    – ಹರಿಯಾಣದಲ್ಲೂ ಮೋದಿಯಿಂದ ಪ್ರಚಾರದ ವೇಳೆ ಪದೇ ಪದೇ ಉಲ್ಲೇಖವಾಗಿದ್ದ ರಾಜ್ಯ ಕಾಂಗ್ರೆಸ್ ಭ್ರಷ್ಟಾಚಾರದ ಆಪಾದನೆ.
  •  ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ಎಸಗುತ್ತದೆ ಎಂದು ಪ್ರಚಾರ ಮಾಡಿದ್ದ ಮೋದಿ
  •  ಇದರ ಪರಿಣಾಮದ ಬಗ್ಗೆಯೂ ಚಿಂತಿಸುವ ಅನಿವಾರ್ಯತೆ
  •  ಕೇವಲ ಗ್ಯಾರಂಟಿ ಯೋಜನೆಗಳು ಮಾತ್ರ ಫಲ‌ ಕೊಡುವುದಿಲ್ಲ ಎಂಬ ಮೆಸೇಜ್
  •  ಗ್ಯಾರಂಟಿ ಹೊರತುಪಡಿಸಿ ಅಭಿವೃದ್ಧಿ ಕೆಲಸಗಳ ಕಡೆ ಗಮನ ಹರಿಸಬೇಕಾದ ಸ್ಥಿತಿ
  •  ಜಾತಿ ಸಮೀಕರಣದ ವಿಚಾರದಲ್ಲೂ ಎಚ್ಚರಿಕೆ ಹೆಜ್ಜೆ ಇಡಬೇಕಿರುವ ಕಾಂಗ್ರೆಸ್
  • -ಜಾತಿ ಜನಗಣತಿ ವಿಚಾರದಲ್ಲಿ ಕತ್ತಿ ಮೇಲಿನ ನಡಿಗೆಯಂತೆ ಅಲರ್ಟ್ ಆಗಬೇಕಿದೆ
  •  ಸದ್ಯ ಮುಡಾ ಸೇರಿದಂತೆ ಹತ್ತು ಹಲವು ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್
  •  ಭ್ರಷ್ಟಾಚಾರದ ವಿಚಾರದಲ್ಲಿ ಸಹನೆ ಒಳ್ಳೆಯದಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಕಾಂಗ್ರೆಸ್
  •  ಹರಿಯಾಣಾ ಫಲಿತಾಂಶ ಮಹಾರಾಷ್ಟ್ರ ಚುನಾವಣೆ ಮೇಲೂ ಪರಿಣಾಮ ಬೀರಬಹುದು
  •  ಹರಿಯಾಣಾ ಗೆದ್ದರೆ ಮಹಾರಾಷ್ಟ್ರ ಕಾಂಗ್ರೆಸ್ ಗೆ ಸುಲಭದ ತುತ್ತು ಎಂದು ಭಾವಿಸಿದ್ದ ಕಾಂಗ್ರೆಸ್ ನಾಯಕರು. ಆದರೆ ಈಗ ಮಹಾರಾಷ್ಟ್ರ ಕೂಡ ಕಾಂಗ್ರೆಸ್ ಗೆ ಸವಾಲಾಗುವ ಸಾಧ್ಯತೆ.

ಇಷ್ಟೆಲ್ಲ ಕಾರಣಗಳಿಂದಾಗಿ ಹರಿಯಾಣ ರಿಸಲ್ಟ್ ರಾಜ್ಯದಲ್ಲೂ ಉರಿ ಉರಿ ವಾತಾವರಣ ಸೃಷ್ಟಿಸಿದೆ. ಕಾಶ್ಮೀರವನ್ನು ಕಳೆದುಕೊಂಡ ಬಿಜೆಪಿ ಕೂಡ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದು ಹರಿಯಾಣ ಸೋತಿದ್ದನ್ನೇ ಮುಂದಿಟ್ಟು ಕಾಂಗ್ರೆಸ್ ಗೆ ತಿವಿಯುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ